ಯುದ್ಧಾನಂತರದ ಗಾಜಾ ಭವಿಷ್ಯದ ಬಗ್ಗೆ ಅರಬ್ ನಾಯಕರು ಚರ್ಚಿಸುತ್ತಾರೆ
ಲಿಂಡಾ ಬೋರ್ಡೋನಿ
ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಗಟ್ಟಾ ಎಲ್-ಸಿಸ್ಸಿ ರವರು ಶೃಂಗಸಭೆಯನ್ನು ಆಯೋಜಿಸಿದ್ದಾರೆ ಮತ್ತು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಪ್ರಾದೇಶಿಕ ನಾಯಕರು ಭಾಗವಹಿಸಿದ್ದಾರೆ, ಅವರ ಬೆಂಬಲವು ಯಾವುದೇ ಯುದ್ಧಾನಂತರದ ಯೋಜನೆಗೆ ನಿರ್ಣಾಯಕವಾಗಿದೆ. ಗಾಜಾದ ನಗರಗಳನ್ನು ಪುನರ್ನಿರ್ಮಿಸಿದಾಗ ಪ್ಯಾಲಸ್ತೀನಿಯದವರನ್ನು ಚಲಿಸುವ (ಮೊಬೈಲ್) ಮನೆಗಳು ಮತ್ತು ಆಶ್ರಯಗಳನ್ನು ಹೊಂದಿರುವ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಯೋಜನೆಯನ್ನು ಚರ್ಚೆಗಳು ಒಳಗೊಂಡಿವೆ ಎಂದು ವರದಿಯಾಗಿದೆ, ಆದರೆ ಸುಧಾರಿತ ಪ್ಯಾಲಸ್ತೀನಿಯದ ಪ್ರಾಧಿಕಾರವು ನಿಯಂತ್ರಣವನ್ನು ವಹಿಸಿಕೊಳ್ಳುವವರೆಗೆ ಹಮಾಸ್ ರಾಜಕೀಯ ಸ್ವತಂತ್ರರ ಮಧ್ಯಂತರ ಆಡಳಿತಕ್ಕೆ ಅಧಿಕಾರವನ್ನು ಬಿಟ್ಟುಕೊಡುತ್ತದೆ.
ಕಳೆದ ತಿಂಗಳು ಅಮೆರಿಕದ ಅಧ್ಯಕ್ಷರು ಗಾಜಾದ ಸುಮಾರು 2 ಮಿಲಿಯನ್ ನಿವಾಸಿಗಳನ್ನು ಇತರ ದೇಶಗಳಲ್ಲಿ ಪುನರ್ವಸತಿ ಮಾಡುವಂತೆ ಸೂಚಿಸಿದ್ದನ್ನು ಅನುಸರಿಸಿ ಈ ಉಪಕ್ರಮವು ಬಂದಿದೆ, ಆದರೆ ಅಮೆರಿಕವು ಯುದ್ಧದಿಂದ ಹಾನಿಗೊಳಗಾದ ಪ್ರದೇಶದ ಮಾಲೀಕತ್ವವನ್ನು ತೆಗೆದುಕೊಂಡು ಅದನ್ನು ಮಧ್ಯಪ್ರಾಚ್ಯ "ರಿವೇರಿಯಾ" ಆಗಿ ಮರುಅಭಿವೃದ್ಧಿಪಡಿಸುತ್ತದೆ.
ಇಸ್ರಯೇಲ್ ದಾಳಿಗಳ ಮುಂದುವರಿಕೆ
ಇಸ್ರಯೇಲ್ ಸೇನೆಯು ಪಶ್ಚಿಮ ದಂಡೆಯಲ್ಲಿ ದಾಳಿಗಳನ್ನು ಮುಂದುವರಿಸುತ್ತಿದ್ದಂತೆ, ಹಮಾಸ್ ಇನ್ನೂ ಹಿಡಿದಿಟ್ಟುಕೊಂಡಿರುವ 59 ಒತ್ತೆಯಾಳುಗಳಲ್ಲಿ ಹೆಚ್ಚಿನವರನ್ನು ಬಿಡುಗಡೆ ಮಾಡಲು ಸಿದ್ಧರಿದ್ದರೆ, ಗಾಜಾ ಕದನ ವಿರಾಮ ಒಪ್ಪಂದದ ಎರಡನೇ ಹಂತಕ್ಕೆ ಮುಂದುವರಿಯಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಇಸ್ರಯೇಲ್ ವಿದೇಶಾಂಗ ಸಚಿವರು ಮಂಗಳವಾರ ಹೇಳಿದ್ದಾರೆ.
ಅಮೆರಿಕದ ಬೆಂಬಲ ಮತ್ತು ಕತಾರ್ ಹಾಗೂ ಈಜಿಪ್ಟ್ ಮಧ್ಯವರ್ತಿಗಳೊಂದಿಗೆ ಏರ್ಪಡಿಸಲಾದ ಕದನ ವಿರಾಮದ ಅಡಿಯಲ್ಲಿ ಜನವರಿ 19 ರಿಂದ ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲಾಗಿದೆ. ಅಂದಿನಿಂದ ಹಮಾಸ್ 33 ಇಸ್ರಯೇಲ್ ಒತ್ತೆಯಾಳುಗಳು ಮತ್ತು ಐದು ಥಾಯ್ ಪ್ರಜೆಗಳನ್ನು ಸುಮಾರು 2,000 ಪ್ಯಾಲೆಸ್ಟೀನಿಯನ್ ಕೈದಿಗಳು ಮತ್ತು ಬಂಧಿತರಿಗೆ ವಿನಿಮಯ ಮಾಡಿಕೊಂಡಿದೆ.
ಆದಾಗ್ಯೂ, ಆರಂಭಿಕ 42 ದಿನಗಳ ಯುದ್ಧವಿರಾಮ ಮುಗಿದಿದೆ ಮತ್ತು ಹಮಾಸ್ ಹೊಸ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವಂತೆ ಮಾಡಲು ಇಸ್ರಯೇಲ್ ಗಾಜಾಗೆ ಆಹಾರ, ಇಂಧನ, ಔಷಧ ಮತ್ತು ಇತರ ಸರಬರಾಜುಗಳ ಪ್ರವೇಶವನ್ನು ನಿರ್ಬಂಧಿಸಿದೆ ಮತ್ತು ಯುದ್ಧಕ್ಕೆ ಮರಳುವ ಭಯವನ್ನು ಹೆಚ್ಚಿಸುವ ಹೆಚ್ಚುವರಿ ಪರಿಣಾಮಗಳ ಬಗ್ಗೆ ಎಚ್ಚರಿಸಿದೆ.