ಸುಡಾನ್‌ನ ಝಮ್‌ಝಮ್ ಶಿಬಿರದಲ್ಲಿ ಎಂಎಸ್‌ಎಫ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ
ಡೆವಿನ್ ವ್ಯಾಟ್ಕಿನ್ಸ್
ಫ್ರೆಂಚ್ ವೈದ್ಯಕೀಯ ದತ್ತಿ ಸಂಸ್ಥೆ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್, ಸುಡಾನ್‌ನ ಉತ್ತರ ಡಾರ್ಫರ್‌ನಲ್ಲಿರುವ ಝಮ್‌ಝಮ್ ಶಿಬಿರದಲ್ಲಿ ತನ್ನ ನೆರವು ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.
ಬರಗಾಲ ಪೀಡಿತ ಶಿಬಿರದ ಸುತ್ತಲಿನ ಎಲ್ಲಾ ರಸ್ತೆಗಳು ಮುಚ್ಚಿಹೋಗಿವೆ ಮತ್ತು ಭದ್ರತಾ ಪರಿಸ್ಥಿತಿ "ಅಸಹನೀಯ"ವಾಗಿದೆ ಎಂದು ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ ಅಥವಾ ಎಂಎಸ್‌ಎಫ್ ಸಂಸ್ಥೆ ಹೇಳುತ್ತಿದೆ.
ಸುಮಾರು ಅರ್ಧ ಮಿಲಿಯನ್ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳು (ಐಡಿಪಿಗಳು) ಝಮ್‌ಝಮ್ ಶಿಬಿರದಲ್ಲಿ ವಾಸಿಸುತ್ತಿದ್ದಾರೆ, ಅವರಲ್ಲಿ ಹಲವರು ಅಬು ಜೆರೆಗಾ, ಶಾಗ್ರಾ ಮತ್ತು ಸಲುಮಾದಿಂದ ಬಂದವರು.
ಸುಡಾನ್ ಸೇನೆ ಮತ್ತು ಬಂಡುಕೋರರ ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಈ ಪ್ರದೇಶದಲ್ಲಿನ ಹೋರಾಟವು ಶಿಬಿರದ ಒಳಗೆ ಮತ್ತು ಸುತ್ತಮುತ್ತಲಿನ ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ.
ಏಪ್ರಿಲ್ 2023 ರಿಂದ, ಸಂಘರ್ಷವು ಕನಿಷ್ಠ 20,000 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 14 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಿದೆ.
ಡಿಸೆಂಬರ್ ಮತ್ತು ಜನವರಿಯಲ್ಲಿ ಝಮ್‌ಝಮ್‌ನಿಂದ ಪ್ರಾದೇಶಿಕ ಕೇಂದ್ರವಾದ ಎಲ್ ಫಾಷರ್ಗೆ ರೋಗಿಗಳನ್ನು ಸಾಗಿಸುತ್ತಿದ್ದಾಗ ತನ್ನ ಎರಡು ಆಂಬ್ಯುಲೆನ್ಸ್‌ಗಳ ಮೇಲೆ ಗುಂಡು ಹಾರಿಸಲಾಯಿತು ಎಂದು ಎಂಎಸ್‌ಎಫ್ ತಿಳಿಸಿದೆ. ಒಂದು ಘಟನೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ತನ್ನ ಸಹೋದರಿಯೊಂದಿಗೆ ಬಂದ ಮಹಿಳೆಯೊಬ್ಬರು ಸಾವನ್ನಪ್ಪಿದರು.
ಉತ್ತರ ಡಾರ್ಫರ್‌ನಲ್ಲಿರುವ ದತ್ತಿ ಸಂಸ್ಥೆಯ ಯೋಜನಾ ಸಂಯೋಜಕಿ ಮೇರಿಯನ್ ರಾಮ್‌ಸ್ಟೈನ್ ರವರು, ಈ ನಿರ್ಧಾರವು "ಹೃದಯವಿದ್ರಾವಕ" ಆದರೆ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವುದರಿಂದ, ಇದಕ್ಕೆ ಪ್ರತಿಯಾಗಿ ಸೂಕ್ತವಾದ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
"ನಾವು ಜನಸಂಖ್ಯೆಗೆ ಬೇರೆ ಯಾವುದೇ ಒಂದು ಬೆಂಬಲವಿಲ್ಲದೆ, ಅವರಿಗೆ ನೆರವು ನೀಡುವುದನ್ನು ಬಿಟ್ಟಿದ್ದೇವೆ ಎಂದು ನಮಗೆ ತಿಳಿದಿದೆ" ಎಂದು ಅವರು ಹೇಳಿದರು.
ಕ್ಷಾಮವನ್ನು ಅನುಭವಿಸುತ್ತಿರುವ ಝಮ್‌ಝಮ್ ಶಿಬಿರಕ್ಕೆ MSF ಸಂಸ್ಥೆಯ ಸ್ವಯಂ ಸೇವಕರು ಹಿಂತಿರುಗಲಿದೆ ಎಂದು ಶ್ರೀಮತಿ ರಾಮ್‌ಸ್ಟೈನ್ ರವರು ಹೇಳಿದರು.
ಸಮಗ್ರ ಆಹಾರ ಭದ್ರತಾ ಹಂತದ ವರ್ಗೀಕರಣದೊಂದಿಗೆ ಹಸಿವನ್ನು ಪತ್ತೆಹಚ್ಚುವ ಹಲವಾರು ಅಂತರರಾಷ್ಟ್ರೀಯ ತಜ್ಞರು 2024ರಲ್ಲಿ ಶಿಬಿರವು "ಹಸಿವಿನ ಅತ್ಯಂತ ಕೆಟ್ಟ ರೂಪ"ವನ್ನು ಅನುಭವಿಸುತ್ತಿದೆ ಎಂದು ಹೇಳಿದರು.
ರಕ್ತಹೀನತೆಯಿಂದ ಬಳಲುತ್ತಿರುವ ಅನೇಕ ಚಿಕ್ಕ ಮಕ್ಕಳಿಗೆ ಸಂಸ್ಥೆ ಚಿಕಿತ್ಸೆ ನೀಡಿದೆ ಎಂದು ಎಂಎಸ್‌ಎಫ್ ಯೋಜನಾ ಸಂಯೋಜಕರು ತಿಳಿಸಿದ್ದಾರೆ.
ಸೆಪ್ಟೆಂಬರ್ 2024ರಲ್ಲಿ ಲಸಿಕೆ ಅಭಿಯಾನದ ಸಮಯದಲ್ಲಿ ದತ್ತಿ ಸಂಸ್ಥೆಯು ಸುಮಾರು 30,000 ಮಕ್ಕಳನ್ನು ಪರೀಕ್ಷಿಸಿತು ಮತ್ತು ಶೇ. 34ರಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕಂಡುಹಿಡಿದಿದೆ.