ಉಕ್ರೇನ್: ರಷ್ಯಾದ ಆಕ್ರಮಣದ ವಾರ್ಷಿಕೋತ್ಸವವು ರಾಷ್ಟ್ರೀಯ ಪ್ರಾರ್ಥನಾ ದಿನವಾಗಲಿದೆ
ವ್ಯಾಟಿಕನ್ ಸುದ್ಧಿ
2022ರಲ್ಲಿ ಪೂರ್ಣ ಪ್ರಮಾಣದ ರಷ್ಯಾದ ಆಕ್ರಮಣದ ವಾರ್ಷಿಕೋತ್ಸವವಾದ ಫೆಬ್ರವರಿ 24ನ್ನು ರಾಷ್ಟ್ರವ್ಯಾಪ್ತಿಯಾಗಿ ಪ್ರಾರ್ಥನಾ ದಿನವನ್ನಾಗಿ ಉಕ್ರೇನಿನ ಸಂಸತ್ತು ಘೋಷಿಸಿದೆ.
ಕೈವ್-ಝಿಟೊಮಿರ್‌ನ ರೋಮನ್ ಕಥೋಲಿಕ ಧರ್ಮಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷರಾದ ಒಲೆಕ್ಸಾಂಡರ್ ಯಾಜ್ಲೋವೆಟ್ಸ್ಕಿರವರು ವ್ಯಾಟಿಕನ್ ಸುದ್ಧಿಗೆ ಹೀಗೆಂದು ನುಡಿದರು, ಉಕ್ರೇನಿಯದ ಬಹುತೇಕ ನಾಗರಿಕರಿಗೆ, ಈ ದಿನವು ಯಾವಾಗಲೂ ನಕಾರಾತ್ಮಕ ಭಾವನೆಗಳನ್ನು ಹುಟ್ಟುಹಾಕುತ್ತದೆ ಹಾಗೂ ಈ ದಿನವು ದೀರ್ಘಕಾಲ ರಕ್ತಸ್ರಾವವಾಗುವ ಗಾಯವನ್ನು ನೆನಪಿಸುತ್ತದೆ ಎಂದು ಹೇಳಿದರು.
ಆದಾಗ್ಯೂ, ಇದನ್ನು ರಾಷ್ಟ್ರೀಯ ಪ್ರಾರ್ಥನಾ ದಿನವಾಗಿ ಪರಿವರ್ತಿಸುವುದರಿಂದ ಆ ದಿನವು "ದೇವರಿಗೆ ಕೃತಜ್ಞತೆಯ ಅಭಿವ್ಯಕ್ತ"ತೆಯನ್ನು ಪ್ರತಿನಿಧಿಸಲು ಅನುವು ಮಾಡಿಕೊಡುತ್ತದೆ - "ನಮ್ಮ ದೇಶವನ್ನು ರಷ್ಯಾದ ಆಕ್ರಮಣದಿಂದ ರಕ್ಷಿಸಿದ್ದಕ್ಕಾಗಿ ಮತ್ತು ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿದ್ದಕ್ಕಾಗಿ ಕೃತಜ್ಞತೆ".
ಪ್ರಾರ್ಥನಾ ದಿನವು "ನ್ಯಾಯಯುತ ಮತ್ತು ತ್ವರಿತ ಶಾಂತಿ" ಹಾಗೂ ಉಕ್ರೇನಿಯದ ಸೈನಿಕರ ರಕ್ಷಣೆಗಾಗಿ ದೇವರಲ್ಲಿ ಮನವಿ ಮಾಡಿಕೊಳ್ಳಲು ಒಂದು ಅವಕಾಶವಾಗಿದೆ, ಇದರಿಂದ "ಅವರು ತಮ್ಮ ತಮ್ಮ ಕುಟುಂಬಗಳಿಗೆ ಸುರಕ್ಷಿತವಾಗಿ ಮರಳುವಂತಾಗುತ್ತದೆ" ಎಂದು ಧರ್ಮಾಧ್ಯಕ್ಷರಾದ ಒಲೆಕ್ಸಾಂಡರ್ ಯಾಜ್ಲೋವೆಟ್ಸ್ಕಿರವರು ಹೇಳಿದರು.
ವಿಶೇಷವಾಗಿ ನಾವು ಕೈದಿಗಳ ಬಿಡುಗಡೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ, ಅಷ್ಟೇ ಅಲ್ಲದೇ, ಗಾಯಗೊಂಡವರಿಗಾಗಿಯೂ, ಸತ್ತ ಸೈನಿಕರು ಮತ್ತು ನಾಗರಿಕರಿಗಾಗಿಯೂ ಪ್ರಾರ್ಥಿಸುತ್ತೇವೆ" ಎಂದು ಧರ್ಮಾಧ್ಯಕ್ಷರಾದ ಯಾಜ್ಲೋವೆಟ್ಸ್ಕಿರವರು ಒತ್ತಿ ಹೇಳಿದರು.
ಧರ್ಮಾಧ್ಯಕ್ಷರಾದ ಯಾಜ್ಲೋವೆಟ್ಸ್ಕಿರವರ ಪ್ರಕಾರ, ಈ ಪ್ರಾರ್ಥನೆಯ ದಿನವು ವಿವಿಧ ಕ್ರೈಸ್ತ ಧರ್ಮಸಭೆಗಳ ನಡುವೆ ಮತ್ತು ವಿವಿಧ ಧರ್ಮಗಳ ನಡುವಿನ ಸಂವಾದಕ್ಕೆ ಒಂದು ಅವಕಾಶವನ್ನು ಕಲ್ಪಿಸಿದೆ.
ರಷ್ಯಾ, ನಮ್ಮ ಜನರನ್ನು ತಮ್ಮ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಒಂದುಗೂಡಿಸಿದೆ ಮತ್ತು ಪ್ರಾರ್ಥನೆಯಲ್ಲಿಯೂ ಸಹ ಒಂದುಗೂಡಿಸಿದೆ, ಇದರಿಂದಾಗಿ ಅವರು ಈ ಸ್ವಾತಂತ್ರ್ಯವನ್ನು ಪಡೆಯಬಹುದು ಎಂಬ ದೃಢವಿಶ್ವಾಸವನ್ನು ಅವರಲ್ಲಿ ಮೂಡಿಸಿದೆ ಎಂದು ಅವರು ಹೇಳಿದರು.