ಅಧ್ಯಕ್ಷ ರಾಮೋಸ್-ಹೊರ್ಟಾ: ವಿಶ್ವಗುರುಗಳ ಭೇಟಿ - ಟಿಮೋರ್-ಲೆಸ್ಟೆಗೆ ಒಂದು ʻಅದ್ಭುತ' ಕ್ಷಣ
ಜೋಸೆಫ್ ತುಲ್ಲೊಚ್ - ಅಬುಧಾಬಿ
ಫೆಬ್ರವರಿ 4, 2019 ರಂದು, ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ಶೇಖ್ ಅಹ್ಮದ್ ಅಲ್-ತಯ್ಯೆಬ್ ರವರು ಧಾರ್ಮಿಕ ಹಿಂಸಾಚಾರವನ್ನು ಖಂಡಿಸುವ ಮತ್ತು "ಸಹಿಷ್ಣುತೆಯ ಸಂಸ್ಕೃತಿಯ ವ್ಯಾಪಕ ಪ್ರಚಾರ" ಕ್ಕೆ ಕರೆ ನೀಡುವ ಮಾನವ ಭ್ರಾತೃತ್ವದ ಜಂಟಿ ದಾಖಲೆಗೆ ಸಹಿ ಹಾಕಿದರು.
ವಿಶ್ವಗುರುಗಳು ಎಮಿರೇಟ್ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ ಅಬುಧಾಬಿಯಲ್ಲಿ ಈ ದಾಖಲೆಗೆ ಸಹಿ ಮಾಡಿದರು, ಇದು ಈ ರೀತಿಯ ಮೊದಲನೆಯದು. ದಾಖಲೆಗೆ ಸಹಿ ಹಾಕಿದಾಗಿನಿಂದ, ಯುಎಇ(ದುಬೈ) ಪ್ರತಿ ವರ್ಷ ಫೆಬ್ರವರಿ 4 ರಂದು ಮಾನವ ಭ್ರಾತೃತ್ವಕ್ಕಾಗಿ ಅಂತರರಾಷ್ಟ್ರೀಯ ಜಾಯೆದ್ ಪ್ರಶಸ್ತಿಯನ್ನು ನೀಡುತ್ತಿದೆ.
ಈ ಕಾರ್ಯಕ್ರಮವು ಬಹುಮಾನ ವಿಜೇತರು, ಹಲವಾರು ಜಾಗತಿಕ ರಾಜಕೀಯ ಮತ್ತು ಧಾರ್ಮಿಕ ನಾಯಕರನ್ನು ಒಟ್ಟುಗೂಡಿಸುತ್ತದೆ. ಈ ವರ್ಷದ ಅವರೆಲ್ಲರೊಂದಿಗೆ ಟಿಮೋರ್-ಲೆಸ್ಟೆಯ ಅಧ್ಯಕ್ಷ ಜೋಸ್ ಮ್ಯಾನುಯೆಲ್ ರಾಮೋಸ್-ಹೋರ್ಟಾರವರು ಕೂಡ ಒಬ್ಬರು.
ಅವರು ವ್ಯಾಟಿಕನ್ ಸುದ್ಧಿಯ ಜೊತೆ ಮಾನವ ಭ್ರಾತೃತ್ವದ ಪರಿಕಲ್ಪನೆ, ವಿಶ್ವಗುರು ಫ್ರಾನ್ಸಿಸ್ ರವರ ಇತ್ತೀಚಿನ ಆಗ್ನೇಯ ಏಷ್ಯಾದ ಚಿಕ್ಕ ದೇಶಕ್ಕೆ ಭೇಟಿ ಮತ್ತು ಒಂದು ಕಾಲದಲ್ಲಿ ಆಕ್ರಮಿಸಿಕೊಂಡಿದ್ದ ಇಂಡೋನೇಷ್ಯಾ ಜೊತೆಗಿನ ಅದರ ಸಮನ್ವಯದಿಂದ ಕಲಿಯಬೇಕಾದ ಪಾಠಗಳ ಕುರಿತು ಮಾತನಾಡಿದರು.
ವ್ಯಾಟಿಕನ್ ಸುದ್ದಿ: ಶ್ರೀ ಅಧ್ಯಕ್ಷರೇ, ನಿಮ್ಮ ಅಮೂಲ್ಯವಾದ ಸಮಯಕ್ಕಾಗಿ ನಮ್ಮ ಧನ್ಯವಾದಗಳು. 2022ರಲ್ಲಿ, ಟಿಮೋರ್-ಲೆಸ್ಟೆ ಮಾನವ ಭ್ರಾತೃತ್ವದ ಕುರಿತು ಅಬುಧಾಬಿ ಘೋಷಣೆಯನ್ನು ಅಧಿಕೃತವಾಗಿ ಅಂಗೀಕರಿಸಿದ ವಿಶ್ವದ ಮೊದಲ ದೇಶವಾಯಿತು. ಮಾನವ ಭ್ರಾತೃತ್ವ ಎಂದರೇನು ಮತ್ತು ಅದು ಏಕೆ ಮುಖ್ಯವಾಗಿದೆ?
ಅಧ್ಯಕ್ಷ ರಾಮೋಸ್-ಹೊರ್ಟಾ: ಸರಿ, ಇದನ್ನು ಪವಿತ್ರ ವಿಶ್ವಗುರು ಫ್ರಾನ್ಸಿಸ್ ರವರು ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ತಯ್ಯೆಬ್ ರವರೊಂದಿಗೆ ರಚಿಸಿದ್ದಾರೆ ಎಂಬ ಸರಳ ಸಂಗತಿ ಎಂಬುದು ನನಗೆ ತಿಳಿದಿದೆ - ಅದು ಸ್ವತಃ ಆಸಕ್ತಿ ಮತ್ತು ಕುತೂಹಲವನ್ನು ಕೆರಳಿಸುತ್ತದೆ. ಇದನ್ನು ಓದಿದ ನಂತರ, ನಾವೆಲ್ಲರೂ ವಿಶ್ವಾಸಿಸುವುದನ್ನು ಬಹಳ ಆಳವಾಗಿ ಒಳಗೊಳ್ಳುವ ಅಸಾಧಾರಣ ದಾಖಲೆ ಎಂದು ನಾನು ಅರಿತುಕೊಂಡಿದ್ದೇನೆ. ಇದು ಟಿಮೋರ್-ಲೆಸ್ಟೆಯ ಸಂವಿಧಾನದಲ್ಲಿರುವ ಅಂಶಗಳನ್ನು, ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಲ್ಲಿರುವ ಅಂಶಗಳನ್ನು ಮತ್ತು ಹಲವಾರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಬೋಧನೆಗಳ ಅಂಶಗಳನ್ನು ಹೊಂದಿದೆ.
ವಿಶೇಷವಾಗಿ ಪವಿತ್ರ ವಿಶ್ವಗುರು ಮತ್ತು ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ರವರು ತಮ್ಮ ಸಹಿಗಳನ್ನು ನೀಡಿದಾಗ, ನಾವು ಆಯ್ಕೆ ಮಾಡಿದ ಮಾರ್ಗವನ್ನು ಮುಂದುವರಿಸುವಲ್ಲಿ ಈ ದಾಖಲೆಯು ಟಿಮೋರ್-ಲೆಸ್ಟೆಗೆ ಅತ್ಯಂತ ಮೌಲ್ಯಯುತವಾಗಿದೆ ಎಂದು ನಾನು ಭಾವಿಸಿದೆ. ನಾವು ಒಂದು ಚಿಕ್ಕ ಮತ್ತು ಹೊಸ ದೇಶ, ನಾವು ಹಿಂದೆ ಹಿಂಸೆಯನ್ನು ಜಯಿಸಿದ್ದಿರಬಹುದು, ಆದರೆ ಈಗ ಅದಕ್ಕೆ ಬದಲಾಗಿ, ನಾವು ಸೇಡು ತೀರಿಸಿಕೊಳ್ಳುವುದಲ್ಲ, ಬದಲಿಗೆ ಸಮನ್ವಯವನ್ನು ಅನುಸರಿಸುತ್ತೇವೆ. ನಮ್ಮ ಮಾರ್ಗವು ಕೋಪ, ಸೇಡು, ಹಿಂಸೆ ಇಲ್ಲ, ಆತ್ಮ ಮತ್ತು ದೇಹದ ಗಾಯಗಳನ್ನು ಗುಣಪಡಿಸುವುದು, ಇದು ಶಾಂತಿಯುತವಾಗಿ, ಎಲ್ಲರನ್ನೂ ಒಳಗೊಂಡ, ಸಹಿಷ್ಣು ಸಮಾಜವನ್ನು ಸೃಷ್ಟಿಸುವುದು.
ನಾನು ಅಧ್ಯಕ್ಷನಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ಮೊದಲೇ, ನಾನು ಆಯ್ಕೆಯಾದ ತಕ್ಷಣ, ನಮ್ಮ ರಾಷ್ಟ್ರೀಯ ಸಂಸತ್ತಿಗೆ ಹೋಗಿ ವಕ್ತಾರರನ್ನು ಭೇಟಿಯಾದೆ. ಅಬುಧಾಬಿ ಘೋಷಣೆಯನ್ನು ರಾಷ್ಟ್ರೀಯ ದಾಖಲೆ ಎಂದು ಘೋಷಿಸುವ ನಿರ್ಣಯವನ್ನು ನಮ್ಮ ಸಂಸತ್ತು ಅಂಗೀಕರಿಸುವುದು ಮುಖ್ಯ ಎಂದು ನಾನು ಅವರಿಗೆ ಹೇಳಿದೆ. ಅದಕ್ಕೆ ಅವರ ಒಪ್ಪಿಗೆ ನೀಡಿದರು. ಹಾಗೆಯೇ ನಾನು ವಿವಿಧ ಪಕ್ಷದ ನಾಯಕರನ್ನು ಭೇಟಿ ಮಾಡಿದೆ, ಅವರೆಲ್ಲರೂ ಈ ನಿರ್ಣಯಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆದ್ದರಿಂದ, ನಾನು ಪ್ರಮಾಣ ವಚನ ಸ್ವೀಕರಿಸುವ ಮೊದಲೇ, ದಾಖಲೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.
ಆದರೆ ಇದು ಕೇವಲ ಒಂದು ದಾಖಲೆಯಾಗಿ ಉಳಿಯಬಾರದು. ಇದನ್ನು ನಮ್ಮ ಭಾಷೆಗಳಿಗೆ ಅನುವಾದಿಸಲೆಬೇಕು ಮತ್ತು ನಮ್ಮ ಶಾಲಾ ಪಠ್ಯಕ್ರಮಕ್ಕೆ ಅಳವಡಿಸಿಕೊಳ್ಳಬೇಕು. ಆದ್ದರಿಂದ ಈ ಯೋಜನೆಯ ಕಾರ್ಯಕ್ರಮ ಮುಂದುವರೆಯುತ್ತಿದೆ. ಇದು ಮುಂದುವರೆಯುತ್ತಿರುವ ಪ್ರಕ್ರಿಯೆ ಆದರೆ ವಿವಿಧ ವಯಸ್ಸಿನ ಮಕ್ಕಳಿಗೆ ದಾಖಲೆಯನ್ನು ಅಳವಡಿಸುವ ಕೆಲಸ ಪ್ರಾರಂಭವಾಗಿದೆ. ನಂತರ, ಅವರು ವಿಶ್ವವಿದ್ಯಾಲಯದ ವಯಸ್ಸನ್ನು ತಲುಪುವ ಹೊತ್ತಿಗೆ, ಅವರು ದಾಖಲೆಯನ್ನು ಸಂಪೂರ್ಣವಾಗಿ ಓದಲು ಮತ್ತು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ವಿಶ್ವಗುರು ಫ್ರಾನ್ಸಿಸ್ ರವರು ಇತ್ತೀಚೆಗೆ ಟಿಮೋರ್-ಲೆಸ್ಟೆಗೆ ಭೇಟಿ ನೀಡಿದ್ದರು. ಅದು ಹೇಗೆ ನಡೆಯಿತು?
ಸರಿ, ಟಿಮೋರ್-ಲೆಸ್ಟೆಯಲ್ಲಿ 96% ಕಥೋಲಿಕರು ಮತ್ತು ಭಕ್ತವಿಶ್ವಾಸಿಗಳು ಇದ್ದಾರೆ. ಭಾನುವಾರದಂದು, ಕೌಂಟಿಯಾದ್ಯಂತ ನೂರಾರು ಧರ್ಮಸಭೆಗಳು - ಪ್ರಧಾನಾಲಯದಿಂದ ಹಿಡಿದು ಚಿಕ್ಕ ಚಿಕ್ಕ ಬಡ ಹಳ್ಳಿಗಳಲ್ಲಿರುವ ಅತ್ಯಂತ ವಿನಮ್ರ ಪ್ರಾರ್ಥನಾ ಮಂದಿರಗಳವರೆಗೆ - ದೇವಾಲಯಗಳು ತುಂಬಿರುತ್ತವೆ. ಆದ್ದರಿಂದ ನೀವು ವಿಶ್ವಗುರುಗಳ ವ್ಯಕ್ತಿತ್ವ, ಪುರಾಣ, ಅವರ ಅಗಾಧ ಅಧಿಕಾರವನ್ನು ಊಹಿಸಬಹುದು.
ನಾವು ಸುಮಾರು 700,000 ಜನರು ಬರುತ್ತಾರೆಂದು ಅಂದಾಜಿಸಿದ್ದೆವು ಮತ್ತು ನಾವು ಹೇಳಿದ್ದು ಸರಿ. ನಾವು ಗರಿಷ್ಠ 700,000 ಜನರನ್ನು ಮಾತ್ರ ಇಟ್ಟಿದ್ದೇವೆ ಎಂಬ ಕಾರಣದಿಂದಾಗಿ ಅದು ಸಂಭವಿಸಿದೆ! ಅಧ್ಯಕ್ಷನಾಗಿ, ಇಷ್ಟು ಜನರನ್ನು ನಿಯಂತ್ರಿಸುವ ನಮ್ಮ ಸಾಮರ್ಥ್ಯದ ಬಗ್ಗೆ ನಾನು ಚಿಂತಿತನಾಗಿದ್ದೆ. ದಿನವಿಡೀ ಲಕ್ಷಾಂತರ ಜನರಿಗೆ ಕುಡಿಯುವ ನೀರನ್ನು ನಾವು ಹೇಗೆ ಒದಗಿಸಲಿದ್ದೇವೆ? ಬೆಳಿಗಿನ ಜಾವದಿಂದಲೇ ಜನರು ಅಲ್ಲಿದ್ದರು, ಕೆಲವರು ಹಿಂದಿನ ದಿನದಿಂದಲೇ ಶಿಬಿರ ಹೂಡಿದ್ದರು. ನೈರ್ಮಲ್ಯದ ಬಗ್ಗೆ ಏನು? ಭದ್ರತೆ? ಯಾವುದೇ ಹಗೆತನ ಇದೇ ಎನ್ನು ಕಾರಣವಲ್ಲ, ಆದರೆ ಕಾಲ್ತುಳಿತ ಉಂಟಾದರೆ ಏನು ಮಾಡುವುದು?
ಆದರೂ, ಎಲ್ಲವೂ ಅದ್ಭುತವಾಗಿ ಚೆನ್ನಾಗಿ ನಡೆಯಿತು. ಹಿಂಸಾಚಾರ, ಅವ್ಯವಸ್ಥೆ, ಕಾಲ್ತುಳಿತದ ಯಾವುದೇ ಘಟನೆಗಳು ನಡೆದಿಲ್ಲ, ಆದರೆ ಜನರ ಪ್ರತಿಕ್ರಿಯೆ, ತುಂಬಾ ಭಾವುಕರಾಗಿದ್ದ ಜನ. ನಾನು ಪವಿತ್ರ ವಿಶ್ವಗುರುಗಳ ಹತ್ತಿರದಲ್ಲಿದ್ದೆ, ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆಂದು ನಾನು ನೋಡುತ್ತಿದ್ದೆ. ಜನರು ನಿಜವಾಗಿಯೂ ಭಾವುಕರಾಗಿದ್ದರು, ಅಳುತ್ತಿದ್ದರು. ಜನರು ವಿಶ್ವಗುರುಗಳ ಕೈಗಳನ್ನು ಮುಟ್ಟಲು ಹತಾಶರಾಗಿದ್ದರು. ನಾನು ಅವರನ್ನು ಪವಿತ್ರ ವಿಶ್ವಗುರುಗಳ ಬಳಿಗೆ ಕರೆತಂದಿದ್ದೇನೆ. ಕೆಲವು ಮಕ್ಕಳು ಅಳುತ್ತಿರುವುದನ್ನು ನಾನು ನೋಡಿದೆ - ಅವರು ವಿಶ್ವಗುರುಗಳನ್ನು ನೋಡಲು ಬಯಸಿದ್ದರು ಮತ್ತು ನಾನು ಅವರನ್ನು ವಿಶ್ವಗುರುಗಳ ಬಳಿಗೆ ಕರೆತಂದೆ. ನಮ್ಮ ಜನರು ಪ್ರತಿಕ್ರಿಯಿಸಿದ ರೀತಿಯನ್ನು ನೋಡುತ್ತಾ ನಾನು ಭಾವುಕನಾಗಿದ್ದೆ. ಆಹಾ! ಎಂತಹ ಅಸಾಧಾರಣ ಅನುಭವ ಅದು.
ಪೋಪ್ ತಮ್ಮ ಭೇಟಿಯ ಸಮಯದಲ್ಲಿ ಮಾತನಾಡಿದ, ಟಿಮೋರ್-ಲೆಸ್ಟೆ ಮತ್ತು ಇಂಡೋನೇಷ್ಯಾ ನಡುವಿನ ಸಮನ್ವಯ ಪ್ರಕ್ರಿಯೆಯಲ್ಲಿ ಜಗತ್ತಿಗೆ ಒಂದು ಸಂದೇಶವಿದೆ ಎಂದು ನೀವು ಭಾವಿಸುತ್ತೀರಾ?
ಹೌದು. ಇದು ನಾಯಕತ್ವಕ್ಕೆ ಸಂಬಂಧಿಸಿದೆ. ನಾಯಕರು ಜನರನ್ನು ಯುದ್ಧಗಳಿಗೆ ಕರೆದೊಯ್ಯುವವರು, ನಾಯಕರು ಯುದ್ಧವನ್ನು ತಡೆಯುವವರು ಮತ್ತು ನಾಯಕರು ಜನರನ್ನು ಶಾಂತಿಗೆ ಕರೆದೊಯ್ಯುವವರು.
ನಮ್ಮ ವಿಷಯದಲ್ಲಿ, ನಮ್ಮ ನಾಯಕ ಶ್ರೀ ಕ್ಸಾನಾನಾ ಗುಸ್ಮಾವೊರವರು ಒಬ್ಬ ಗೆರಿಲ್ಲಾ ಹೋರಾಟಗಾರ, ಒಬ್ಬ ಸೆರೆಯಾಳು. ನಾವು ಸೇಡು ತೀರಿಸಿಕೊಳ್ಳಬಾರದು, ದ್ವೇಷ ಮಾಡಬಾರದು; ಮೊದಲು ಟಿಮೋರ್ ಜನರ ನಡುವೆ ಮತ್ತು ನಂತರ ಇಂಡೋನೇಷ್ಯಾದೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಅವರೇ ಹೇಳಿದ್ದು.
ಇಂಡೋನೇಷ್ಯಾ ಕೂಡ ರಾಜತಾಂತ್ರಿಕತೆ, ಪ್ರಬುದ್ಧತೆಯನ್ನು ತೋರಿಸಿತು ಮತ್ತು ನಾವು ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅವರನ್ನು ತಿರಸ್ಕರಿಸಿದ್ದರಿಂದ ಟಿಮೋರ್-ಲೆಸ್ಟೆಯನ್ನು ತಿರಸ್ಕರಿಸುವ ಬದಲು, ಅವರು ನಮ್ಮ ಸ್ನೇಹದ ಹಸ್ತವನ್ನು ಸ್ವೀಕರಿಸಿದರು. ಇದಕ್ಕೆ ನಮ್ಮ ಕಡೆಯಿಂದ ಮತ್ತು ಇಂಡೋನೇಷ್ಯಾದ ಕಡೆಯಿಂದ ಎರಡೂ ಕಡೆಯ ನಾಯಕತ್ವದ ಅಗತ್ಯವಿತ್ತು.
ಇಂತಹ ಕ್ರಿಯೆಗಳು ಪ್ರಪಂದಾದ್ಯಂತ ಬೇರೆಡೆ ಸಂಭವಿಸಬೇಕಾದರೆ, ಪ್ಯಾಲೆಸ್ತೀನಿಯ ಮತ್ತು ಇಸ್ರಯೇಲರ ನಡುವೆ, ಮ್ಯಾನ್ಮಾರ್‌ನಲ್ಲಿ, ಅಫ್ಘಾನಿಸ್ತಾನದಲ್ಲಿ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ, ಸುಡಾನ್‌ನಲ್ಲಿ... ಸಮನ್ವಯ ಸಾಧಿಸಲು, ನಮ್ಮನ್ನು ಶಾಂತಿಯತ್ತ ಕೊಂಡೊಯ್ಯಲು ನಮಗೆ ನಾಯಕರು ಬೇಕು.