MAP

An installation of baby Jesus lying amidst the rubble in the Evangelical Lutheran Church in Bethlehem An installation of baby Jesus lying amidst the rubble in the Evangelical Lutheran Church in Bethlehem 

ಸಭಾಪಾಲಕ ಮಂಥರ್ ಐಸಾಕ್: ಪಶ್ಚಿಮ ದಂಡೆ 'ತೆರೆದ ಜೈಲುಗಳ ಸರಣಿ'ಯಾಗುತ್ತಿದೆ

ಬೆತ್ಲಹೇಮ್ ನ ಲೂಥೆರನ್ ಧರ್ಮಸಭೆಯ ಸಭಾಪಾಲಕ ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡಿದಾಗ ವೆಸ್ಟ್ ಬ್ಯಾಂಕ್ ಪ್ರಸ್ತುತವಾಗಿ "ಅತ್ಯಂತ ಕರಾಳ ಕ್ಷಣಗಳ"ನ್ನು ಅನುಭವಿಸುತ್ತಿದೆ ಎಂದು ಹೇಳಿದರು. ಗಾಜಾದಲ್ಲಿ ಏನು ನಡೆಯುತ್ತಿದೆ ಎಂದು ನಾವು ಕಣ್ಣಾರೆ ನೋಡುತ್ತಿದ್ದೇವೆ, ಅಷ್ಟು ಮಾತ್ರವಲ್ಲದೆ, ನಮ್ಮಲ್ಲಿರುವ ಪ್ರಶ್ನೆ, ನಮ್ಮ ಹಣೆಬರವು ಗಾಜಾದಂತೆಯೇ ಆಗುತ್ತದೆಯೇ? ಎಂದು ಅವರು ಹೇಳುತ್ತಾರೆ.

ಜೋಸೆಫ್ ಟುಲ್ಲೊಚ್

ಮೂರು ಪ್ಯಾಲಸ್ತೀನಿಯದ ಕ್ರೈಸ್ತ ಕಾರ್ಯಕರ್ತರು - ಮಾನವ ಹಕ್ಕುಗಳ ವಕೀಲ ಸಹರ್ ಫ್ರಾನ್ಸಿಸ್ ರವರು, ಸಾಮಾಜಿಕ ಮತ್ತು ರಾಜಕೀಯ ಪ್ರಚಾರಕ ರಿಫತ್ ಕಾಸಿಸ್ ರವರು ಮತ್ತು ಬೆತ್ಲಹೇಮ್ ನ ಲೂಥೆರನ್ ಧರ್ಮಸಭೆಯ ಪೂಜ್ಯ ಸಭಾಪಾಲಕ ಮುಂಥರ್ ಐಸಾಕ್ ರವರು ಬುಧವಾರ ವ್ಯಾಟಿಕನ್ ಗೆ ಭೇಟಿ ನೀಡಿದರು.

ವ್ಯಾಟಿಕನ್ ಸುದ್ಧಿಯವರ ಜೊತೆಗಿನ ಸುದೀರ್ಘ ಸಂದರ್ಶನದಲ್ಲಿ, ಅವರು ಪಶ್ಚಿಮ ದಂಡೆಯಲ್ಲಿನ ಹದಗೆಡುತ್ತಿರುವ ಪರಿಸ್ಥಿತಿ, ಗಾಜಾ ನಿವಾಸಿಗಳ ಸಾಮೂಹಿಕ ಸ್ಥಳಾಂತರಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಪ್ರಸ್ತಾಪ ಮತ್ತು ಈ ಪ್ರದೇಶದಲ್ಲಿ ಶಾಂತಿಗಾಗಿ ವಿಶ್ವಗುರು ಫ್ರಾನ್ಸಿಸ್ ರವರ ಪುನರಾವರ್ತಿತ ಕರೆಗಳ ಪ್ರಾಮುಖ್ಯತೆಯ ಬಗ್ಗೆ ಚರ್ಚಿಸಿದರು.

ಪಶ್ಚಿಮ ದಂಡೆಯ ಇತಿಹಾಸದಲ್ಲಿ "ಅತ್ಯಂತ ಕರಾಳ ಕ್ಷಣ"
ಬೆತ್ಲೆಹೇಮ್ ಮತ್ತು ಬೀಟ್ ಸಾಹೌರ್‌ನಲ್ಲಿರುವ ಲೂಥೆರನ್ ಧರ್ಮಕೇಂದ್ರಗಳ ಸಭಾಪಾಲಕರಾಗಿರುವ ಐಸಾಕ್ ರವರು, ಪಶ್ಚಿಮ ದಂಡೆ ಪ್ರಸ್ತುತ ತನ್ನ "ಕತ್ತಲೆಯ ಕ್ಷಣಗಳನ್ನು" ಅನುಭವಿಸುತ್ತಿದೆ ಎಂದು ಹೇಳಿದರು.

ಇಸ್ರಯೇಲ್ ವಸಾಹತುಗಳು ಮತ್ತು ರಸ್ತೆಗಳ ತಡೆ, ಈ ಪ್ರದೇಶವನ್ನು ತ್ವರಿತವಾಗಿ "ವಾಸಕ್ಕೆ ಯೋಗ್ಯವಲ್ಲದ" ಪ್ರದೇಶಗಳನ್ನಾಗಿ ಮಾಡುತ್ತಿವೆ, ಕಟ್ಟಡ ನಿರ್ಮಾಣ ಪ್ರದೇಶಗಳನ್ನು ಪರಸ್ಪರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಕಡಿತಗೊಳಿಸುತ್ತಿವೆ. ಇದರ ಪರಿಣಾಮವಾಗಿ, ಪಶ್ಚಿಮ ದಂಡೆಯನ್ನು "ತೆರೆದ ಜೈಲುಗಳ ಸರಣಿ" ಯನ್ನಾಗಿ ಪರಿವರ್ತಿಸುತ್ತಿವೆ ಎಂದು ಅವರು ವಿವರಿಸಿದರು.

ಬೆತ್ಲೆಹೇಮ್ ನ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 80 ರಸ್ತೆ ತಡೆಗಳಿದ್ದು, ಅವುಗಳನ್ನು ದಾಟಲು ಸಾಮಾನ್ಯವಾಗಿ ಆರು ಅಥವಾ ಏಳು ಗಂಟೆಗಳು ಬೇಕಾಗುತ್ತದೆ ಎಂದು ಪೂಜ್ಯರಾದ ಐಸಾಕ್ ರವರು ಹೇಳಿದರು.

ಇದರ ಜೊತೆಗೆ, ಆರ್ಥಿಕ ವಿನಾಶವೂ ಕಂಡುಬರುತ್ತಿದೆ ಎಂದು ಅವರು ಒತ್ತಿ ಹೇಳಿದರು. ಬೆತ್ಲೆಹೇಮ್ ಒಂದು ಕಾಲದಲ್ಲಿ ಧಾರ್ಮಿಕ ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿತ್ತು, ಈಗ ಅದು ಬಹುತೇಕ ನಿಂತುಹೋಗಿದೆ. ಇದರ ಪರಿಣಾಮವಾಗಿ ಧರ್ಮಸಭೆಗಳು ತಮ್ಮ ಹೆಚ್ಚಿನ ಸಮಯವನ್ನು ಆದಾಯವಿಲ್ಲದ ಕುಟುಂಬಗಳಿಗೆ ಬದುಕಲು ಸಹಾಯ ಮಾಡುತ್ತಿವೆ.

"ಬದುಕುಳಿಯಲು ಹೆಣಗಾಡುತ್ತಿರುವ ಒಂದು ಪುಟ್ಟ ಸಮುದಾಯ"ವಾದ ಬೆತ್ಲಹೇಮ್ ನ ಕನಿಷ್ಠ 100 ಕ್ರೈಸ್ತ ಸಮುದಾಯದ ಕುಟುಂಬಗಳು ಯುದ್ಧದ ಆರಂಭದಿಂದಲ್ಲೇ ನಗರವನ್ನು ತೊರೆದಿವೆ ಎಂದು ಪೂಜ್ಯ ಐಸಾಕ್ ರವರು ಲೆಕ್ಕ ಹಾಕುತ್ತಾರೆ.

ಪಶ್ಚಿಮ ದಂಡೆಯಲ್ಲಿರುವ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರಯೇಲ್ ಮಿಲಿಟರಿ ನಡೆಸಿದ ದಾಳಿಯಿಂದ ಇಲ್ಲಿಯವರೆಗೆ ಸುಮಾರು 45,000 ಪ್ಯಾಲಸ್ತೀನಿಯದವರು ಸ್ಥಳಾಂತರಗೊಂಡಿದ್ದಾರೆ ಮತ್ತು ಈ ಧಾಳಿಯು ಇನ್ನೂ ಹರಡಬಹುದು ಎಂಬ ಅತಿದೊಡ್ಡ ಬೆದರಿಕೆ, ಹೆಚ್ಚುತ್ತಿರುವ ಭಯ ಅವರಲ್ಲಿದೆ ಎಂದು ಐಸಾಕ್ ರವರು ಹೇಳಿದರು.

ಗಾಜಾದಲ್ಲಿ ಏನು ನಡೆಯುತ್ತಿದೆ ಎಂದು ನಾವು ಕಣ್ಣಾರೆ ನೋಡುತ್ತಿದ್ದೇವೆ, ನಮ್ಮಲ್ಲಿರುವ ಪ್ರಶ್ನೆ, ನಮ್ಮ ಹಣೆಬರವು ಗಾಜಾದಂತೆಯೇ ಆಗುತ್ತದೆಯೇ? ಎಂದು ಅವರು ಹೇಳುತ್ತಾರೆ.

ಪ್ಯಾಲಸ್ತೀನಿಯದ ಕೈದಿಗಳ ಸ್ಥಿತಿಗತಿಗಳು
ಕಳೆದ ಶನಿವಾರ, ಇಸ್ರಯೇಲ್ ಮತ್ತು ಹಮಾಸ್ ತಮ್ಮ ಆರನೇ ಸುತ್ತಿನ ಕೈದಿಗಳ ವಿನಿಮಯವನ್ನು ನಡೆಸಿತು, ಇದು ಗಾಜಾದಲ್ಲಿ ದುರ್ಬಲವಾದ ಕದನ ವಿರಾಮವನ್ನು ವಿಸ್ತರಿಸಿತು.

ಪ್ರಸ್ತುತವಾಗಿ ಬಿಡುಗಡೆ ಮಾಡಲಾಗುತ್ತಿರುವ ಇಸ್ರಯೇಲ್‌ನ ಒತ್ತೆಯಾಳುಗಳನ್ನು 2023ರಲ್ಲಿ ಹಮಾಸ್ ಅಕ್ಟೋಬರ್ 7 ರಂದು ಇಸ್ರಯೇಲ್ ಮೇಲೆ ನಡೆಸಿದ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡಿದ್ದರೂ, ಅವರು ವಿನಿಮಯ ಮಾಡಿಕೊಳ್ಳಲಾಗುತ್ತಿರುವ ಅನೇಕ ಪ್ಯಾಲಸ್ತೀನಿಯದವರು ಬಹಳ ಕಾಲದಿಂದ ಜೈಲಿನಲ್ಲಿದ್ದಾರೆ.

ಅಡಮೀರ್ ಖೈದಿಗಳ ಬೆಂಬಲ ಮತ್ತು ಮಾನವ ಹಕ್ಕುಗಳ ಸಂಘದ ಪ್ರಧಾನ ನಿರ್ದೇಶಕರಾಗಿರುವ ಸಹರ್ ಫ್ರಾನ್ಸಿಸ್ ರವರು, ಕಳೆದ ಕೆಲವು ದಶಕಗಳಲ್ಲಿ ಮಕ್ಕಳು ಸೇರಿದಂತೆ "ಲಕ್ಷಾಂತರ" ಪ್ಯಾಲಸ್ತೀನಿಯದವರನ್ನು ನಿರಂಕುಶವಾಗಿ ಬಂಧಿಸಲಾಗಿದೆ ಎಂದು ವಿವರಿಸಿದರು. ಇಸ್ರಯೇಲ್ ಜೈಲುಗಳಲ್ಲಿ, ಅವರು "ಬೆದರಿಕೆ ಮತ್ತು ಅವಮಾನ, ಲೈಂಗಿಕ ಕಿರುಕುಳ, ಹೊಡೆತಗಳು ಮತ್ತು ಹಸಿವು" ಮತ್ತು ಇತರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಎದುರಿಸುತ್ತಿರಬಹುದು.

ಪ್ಯಾಲಸ್ತೀನಿಯದ ಬಂಧಿತರಲ್ಲಿ ತುರಿಗಜ್ಜಿ ವ್ಯಾಪಕವಾಗಿ ಹರಡಿದೆ ಎಂದು ಫ್ರಾನ್ಸಿಸ್ ಹೇಳಿದರು. ಪರಾವಲಂಬಿ ಹುಳಗಳಿಂದ ಉಂಟಾಗುವ ಒಂದು ರೀತಿಯ ಸಾಂಕ್ರಾಮಿಕ ಚರ್ಮ ರೋಗವಾದ ಈ ಕಾಯಿಲೆಯು ಕಳೆದ 15 ತಿಂಗಳುಗಳಲ್ಲಿ ಇಸ್ರಯೇಲ್ ಜೈಲುಗಳಲ್ಲಿ ಬಂಧಿಸಲ್ಪಟ್ಟ ಕನಿಷ್ಠ 60 ಕೈದಿಗಳನ್ನು ಕೊಂದಿದೆ ಎಂದು ಅವರು ಹೇಳಿದರು.

ಫ್ರಾನ್ಸಿಸ್‌ರವರಿಗೆ, ಇದರರ್ಥ ಇಸ್ರಯೇಲ್ ನ್ಯಾಯ ವ್ಯವಸ್ಥೆಯು ನ್ಯಾಯವನ್ನು ಕಾರ್ಯಗತಗೊಳಿಸುವ ಬಗ್ಗೆ ಅಲ್ಲ, ಬದಲಿಗೆ "ಪ್ಯಾಲಸ್ತೀನಿಯದ ಸಮಾಜದ ಮೇಲೆ ದಬ್ಬಾಳಿಕೆ ಮತ್ತು ನಿಯಂತ್ರಣಕ್ಕಾಗಿ ಇದು ಒಂದು ಸಾಧನವಾಗಿದೆ.

ಸಾಮೂಹಿಕ ಸ್ಥಳಾಂತರ ಮತ್ತು ಅಂತರರಾಷ್ಟ್ರೀಯ ಕಾನೂನು
ಈ ಮೂವರು ಕಾರ್ಯಕರ್ತರು ಕೈರೋಸ್ ಪ್ಯಾಲಸ್ತೀನ್ ಆಯೋಜಿಸಿರುವ ಇಟಲಿಯಾದ ಒಂದು ವಾರದ ಪ್ರವಾಸದಲ್ಲಿದ್ದಾರೆ, ಈ ಗುಂಪು ಕ್ರೈಸ್ತ ಸಮುದಾಯದ ನಾಯಕರ ಗುಂಪು ಬರೆದ 2009ರ ಕೈರೋಸ್ ದಾಖಲೆಯಿಂದ ಹೊರಹೊಮ್ಮಿದೆ.

ಕೈರೋಸ್ ಪ್ಯಾಲಸ್ತೀನ್‌ನ ಪ್ರಧಾನ ಕಾರ್ಯದರ್ಶಿ ರಿಫತ್ ಕಾಸಿಸ್‌ ರವರು, ಈ ದಾಖಲೆಯು "ವಿಶ್ವಾಸ ಮತ್ತು ಅಹಿಂಸೆಯ ಪ್ರತಿರೋಧಕ್ಕೆ ನಮ್ಮ ಬದ್ಧತೆಯನ್ನು ಆಧರಿಸಿ" ಪ್ಯಾಲಸ್ತೀನಿಯದವರು ಎದುರಿಸುತ್ತಿರುವ ದೈನಂದಿನ ತೊಂದರೆಗಳ ಬಗ್ಗೆ ಮಾತನಾಡುವ ಪ್ರಯತ್ನವಾಗಿದೆ ಎಂದು ವಿವರಿಸಿದರು.

ಆದಾಗ್ಯೂ, ಅಕ್ಟೋಬರ್ 7 ರಿಂದ ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಪರಿಸ್ಥಿತಿ ಊಹಿಸಲಾಗದಷ್ಟು ಹದಗೆಟ್ಟಿದೆ ಎಂದು ಕಾಸಿಸ್ ರವರು ಒತ್ತಿ ಹೇಳಿದರು. ಈ ಕಾರಣಕ್ಕಾಗಿ, ಕೈರೋಸ್ ಪ್ರಸ್ತುತ 2009ರ ಘೋಷಣೆಗೆ ಪೂರಕವಾಗಿ ಹೊಸ ದಾಖಲೆಯಲ್ಲಿ ರೂಪದಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಕೊನೆಯದಾಗಿ, ಅಂತರರಾಷ್ಟ್ರೀಯ ಕಾನೂನನ್ನು ಗೌರವಿಸುವ ಕೇಂದ್ರ ಪ್ರಾಮುಖ್ಯತೆಯನ್ನು ಕ್ಯಾಸಿಸ್ ರವರು ಒತ್ತಿ ಹೇಳಿದರು, ಅದರಲ್ಲಿ ಹಮಾಸ್ ಮಿಲಿಟರಿ ಕಮಾಂಡರ್ ಮೊಹಮ್ಮದ್ ಡೀಫ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಹೊರಡಿಸಿದ ಬಂಧನ ವಾರಂಟ್‌ಗಳು ಸೇರಿವೆ.

ಐಸಿಸಿಯನ್ನು ರೋಮ್‌ನಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಇಟಲಿ ಮತ್ತು ಹೋಲಿ ಸೀ ಎರಡೂ ತನ್ನ ತೀರ್ಪುಗಳ ಜಾರಿಯ ಬಗ್ಗೆ "ಇಬ್ಬರು ಕಾಳಜಿ ವಹಿಸಲು" ಖಂಡಿತವಾಗಿಯೂ ಒಂದು ಕಾರಣವಾಗಿದೆ ಎಂದು ಕ್ಯಾಸಿಸ್ ರವರು ಗಮನಸೆಳೆದರು.

ವಿಶ್ವಗುರು ಫ್ರಾನ್ಸಿಸ್ ಮತ್ತು ಪ್ಯಾಲಸ್ತೀನ್
ವ್ಯಾಟಿಕನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮೂವರು ಕಾರ್ಯಕರ್ತರು ಮೂಲತಃ ವಿಶ್ವಗುರು ಫ್ರಾನ್ಸಿಸ್ ರವರನ್ನು ಭೇಟಿ ಮಾಡಲು ನಿರ್ಧರಿಸಲಾಗಿತ್ತು - ಆದರೆ, ಅವರ ಪ್ರಸ್ತುತ ಆರೋಗ್ಯ ಸಮಸ್ಯೆಗಳಿಂದಾಗಿ, ಸಭೆಯನ್ನು ಮುಂದೂಡಬೇಕಾಯಿತು.

ಮೂವರೂ ವಿಶ್ವಗುರುಗಳ "ಗುಣಪಡಿಸುವಿಕೆ ಮತ್ತು ಚೇತರಿಕೆ" ಗಾಗಿ ಪ್ರಾರ್ಥಿಸುತ್ತಿರುವುದಾಗಿ ಒತ್ತಿ ಹೇಳಿದರು.

ವಿಶ್ವಗುರು ಫ್ರಾನ್ಸಿಸ್ ರವರನ್ನು ಪ್ಯಾಲಸ್ತೀನ್‌ನ "ಎಲ್ಲಾ ಜನರು" ತುಂಬಾ ಪ್ರೀತಿಸುತ್ತಾರೆ, ಎಂದು ಪೂಜ್ಯ ಐಸಾಕ್ರವರು ಹೇಳಿದರು. ಗಾಜಾದ ಕಥೋಲಿಕ ಧರ್ಮಕೇಂದ್ರದ ಜೊತೆ ವಿಶ್ವಗುರು ರಾತ್ರಿಯ ಫೋನ್ ಸಂಭಾಷಣೆಗಳನ್ನು ಮಾತ್ರವಲ್ಲದೆ, 2014 ರಲ್ಲಿ ವೆಸ್ಟ್ ಬ್ಯಾಂಕ್‌ಗೆ ನೀಡಿದ ಭೇಟಿಯನ್ನೂ ಐಸಾಕ್ ರವರು ಉಲ್ಲೇಖಿಸಿದರು. ಬೆತ್ಲೆಹೇಮ್‌ನ್ನು ಜೆರುಸಲೇಮ್‌ನಿಂದ ಬೇರ್ಪಡಿಸುವ ಗೋಡೆಯ ಬಳಿ ವಿಶ್ವಗುರು ತನ್ನ ಕಾರನ್ನು ನಿಲ್ಲಿಸಿ, ಸಂಕ್ಷಿಪ್ತವಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ ಕ್ಷಣವು ಪ್ಯಾಲಸ್ತೀನಿಯದವರಿಗೆ "ಶಾಶ್ವತ ಸ್ಮರಣೆ"ಯಾಗಿದೆ ಎಂದು ಪ್ಯಾಲಸ್ತೀನಿಯದ ಸಭಾಪಾಲಕ ಹೇಳಿದರು.

"ಆ ಕ್ಷಣದಲ್ಲಿ, ಅವರು ನಮ್ಮ ಹೃದಯದ ಆಳವನ್ನು ಮುಟ್ಟಿದರು" ಎಂದು ಐಸಾಕ್ ರವರು ಹೇಳಿದರು. ಆಗಾಗ್ಗೆ ನಾವು ನಮ್ಮನ್ನು ಕೇಳಿಕೊಳ್ಳುತ್ತೇವೆ - ಉಳಿದ ಪ್ರಪಂವು ನಮ್ಮ ಮೇಲೆ ಕಾಳಜಿ ವಹಿಸುತ್ತದೆಯೇ? ಅವರು ನಮ್ಮನ್ನು ಸಮಾನರಾಗಿ ನೋಡುತ್ತಾರೆಯೇ? ಆದರೆ ಆ ಕ್ಷಣದಲ್ಲಿ, ನಾವು ಮಾನವೀಯತೆಯನ್ನು ಅನುಭವಿಸಿದ್ದೇವೆ.
 

21 ಫೆಬ್ರವರಿ 2025, 12:05