2026ರ ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಗೆ ನಾಮನಿರ್ದೇಶನಗಳು ತೆರೆದಿವೆ
ಜೋಸೆಫ್ ತುಲ್ಲೊಚ್
ಮಾನವ ಭ್ರಾತೃತ್ವಕ್ಕಾಗಿ 2026ರ ಜಾಯೆದ್ ಪ್ರಶಸ್ತಿಗೆ ನಾಮನಿರ್ದೇಶನಗಳು ಈಗ ಮುಕ್ತವಾಗಿವೆ.
ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ರವರ ಐತಿಹಾಸಿಕ ಭೇಟಿ ಮತ್ತು ಮಾನವ ಭ್ರಾತೃತ್ವದ ಜಂಟಿ ದಾಖಲೆಯ ಪ್ರಕಟಣೆಯ ನಂತರ, ಫೆಬ್ರವರಿ 2019ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.
ಈ ದಾಖಲೆಗೆ ಸಹಿ ಹಾಕುವ ಕಾರ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಿತು, ಮತ್ತು ಆ ದೇಶವು ಈಗ ಈ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಿದೆ, ಇದನ್ನು ಅದರ ಸ್ಥಾಪಕ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ರವರ ಗೌರವಾರ್ಥವಾಗಿ ಹೆಸರಿಸಲಾಗಿದೆ.
ಪ್ರಶಸ್ತಿ
ಜಾಯೆದ್ ಪ್ರಶಸ್ತಿಯು "ಮಾನವ ಭ್ರಾತೃತ್ವವನ್ನು ಮುನ್ನಡೆಸಲು, ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸಲು ಮತ್ತು ಸಹಿಷ್ಣುತೆ ಹಾಗೂ ಒಗ್ಗಟ್ಟಿನ ಮೌಲ್ಯಗಳನ್ನು ಪ್ರತಿಪಾದಿಸಲು ಅತ್ಯುತ್ತಮ ಕೊಡುಗೆಗಳನ್ನು" ನೀಡಿದ ವ್ಯಕ್ತಿಗಳು ಮತ್ತು ಗುಂಪುಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.
ಈ ಪ್ರಶಸ್ತಿಯು - USD $1 ಮಿಲಿಯನ್ ಆರ್ಥಿಕ ಬಹುಮಾನವನ್ನು ಒಳಗೊಂಡಿದೆ - ಯಾವುದೇ ಹಿನ್ನೆಲೆ, ಧರ್ಮ ಅಥವಾ ರಾಷ್ಟ್ರೀಯತೆಯ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೇರಬಹುದಾಗಿದೆ.
ಪ್ರಶಸ್ತಿ ವಿಜೇತರನ್ನು ಸ್ವತಂತ್ರ ತೀರ್ಪುಗಾರರ ತಂಡವು ಆಯ್ಕೆ ಮಾಡುತ್ತದೆ, ಮೊದಲು ಶೈಕ್ಷಣಿಕ, ಸಾರ್ವಜನಿಕ ವ್ಯಕ್ತಿ, ಆಧ್ಯಾತ್ಮಿಕ ನಾಯಕರು, ಸರ್ಕಾರದ ಸದಸ್ಯರು ಅಥವಾ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥರು ನಾಮನಿರ್ದೇಶನ ಮಾಡಿದ ನಂತರ.
ಅರ್ಹ ನಾಮನಿರ್ದೇಶಕರು ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಯ ಅಧಿಕೃತ ವೆಬ್‌ಸೈಟ್ https://zayedaward.org/ ಮೂಲಕ ಹೆಸರುಗಳನ್ನು ಸಲ್ಲಿಸಬಹುದು. ನಾಮನಿರ್ದೇಶನಗಳು ಅಕ್ಟೋಬರ್ 1, 2025 ರವರೆಗೆ ತೆರೆದಿರುತ್ತವೆ.
2025ರ ವಿಜೇತರು
ವ್ಯಾಟಿಕನ್ ಸುದ್ಧಿ ಯುಎಇಯಲ್ಲಿ 2025ರ ಜಾಯೆದ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿತ್ತು, ಈ ಪ್ರಶಸ್ತಿಯನ್ನು ಸರ್ಕಾರೇತರ (ಎನ್‌ಜಿಒ) ವರ್ಲ್ಡ್ ಸೆಂಟ್ರಲ್ ಕಿಚನ್, ಬಾರ್ಬಡೋಸ್‌ನ ಪ್ರಧಾನ ಮಂತ್ರಿ ಮಿಯಾ ಮಾಟ್ಲಿರವರಿಗೆ ಮತ್ತು 15 ವರ್ಷದ ಇಥಿಯೋಪಿಯದ-ಅಮೇರಿಕದ ಸಂಶೋಧಕ ಹೆಮನ್ ಬೆಕೆಲೆರವರಿಗೆ ನೀಡಲಾಯಿತು.
ಬಾರ್ಬಡೋಸ್‌ನ ಪ್ರಧಾನ ಮಂತ್ರಿಯಾಗಿ ಹವಾಮಾನ ಬದಲಾವಣೆಯ ವಿರುದ್ಧ ತೆಗೆದುಕೊಂಡ ನಿರ್ಣಾಯಕ ಕ್ರಮಕ್ಕಾಗಿ ಮಿಯಾ ಮಾಟ್ಲಿರವರನ್ನು ಗುರುತಿಸಲಾಗಿದೆ, ವರ್ಲ್ಡ್ ಸೆಂಟ್ರಲ್ ಕಿಚನ್ 30 ವಿವಿಧ ದೇಶಗಳಲ್ಲಿ 300 ಮಿಲಿಯನ್ ಊಟಗಳನ್ನು ವಿತರಿಸಿದ್ದಕ್ಕಾಗಿ ಗೌರವಿಸಲಾಗಿದೆ. ಅಕ್ಟೋಬರ್ 2023ರಲ್ಲಿ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಪ್ಯಾಲಸ್ತೀನಿಯದವರಿಗೆ 100 ಮಿಲಿಯನ್ ಊಟಗಳನ್ನು ವಿತರಿಸಿದೆ.
ಆರಂಭಿಕ ಹಂತದ ಚರ್ಮದ ಕ್ಯಾನ್ಸರ್ ನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ವಿನ್ಯಾಸಗೊಳಿಸಲಾದ ವೆಚ್ಚ-ಪರಿಣಾಮಕಾರಿ ಸಾಬೂನನ್ನು ಕಂಡುಹಿಡಿದಿದ್ದಕ್ಕಾಗಿ ಹೇಮನ್ ಬೆಕೆಲೆರವರನ್ನು ಗುರುತಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವ್ಯಾಟಿಕನ್ ಸುದ್ಧಿ ಜೊತೆ ಮಾತನಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪವಿತ್ರ ಪೀಠಾಧಿಕಾರಿ ಪ್ರೇಷಿತ ರಾಯಭಾರಿ ಮಹಾಧರ್ಮಾಧ್ಯಕ್ಷರಾದ ಕ್ರಿಸ್ಟೋಫ್ ಎಲ್-ಕ್ಯಾಸಿಸ್ ರವರು, ಜಾಯೆದ್ ಪ್ರಶಸ್ತಿಯ ಮಹತ್ವವನ್ನು ಒತ್ತಿ ಹೇಳಿದರು, ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಗ್ರ್ಯಾಂಡ್ ಇಮಾಮ್ ರವರ ನಡುವಿನ ಸಹಯೋಗವು "ಇತರರಿಗೆ ಮಾದರಿ" ಮತ್ತು "ನಾವೆಲ್ಲರೂ ಒಂದೇ ಕುಟುಂಬ" ಎಂಬುದನ್ನು ನೆನಪಿಸುತ್ತದೆ ಎಂದು ಹೇಳಿದರು.