ವಿಶ್ವ ಜೌಗು ಪ್ರದೇಶ ದಿನ: ನಮ್ಮ ಸಾಮಾನ್ಯ ಮನೆ - ಪರಿಸರ ವ್ಯವಸ್ಥೆಯನ್ನು ಕಾಪಾಡುವುದು
ಫೆಡೆರಿಕೊ ಸಿಟ್ಟೆರಿಚ್
ಫೆಬ್ರವರಿ 2, ಭಾನುವಾರ, ವಿಶ್ವ ಜೌಗು ಪ್ರದೇಶ ದಿನವೆಂದು ಆಚರಿಸಲಾಗುತ್ತದೆ. 2025ರ ಧ್ಯೇಯವಾಕ್ಯ "ನಮ್ಮ ಸಾಮಾನ್ಯ ಭವಿಷ್ಯಕ್ಕಾಗಿ ವಿಶ್ವ ಜೌಗು ಪ್ರದೇಶಗಳನ್ನು ರಕ್ಷಿಸುವುದು", ಇದು ನಮ್ಮ ಪರಿಸರ ವ್ಯವಸ್ಥೆಯಲ್ಲಿ ಜೌಗು ಪ್ರದೇಶ ವಹಿಸುವ ಪ್ರಮುಖ ಪಾತ್ರವನ್ನು ಮತ್ತು ಪ್ಲಾಸ್ಟಿಕ್ ಮಾಲಿನ್ಯ ಸೇರಿದಂತೆ ಅವು ಎದುರಿಸುತ್ತಿರುವ ಹೆಚ್ಚುತ್ತಿರುವ ಬೆದರಿಕೆಗಳನ್ನು ಎತ್ತಿ ತೋರಿಸುತ್ತದೆ. ವಾಸ್ತವವಾಗಿ ಜೌಗು ಪ್ರದೇಶಗಳು ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆಗಳನ್ನು ಒದಗಿಸುತ್ತವೆ, ಆದರೆ ಅವುಗಳನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳಲಾಗುವುದಿಲ್ಲ, ವಿಶೇಷವಾಗಿ ಪ್ಲಾಸ್ಟಿಕ್ ಮಾಲಿನ್ಯದ ಸಂದರ್ಭದಲ್ಲಿ.
"ಪ್ರಸ್ತುತ, ಪ್ಲಾಸ್ಟಿಕ್ ಮಾಲಿನ್ಯಕ್ಕೆ ಜಾಗತಿಕ ಪರಿಹಾರವಿಲ್ಲ" ಎಂದು ರೋಮಾ ಟ್ರೆರವರ ವಿಜ್ಞಾನ ವಿಭಾಗದ ಪಿಎಚ್‌ಡಿ ಅಭ್ಯರ್ಥಿ ಡೇವಿಡ್ ಟೌರೋಝಿರವರು ಹೇಳಿದರು. ಇದನ್ನು ಪರಿಗಣಿಸಿ, ಅದರ ಕೆಲವು ಸಕಾರಾತ್ಮಕ ಅಂಶಗಳನ್ನು ಗುರುತಿಸುವುದು ಸಹ ಮುಖ್ಯವಾಗಿದೆ.
"ಕರಾವಳಿಯ ಜೌಗು ಪ್ರದೇಶಗಳಲ್ಲಿ 5 ಸೆಂ.ಮೀ ಗಿಂತ ದೊಡ್ಡದಾದ ಪ್ಲಾಸ್ಟಿಕ್ ವಸ್ತುಗಳು, ಮ್ಯಾಕ್ರೋಪ್ಲಾಸ್ಟಿಕ್‌ಗಳು, ಸಣ್ಣ ಅಕಶೇರುಕಗಳ ವಸಾಹತುಶಾಹಿಗೆ ಹೆಚ್ಚುವರಿ ತಲಾಧಾರವಾಗಿ ಕಾರ್ಯನಿರ್ವಹಿಸಬಹುದೇ ಎಂದು ತನಿಖೆ ಮಾಡುವುದು ನಮ್ಮ ಆರಂಭಿಕ ಹಂತವಾಗಿತ್ತು" ಎಂದು ಅಧ್ಯಯನದ ಮೊದಲ ಲೇಖಕ ಟೌರೋಝಿರವರು ವಿವರಿಸಿದರು.
ಈ ಕ್ರಿಯೆಯನ್ನು ಮಾಡಲು, ಸಂಶೋಧಕರು ಈ ಹಿಂದೆ ಒಡ್ಡಿಕೊಳ್ಳದ ಪಾಲಿಸ್ಟೈರೀನ್ ಮತ್ತು ಪಾಲಿಥಿಲೀನ್ ಟೆರೆಫ್ಥಲೇಟ್ (ಪಿಇಟಿ) ಘಟಕಗಳನ್ನು ಮೇಲ್ಮೈಯಲ್ಲಿ ಮತ್ತು ಎರಡು ಮೀಟರ್ ಆಳದಲ್ಲಿ ರೋಮ್ ಬಳಿಯ ಟೊರೆ ಫ್ಲೇವಿಯಾದಲ್ಲಿರುವ ಜೌಗು ಪ್ರದೇಶದಲ್ಲಿ ಇರಿಸಿದರು ಮತ್ತು ಸಣ್ಣ ಅಕಶೇರುಕಗಳು ಎಲ್ಲಾ ಮಾದರಿಗಳನ್ನು ಸಕ್ರಿಯವಾಗಿ ವಸಾಹತುವನ್ನಾಗಿ ಮಾಡಿಕೊಂಡಿರುವುದನ್ನು ಕಂಡುಕೊಂಡರು.
"ಸಕ್ರಿಯ ವಸಾಹತುಶಾಹಿ ಎಂದರೆ, ಜೀವಿಗಳು ಗಾಳಿಯಂತಹ ವಾತಾವರಣದ ಏಜೆಂಟ್‌ಗಳಿಂದ ಸಾಗಿಸಲ್ಪಡುವ ಬದಲು ಪ್ಲಾಸ್ಟಿಕ್ ತಾಣಗಳ ಕಡೆಗೆ ಈಜುವ ಮೂಲಕ ತಲುಪಿದವು ಎಂದು ನಾವು ಅರ್ಥೈಸುತ್ತೇವೆ" ಎಂದು ಟೌರೋಝಿರವರು ಇದರ ಬಗ್ಗೆ ಹೈಲೈಟ್ ಮಾಡಿದ್ದಾರೆ.
ಹೊಳೆಯುವುದೆಲ್ಲ ಚಿನ್ನವಲ್ಲ
“ಖಂಡಿತ, ಇಂದಿನಿಂದ ನಾವು ಉದ್ದೇಶಪೂರ್ವಕವಾಗಿ ಜೌಗು ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನ್ನು ಬಿಡುಗಡೆ ಮಾಡಬೇಕು ಎಂದು ಇದರ ಅರ್ಥವಲ್ಲ” ಎಂದು ಟೌರೋಝಿರವರು ಹೇಳಿದರು. “ಪ್ಲಾಸ್ಟಿಕ್ ಮಾಲಿನ್ಯವು ಬೃಹತ್ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು”.
"ಇದಲ್ಲದೆ, ಮ್ಯಾಕ್ರೋಪ್ಲಾಸ್ಟಿಕ್‌ಗಳು ಸಣ್ಣ ಅಕಶೇರುಕಗಳು ಮಾತ್ರವಲ್ಲದೆ ಸೂಕ್ಷ್ಮಜೀವಿಗಳು ಸಹ ಬೆಳೆಯುವ ಮತ್ತು ಅಭಿವೃದ್ಧಿ ಹೊಂದುವ ಕಾರ್ಯನಿರ್ವಹಿಸುತ್ತವೆ" ಎಂದು ಟೌರೋಝಿರವರು ವಿವರಿಸಿದರು. "ಅವು ಕ್ರಿಯಾತ್ಮಕ ಪ್ಲಾಸ್ಟಿಕ್ ಆಧಾರಿತ ಸೂಕ್ಷ್ಮ-ಪರಿಸರ ವ್ಯವಸ್ಥೆಗಳಾಗುತ್ತವೆ, ಇದನ್ನು ಪ್ಲಾಸ್ಟಿಸ್ಪಿಯರ್ಸ್ ಎಂದು ಕರೆಯಲಾಗುತ್ತದೆ".
ಮ್ಯಾಕ್ರೋಪ್ಲಾಸ್ಟಿಕ್‌ಗಳಲ್ಲಿ ಕಂಡುಬರುವ ಸೂಕ್ಷ್ಮಜೀವಿಗಳಲ್ಲಿ, ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು ಹೆಚ್ಚು ಕಳವಳಕಾರಿ.
"ಗಾಳಿ ಮತ್ತು ಪ್ರವಾಹಗಳು ಮ್ಯಾಕ್ರೋಪ್ಲಾಸ್ಟಿಕ್‌ಗಳನ್ನು ದೂರದವರೆಗೆ ಸ್ಥಳಗಳವರೆಗೆ ಸಾಗಿಸಬಹುದು, ರೋಗಕಾರಕಗಳನ್ನು ಈ ಹಿಂದೆ ಎಲ್ಲೂ ಕಾಣದೆ ಇರದ ಪ್ರದೇಶಗಳಿಗೆ ಪರಿಚಯಿಸುವ ಸಾಧ್ಯತೆಯಿದೆ" ಎಂದು ಟೌರೋಝಿರವರು ಹೇಳಿದರು. "ಇದು ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗಬಹುದು, ಏಕೆಂದರೆ ಕೆಲವು ಪ್ರಭೇದಗಳು, ಆ ರೋಗಕಾರಕಗಳಿಗೆ ಎಂದಿಗೂ ಒಡ್ಡಿಕೊಳ್ಳದ, ಈ ರೋಗಕಾರಕಗಳನ್ನು ಎದುರಿಸಲು ಅಗತ್ಯವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದಿಲ್ಲ".
ಇದಲ್ಲದೆ, ಮ್ಯಾಕ್ರೋಪ್ಲಾಸ್ಟಿಕ್ ವರ್ಗಾವಣೆಯು ಆಕ್ರಮಣಕಾರಿ ಪ್ರಭೇದಗಳನ್ನು ಹೊಸ ಪರಿಸರ ವ್ಯವಸ್ಥೆಗಳಿಗೆ ಸಾಗಿಸಬಹುದು. ಆಕ್ರಮಣಕಾರಿ ಪ್ರಭೇದಗಳು ಪರಿಚಯಿಸಲಾದ ಜೀವಿಗಳಾಗಿವೆ, ಅವುಗಳು ತಮ್ಮ ಹೊಸ ಪರಿಸರಕ್ಕೆ ಪರಿಸರೀಯವಾಗಿ ಹಾನಿ ಮಾಡುತ್ತವೆ, ಸ್ಥಳೀಯ ಜೀವಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಮ್ಯಾಕ್ರೋ- ಮತ್ತು ಮೈಕ್ರೋಪ್ಲಾಸ್ಟಿಕ್‌ಗಳು
ಮ್ಯಾಕ್ರೋಪ್ಲಾಸ್ಟಿಕ್‌ಗಳು ಸಣ್ಣ ತುಣುಕುಗಳಾಗಿ ವಿಭಜನೆಯಾಗಬಹುದು. ಈ ತುಣುಕುಗಳು 5 ಮಿ.ಮೀ ಗಿಂತ ಚಿಕ್ಕದಾದಾಗ, ಅವುಗಳನ್ನು ಮೈಕ್ರೋಪ್ಲಾಸ್ಟಿಕ್‌ಗಳು ಎಂದು ಕರೆಯಲಾಗುತ್ತದೆ.
ಅವುಗಳ ಗಾತ್ರ ತೀರಾ ಚಿಕ್ಕದಾಗಿರುವುದರಿಂದ, ಪರಿಸರ ಜ್ಞಾನದಲ್ಲಿನ ನಮ್ಮ ಪ್ರಸ್ತುತ ಮಿತಿಗಳಿಂದಾಗಿ, ಪರಿಸರದಿಂದ ಮೈಕ್ರೋಪ್ಲಾಸ್ಟಿಕ್‌ಗಳನ್ನು ತೆಗೆದುಹಾಕುವುದು ಪ್ರಸ್ತುತವಾಗಿ “ಅಸಾಧ್ಯ" ಎಂದು ಟೌರೋಝಿರವರು ಎಚ್ಚರಿಸಿದ್ದಾರೆ.
ಆದಾಗ್ಯೂ, ಸೈದ್ಧಾಂತಿಕವಾಗಿ ತೆಗೆದುಹಾಕುವುದು ಸಾಧ್ಯವಾದರೂ ಸಹ ಮ್ಯಾಕ್ರೋಪ್ಲಾಸ್ಟಿಕ್‌ಗಳಂತೆ ಪರಿಸರದಲ್ಲಿ ಈ ವಸ್ತುಗಳ ಅಗಾಧ ಪ್ರಮಾಣವು ಅವುಗಳ ಹೊರತೆಗೆಯುವಿಕೆಯನ್ನು ಅಸಾಧ್ಯವಾಗಿಸುತ್ತದೆ.
ಭವಿಷ್ಯದ ದೃಷ್ಟಿಕೋನಗಳು
“ನಮ್ಮ ಅಧ್ಯಯನವು ಈ ರೀತಿಯ ಸಂಶೋಧನೆಯಲ್ಲಿ ಮೊದಲನೆಯದು” ಎಂದು ಟೌರೋಝಿ ಹೈಲೈಟ್ ಮಾಡಿದ್ದಾರೆ. ಜೌಗು ಪ್ರದೇಶದಲ್ಲಿ ವರ್ಜಿನ್ ಮ್ಯಾಕ್ರೋಪ್ಲಾಸ್ಟಿಕ್ ವಸಾಹತುಶಾಹಿಯನ್ನು ತನಿಖೆ ಮಾಡಿರುವುದು ಇದೇ ಮೊದಲು.
"ಆದ್ದರಿಂದ, ಸಣ್ಣ ಅಕಶೇರುಕಗಳು ಪ್ಲಾಸ್ಟಿಕ್ ವಸ್ತುಗಳನ್ನು ಮಾತ್ರವಲ್ಲದೆ ಮರ ಅಥವಾ ಸಸ್ಯ ವಸ್ತುಗಳಂತಹ ನೈಸರ್ಗಿಕ ತಲಾಧಾರಗಳನ್ನು ಸಹ ಹೇಗೆ ವಸಾಹತುವನ್ನಾಗಿ ಮಾಡುತ್ತವೆ ಎಂಬುದನ್ನು ಮತ್ತಷ್ಟು ನಿರ್ಣಯಿಸುವುದು ಅತ್ಯಗತ್ಯ" ಎಂದು ಅವರು ವಿವರಿಸಿದರು.
"ನಾವು ಸಕಾರಾತ್ಮಕ ಫಲಿತಾಂಶಗಳೆಂದು ಪರಿಗಣಿಸಬಹುದಾದವುಗಳನ್ನು ಪ್ರಸ್ತುತಪಡಿಸುತ್ತೇವೆ, ಆದರೆ ಗುರಿ ಯಾವಾಗಲೂ ಮಾಲಿನ್ಯವನ್ನು ತಡೆಗಟ್ಟುವುದು ಮತ್ತು ಮಾಲಿನ್ಯವನ್ನು ತಪ್ಪಿಸುವುದು" ಎಂದು ಟೌರೋಝಿರವರು ಹೇಳಿದರು.