MAP

rifugiati ucraini, profughi ucraini in Polonia, Caritas Polonia, conflitto Russia Ucraina rifugiati ucraini, profughi ucraini in Polonia, Caritas Polonia, conflitto Russia Ucraina  (Credit Caritas Polonia)

ಉಕ್ರೇನಿಯನ್ನರಿಗೆ ಪೋಲೆಂಡ್‌ನ ಮೂರು ವರ್ಷಗಳ ನೆರವು

ಉಕ್ರೇನ್‌ನಲ್ಲಿ ರಷ್ಯಾದ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾದಾಗಿನಿಂದ, ಪೋಲೆಂಡ್‌ನಲ್ಲಿರುವ ಧರ್ಮಸಭೆಯು ಲಕ್ಷಾಂತರ ಉಕ್ರೇನಿಯದವರಿಗೆ ವಸ್ತು ನೆರವು ಮತ್ತು ಮಾನಸಿಕ ನೆರವು ನೀಡಿದೆ, ಏಕೆಂದರೆ ಎರಡೂ ದೇಶಗಳ ನಡುವೆ 53 ದಶಲಕ್ಷಕ್ಕೂ ಹೆಚ್ಚು ಗಡಿ ದಾಟುವಿಕೆಗಳು ನಡೆದಿವೆ.

ಡೊರೊಟಾ ಅಬ್ದೆಲ್ಮೌಲಾ-ವಿಯೆಟ್

ಯುದ್ಧದ ಆರಂಭದಲ್ಲಿ ಸುಮಾರು ಮೂರು ಮಿಲಿಯನ್ ಜನರು (UNHCR ಪ್ರಕಾರ) ರಷ್ಯಾದ ಆಕ್ರಮಣದಿಂದ ಪಲಾಯನ ಮಾಡಿ ಪೋಲೆಂಡ್‌ಗೆ ಆಗಮಿಸಿದ ನಂತರ, ಅನೇಕ ಉಕ್ರೇನಿಯದ ಜನರು, ಪೋಲೆಂಡ್ ಮತ್ತು ಪೋಲಿಷ್ ಜನರನ್ನು, "ನೀವು ನಮ್ಮ ಪ್ರೀತಿಯ ಸಹೋದರಿಯಾಗಿದ್ದೀರಿ ಎಂದು ವಿವರಿಸಿದ್ದಾರೆ.

ಈ ಗುಂಪಿನ ಬಹುಪಾಲು ಜನರು ಅತ್ಯಂತ ದುರ್ಬಲ ವರ್ಗದವರಾಗಿದ್ದರು - ಮಹಿಳೆಯರು, ಮಕ್ಕಳು ಮತ್ತು ವೃದ್ಧರಾಗಿದ್ದಾರೆ. ಈ ವ್ಯಕ್ತಿಗಳಲ್ಲಿ ಯಾರೂ ನಿರಾಶ್ರಿತರ ಆಶ್ರಯದಲ್ಲಿ ಸಿಲುಕಲಿಲ್ಲ; ಪೋಲಿಷ್ ಕುಟುಂಬಗಳು ಎಲ್ಲರನ್ನೂ ಆಶ್ರಯಿಸಿದರು.

ಆರಂಭದಿಂದಲೂ, ಪೋಲಿಷ್ ಧರ್ಮಸಭೆಯು ಸಕ್ರಿಯವಾಗಿ ಸಹಾಯವನ್ನು ನೀಡುತ್ತಿದೆ. ಪೋಲೆಂಡ್‌ನ ಪ್ರತಿಯೊಂದು ಧರ್ಮಕೇಂದ್ರವು ಉಕ್ರೇನ್‌ನಲ್ಲಿನ ಯುದ್ಧದ ಸಂತ್ರಸ್ತರುಗಳಿಗೆ ಬೆಂಬಲವನ್ನು ಸಂಘಟಿಸಿದೆ.

ಕಾರಿತಾಸ್ ಪೋಲ್ಸ್ಕಾ, ನೈಟ್ಸ್ ಆಫ್ ಕೊಲಂಬಸ್, ಪುರುಷ ಮತ್ತು ಮಹಿಳಾ ಧಾರ್ಮಿಕ ಸಭೆಗಳು ಮತ್ತು ಇತರ ಸಂಸ್ಥೆಗಳಂತಹ ಧರ್ಮಸಭೆಯ ಸಂಸ್ಥೆಗಳೂ ಸಹ ಈ ಪ್ರಯತ್ನಗಳಲ್ಲಿ ಆಳವಾಗಿ ತೊಡಗಿಸಿಕೊಂಡಿವೆ.

ಯುದ್ಧವು ಮೊದಲೇ ಪ್ರಾರಂಭವಾಯಿತು
"ಈಗ, ಉಕ್ರೇನ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧದ ಮೂರನೇ ವರ್ಷದ ವಾರ್ಷಿಕೋತ್ಸವದಂದು, ಅದು 2014ರಲ್ಲಿ ಪ್ರಾರಂಭವಾಯಿತು ಎಂಬುದನ್ನು ನಾವು ನೆನಪಿನಲ್ಲಿಡಬೇಕು ಅಥವಾ 2013ರಲ್ಲಿ ಕೈವ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇಡೀ ಜಗತ್ತು ನೋಡಿದಾಗಲೂ ಸಹ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಪೂರ್ವದಲ್ಲಿ ಧರ್ಮಸಭೆಗೆ ಸಹಾಯ ಮಾಡುವ ತಂಡದ ನಿರ್ದೇಶಕ ಧರ್ಮಗುರು ಲೆಸ್ಜೆಕ್ ಕ್ರಿಜಾ ಟಿಸಿಎಚ್ಆರ್ ರವರು ನೆನಪಿಸಿಕೊಂಡರು.

ಅವರ ಸಂಘಟನೆಯು ಪೋಲಿಷ್ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಪರವಾಗಿ ಬೆಂಬಲವನ್ನು ನೀಡುತ್ತದೆ. 1996 ರಿಂದ, ಅವರು ಉಕ್ರೇನ್‌ಗೆ 60ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ.

2012ರಲ್ಲಿ ಪೂರ್ವ ಉಕ್ರೇನ್ ಯುಇಎಫ್ಎ ಯುರೋಪಿನ ಫುಟ್ಬಾಲ್ ಚಾಂಪಿಯನ್‌ಶಿಪ್ ನ್ನು ಸಹ-ಆತಿಥ್ಯ ವಹಿಸಿದಾಗ ಹಾಗೂ 2014ರ ನಡುವೆ ಸಂಭವಿಸಿದ ಮಹತ್ತರ ಬದಲಾವಣೆಗಳು ಯುದ್ಧವು ಒಂದು ಕಟು ವಾಸ್ತವ ಎಂದು ಅವರು ಮತ್ತು ಅನೇಕ ಪೋಲೆಂಡ್‌ ನ ಜನರು ಅರಿತುಕೊಂಡರು ಎಂದು ಧರ್ಮಗುರು ಒತ್ತಿ ಹೇಳಿದರು.

ಫುಟ್ಬಾಲ್ ಚಾಂಪಿಯನ್‌ಶಿಪ್‌ಗಾಗಿ ನಿರ್ಮಿಸಲಾದ ಹೆದ್ದಾರಿಯು ಹೊಂಡಗಳಿಂದ ತುಂಬಿತ್ತು, ಮತ್ತು ಶಾಂತಿಗಾಗಿ ಪ್ರಾರ್ಥಿಸಲು, ಧರ್ಮಗುರುವಿನಿಂದ ಸ್ಥಾಪಿಸಲ್ಪಟ್ಟ ಮಿಲಿಟರಿ ಕೋಟೆಗಳು ಮತ್ತು ಶಿಲುಬೆಯ ಹಾದಿಯು ಇದ್ದರೂ ಸಹ, ಧರ್ಮಗುರು ಲೆಸ್ಜೆಕ್ ರವರು ಅಗತ್ಯವಿರುವವರಿಗೆ ಬೆಂಬಲ ನೀಡುವ ಮತ್ತು ಅವರ ಸಾಕ್ಷ್ಯಗಳನ್ನು ಆಲಿಸುವ ಮಾರ್ಗವನ್ನು ಮುಂದುವರೆಸಿದರು, ಅದನ್ನು ಅವರು ಇತರರೊಂದಿಗೆ ಹಂಚಿಕೊಂಡರು.

‘ಸಿಹಿತಿಂಡಿಗಳಿಂದ ಛಾವಣಿಯ ಹೆಂಚುಗಳವರೆಗೆ’
2022ರ ಮೊದಲು ಪೋಲೆಂಡ್‌ಗಳು ಉಕ್ರೇನ್‌ಗೆ ನೀಡಿದ ನೆರವಿನ ವ್ಯಾಪ್ತಿಯ ಬಗ್ಗೆ ಕೇಳಿದಾಗ, ಧರ್ಮಗುರು ಲೆಸ್ಜೆಕ್ ರವರು ನೆರವಿಗಾಗಿ ತಮ್ಮ ಕೈಗಳನ್ನು ಚಾಚಿದರು: ಅದು ಲಕ್ಷಾಂತರ ಜನರೆಡೆಗೆ ತಲುಪಿತು. ಜನರು ಅಕ್ಷರಶಃ ಎಲ್ಲವನ್ನೂ ಸಾಗಿಸಿದರು, “ಸಿಹಿತಿಂಡಿಗಳಿಂದ ಹಿಡಿದು ಛಾವಣಿಯ ಹೆಂಚುಗಳವರೆಗೆ ಎಲ್ಲವನ್ನೂ ಸಾಗಿಸಿದರು ಎಂದು ಹೇಳಿದರು.

ಧರ್ಮಕೇಂದ್ರಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳ ಔದಾರ್ಯಕ್ಕೆ ಧನ್ಯವಾದಗಳು, ನೆರವು ಪೊಕ್ರೊವ್ಸ್ಕ್, ಮಾರಿಯುಪೋಲ್ ಮತ್ತು ಡೊನೆಟ್ಸ್ಕ್‌ ನವರಗೂ ಹೋಯಿತು.

ಉಕ್ರೇನಿಯದ ಜನರ ಬದುಕು ನಾಟಕೀಯ ತಿರುವು ಪಡೆದ ನಂತರ ಹೆಚ್ಚಿನ ಜನರು ಪೋಲೆಂಡ್‌ಗೆ ತೆರಳುತ್ತಿದ್ದರು.
 

24 ಫೆಬ್ರವರಿ 2025, 15:23