MAP

FILES-WWII-POLAND-GERMANY-TANKS FILES-WWII-POLAND-GERMANY-TANKS  (AFP or licensors)

ನೀತಿವಂತರ ದಿನ: ಹತ್ಯಾಕಾಂಡದ ಸಮಯದಲ್ಲಿ ಯೆಹೂದ್ಯರನ್ನು ರಕ್ಷಿಸಿದ ಪೋಲಿಷ್ ಸಂನ್ಯಾಸಿನಿಗಳ ದಿನ

ಮಾರ್ಚ್ 6 ಯುರೋಪಿನ ನೀತಿವಂತರ ದಿನವನ್ನು ಆಚರಿಸುತ್ತದೆ, 20ನೇ ಶತಮಾನದಲ್ಲಿ ನಿರಂಕುಶ ಪ್ರಭುತ್ವಗಳನ್ನು ವಿರೋಧಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರನ್ನು ಸ್ಮರಿಸುತ್ತದೆ ಮತ್ತು ಆಚರಿಸುತ್ತದೆ.

ಟೊಮಾಸ್ ಝೀಲೆನ್‌ಕಿವಿಕ್ಜ್

ವಿವಿಧ ಸಭೆಗಳಿಂದ, ನಿಖರವಾಗಿ 2,345 ಧಾರ್ಮಿಕ ಸಹೋದರಿಯರು ಯೆಹೂದ್ಯರಿಗೆ ಸಹಾಯ ಮಾಡಿದರು ಎಂದು ಯೇಸುವಿನ ಪವಿತ್ರ ಹೃದಯದ ಸೇವಕರ ಸಭೆಯ ಸಿಸ್ಟರ್ ಮೋನಿಕಾ ಕುಪ್ಜೆವ್ಸ್ಕಾರವರು ಹೇಳಿದರು. ಪೋಲೆಂಡ್‌ನಾದ್ಯಂತದ ಸಭೆಗಳಿಂದ ರಕ್ಷಣಾ ಪ್ರಯತ್ನಗಳು ಬಂದವು ಎಂದು ಅವರು ಹೇಳಿದರು. ಅತಿದೊಡ್ಡ ಸಂಖ್ಯೆಯಲ್ಲಿ, ಅಂದರೆ 56 ಸಮುದಾಯಗಳು, ಮಾತೆಮೇರಿಯವರ ಕುಟುಂಬದ ಫ್ರಾನ್ಸಿಸ್ಕನ್ ಸಿಸ್ಟರ್‌ಗಳಿಗೆ ಸೇರಿದವರೂ ಸಹ ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಆದಾಗ್ಯೂ, ಈ ಸಹಾಯದಲ್ಲಿ ಇತರ ಅನೇಕ ಸಭೆಗಳು ಸಹ ಭಾಗಿಯಾಗಿದ್ದವು" ಎಂದು ಅವರು ವಿವರಿಸಿದರು.

ದೇವರು ಮತ್ತು ಅವರ ಸಹ ಮಾನವರ ಮೇಲಿನ ಪ್ರೀತಿ ಈ ಧಾರ್ಮಿಕ ಸಹೋದರಿಯರನ್ನು ಯೆಹೂದ್ಯರನ್ನು ರಕ್ಷಿಸುವಂತೆ ಪ್ರೇರೇಪಿಸಿತು. ಈ ಸಹೋದರಿಯರು ಇದು ಅವರ ಸ್ವಯಂ ಪ್ರೇರಣೆ ಎಂದು ಹೇಳಿದರು. ಯಾರೂ ಅವರನ್ನು ಸಹಾಯ ಮಾಡಲು ಒತ್ತಾಯಿಸಲಿಲ್ಲ ಎಂದು ಸಿಸ್ಟರ್ ಕುಪ್ಜೆವ್ಸ್ಕಾರವರು ಒತ್ತಿ ಹೇಳಿದರು. ಅನೇಕ ಸಹೋದರಿಯರು ತಮ್ಮ ಕ್ರಿಯೆಗಳನ್ನು ಅಸಾಧಾರಣವೆಂದು ಪರಿಗಣಿಸಲಿಲ್ಲ. ಅವರು ಸಾಧಾರಣವಾಗಿ ಹೇಳಿದರು: 'ನಾವು ಅಸಾಧಾರಣವಾದ ಕಾರ್ಯಗಳಾದ ಏನನ್ನೂ ಮಾಡಲಿಲ್ಲ. ಎರಡನೇ ಮಹಾಯುದ್ಧದ ಕ್ರೌರ್ಯವನ್ನು ಎದುರಿಸಿದಾಗ ನಾವು ಈ ಮಕ್ಕಳನ್ನು ಉಳಿಸದೆ ಇರಲು ಸಾಧ್ಯವಾಗಲಿಲ್ಲ, ಎಂದು ಅವರು ನೆನಪಿಸಿಕೊಂಡರು.

ಪೋಲೆಂಡ್‌ನಲ್ಲಿ ಐತಿಹಾಸಿಕ ಆಯೋಗವು ನಡೆಸಿದ ಸಂಶೋಧನೆಯು ರಕ್ಷಣಾ ಪ್ರಯತ್ನಗಳನ್ನು ವಿವರಿಸುವ ನಕ್ಷೆಯನ್ನು ರಚಿಸಲು ಸಾಧ್ಯವಾಗಿಸಿದೆ. ಇದು ಯೆಹೂದ್ಯರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾನ್ವೆಂಟ್‌ಗಳು ಮತ್ತು ಸಂಸ್ಥೆಗಳನ್ನು ಗುರುತಿಸುತ್ತದೆ.

ಇವುಗಳಲ್ಲಿ ಮಾತೆಮೇರಿಯ ಕುಟುಂಬದ ಫ್ರಾನ್ಸಿಸ್ಕನ್ ಸಭೆಯ ಸಹೋದರಿಯರು, ಯೇಸುವಿನ ಅತ್ಯಂತ ಪವಿತ್ರ ಹೃದಯದ ಸಭೆಯ ಸಹೋದರಿಯರು, ಆಲ್ಬರ್ಟೈನ್ ಸಭೆಯ ಸಹೋದರಿಯರು, ಡಾಟರ್ಸ್ ಆಫ್ ಚಾರಿಟಿ, ಫೆಲಿಸಿಯನ್ ಸಭೆಯ ಸಹೋದರಿಯರು ಮತ್ತು ಉರ್ಸುಲಿನ್ ಸಭೆಯ ಸಹೋದರಿಯರು ಸೇರಿದ್ದಾರೆ.

ಆಕ್ರಮಣ ಸಮಯದಲ್ಲಿ ಯೆಹೂದ್ಯರಿಗೆ ಸಹಾಯ ಮಾಡುವ ಪ್ರಶ್ನೆಯನ್ನು ಹೇಗಾದರೂ ಎದುರಿಸದ, ಯಾವುದೇ ಧಾರ್ಮಿಕ ಸಭೆ ಪೋಲೆಂಡ್‌ನಲ್ಲಿ ಇರಲಿಲ್ಲ ಎಂದು ಸಿಸ್ಟರ್ ಕುಪ್ಜೆವ್ಸ್ಕಾರವರು ಇತಿಹಾಸಕಾರ ಮತ್ತು ಕಾರ್ಯಕರ್ತೆ ಆಶ್ವಿಟ್ಜ್ ರವರು ಬದುಕುಳಿದ ವ್ಲಾಡಿಸ್ಲಾವ್ ಬಾರ್ಟೋಸ್ಜೆವ್ಸ್ಕಿಯವರ ಮಾತುಗಳನ್ನು ಉಲ್ಲೇಖಿಸಿದರು.

ಶೌರ್ಯದ ಉದಾಹರಣೆ: ಪ್ರೆಜೆಮಿಸ್ಲ್
ಸಹೋದರಿಯರ ಶೌರ್ಯದ ಅಥವಾ ವೀರೋಚಿತ ಪ್ರಯತ್ನಗಳಿಗೆ ಒಂದು ಉದಾಹರಣೆಯೆಂದರೆ, ಪ್ರೆಜೆಮಿಸ್ಲ್‌ನಲ್ಲಿರುವ ಯೇಸುವಿನ ಪವಿತ್ರ ಹೃದಯದ ಸಭೆಯ ಸಹೋದರಿಯರ ಕಥೆ. ನಮ್ಮ ಸಂದರ್ಭದಲ್ಲಿ, ಇದು ಒಂದು ಅನಾಥಾಶ್ರಮವಾಗಿದ್ದು, ಅಲ್ಲಿ ಸಹೋದರಿಯರು ಹದಿಮೂರು ಮಂದಿ ಯೆಹೂದ್ಯರ ಮಕ್ಕಳನ್ನು ರಕ್ಷಿಸಿದರು" ಎಂದು ಸಿಸ್ಟರ್ ಕುಪ್ಜೆವ್ಸ್ಕಾರವರು ಹೇಳಿದರು.

ಕೆಲವೊಮ್ಮೆ ಪೋಷಕರು ಬಂದು ಸಹಾಯ ಕೇಳುತ್ತಿದ್ದರು, ಕೆಲವೊಮ್ಮೆ ಮಕ್ಕಳನ್ನು ಕಾನ್ವೆಂಟ್ ಬಾಗಿಲುಗಳಲ್ಲಿ ಬಿಡಲಾಗುತ್ತಿತ್ತು ಮತ್ತು ಕೆಲವೊಮ್ಮೆ ಹಿರಿಯ ಮಕ್ಕಳು ಘೆಟ್ಟೋದಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದರು" ಎಂದು ಅವರು ಹೇಳಿದರು. ಸಹೋದರಿಯರು ಆಶ್ರಯ ನೀಡಿದ್ದು ಮಾತ್ರವಲ್ಲದೆ ಜರ್ಮನ್ನರ ಕಿರುಕುಳದಿಂದ ಅವರನ್ನು ರಕ್ಷಿಸಲು ಕ್ರಮ ಕೈಗೊಂಡರು. ಅವರು ಮಕ್ಕಳ ಹೆಸರುಗಳನ್ನು ಬದಲಾಯಿಸುವ ಮೂಲಕ, ಹೊಸ ದಾಖಲೆಗಳನ್ನು ನಕಲಿ ಮಾಡುವ ಮೂಲಕ ಮತ್ತು ಧಾರ್ಮಿಕ ಪದ್ಧತಿಗಳಲ್ಲಿ ವೇಷ ಧರಿಸುವ ಮೂಲಕ ಅವರನ್ನು ರಕ್ಷಿಸಿದರು" ಎಂದು ಸಿಸ್ಟರ್ ಕುಪ್ಜೆವ್ಸ್ಕಾರವರು ಹೇಳಿದರು.

ಶೌರ್ಯದ ಬೆಲೆ
ದುರದೃಷ್ಟವಶಾತ್, ಎಲ್ಲಾ ರಕ್ಷಣಾ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಹನ್ನೆರಡು ಧಾರ್ಮಿಕ ಸಹೋದರಿಯರು ಯೆಹೂದ್ಯರನ್ನು ಸಹಾಯ ಮಾಡಿದ್ದಕ್ಕಾಗಿ ಅತ್ಯಧಿಕ ಬೆಲೆಯನ್ನು ಕಟ್ಟಬೇಕಾಯಿತು, ಆ ಬೆಲೆ ಯಾವುದೆಂದೆರೆ-ತಮ್ಮ ಸ್ವಂತ ಜೀವದ ಬೆಲೆಯನ್ನು ಕಟ್ಟುವಂತಹ, ಬೆಲೆಯನ್ನು ಪಾವತಿಸಿದರು ಅಂದರೆ ಯೆಹೂದ್ಯರ ರಕ್ಷಣಾ ಕಾರ್ಯದಲ್ಲಿ ತಮ್ಮ ಜೀವವನ್ನು ತ್ಯಾಗ ಮಾಡಿದರು. ಅವರಲ್ಲಿ ನಾಲ್ವರನ್ನು ಕಥೋಲಿಕ ಧರ್ಮಸಭೆಯ ಹುತಾತ್ಮರೆಂದು ಬಿರುದು ನೀಡಿದೆ.

ಪೋಲೆಂಡ್‌ನಲ್ಲಿ ಯಾಜಕ ವರ್ಗದವರ ಸಹಾಯದ ಕುರಿತು ಮೊದಲ ಇಂಗ್ಲಿಷ್ ಭಾಷೆಯ ಪ್ರಬಂಧ
ಲುಬ್ಲಿನ್‌ನ ಕಥೋಲಿಕ ವಿಶ್ವವಿದ್ಯಾಲಯದಲ್ಲಿರುವ ಅಬ್ರಹಾಂ ಜೆ. ಹೆಸ್ಚೆಲ್ ಕಥೋಲಿಕ-ಯೆಹೂದ್ಯರ ಸಂಬಂಧಗಳ ಕೇಂದ್ರವು, ಪೋಲಿಷ್ ಯಾಜಕ ವರ್ಗದವರು ತಮ್ಮ ದಾಖಲೀಕರಣ ಯೋಜನೆಯ ಕಾರ್ಯದ ಭಾಗವಾಗಿ, ಹತ್ಯಾಕಾಂಡದ ಸಮಯದಲ್ಲಿ ಯೆಹೂದ್ಯರ ರಕ್ಷಣಾ ಕಾರ್ಯದಲ್ಲಿ ಹೇಗೆ ಸಹಾಯ ಮಾಡಿದರು ಎಂಬುದನ್ನು ಪರಿಶೀಲಿಸುವ ಮೊದಲ ಇಂಗ್ಲಿಷ್ ಭಾಷೆಯ ಪ್ರಬಂಧವನ್ನು ಪ್ರಕಟಿಸಿತು.

ಪೋಲಿಷ್ ಕಥೋಲಿಕ ಯಾಜಕರಿಂದ ಯೆಹೂದ್ಯರ ಯುದ್ಧಕಾಲದ ರಕ್ಷಣೆ ಎಂಬ ಎರಡು ಸಂಪುಟಗಳ ಕೃತಿಯನ್ನು ವಕೀಲ ರಿಸ್ಜಾರ್ಡ್ ಟಿಂಡಾರ್ಫ್ ರವರು ಬರೆದಿದ್ದಾರೆ ಮತ್ತು ಇದನ್ನು KUL ಮುದ್ರಣವು ಪ್ರಕಟಿಸಿದೆ. ಈ ಕೃತಿಯು https://tiny.pl/s8xxn5vcನಲ್ಲಿ ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿದೆ.

1,200ಕ್ಕೂ ಹೆಚ್ಚು ಪುಟಗಳಲ್ಲಿ, ಪುಸ್ತಕವು ಹತ್ಯಾಕಾಂಡದ ಸಮಯದಲ್ಲಿ ಪೋಲೆಂಡ್‌ನಲ್ಲಿ ಧಾರ್ಮಿಕ ಸಹೋದರಿಯರು ಮತ್ತು ಯಾಜಕರು ಯೆಹೂದ್ಯರನ್ನು ರಕ್ಷಿಸಿದ ಸಾಕ್ಷ್ಯಗಳನ್ನು ವಿವರಿಸುತ್ತದೆ. ಇದು ಸಾವಿರಾರು ಪಟ್ಟಣಗಳನ್ನು ಪಟ್ಟಿ ಮಾಡುವ ಸೂಚ್ಯಂಕ ಮತ್ತು ಬದುಕುಳಿದವರು ಹಾಗೂ ರಕ್ಷಿಸಿದವರ ಹೆಸರುಗಳನ್ನೂ ಸಹ ಒಳಗೊಂಡಿದೆ.
 

06 ಮಾರ್ಚ್ 2025, 12:13