MAP

CUBA-US-POLITICS-PRISONERS-RELEASE CUBA-US-POLITICS-PRISONERS-RELEASE  (AFP or licensors)

ವ್ಯಾಟಿಕನ್ ಮಧ್ಯಸ್ಥಿಕೆಯ ಒಪ್ಪಂದದ ನಂತರ ಕ್ಯೂಬಾ ಕೈದಿಗಳ ಬಿಡುಗಡೆಯನ್ನು ಪೂರ್ಣಗೊಳಿಸಿದೆ

ಅಮೇರಿಕದ ಮಾಜಿ ಅಧ್ಯಕ್ಷ ಜೋ ಬೈಡೆನ್ ರವರ ಅಧಿಕಾರದ ಕೊನೆಯ ದಿನಗಳಲ್ಲಿ ಮಾಡಿಕೊಂಡ ಒಪ್ಪಂದವನ್ನು ಪೂರ್ಣಗೊಳಿಸಿದ ನಂತರ, ಪವಿತ್ರ ಪೀಠಾಧಿಕಾರದ ಮಧ್ಯಸ್ಥಿಕೆಯಲ್ಲಿ ಕ್ಯೂಬಾ 553 ಕೈದಿಗಳಿಗೆ ಆರಂಭಿಕ ಬಿಡುಗಡೆಯನ್ನು ಮಂಜೂರು ಮಾಡಿದೆ.

ಲಿಂಡಾ ಬೋರ್ಡೋನಿ

ಕ್ಯೂಬದ ಸರ್ಕಾರದೊಂದಿಗೆ ವ್ಯಾಟಿಕನ್ ಮಧ್ಯಸ್ಥಿಕೆಯ ಒಪ್ಪಂದದ ನಂತರ, ಜೋ ಬೈಡೆನ್ ರವರಿಗೆ ಜನವರಿ 14ರಂದು ಕ್ಯೂಬಾವನ್ನು ಅಮೇರಿಕದ ಭಯೋತ್ಪಾದನೆ ಕಪ್ಪುಪಟ್ಟಿಯಿಂದ ತೆಗೆದುಹಾಕಿದರು. ಇದಕ್ಕೆ ಪ್ರತಿಯಾಗಿ 553 ಕೈದಿಗಳನ್ನು ಬಿಡುಗಡೆ ಮಾಡಲು ಕ್ಯೂಬದ ಸರ್ಕಾರವು ಒಪ್ಪಂದ ಮಾಡಿಕೊಂಡಿತು.

ಜುಲೈ 2021ರಲ್ಲಿ ಫಿಡೆಲ್ ಕ್ಯಾಸ್ಟ್ರೋರವರ 1959ರ ಕ್ರಾಂತಿಯ ನಂತರದ ಅತಿದೊಡ್ಡ ಪ್ರತಿಭಟನೆಗಳ ನಂತರ ಜೈಲಿನಲ್ಲಿದ್ದ ನೂರಾರು ಪ್ರತಿಭಟನಾಕಾರರನ್ನು ಬಿಡುಗಡೆ ಮಾಡುವಂತೆ ಅಮೇರಿಕವು, ಯುರೋಪಿನ ಒಕ್ಕೂಟವು, ಕಥೋಲಿಕ ಧರ್ಮಸಭೆಯು ಮತ್ತು ಮಾನವ ಹಕ್ಕುಗಳ ಗುಂಪುಗಳು, ದ್ವೀಪ ರಾಷ್ಟ್ರವನ್ನು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿವೆ.

ಒಪ್ಪಂದದ ನಂತರ, ಹೇಳಿಕೆ ನೀಡಿದ ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕ್ಯಾನೆಲ್ ರವರು, ವ್ಯಾಟಿಕನ್ ರಾಜ್ಯದೊಂದಿಗಿನ ನಿಕಟ ಮತ್ತು ಅವಿಭಾಜ್ಯ ಸಂಬಂಧಗಳ ಭಾಗವಾಗಿ, 2025ರ ಜೂಬಿಲಿ ಉತ್ಸಾಹದಲ್ಲಿ, ಕೈದಿಗಳನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ನಾನು ವಿಶ್ವಗುರು ಫ್ರಾನ್ಸಿಸ್ ರವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಡೊನಾಲ್ಡ್ ಟ್ರಂಪ್ ರವರು ಪ್ರಮಾಣವಚನ ಸ್ವೀಕರಿಸಿದ ಕೇವಲ ಆರು ದಿನಗಳ ನಂತರ ಅಮೇರಿಕದ ಹೊಸ ಅಧ್ಯಕ್ಷರು ಈ ಒಪ್ಪಂದವನ್ನು ರದ್ದುಗೊಳಿಸಿದರು, ಆದರೆ ಕೈದಿಗಳನ್ನು ವಿರಳವಾಗಿ ಬಿಡುಗಡೆ ಮಾಡಲಾಗುತ್ತಿದೆ.

ಫೆಬ್ರವರಿಯಲ್ಲಿ, ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು, ಪವಿತ್ರ ವರ್ಷದ ಆರಂಭದಲ್ಲಿ ಕ್ಯೂಬದ ಕೈದಿಗಳ ಬಿಡುಗಡೆಯನ್ನು "ಮಹಾ ಭರವಸೆಯ ಸಂಕೇತ" ಎಂದು ಕರೆದರು ಮತ್ತು ಜೂಬಿಲಿ ಉತ್ಸಾಹದಲ್ಲಿ ಸರ್ಕಾರಗಳಿಂದ ಹೆಚ್ಚಿನ "ಕ್ಷಮಾದಾನದ ಸೂಚನೆಗಳು" ಬರುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಸೋಮವಾರ ತಡರಾತ್ರಿಯಲ್ಲಿ ಮಾತನಾಡಿದ ಕ್ಯೂಬಾದ ಉನ್ನತ ನ್ಯಾಯಾಲಯದ ಉಪಾಧ್ಯಕ್ಷರು, ಈ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ರಾಜ್ಯದ ದೂರದರ್ಶನದಲ್ಲಿ ಹೇಳಿದರು.

ಹಕ್ಕುಗಳ ಗುಂಪುಗಳ ಪ್ರಕಾರ, ಬಿಡುಗಡೆಯಾದವರಲ್ಲಿ ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ಭಿನ್ನಮತೀಯ ನಾಯಕ ಸೇರಿದ್ದಾರೆ. ಆದಾಗ್ಯೂ, ಇಬ್ಬರು ಭಿನ್ನಮತೀಯ ಕಲಾವಿದರು ಮತ್ತು ಸರ್ಕಾರ ವಿರೋಧಿ ಪ್ರತಿಭಟನೆಗಳ ಗೀತೆಯ ಸಹ-ಲೇಖಕ ಸಂಗೀತಗಾರ, ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಬಿಡುಗಡೆಯಾದವರಲ್ಲಿ ಅನೇಕರು ರಾಜಕೀಯ ಕೈದಿಗಳಲ್ಲ ಎಂದು ವೀಕ್ಷಕರು ಹೇಳುತ್ತಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಜುಲೈ 2021ರ ಪ್ರತಿಭಟನೆಗಳಲ್ಲಿ ಸುಮಾರು 500 ಪ್ರತಿಭಟನಾಕಾರರಿಗೆ ಶಿಕ್ಷೆ ವಿಧಿಸಲಾಗಿದೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಕೈದಿಗಳಿಗೆ 25 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
 

11 ಮಾರ್ಚ್ 2025, 12:34