ಪೂರ್ವ ಕಾಂಗೋದಲ್ಲಿ ಘರ್ಷಣೆ: 770ಕ್ಕೂ ಹೆಚ್ಚು ಜನರು ಸಾವು
ಲಿಂಡಾ ಬೋರ್ಡೋನಿ
ಲಕ್ಷಾಂತರ ನಿರಾಶ್ರಿತರು ಸೇರಿದಂತೆ ಸುಮಾರು 2 ಮಿಲಿಯನ್ ಜನರಿರುವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವ ಭಾಗದ ಅತಿದೊಡ್ಡ ನಗರವು, ಕಿವು ಪ್ರಾಂತ್ಯದ ಬುಕಾವು ಮೇಲೆ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಿರುವ M23 ಮಿಲಿಟಿಯಾಗಳಿಂದ ಹೋರಾಡುತ್ತಿದೆ.
ಕಾಂಗೋದ ದಕ್ಷಿಣ ಭಾಗದಲ್ಲಿರುವ ಉತ್ತರ ಕಿವು ಯುದ್ಧಪೀಡಿತ ಪ್ರದೇಶಗಳಲ್ಲಿ ಒಂದಾಗಿದ್ದು, ವಿಶ್ವುಗುರು ಫ್ರಾನ್ಸಿಸ್ ರವರು ಭಾನುವಾರ ತಮ್ಮ ತ್ರಿಕಾಲ ಪ್ರಾರ್ಥನೆಯ ಭಾಷಣದ ಸಮಯದಲ್ಲಿ ಮತ್ತು ಕಳೆದ ಬುಧವಾರದ ಸಾಮಾನ್ಯ ಸಭೆಯಲ್ಲಿ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ನಗರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ 770 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಸುಮಾರು 3000 ಜನರು ಗಾಯಗೊಂಡಿರುವ ನಿರಂತರ ಹೋರಾಟದ ನಡುವೆಯೂ ಅವರ ಮನವಿಗಳು ಪ್ರತಿಧ್ವನಿಸಿದವು.
ಜನವರಿ 26 ರಂದು ಬಂಡುಕೋರರ ಆಕ್ರಮಣ ಪ್ರಾರಂಭವಾದಾಗಿನಿಂದ, ಬೀದಿಗಳಲ್ಲಿ ತ್ಯಜಿಸಲಾದ ಶವಗಳು ಮತ್ತು ತುಂಬಿ ತುಳುಕುತ್ತಿರುವ ಶವಾಗಾರಗಳನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅಧಿಕೃತವಾಗಿ ನೋಂದಾಯಿಸಲಾದ ಸಂಖ್ಯೆಗಳಿಗಿಂತ ಸಾವಿನ ಸಂಖ್ಯೆ ಹೆಚ್ಚಿರಬಹುದು ಎಂದು ಶಂಕಿಸಲಾಗಿದೆ.
ಇದರ ನಡುವೆ, ಗುಂಡೇಟು ಅಥವಾ ಚೂರುಗಳ ಗಾಯಗಳೊಂದಿಗೆ ಆಸ್ಪತ್ರೆಗಳಿಗೆ ಬರುವವರು ಸಿಬ್ಬಂದಿ ಮತ್ತು ಸರಬರಾಜುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಅನೇಕರು ಹಾಸಿಗೆಗಳನ್ನು ಹಂಚಿಕೊಳ್ಳಲು ಒತ್ತಾಯಿಸಲ್ಪಟ್ಟರೆ, ಇತರರು ವೈದ್ಯಕೀಯ ಆರೈಕೆಗಾಗಿ ಕಾಯುತ್ತಿರುವಾಗ ನೋವಿನಿಂದ ನೆಲದ ಮೇಲೆ ಮಲಗುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ರೋಗಗಳು ಹರಡುವ ಭೀತಿ
ಜನನಿಬಿಡ ನಗರದ ಕೆಲವು ಭಾಗಗಳಲ್ಲಿ ಮತ್ತು ಆ ಪ್ರದೇಶದಾದ್ಯಂತ ನೀರು ಹಾಗೂ ವಿದ್ಯುತ್ ಕೊರತೆಯಿಂದಾಗಿ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ, ಇದು ಮಂಕಿಪಾಕ್ಸ್ ಮತ್ತು ಕಾಲರಾ ಏಕಾಏಕಿ ಹರಡುವಿಕೆಯನ್ನು ಎದುರಿಸುತ್ತಿದೆ.
ವಿಶ್ವಸಂಸ್ಥೆಯ ತಜ್ಞರ ಪ್ರಕಾರ, M23 ಬಂಡುಕೋರರು ನೆರೆಯ ರುವಾಂಡಾದಿಂದ ಸುಮಾರು 4,000 ಸೈನಿಕರ ಬೆಂಬಲವನ್ನು ಹೊಂದಿದ್ದಾರೆ. ವಿಶ್ವದ ಹೆಚ್ಚಿನ ತಂತ್ರಜ್ಞಾನಕ್ಕೆ ನಿರ್ಣಾಯಕವಾದ ವಿಶಾಲ ನಿಕ್ಷೇಪಗಳನ್ನು ಹೊಂದಿರುವ ಕಾಂಗೋದ ಖನಿಜ-ಸಮೃದ್ಧ ಪೂರ್ವದಲ್ಲಿ ನಿಯಂತ್ರಣಕ್ಕಾಗಿ ಸ್ಪರ್ಧಿಸುತ್ತಿರುವ 100 ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳಲ್ಲಿ ಅವರು ಅತ್ಯಂತ ಶಕ್ತಿಶಾಲಿಯಾಗಿದ್ದಾರೆ.
2012 ಕ್ಕಿಂತ ಭಿನ್ನವಾಗಿ, ಬಂಡುಕೋರರು ಈಗ ಕಾಂಗೋ ರಾಜಧಾನಿ ಕಿನ್ಶಾಸಾಗೆ ಪಯಣ ನಡೆಸಲು ಯೋಜಿಸುತ್ತಿದ್ದಾರೆ, ಅಧ್ಯಕ್ಷ ಫೆಲಿಕ್ಸ್ ತ್ಶಿಸೆಕೆಡಿರವರ ನೇತೃತ್ವದಲ್ಲಿ ದೇಶವನ್ನು ವಿಫಲ ರಾಜ್ಯವೆಂದು ಬಣ್ಣಿಸುತ್ತಾರೆ.
ದಶಕಗಳ ಸಂಘರ್ಷ, ಸ್ಥಳಾಂತರ, ಯಾತನೆ
ಆದರೆ ಕಾಂಗೋದಲ್ಲಿನ ಹೋರಾಟವು ವಸಾಹತುಶಾಹಿ ಮತ್ತು ದಶಕಗಳ ಕಾಲದ ಜನಾಂಗೀಯ ಸಂಘರ್ಷದಲ್ಲಿ ಬೇರೂರಿದೆ, ಇದು ಸೌಕರ್ಯಗಳ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸಿದೆ, ಇದು ಸಹಾಯದ ಕೊರತೆಗೆ ಕಾರಣವಾಗಿದೆ ಮತ್ತು ಮಾನವೀಯ ದುರಂತಕ್ಕೆ ಕಾರಣವಾಗಿದೆ.
1991 ರಿಂದ ಮಾನವೀಯ ಬೆಂಬಲದೊಂದಿಗೆ ಜನಸಂಖ್ಯೆಯ ಪರವಾಗಿ ನಿಂತಿರುವ ಇಟಾಲಿಯದ ಧರ್ಮಾಧ್ಯಕ್ಷರುಗಳ ಸಮ್ಮೇಳನವು, ಡಿಆರ್ ಕಾಂಗೋದಲ್ಲಿ ಶಾಂತಿಗಾಗಿ ವಿಶ್ವಗುರುಗಳ ಕರೆಯನ್ನು ಪ್ರತಿಧ್ವನಿಸಿತು ಮತ್ತು ಸೋಮವಾರ ಗೋಮಾದಲ್ಲಿನ ತುರ್ತು ಯೋಜನೆಗಳು ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಉಪಕ್ರಮಗಳಿಗೆ ಇನ್ನೂ ಒಂದು ಮಿಲಿಯನ್ ಯುರೋಗಳನ್ನು ಹಂಚಿಕೆ ಮಾಡುವುದಾಗಿ ಘೋಷಿಸಿತು.