MAP

US airstrikes continue on Yemen amid tensions with Houthis US airstrikes continue on Yemen amid tensions with Houthis  (ANSA)

ಯುದ್ಧದಿಂದ ಪ್ರಭಾವಿತರಾದ ಯೆಮೆನ್ ಜನರ 'ಆಳವಾದ ನೋವು'

ಯೆಮೆನ್‌ನಲ್ಲಿ "ಮುಕ್ತ ಮತ್ತು ದೊಡ್ಡ ಪ್ರಮಾಣದ ಸಂಘರ್ಷ" ಪುನರಾರಂಭವಾದರೆ ನಾಗರಿಕರಿಗೆ ಆಗುವ ಪರಿಣಾಮಗಳ ಬಗ್ಗೆ ದಕ್ಷಿಣ ಅರೇಬಿಯಾದ ಪ್ರೇಷಿತ ಶ್ರೇಷ್ಠಗುರುವಾದ ಧರ್ಮಾಧ್ಯಕ್ಷ ಪಾವೊಲೊ ಮಾರ್ಟಿನೆಲ್ಲಿರವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಸ್ಟೋಫರ್ ವೆಲ್ಸ್

ದಕ್ಷಿಣ ಅರೇಬಿಯಾದ ಅತ್ಯುನ್ನತ ಶ್ರೇಣಿಯ ಧರ್ಮಾಧಿಕಾರಿ, ಕ್ಯಾಪುಚಿನ್ ಧರ್ಮಾಧ್ಯಕ್ಷ ಪಾವೊಲೊ ಮಾರ್ಟಿನೆಲ್ಲಿರವರು, ಯೆಮೆನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಉಲ್ಬಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ರಯೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಕೆಂಪು ಸಮುದ್ರದ ಹಡಗು ಸಾಗಣೆಯ ಮೇಲೆ ಹೌತಿಗಳು ನಡೆಸಿದ ದಾಳಿಗಳು ಮತ್ತು ಇಸ್ರಯೇಲ್ ಗುರಿಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳಿಗೆ ಪ್ರತೀಕಾರವಾಗಿ ಅಮೇರಿಕ ಪಡೆಗಳು ನಡೆಸಿದ ವಾಯುದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೌತಿ ಬಂಡುಕೋರರನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದಾಗಿ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಬೆದರಿಕೆ ಹಾಕಿದ್ದಾರೆ.

2014ರಲ್ಲಿ ಹೌತಿ ಬಂಡುಕೋರರು ರಾಜಧಾನಿ ಸನಾವನ್ನು ವಶಪಡಿಸಿಕೊಂಡಾಗ ಪ್ರಾರಂಭವಾದ ಯೆಮೆನ್‌ನಲ್ಲಿನ ಅಂತರ್ಯುದ್ಧವನ್ನು ಕೊನೆಗೊಳಿಸಲು ಹಮಾಸ್ ಮತ್ತು ಇಸ್ರಯೇಲ್ ನಡುವಿನ ಸಂಘರ್ಷವು ರಾಜತಾಂತ್ರಿಕ ಪ್ರಯತ್ನಗಳನ್ನು ಸಂಕೀರ್ಣಗೊಳಿಸಿದೆ. ಆ ಸಮಯದಲ್ಲಿ "ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟು" ಎಂದು ವಿವರಿಸಲ್ಪಟ್ಟದ್ದನ್ನು ಅಂತರ್ಯುದ್ಧವು ಪ್ರಚೋದಿಸಿತು. ಯುದ್ಧದಲ್ಲಿ ಸುಮಾರು 400,000 ಜನರು ಸಾವನ್ನಪ್ಪಿದ್ದಾರೆಂದು ನಂಬಲಾಗಿದೆ, ಲಕ್ಷಾಂತರ ಜನರು ಸ್ಥಳಾಂತರಗೊಂಡು ತೀವ್ರ ಹಸಿವು, ಬಡತನ ಮತ್ತು ರೋಗಗಳಿಂದ ಬಳಲುತ್ತಿದ್ದಾರೆ.

ದುರ್ಬಲ ಗುಂಪುಗಳು
ದೊಡ್ಡ ಅಭದ್ರತೆಯ ಕಾರಣದಿಂದಾಗಿ, ಪರಿಸ್ಥಿತಿಯನ್ನು ವಾಸ್ತವವಾಗಿ ಬದಲಾಯಿಸುವ ಮತ್ತು ಅಂತಿಮವಾಗಿ ಹೊಸ ಆರಂಭಕ್ಕೆ ಅವಕಾಶ ನೀಡುವ ಮಾನವೀಯ ನೆರವು ಯೋಜನೆಗಳನ್ನು ಕೈಗೊಳ್ಳುವುದು ಕಷ್ಟಕರವಾಗಿದೆ ಎಂದು ಧರ್ಮಾಧ್ಯಕ್ಷರಾದ ಮಾರ್ಟಿನೆಲ್ಲಿರವರು ಹೇಳಿದರು. ಇಷ್ಟು ಸುಂದರವಾದ ದೇಶದಲ್ಲಿ ಜನರು ಇಷ್ಟೊಂದು ಬಡತನದಲ್ಲಿದ್ದಾರೆ ಎಂದು ಯೋಚಿಸುವುದು ತುಂಬಾ ದುಃಖಕರ ವಿಷಯವಾಗಿದೆ.

ವಿಶೇಷವಾಗಿ ಮಕ್ಕಳು ಸೇರಿದಂತೆ ಅತ್ಯಂತ ದುರ್ಬಲ ಗುಂಪುಗಳು ಹೆಚ್ಚಿನ ಬೆಲೆ ತೆರುತ್ತವೆ ಎಂದು ಪ್ರೇಷಿತ ಶ್ರೇಷ್ಠಗುರುಗಳು ಗಮನಿಸಿದರು. ಆಂತರಿಕವಾಗಿ ಸ್ಥಳಾಂತರಗೊಂಡ ಮೂರು ಮಿಲಿಯನ್ ಯೆಮೆನ್ ಮಕ್ಕಳಲ್ಲಿ ಹೆಚ್ಚಿನವರು ತೀವ್ರ ಬಡತನ ಮತ್ತು ಹಸಿವಿನ ಪರಿಸ್ಥಿತಿಗಳಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ ಹಾಗೂ ಕಾಲರಾ ಸಾಂಕ್ರಾಮಿಕ ರೋಗ ಸೇರಿದಂತೆ ಹರಡುವ ಸಾಂಕ್ರಾಮಿಕ ರೋಗಗಳನ್ನು ಎದುರಿಸುತ್ತಿದ್ದಾರೆ.

ʻಅಳವಾದ ನೋವಿಗೆ ಕಾರಣ'
ಸರ್ಕಾರ ಮತ್ತು ಬಂಡಾಯ ಪಡೆಗಳ ನಡುವೆ, ಕದನ ವಿರಾಮ ನಡೆಯುತ್ತಿರುವಂತೆ ಕಂಡುಬರುತ್ತಿದೆ, ಇಸ್ರಯೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವು ಒಂದು ನಿರ್ದಿಷ್ಟ ಶಾಂತ ಹಾಗೂ ಎಚ್ಚರಿಕೆಯ ಆಶಾವಾದಕ್ಕೆ ಅನುಕೂಲಕರವಾಗಿದೆ ಎಂದು ಧರ್ಮಾಧ್ಯಕ್ಷರಾದ ಮಾರ್ಟಿನೆಲ್ಲಿರವರು ಹೇಳಿದರು, ಹೌತಿಗಳನ್ನು "ಭಯೋತ್ಪಾದಕರು" ಎಂದು ಘೋಷಿಸುವ ಅಮೇರಿಕದ ಅಧ್ಯಕ್ಷ ಟ್ರಂಪ್ ರವರ ನಿರ್ಧಾರವು ಉತ್ತರ ಯೆಮೆನ್‌ಗೆ ಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. "ಮುಕ್ತ ಮತ್ತು ದೊಡ್ಡ ಪ್ರಮಾಣದ ಸಂಘರ್ಷ"ವು ನಾಗರಿಕರಿಗೆ ಸಂಭವನೀಯ ಪರಿಣಾಮಗಳಿಗೆ ತೀವ್ರ ನೋವನ್ನುಂಟು ಮಾಡುತ್ತಿದೆ ಎಂದು ಅವರು ಎಚ್ಚರಿಸಿದರು.

ಪೂರ್ಣ ಪ್ರಮಾಣದ ಯುದ್ಧದ ಸಂದರ್ಭದಲ್ಲಿ ಜನಸಂಖ್ಯೆಯ ನೋವನ್ನು ನಾವು ಅಸ್ಪಷ್ಟವಾಗಿ ಊಹಿಸಬಹುದು. ಯೆಮೆನ್ ಜನರು, "ಹತ್ತು ವರ್ಷಗಳ ಅಂತರ್ಯುದ್ಧದ ಹೊರೆಯಿಂದ ಬಳಲುತ್ತಿದ್ದಾರೆ" ಎಂದು ಅವರು ಹೇಳಿದರು.
 

20 ಮಾರ್ಚ್ 2025, 12:42