MAP

Palestinian bookseller Ahmad Muna arrives for his hearing at the district court, in East Jerusalem Palestinian bookseller Ahmad Muna arrives for his hearing at the district court, in East Jerusalem 

ಪೂರ್ವ ಜೆರುಸಲೇಮ್‌ನಲ್ಲಿರುವ ಶೈಕ್ಷಣಿಕ ಪುಸ್ತಕದಂಗಡಿಯ ಮೇಲೆ ದಾಳಿ

ಪೂರ್ವ ಜೆರುಸಲೇಮ್‌ನಲ್ಲಿರುವ ಶೈಕ್ಷಣಿಕ ಪುಸ್ತಕದಂಗಡಿಯ ಮೇಲೆ ಇತ್ತೀಚೆಗೆ ಇಸ್ರಯೇಲ್ ನಡೆಸಿದ ದಾಳಿಯು ಪ್ಯಾಲೆಸ್ತೀನಿಯದ ನಿರೂಪಣೆಗಳ ಮೇಲೆ ಹೆಚ್ಚುತ್ತಿರುವ ಸೆನ್ಸಾರ್‌ಶಿಪ್ ಮತ್ತು ದಮನವನ್ನು ಎತ್ತಿ ತೋರಿಸುತ್ತದೆ. ಇಸ್ರಯೇಲ್‌ನಲ್ಲಿ ಬೌದ್ಧಿಕ ಸ್ವಾತಂತ್ರ್ಯ ಮತ್ತು ಹೆಚ್ಚುತ್ತಿರುವ ಸರ್ವಾಧಿಕಾರದ ಬಗ್ಗೆ ಜಾಗತಿಕ ಕಳವಳದ ಕಾರಣದಲ್ಲಿ ಲೇಖಕರು ಮತ್ತು ರಾಜತಾಂತ್ರಿಕರು ಸೇರಿಕೊಂಡಿದ್ದಾರೆ.

ಫ್ರಾನ್ಸೆಸ್ಕಾ ಮೆರ್ಲೊ ಮತ್ತು ರಾಬರ್ಟೊ ಪಾಗ್ಲಿಯಾಲೊಂಗಾ

ಪೂರ್ವ ಜೆರುಸಲೇಮ್‌ನಲ್ಲಿರುವ ಶೈಕ್ಷಣಿಕ ಪುಸ್ತಕ ಮಳಿಗೆಯ ಮೇಲಿನ ದಾಳಿ ಮತ್ತು ಅದರ ನಂತರದ ಪ್ಯಾಲೆಸ್ತೀನಿಯದ ಮಾಲೀಕರ ಬಂಧನವು ವಿಶ್ವಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಇಸ್ರಯೇಲ್‌ನಲ್ಲಿ ಸಾಂಸ್ಕೃತಿಕ ಮತ್ತು ಬೌದ್ಧಿಕ ಸ್ವಾತಂತ್ರ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ಪ್ರಶ್ನೆಗಳ ಉದ್ಭವ
"ಪ್ಯಾಲೆಸ್ಟೈನ್" ಪದವನ್ನು ಹೊಂದಿರುವ ಪುಸ್ತಕಗಳ ಮೇಲೆ ಯಾವುದೇ ಅಧಿಕೃತ ನಿಷೇಧವಿಲ್ಲದಿದ್ದರೂ, ಇಸ್ರಯೇಲ್ ಅಧಿಕಾರಿಗಳು ಪುಸ್ತಕದಂಗಡಿಗೆ ನುಗ್ಗಿ ಸಹೋದರರಾದ ಅಹ್ಮದ್ ಮತ್ತು ಮಹಮ್ಮದ್ ಮುನಾರವರನ್ನು ಬಂಧಿಸಿದ ದಾಳಿಯು, ಹೆಚ್ಚಾಗಿ ಪ್ಯಾಲೆಸ್ಟೈನ್ ಅಥವಾ ಪ್ಯಾಲೆಸ್ಟೈನ್ ಚಿಹ್ನೆಗಳ ಉಲ್ಲೇಖಗಳನ್ನು ಹೊಂದಿರುವ ಪುಸ್ತಕಗಳನ್ನು ಗುರಿಯಾಗಿಸಿಕೊಂಡಿದೆ ಎಂದು ತೋರುತ್ತದೆ, ಇದು ಪ್ಯಾಲೆಸ್ಟೈನ್ ನಿರೂಪಣೆಗಳ ನಿಗ್ರಹದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ವರದಿಗಳ ಪ್ರಕಾರ, ಫೆಬ್ರವರಿ 9 ರಂದು ಪುಸ್ತಕದಂಗಡಿಗೆ ದಾಳಿ ಮಾಡಿದ ಅಧಿಕಾರಿಗಳು ಪ್ಯಾಲಸ್ತೀನಿಗೆ ಸಂಬಂಧಿಸಿದ ಕೀಲಿಪದಗಳನ್ನು ಹೊಂದಿರುವ ನೂರಾರು ಪುಸ್ತಕಗಳನ್ನು ಗುರುತಿಸಿ ತೆಗೆದುಹಾಕಲು ಗೂಗಲ್ ಅನುವಾದವನ್ನು ಬಳಸಿದರು, ಅವು ಹಿಂಸೆಯನ್ನು ಪ್ರಚೋದಿಸುತ್ತವೆ ಅಥವಾ ಭಯೋತ್ಪಾದನೆಯನ್ನು ಬೆಂಬಲಿಸುತ್ತವೆ ಎಂದು ಅವರು ಹೇಳಿಕೊಂಡರು. ಈ ಪುಸ್ತಕಗಳಲ್ಲಿ ಒಂದು ಪುಸ್ತಕದ ಮಾತ್ರ "ನದಿಯಿಂದ ಸಮುದ್ರಕ್ಕೆ" ಎಂಬ ಮಕ್ಕಳು ಬಣ್ಣ ಹಚ್ಚುವ ಪುಸ್ತಕವಾಗಿತ್ತು ಎಂದು ಹೇಳಲಾಗುತ್ತದೆ, ಇದು ಜೋರ್ಡಾನ್ ನದಿ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ, ತಾಯ್ನಾಡಿನ ಬೆಂಬಲಕ್ಕಾಗಿ ಕೆಲವು ಪ್ಯಾಲೆಸ್ತೀನಿಯದವರು ಬಳಸುವ ಘೋಷಣೆಯಾಗಿದೆ.

ವ್ಯಾಪಕ ಖಂಡನೆ
ಈ ಕ್ರಮವು ವ್ಯಾಪಕ ಖಂಡನೆಗೆ ಗುರಿಯಾಗಿದೆ, ವಿಶೇಷವಾಗಿ ರಾಜತಾಂತ್ರಿಕರು, ಪತ್ರಕರ್ತರು, ಬರಹಗಾರರು, ಪ್ರಯಾಣಿಕರು ಮತ್ತು ಇನ್ನೂ ಹೆಚ್ಚಿನವರು ಸೇರಿದಂತೆ ಪುಸ್ತಕದಂಗಡಿಯಲ್ಲಿ ಸಮಯ ಕಳೆದ ಜನರಿಂದ ಖಂಡನೆಗೆ ಗುರಿಯಾಗಿದೆ.

ಇವರಲ್ಲಿ ಪುಲಿಟ್ಜರ್ ಪ್ರಶಸ್ತಿ ವಿಜೇತ ಲೇಖಕ ಮತ್ತು ಮಧ್ಯಪ್ರಾಚ್ಯದ ತಜ್ಞರಾದ ನಾಥನ್ ಥ್ರಾಲ್ ರವರು ಕೂಡ ಒಬ್ಬರು. ವ್ಯಾಟಿಕನ್ ಮಾಧ್ಯಮದ ರಾಬರ್ಟೊ ಪಗ್ಲಿಯಾಲೊಂಗಾ, ಅವರೊಂದಿಗಿನ ಸಂದರ್ಶನದಲ್ಲಿ ನಾಥನ್ ಥ್ರಾಲ್ ರವರು ದಾಳಿಯು ಇಸ್ರಯೇಲ್‌ನ ರಾಜಕೀಯ ವಾತಾವರಣದ ಮೇಲೆ ಬೀರುವ ವ್ಯಾಪಕ ಪರಿಣಾಮಗಳ ಬಗ್ಗೆ ಪ್ರತಿಬಿಂಬಿಸಿದರು.

ಪರಿಣಾಮಗಳ ಭಯವಿಲ್ಲ
ಬೌದ್ಧಿಕ ವಿನಿಮಯದ ಕೇಂದ್ರವಾದ ತಮ್ಮ ಪುಸ್ತಕದಂಗಡಿಗೆ ಜನರನ್ನು ಸ್ವಾಗತಿಸುವುದರಿಂದ ಮುನಾರವರು ವರ್ಷಗಳಲ್ಲಿ ಗಳಿಸಿರುವ ಪ್ರೀತಿ ಮತ್ತು ಗೌರವವನ್ನು ಅವರು ವಿವರಿಸಿದರು. "ಇವರು ಇಬ್ಬರು ಪ್ರೀತಿಯ ವ್ಯಕ್ತಿಗಳು ಮತ್ತು ಅವರಿಗೆ ಹೆಚ್ಚಿನ ಬೆಂಬಲ ಸಿಕ್ಕಿದ್ದು ಸ್ಪಷ್ಟವಾಗಿತ್ತು" ಎಂದು ಅವರು ಹೇಳುತ್ತಾರೆ, ಅಂತರರಾಷ್ಟ್ರೀಯ ವಲಯಗಳಲ್ಲಿ ಅವರ ವ್ಯಾಪಕ ಸಂಪರ್ಕಗಳ ಹೊರತಾಗಿಯೂ ಇಸ್ರಯೇಲ್ ಸರ್ಕಾರವು ಅವರನ್ನು ಗುರಿಯಾಗಿಸಿಕೊಂಡಿದೆ ಎಂಬ ಅಂಶವು ಶಿಕ್ಷೆಯಿಂದ ಮುಕ್ತರಾಗುವ ಆತಂಕಕಾರಿ ಭಾವನೆ ಮತ್ತು ಅಂತಹ ಕ್ರಮಗಳಿಗೆ ಯಾವುದೇ ಪರಿಣಾಮಗಳಿಲ್ಲ ಎಂಬ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ವಿಚಾರಗಳ ಮುಕ್ತ ಹರಿವನ್ನು ನಿರ್ಬಂಧಿಸುವ ಇಂತಹ ಪ್ರಯತ್ನಗಳು ಪ್ರಜಾಪ್ರಭುತ್ವದ ಪರಿಕಲ್ಪನೆಗೆ ನೇರ ಸವಾಲನ್ನು ಪ್ರತಿನಿಧಿಸುತ್ತವೆ ಎಂದು ಥ್ರಾಲ್ ಗಮನಿಸಿದರು. "ದಶಕಗಳ ಕಾಲ ಲಕ್ಷಾಂತರ ಜನರಿಂದ ಅವರ ಜನ್ಮಜಾತ ಗುಣಲಕ್ಷಣಗಳ ಆಧಾರದ ಮೇಲೆ ಮೂಲಭೂತ ನಾಗರಿಕ ಹಕ್ಕುಗಳನ್ನು ತಡೆಹಿಡಿಯುವ ಯಾವುದೇ ದೇಶವನ್ನು ಪ್ರಜಾಪ್ರಭುತ್ವ ಎಂದು ಕರೆಯಲಾಗುವುದಿಲ್ಲ" ಎಂದು ಅವರು ಒತ್ತಿ ಹೇಳಿದರು.

ಪುಸ್ತಕದ ಅಂಗಡಿಗಿಂತ ಮಿಗಿಲಾದದ್ದು
ಥ್ರಾಲ್‌ಗೆ, ಶೈಕ್ಷಣಿಕ ಪುಸ್ತಕದಂಗಡಿ ಕೇವಲ ಒಂದು ಅಂಗಡಿ ಮಾತ್ರವಲ್ಲ, ಬದಲಿಗೆ ಅದು ಒಂದು ಸಮುದಾಯ ಮತ್ತು ಸಂಪರ್ಕದ ಸ್ಥಳವಾಗಿದೆ. "ನಾನು ನನ್ನ ಎರಡೂ ಪುಸ್ತಕಗಳನ್ನು ಅಲ್ಲಿ ಬಿಡುಗಡೆ ಮಾಡಿದೆ" ಎಂದು ಅವರು ನೆನಪಿಸಿಕೊಂಡರು. ನಾನು ಅಲ್ಲಿ ಗಂಟೆಗಟ್ಟಲೆ ಕುಳಿತು ಮಾಲೀಕರೊಂದಿಗೆ ಜೀವನ, ಸಾಹಿತ್ಯ ಮತ್ತು ರಾಜಕೀಯದ ಬಗ್ಗೆ ದೀರ್ಘ, ದೀರ್ಘವಾದ ಸಂಭಾಷಣೆಗಳನ್ನು ನಡೆಸುತ್ತಿದ್ದೆ ಎಂದರು. ವರ್ಷಗಳಲ್ಲಿ, ಥ್ರಾಲ್ ಹೆಚ್ಚು ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸುತ್ತಿದ್ದಂತೆ, ಅವರ ಮನೆಯಲ್ಲಿ ಜಾಗವನ್ನು ಸೃಷ್ಟಿಸುವ ಅಗತ್ಯವು ಅನಿವಾರ್ಯವಾಯಿತು. ಅವರು ಅವುಗಳನ್ನು ಶೈಕ್ಷಣಿಕ ಪುಸ್ತಕದಂಗಡಿಗೆ ದಾನ ಮಾಡುತ್ತಿದ್ದರು, ಅದು ಥ್ರಾಲ್‌ನ ಪುಸ್ತಕಗಳನ್ನು ಇತರ ದೇಣಿಗೆಗಳೊಂದಿಗೆ ಗಾಜಾದಲ್ಲಿರುವ ಒಂದು ಪುಟ್ಟ ಗ್ರಂಥಾಲಯಕ್ಕೆ ಕೊಂಡೊಯ್ಯುತ್ತಿತ್ತು.

ಗಾಜಾ ಗಡಿಯಲ್ಲಿ ಇಸ್ರಯೇಲ್ ಪಡೆಗಳು ಒಂದೂವರೆ ವರ್ಷಗಳ ಕಾಲ ಬಾಂಬ್ ದಾಳಿ ನಡೆಸಿದ ನಂತರ, "ಗ್ರಂಥಾಲಯವನ್ನು ನಾಶಪಡಿಸಲಾಯಿತು" ಎಂದು ಕೇಳಿದಾಗ ಆಶ್ಚರ್ಯವೇನಿಲ್ಲ.

ಗಾಜಾ ಗಡಿಯ ಮೇಲಿನ ಪ್ರಸ್ತುತ ಕದನ ವಿರಾಮವು ಪ್ಯಾಲೆಸ್ತೀನಿಯದ ಜನರಿಗೆ ಭಾರಿ ಪರಿಹಾರವನ್ನು ನೀಡಿದ್ದರೂ, ಅಂತರರಾಷ್ಟ್ರೀಯ ರಾಜಕೀಯ ಮತ್ತು ಇಸ್ರಯೇಲ್‌ನ ರಾಜಕೀಯ ವಾತಾವರಣವು ಕಳವಳಕ್ಕೆ ಕಾರಣವಾಗಿದೆ. ಪರಿಹಾರವನ್ನು ಕಂಡುಕೊಳ್ಳುವ ಮತ್ತು ಶಾಂತಿಯನ್ನು ಪುನಃಸ್ಥಾಪಿಸುವ ಭರವಸೆ ಉಳಿದಿದೆ.
 

11 ಫೆಬ್ರವರಿ 2025, 14:15