2025ರ ಜಾಯೆದ್ ಪ್ರಶಸ್ತಿಗಳು - “ಮಾನವ ಸೋದರತ್ವ”
ಜೋಸೆಫ್ ತುಲ್ಲೊಚ್ – ಅಬುಧಾಬಿ
2025ರ ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಯನ್ನು ಸರ್ಕಾರೇತರ ಆಹಾರ ನೆರವು ಸಂಸ್ಥೆ - ವರ್ಲ್ಡ್ ಸೆಂಟ್ರಲ್ ಕಿಚನ್, ಬಾರ್ಬಡೋಸ್‌ನ ಪ್ರಧಾನಿ ಮಿಯಾ ಮಾಟ್ಲಿ ಮತ್ತು 15 ವರ್ಷದ ಇಥಿಯೋಪಿಯನ್-ಅಮೇರಿಕನ್ ಸಂಶೋಧಕ ಹೆಮನ್ ಬೆಕೆಲೆ ರವರಿಗೆ ನೀಡಲಾಗಿದೆ.
ಮಂಗಳವಾರ ಸಂಜೆ ಅಬುಧಾಬಿಯ ಡೌನ್‌ಟೌನ್‌ನಲ್ಲಿರುವ ಸ್ಥಾಪಕರ ಸ್ಮಾರಕದಲ್ಲಿ, ಗಾಫ್ ಮರಗಳ ಸಾಲುಗಳು ಮತ್ತು ಎಮಿರೇಟ್‌ನ ವಿಶಿಷ್ಟವಾದ ಗಗನಚುಂಬಿ ಕಟ್ಟಡಗಳ ಸಮೂಹಗಳ ನಡುವೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇದು ಆರನೇ ವರ್ಷಕ್ಕೆ ಕಾಲಿಡುತ್ತಿರುವ ಜಾಯೆದ್ ಪ್ರಶಸ್ತಿಯನ್ನು ವಾರ್ಷಿಕವಾಗಿ ಫೆಬ್ರವರಿ 4 ರಂದು ನೀಡಲಾಗುತ್ತದೆ. 2019 ರಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ಅಹ್ಮದ್ ಅಲ್-ತಯ್ಯೆಬ್ ರವರು ಸಹಿ ಮಾಡಿದ ಮಾನವ ಭ್ರಾತೃತ್ವದ ಜಂಟಿ ಘೋಷಣೆಯ ಪ್ರಕಟಣೆಯ ದಿನಾಂಕವಾಗಿತ್ತು - ಇದು ಜಾಯೆದ್ ಪ್ರಶಸ್ತಿಯ ಸ್ಥಾಪನೆಗೆ ಪ್ರೇರಣೆ ನೀಡಿದ ಒಂದು ಪರಿವರ್ತನಾಶೀಲ ದಾಖಲೆಯಾಗಿದೆ.
'ಹಂಚಿಕೊಂಡ ಮಾನವೀಯತೆ'
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ವೇದಿಕೆಯ ಮೇಲೆ ಮೊದಲ ಪ್ರಶಸ್ತಿ ಗೆದ್ದವರು ಬಾರ್ಬಡೋಸ್‌ನ ಪ್ರಧಾನ ಮಂತ್ರಿ ಮಿಯಾ ಮಾಟ್ಲಿ. ಪ್ರಧಾನಿಯಾಗಿ, ಅವರು ಹವಾಮಾನ ಬದಲಾವಣೆಯ ವಿರುದ್ಧ ತೆಗೆದುಕೊಂಡ ನಿರ್ಣಾಯಕ ಕ್ರಮಕ್ಕೆ ಹೆಸರುವಾಸಿಯಾಗಿದ್ದಾರೆ.
"ನಾವು ಜನರನ್ನು ಮತ್ತು ಗ್ರಹವನ್ನು ಬೇರ್ಪಡಿಸಲು ಸಾಧ್ಯವಿಲ್ಲ" ಎಂದು ಮಾಟ್ಲಿರವರು ನೆರೆದಿದ್ದ ಅತಿಥಿಗಳಿಗೆ ಹೇಳಿದರು; ನಮಗೆ ಬದುಕಲು ಎಲ್ಲಿಯೂ(ಗ್ರಹಗಳ) ಸೌಲಭ್ಯ ಇಲ್ಲದಿದ್ದರೆ ಮಾನವ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ. "ಮಾನವ ಸೋದರತ್ವ" ಮೇಲೆ ಜಾಯೆದ್ ಪ್ರಶಸ್ತಿಯ ಗಮನವು, ನಿಜವಾಗಿಯೂ ಮುಖ್ಯವಾದುದಾಗಿದೆ ಎಂಬುದರ ಮೇಲೆ ಗಮನಹರಿಸಲು ಒಂದು ಅವಕಾಶವಾಗಿದೆ ಎಂದು ಅವರು ಒತ್ತಿ ಹೇಳಿದರು.
ನಂತರ ಮಾತನಾಡಿದವರು ವರ್ಲ್ಡ್ ಸೆಂಟ್ರಲ್ ಕಿಚನ್‌ನ ಸಿಇಒ ಎರಿನ್ ಗೋರ್ ರವರು. ಈ ಸಂಸ್ಥೆಯು ಮಾನವೀಯ ಬಿಕ್ಕಟ್ಟುಗಳಿಂದ ಬಳಲುತ್ತಿರುವ ಸಮುದಾಯಗಳಿಗೆ ಆಹಾರ ನೆರವು ನೀಡುತ್ತದೆ. ಅಕ್ಟೋಬರ್ 2023ರಲ್ಲಿ ಇಸ್ರಯೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ, ಇದು ಗಾಜಾದಲ್ಲಿರುವ ಪ್ಯಾಲೆಸ್ತೀನಿಯರಿಗೆ 100 ಮಿಲಿಯನ್ ಊಟಗಳನ್ನು ಒದಗಿಸಿದೆ.
ವೇದಿಕೆಯಲ್ಲಿ, ಭಾವುಕರಾಗಿ ಗರ್ಭಿಣಿಯಾಗಿದ್ದ ಶ್ರೀಮತಿ ಗೋರ್ ರವರು, ಏಪ್ರಿಲ್ 1, 2024 ರಂದು ಗಾಜಾದಲ್ಲಿ ಇಸ್ರಯೇಲ್ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಏಳು ವರ್ಲ್ಡ್ ಸೆಂಟ್ರಲ್ ಕಿಚನ್ ಸಿಬ್ಬಂದಿಯ ಹೆಸರುಗಳನ್ನು ಗಟ್ಟಿಯಾಗಿ ಓದಿದರು. "ಅವರ ಸಮರ್ಪಣೆ ನಮಗೆ ಒಂದು ರೀತಿಯಲ್ಲಿ ಸೇವೆಗೆ ಉತ್ತೇಜನ ನೀಡುತ್ತದೆ" ಎಂದು ಅವರು ಹೇಳಿದರು.
ಕೊನೆಗೆ, 15 ವರ್ಷದ ಸಂಶೋಧಕ ಹೇಮನ್ ಬೆಕೆಲೆರವರು ವೇದಿಕೆಗೆ ಬಂದರು. ಆರಂಭಿಕ ಹಂತದ ಚರ್ಮದ ಕ್ಯಾನ್ಸರ್ ಅನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಅವರು ವೆಚ್ಚ-ಪರಿಣಾಮಕಾರಿ ಸಾಬೂನನ್ನು ವಿನ್ಯಾಸಗೊಳಿಸಿದ್ದಾರೆ, ಇದನ್ನು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ.
ಬಹುಮಾನದ ಹಣದಿಂದ, ಬೆಕೆಲೆ ಅವರು ತಮ್ಮ ಜನ್ಮಸ್ಥಳವಾದ ಇಥಿಯೋಪಿಯಾದಲ್ಲಿ ಆಸ್ಪತ್ರೆಯ ನಿರ್ಮಾಣ ಸೇರಿದಂತೆ ತಮ್ಮ ಇತರ ಯೋಜನೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಆಶಯವನ್ನು ಹೊಂದಿದ್ದಾರೆ ಎಂದು ಹೇಳಿದರು.
ಪವಿತ್ರ ಅಧಿಕಾರ ಪೀಠ ಮತ್ತು ಯುಎಇ: ಭ್ರಾತೃತ್ವಕ್ಕೆ ಜಂಟಿ ಬದ್ಧತೆ
ಪ್ರಶಸ್ತಿ ಪ್ರದಾನ ಸಮಾರಂಭದ ಹೊರತಾಗಿ, ವ್ಯಾಟಿಕನ್ ಸುದ್ಧಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪವಿತ್ರ ಅಧಿಕಾರ ಪೀಠದ ಪ್ರೇಷಿತ ರಾಯಭಾರಿ ಮಹಾಧರ್ಮಾಧ್ಯಕ್ಷರಾದ ಕ್ರಿಸ್ಟೋಫ್ ಎಲ್-ಕ್ಯಾಸಿಸ್ ರವರೊಂದಿಗೆ ಮಾತನಾಡಿದರು.
ಮಾನವ ಭ್ರಾತೃತ್ವದ ಘೋಷಣೆಗೆ ಮೊದಲು ಸಹಿ ಹಾಕಿದ್ದು ಯುಎಇಯಲ್ಲಿಯೇ, ಮತ್ತು ಅಂದಿನಿಂದ ದೇಶವು ಈ ದಾಖಲೆಯ ಪ್ರಬಲ ಪ್ರತಿಪಾದಕವಾಗಿದೆ.
ಅಧಿಕಾರ ಪೀಠ ಮೊದಲ ನಿವಾಸಿ ದೂತರಾದ ಮಹಾಧರ್ಮಾಧ್ಯಕ್ಷರಾದ ಎಲ್-ಕ್ಯಾಸಿಸ್ ರವರು, ಎರಡೂ ದೇಶಗಳ ನಡುವಿನ ಆಳವಾದ ರಾಜತಾಂತ್ರಿಕ ಸಂಬಂಧಗಳನ್ನು ಗುರುತಿಸಿದರು, ಅವು 2007ರಲ್ಲಿ ಪ್ರಾರಂಭವಾದವು ಮತ್ತು 2019ರಲ್ಲಿ ವಿಶ್ವಗುರುಗಳ ಭೇಟಿಯೊಂದಿಗೆ ಒಂದು ದೊಡ್ಡ ಹೆಜ್ಜೆ ಮುಂದಿಟ್ಟವು ಎಂದು ವಿವರಿಸಿದರು.
ಉಭಯ ದೇಶಗಳ ನಡುವಿನ ಸಂಬಂಧಗಳು ಇಂದು "ತುಂಬಾ ಉತ್ತಮವಾಗಿವೆ" ಎಂದು ಅವರು ಹೇಳಿದರು, ಅವರ ಸಹಕಾರದ ಮುಖ್ಯ ಗಮನವು ವಿಶ್ವಾದ್ಯಂತ ಮಾನವ ಭ್ರಾತೃತ್ವವನ್ನು ಉತ್ತೇಜಿಸುವುದಾಗಿದೆ ಎಂದು ಹೇಳಿದರು.
ಕೊನೆಯದಾಗಿ, ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಗ್ರ್ಯಾಂಡ್ ಇಮಾಮ್ ರವರ ನಡುವಿನ ಸಹಯೋಗವು "ಇತರರಿಗೆ ಮಾದರಿ" ಮತ್ತು "ನಾವೆಲ್ಲರೂ ಒಂದೇ ಕುಟುಂಬ" ಎಂಬುದನ್ನು ನೆನಪಿಸುತ್ತದೆ ಎಂದು ಹೇಳುವ ಮೂಲಕ ಜಾಯೆದ್ ಪ್ರಶಸ್ತಿಯ ಮಹತ್ವವನ್ನು ಪ್ರೇಷಿತ ರಾಯಭಾರಿಯವರು ಒತ್ತಿ ಹೇಳಿದರು.