MAP

MEXICO-US-SECURITY-BORDER-TARIFFS MEXICO-US-SECURITY-BORDER-TARIFFS  (AFP or licensors)

ಮೆಕ್ಸಿಕೊ ಮತ್ತು ಅಮೇರಿಕದ ನಡುವೆ ತಾತ್ಕಾಲಿಕ ವ್ಯಾಪಾರದ ಒಪ್ಪಂದ

ಅಮೇರಿಕದೊಂದಿಗಿನ ಗಡಿಯನ್ನು ಬಲಪಡಿಸಲು ಮೆಕ್ಸಿಕೊ ಹತ್ತು ಸಾವಿರ ರಾಷ್ಟ್ರೀಯ ಸೈನಿಕರನ್ನು ಕಳುಹಿಸಲು ಒಪ್ಪಿಕೊಂಡಿದೆ ಮತ್ತು ಪ್ರತಿಯಾಗಿ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ತನ್ನ ರಫ್ತಿನ ಮೇಲಿನ ಇಪ್ಪತ್ತೈದು ಪ್ರತಿಶತ ಸುಂಕವನ್ನು ಮೂವತ್ತು ದಿನಗಳವರೆಗೆ ಸ್ಥಗಿತಗೊಳಿಸಲಿದ್ದಾರೆ, ಇನ್ನೂ ಹೆಚ್ಚಿನ ಬೆಳವಣಿಗೆಗಳು ಬಾಕಿ ಉಳಿದಿವೆ.

ಜೇಮ್ಸ್ ಬ್ಲಿಯರ್ಸ್

ಅಧ್ಯಕ್ಷರಾದ ಶೀನ್‌ಬಾಮ್ ಮತ್ತು ಟ್ರಂಪ್ ರವರ ನಡುವಿನ ಮೂವತ್ತು ನಿಮಿಷಗಳ ದೂರವಾಣಿ ಸಂಭಾಷಣೆಯ ನಂತರ, ಸಾಮೂಹಿಕ ಮತ್ತು ಶ್ರವ್ಯವಾದ ನೆಮ್ಮದಿಯ ನಿಟ್ಟುಸಿರು, ಇದು ಅಮೂಲ್ಯವಾದದ್ದು, ಆದರೆ ಅಲ್ಪಾವಧಿಯ ಸಮಯವನ್ನು ಒದಗಿಸಿದೆ.

ಕೆನಡಾವು ತನ್ನ ಗಡಿಗೆ ಹತ್ತು ಸಾವಿರ ಸೈನಿಕರನ್ನು ಕಳುಹಿಸಲು ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧವನ್ನು ಎದುರಿಸಲು ಅಮೇರಿಕದೊಂದಿಗೆ ಕೆಲಸ ಮಾಡಲು "ಫೆಂಟನಿಲ್ ಜಾರ್" ನ್ನು ನೇಮಿಸಲು ಇದೇ ರೀತಿ ಒಪ್ಪಿಕೊಂಡಿದೆ.

ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ರವರು ಎಚ್ಚರಿಕೆಯಿಂದ, ಭಾವನಾತ್ಮಕ ವಾಕ್ಚಾತುರ್ಯ, ಶಾಂತ ಮನಸ್ಸಿನವರು, ಶಾಂತ ಮತ್ತು ಕಾರ್ಯತಂತ್ರದ ತರ್ಕ ಜ್ಞಾನ ಹೊಂದಿರವವರು, ವಿವೇಕಯುತವಾಗಿ ಮತ್ತು ರಾಜತಾಂತ್ರಿಕ ಕೋಪದಿಂದ ದೂರವಿದ್ದಾರೆ.

ಮೆಕ್ಸಿಕೋ ಜೊತೆ ಮುಂದುವರೆಯುತ್ತಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಒಪ್ಪಂದದ ಒಂದು ಭಾಗವು ಖಂಡಿತವಾಗಿಯೂ ಅಮೇರಿಕದ ನೆಲದಲ್ಲಿರುವ ಹತ್ತಾರು ಸಾವಿರ ದಾಖಲೆರಹಿತ ವಲಸಿಗರನ್ನು ಸ್ವೀಕರಿಸುವುದನ್ನು ಒಳಗೊಂಡಿರುತ್ತದೆ, ಅವರನ್ನು ಟ್ರಂಪ್ ರವರು ಗಡೀಪಾರು ಮಾಡಲು ನಿರ್ಧರಿಸಿದ್ದಾರೆ. ಹೆಚ್ಚಿನ ರಿಯಾಯಿತಿಗಳನ್ನು ಒಳಗೊಂಡಂತೆ ಹೆಚ್ಚಿನ ವಿವರಗಳನ್ನು ಸರಿಪಡಿಸಲು ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರು ಮೆಕ್ಸಿಕೋ ನಗರಕ್ಕೆ ಭೇಟಿ ನೀಡಲಿದ್ದಾರೆ.

ಅಮೇರಿಕದ ಎರಡು ಹತ್ತಿರದ ನೆರೆಹೊರೆ ರಾಜ್ಯಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗಳು ಕಡಿಮೆಯಾಗಲು ಗಣನೀಯವಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇವೆರಡೂ ಟ್ರಂಪ್ ರವರ ಕಠಿಣ ಉದ್ದೇಶಗಳಿಂದ, ಇದರಲ್ಲಿ ಯಾವುದೇ ಸಂದೇಹವಿಲ್ಲ, ಇದನ್ನು ಅವರು ತಮ್ಮ ಯಶಸ್ವಿ ಚುನಾವಣಾ ಪ್ರಚಾರದಲ್ಲಿ ವಿವರಿಸಿದ್ದಾರೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ಯಾವುದೇ ಸಮಯವನ್ನು ವ್ಯರ್ಥ ಮಾಡಿಲ್ಲ ಎಂದು ಹೇಳುತ್ತಾರೆ.

ಏಷ್ಯಾ ಮತ್ತು ಯುರೋಪ್‌ಗೆ ನೇರವಾಗಿ ಮತ್ತು ಅಶುಭಕರವಾಗಿ ಬೆದರಿಕೆ ಹಾಕುವ ಮತ್ತು ವಿಸ್ತರಿಸುವ ಅರ್ಧಗೋಳದ ಆರ್ಥಿಕ ಹಿಂಜರಿತವನ್ನು ನಿಯಂತ್ರಿಸಲು ಮತ್ತು ದೂರವಿಡಲು ಈಗ ಮೂವತ್ತು ದಿನಗಳ ಕಾಲಾವಕಾಶವಿದೆ.

05 ಫೆಬ್ರವರಿ 2025, 08:46