MAP

DRCONGO-CONFLICT DRCONGO-CONFLICT  (AFP or licensors)

ಡಿಆರ್‌ಸಿಯಲ್ಲಿ ತಕ್ಷಣದ ಕದನ ವಿರಾಮಕ್ಕೆ ವಿಶ್ವಸಂಸ್ಥೆ ಕರೆ ನೀಡಿದೆ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿರುವ ಸರ್ಕಾರಿ ವಿರೋಧಿ ಉಗ್ರಗಾಮಿಗಳು ತಕ್ಷಣವೇ ಯುದ್ಧವನ್ನು ನಿಲ್ಲಿಸಬೇಕು ಮತ್ತು ಅವರು ಈಗ ನಿಯಂತ್ರಿಸುತ್ತಿರುವ ಎಲ್ಲಾ ಪ್ರದೇಶಗಳಿಂದ ಹಿಂದೆ ಸರಿಯಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸರ್ವಾನುಮತದಿಂದ ಕರೆ ನೀಡಿದೆ.

ನಾಥನ್ ಮಾರ್ಲಿ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿರುವ ಸರ್ಕಾರಿ ವಿರೋಧಿ ಉಗ್ರಗಾಮಿಗಳು ತಕ್ಷಣವೇ ಯುದ್ಧವನ್ನು ನಿಲ್ಲಿಸಬೇಕು ಮತ್ತು ಅವರು ಈಗ ನಿಯಂತ್ರಿಸುತ್ತಿರುವ ಎಲ್ಲಾ ಪ್ರದೇಶಗಳಿಂದ ಹಿಂದೆ ಸರಿಯಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸರ್ವಾನುಮತದಿಂದ ಕರೆ ನೀಡಿದೆ.

ಸಂಘರ್ಷದಿಂದ ಹಾನಿಗೊಳಗಾದ ಮಧ್ಯ ಆಫ್ರಿಕಾ ದೇಶದ ಪೂರ್ವ ಭಾಗದಲ್ಲಿ M23 ಬಂಡಾಯ ಗುಂಪು ತನ್ನ ನಿಯಂತ್ರಣವನ್ನು ವಿಸ್ತರಿಸುತ್ತಿರುವ ಸಮಯದಲ್ಲಿ ಈ ಕರೆಯು ಬಂದಿದೆ.

ಮಹತ್ವದ ಬೆಳವಣಿಗೆಯಲ್ಲಿ, M23 ಬಂಡಾಯಗಾರರು ಪ್ರಮುಖ ನಗರವಾದ ಬುಕಾವುವಿನ ಮಧ್ಯಭಾಗವನ್ನು ಪ್ರವೇಶಿಸಿ ತಮ್ಮ ನಿಯಂತ್ರಣಾ ಪ್ರದೇಶಗಳನ್ನು ವೇಗವಾಗಿ ವಿಸ್ತರಿಸುತ್ತಿದ್ದಾರೆ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (DRC) ವಿಶ್ವಸಂಸ್ಥೆಯ ಸೇವಾನಿಯೋಗದ ಮುಖ್ಯಸ್ಥ ಬಿಂಟೌ ಕೀಟಾರವರು, ಪೂರ್ವ ಉತ್ತರ ಕಿವು ಪ್ರಾಂತ್ಯದಲ್ಲಿ ರುವಾಂಡಾ ಬೆಂಬಲಿತ M23 ಬಂಡುಕೋರರು ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಎತ್ತಿ ತೋರಿಸಿದ್ದಾರೆ.

ರುವಾಂಡಾ ರಕ್ಷಣಾ ಪಡೆಗಳ ಬೆಂಬಲದೊಂದಿಗೆ M23 ಉತ್ತರ ಕಿವುವಿನ ಕೆಲವು ಭಾಗಗಳನ್ನು ನಿರಂತರವಾಗಿ ಆಕ್ರಮಿಸಿಕೊಂಡಿರುವುದು, ಸೇವಾನಿಯೋಗದ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವ MONUSCOವಿನ ಸಾಮರ್ಥ್ಯವನ್ನು ತೀವ್ರವಾಗಿ ನಿರ್ಬಂಧಿಸಿದೆ ಎಂದು ಅವರು ಒತ್ತಿ ಹೇಳಿದರು.

ನಾಗರಿಕರನ್ನು ರಕ್ಷಿಸುವುದು ಮತ್ತು ಅವರ ಜೀವ ಉಳಿಸುವ ಕಾರ್ಯಾಚರಣೆಗಳನ್ನು ನಡೆಸುವುದನ್ನು ಬಂಡುಕೋರರು ತಡೆಯುತ್ತಾರೆ ಎಂದು ಕೀಟಾರವರು ಹೇಳಿದರು.

ಮಾನವೀಯ ಕಾಳಜಿಗಳೂ ಸಹ ಹೆಚ್ಚುತ್ತಿವೆ
ದಕ್ಷಿಣ ಕಿವುವಿನ ಉವಿರಾದಲ್ಲಿ ನಡೆಯುತ್ತಿರುವ ಘರ್ಷಣೆಗಳಿಂದಾಗಿ ಅಗತ್ಯವಿರುವವರನ್ನು ತಲುಪುವಲ್ಲಿ ಮತ್ತು ವೈದ್ಯಕೀಯ ನೆರವು ನೀಡುವಲ್ಲಿ ಮಾನವೀಯ ಪಾಲುದಾರರು ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯ ಮುಖ್ಯ ವಕ್ತಾರ ಸ್ಟೀಫನ್ ಡುಜಾರಿಕ್ ರವರು ವರದಿ ಮಾಡಿದ್ದಾರೆ.

ಪ್ರಾಂತ್ಯದ ಆಸ್ಪತ್ರೆಗಳು ಪ್ರತಿದಿನ ಸಂಘರ್ಷದಿಂದ ನಾಗರಿಕರ ಸಾವುನೋವುಗಳನ್ನು ಪಡೆಯುತ್ತಿವೆ.

ಕಲೇಹೆ ಪ್ರದೇಶದಲ್ಲಿ, ಹೋರಾಟವು ಕಳೆದ ವಾರದಲ್ಲಿ 50,000ಕ್ಕೂ ಹೆಚ್ಚು ಜನರನ್ನು ಪಲಾಯನ ಮಾಡುವಂತೆ ಮಾಡಿದೆ, ಅವರಲ್ಲಿ ಹಲವರು ನೆರೆಯ ಬುರುಂಡಿಯಲ್ಲಿ ಆಶ್ರಯ ಪಡೆದಿದ್ದಾರೆ.

ಫೆಬ್ರವರಿಯಿಂದ, 40,000ಕ್ಕೂ ಹೆಚ್ಚು ಕಾಂಗೋಲೀಸ್ ಪ್ರಜೆಗಳು, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು, ರಕ್ಷಣೆ ಕೋರಿ ಬುರುಂಡಿಗೆ ಆಗಮಿಸಿದ್ದಾರೆ.

ಅಷ್ಟರಲ್ಲಿ, ಕೆನ್ಯಾದ ಅಧ್ಯಕ್ಷ ವಿಲಿಯಂ ರುಟೊರವರು ಮತ್ತು ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊರವರು ಜಂಟಿಯಾಗಿ ಡಿಆರ್‌ಸಿ ಸಂಘರ್ಷದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.

ಇಬ್ಬರು ನಾಯಕರ ನಡುವಿನ ದೂರವಾಣಿ ಸಂಭಾಷಣೆಯ ನಂತರ, ಬಿಕ್ಕಟ್ಟನ್ನು ಕೊನೆಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಅವರು ಪ್ರತಿಜ್ಞೆ ಮಾಡಿದರು.

ಇದರಲ್ಲಿ ಸಹಾಯಕರ ನೇಮಕ, ಕದನ ವಿರಾಮದ ಅನುಷ್ಠಾನ ಮತ್ತು ಶಾಶ್ವತ ಪರಿಹಾರದತ್ತ ವಿಶಾಲವಾದ ರಾಜಕೀಯ ಪ್ರಕ್ರಿಯೆ ಸೇರಿವೆ.

22 ಫೆಬ್ರವರಿ 2025, 14:31