ಡಿಆರ್‌ಸಿಯಲ್ಲಿ ನಡೆದ ಹೋರಾಟದಲ್ಲಿ ಕನಿಷ್ಠ 700 ಜನರು ಸಾವನ್ನಪ್ಪಿದ್ದಾರೆ
ನಾಥನ್ ಮಾರ್ಲಿ
ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿನ (ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ) ಗೋಮಾದಲ್ಲಿ ನಡೆದ ಹೋರಾಟದಲ್ಲಿ ಕನಿಷ್ಠ 700 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವಸಂಸ್ಥೆಯ ವಕ್ತಾರರಾದ ಸ್ಟೀಫನ್ ಡುಜಾರಿಕ್ ರವರ ಪ್ರಕಾರ, ರುವಾಂಡಾ ಬೆಂಬಲಿತ M23 ಬಂಡುಕೋರರು ಉತ್ತರ ಕಿವು ಪ್ರಾಂತ್ಯದ ರಾಜಧಾನಿಯನ್ನು ವಶಪಡಿಸಿಕೊಂಡಿದ್ದರಿಂದ 2,800 ಜನರು ಗಾಯಗೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಪಾಲುದಾರರು ಮಾಡಿದ ಮೌಲ್ಯಮಾಪನದಿಂದ ಸಾವುನೋವುಗಳ ಅಂಕಿಅಂಶಗಳು ಬಂದಿವೆ ಎಂದು ಸೇರಿಸುತ್ತಾ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ವಕ್ತಾರರು ಎಚ್ಚರಿಸಿದ್ದಾರೆ.
ದಶಕಗಳ ಹಿಂಸಾಚಾರ
ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿನ ಸಂಘರ್ಷವು 1990ರ ದಶಕದಷ್ಟು ಹಿಂದಿನದು, ಆದರೆ ಈ ವರ್ಷದ ಆರಂಭದಿಂದ ವೇಗವಾಗಿ ಉಲ್ಬಣಗೊಂಡಿದೆ.
ಜನಾಂಗೀಯ ಟುಟ್ಸಿಗಳಿಂದ ಕೂಡಿದ M23, ಅಲ್ಪಸಂಖ್ಯಾತ ಹಕ್ಕುಗಳಿಗಾಗಿ ಹೋರಾಡುತ್ತಿದೆ ಎಂದು ಒತ್ತಾಯಿಸುತ್ತದೆ, ಆದರೆ ರುವಾಂಡಾ ಬೆಂಬಲಿತ ಬಂಡುಕೋರರು ಪ್ರದೇಶದ ಖನಿಜ ಸಂಪತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಸರ್ಕಾರ ಹೇಳುತ್ತದೆ.
ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ತೀವ್ರವಾದ ಹೋರಾಟದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರಿಗೆ ಮಾನವೀಯ ಬಿಕ್ಕಟ್ಟು ಇನ್ನಷ್ಟು ಗಂಭೀರವಾಗುತ್ತಲೇ ಇದೆ.
ವಿಶ್ವಸಂಸ್ಥೆಯ, ವಿಶ್ವ ಆಹಾರ ಕಾರ್ಯಕ್ರಮ (WFP) ಪ್ರಕಾರ, ಜನರು ಆಹಾರ ಮತ್ತು ಇತರ ಸರಬರಾಜುಗಳಿಂದ ಹೊರಗುಳಿಯುತ್ತಿರುವುದರಿಂದ ಪರಿಸ್ಥಿತಿ ಹತಾಶದಿಂದ ವಿನಾಶಕಾರಿ ಸ್ಥಿತಿಗೆ ತಲುಪುತ್ತಿದೆ.
ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ನಿರ್ಣಾಯಕ ವಿಶ್ವಸಂಸ್ಥೆಯ ನೆರವಿನ ಕಾರ್ಯಕರ್ತರು ಮತ್ತು ಪಾಲುದಾರರು ತಮ್ಮ ಸೇವೆಯ ಕಾರ್ಯನಿರ್ವಹಿಸುವುದರಲ್ಲಿ ಇನ್ನೂ ಆರಂಭ ಸ್ಥಿತಿಯಲ್ಲೇ ಇದ್ದಾರೆ, ಆದರೆ ಸೋಮವಾರ ನಗರವನ್ನು ಪ್ರವೇಶಿಸಿದಾಗಿನಿಂದ ಬಂಡಾಯ ಗುಂಪು ಗೋಮಾದ ಹೆಚ್ಚಿನ ಭಾಗವನ್ನು ನಿಯಂತ್ರಣಕ್ಕೆ ತೆಗೆದುಕೊಂಡಾಗಿನಿಂದ ಪರಿಸ್ಥಿತಿ ತೀವ್ರವಾಗಿ ಅಸ್ಥಿರವಾಗಿದೆ.