MAP

Kosovo holds parliamentary elections Kosovo holds parliamentary elections 

ಜನಾಂಗೀಯ ಉದ್ವಿಗ್ನತೆಯ ನಡುವೆ ಕೊಸೊವೊದಲ್ಲಿ ಮತದಾನ

ಕೊಸೊವೊದ ಜನರು ಭಾನುವಾರ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರಾರಂಭಿಸಿದರು. ಈ ಚುನಾವಣೆಯು ಯುವ ದೇಶದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. ಏಕೆಂದರೆ ಇದು ಹೆಚ್ಚುತ್ತಿರುವ ಅಸ್ಥಿರ ಪ್ರದೇಶದಲ್ಲಿ ಅದರ ಭವಿಷ್ಯದ ಪ್ರಾದೇಶಿಕ ಸಮಗ್ರತೆಯನ್ನು ನಿರ್ಧರಿಸಬಹುದು.

ಸ್ಟೀಫನ್ ಜೆ. ಬೋಸ್

1.6 ಮಿಲಿಯನ್ ಜನರಿರುವ ಈ ಪುಟ್ಟ, ಆದರೆ ಕಾರ್ಯತಂತ್ರದ ಬಾಲ್ಕನ್ ರಾಷ್ಟ್ರದ ಸಂಸತ್ತಿನ ಚುನಾವಣೆಯಲ್ಲಿ ಕೊಸೊವೊದ ಪ್ರಧಾನಿ ಅಲ್ಬಿನ್ ಕುರ್ತಿರವರು ಮತ ಚಲಾಯಿಸುವಾಗ ಅವರ ನೋಟವನ್ನು ಸೆರೆ ಹಿಡಿಯಲು ಕ್ಯಾಮೆರಾ ಸಿಬ್ಬಂದಿ ಹೆಣಗಾಡಿದರು.

ರಾಷ್ಟ್ರೀಯತಾವಾದಿ ವೆಟೆವೆಂಡೋಸ್ಜೆ ("ಸ್ವಯಂ-ನಿರ್ಣಯ") ಪಕ್ಷವು ಹೆಚ್ಚಿನ ಮತಗಳನ್ನು ಪಡೆಯಬಹುದು ಎಂಬ ಅಭಿಪ್ರಾಯದಲ್ಲಿದ್ದಾರೆ, ಆದರೆ ಬಹುಮತದ ಸರ್ಕಾರವನ್ನು ರಚಿಸಲು ಈ ಮತಗಳು ಸಾಕಾಗುವುದಿಲ್ಲ ಎಂದು ಮತದಾನದ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಆದರೂ ಕುರ್ತಿರವರು ಈಗಾಗಲೇ ಯಾವುದೇ ಮಹತ್ವದ ವಿರೋಧ ಪಕ್ಷಗಳೊಂದಿಗಿನ ಒಕ್ಕೂಟದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಎಚ್ಚರಿಸಿದ್ದಾರೆ, ಇದು ಕೊಸೊವೊದಲ್ಲಿ ಹೆಚ್ಚಿನ ರಾಜಕೀಯ ಪ್ರಕ್ಷುಬ್ಧತೆಯನ್ನು ಸೂಚಿಸುತ್ತದೆ.

2021 ರಿಂದ ಸರ್ಕಾರವನ್ನು ಮುನ್ನಡೆಸುತ್ತಿದ್ದ ಕುರ್ತಿರವರ, ಪೂರ್ವಾಧಿಕಾರಿಗಳು ವಿಫಲವಾದ ಕಡೆ ಕುರ್ತಿರವರು ತಮ್ಮ ರಾಜ್ಯಪಾಲನೆಯಲ್ಲಿ ಯಶಸ್ವಿಯಾದರು ಎಂದು ಅನೇಕ ಮತದಾರರು ಸಂತೋಷಪಟ್ಟಿದ್ದಾರೆ ಎಂದು ಸಮೀಕ್ಷೆಗಳು ತೋರಿಸಿವೆ. ಅವರು ಅಲ್ಬೇನಿಯನ್ ಬಹುಸಂಖ್ಯಾತ ಸರ್ಕಾರದ ಉತ್ತರ ಗಡಿಯಲ್ಲಿರುವ ಬಂಡಾಯಗಾರ ಸೆರ್ಬ್ ಪ್ರದೇಶದ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಿದರು.

ಕೊಸೊವೊದಲ್ಲಿ ಪ್ರಮುಖವಾಗಿ ಸನಾತನ ಸೆರ್ಬ್ ಅಲ್ಪಸಂಖ್ಯಾತರ ಜನಸಂಖ್ಯೆಯು ಶೇಕಡಾ 4 ರಿಂದ 8 ರಷ್ಟಿದ್ದಾರೆ ಎಂದು ಅಂದಾಜಿಸಲಾಗಿದೆ ಮತ್ತು ಇವರಲ್ಲಿ ಅನೇಕರು ಪ್ರಿಸ್ಟಿನಾಗಿಂತ ಬೆಲ್‌ಗ್ರೇಡ್‌ಗೆ ನಿಷ್ಠರಾಗಿದ್ದಾರೆ.

ಸ್ಥಳೀಯ ಸೆರ್ಬ್‌ಗಳ ಅತ್ಯಂತ ಮಹತ್ವದ ಭದ್ರಕೋಟೆಯು ಸೆರ್ಬಿಯಾದ ಗಡಿಯ ಸಮೀಪವಿರುವ ಮಿಟ್ರೋವಿಕಾ ಪಟ್ಟಣದ ಉತ್ತರ ಭಾಗದಲ್ಲಿದೆ.

ಪ್ರಧಾನ ಮಂತ್ರಿ ಕುರ್ತಿರವರು ಇತ್ತೀಚೆಗೆ ಕೊಸೊವೊದ ಪೊಲೀಸರನ್ನು ನಿಯೋಜಿಸುವಲ್ಲಿ, ಸಮಾನಾಂತರ ಸಂಸ್ಥೆಗಳನ್ನು ಮುಚ್ಚುವಲ್ಲಿ ಮತ್ತು ಸರ್ಬಿಯನ್ ದಿನಾರ್ ಕರೆನ್ಸಿಯ ಮೇಲೆ ಯೂರೋ ಬಳಕೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.

ಅವರು ತಮ್ಮ ಪಕ್ಷದೊಂದಿಗೆ, ಕೊಸೊವೊದಲ್ಲಿ ಉಳಿದಿರುವ ಸರ್ಬಿಯನ್ ಸಂಸ್ಥೆಗಳನ್ನು ಕೆಡವಲು ಪ್ರಚಾರ ಮಾಡಿದರು ಮತ್ತು ಅದೇ ಸಮಯದಲ್ಲಿ ಸೆರ್ಬ್ ನ ಬಹುಸಂಖ್ಯಾತ ಪ್ರದೇಶಗಳ ಮೇಲೆ ಕೇಂದ್ರ ಸರ್ಕಾರದ ವ್ಯಾಪ್ತಿಯನ್ನು ವಿಸ್ತರಿಸಿದರು.

2008 ರಲ್ಲಿ ಕೊಸೊವೊದ ಸ್ವಾತಂತ್ರ್ಯ ಘೋಷಣೆಯನ್ನು ಎಂದಿಗೂ ಗುರುತಿಸದ ನೆರೆಯ ಸೆರ್ಬಿಯಾವನ್ನು ಚಿಂತೆ ಮಾಡುವಂತೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ, ಅಮೇರಿಕ ಮತ್ತು ಯುರೋಪಿನ ಒಕ್ಕೂಟ ತಮ್ಮ ಕಳವಳವನ್ನು ವ್ಯಕ್ತಪಡಿಸಿವೆ.

ನಿರುದ್ಯೋಗವನ್ನು ಆಮೂಲಾಗ್ರವಾಗಿ ಕಡಿಮೆ ಮಾಡುವುದು, ಕನಿಷ್ಠ ವೇತನವನ್ನು ಹೆಚ್ಚಿಸುವುದು ಮತ್ತು ಪ್ರಾದೇಶಿಕ ಸರಾಸರಿಗಿಂತ ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವಲ್ಲಿ ಸರ್ಕಾರದ ಯಶಸ್ಸು ಮುಂತಾದ ಅಂತರರಾಷ್ಟ್ರೀಯ ಸಮುದಾಯವು ಸ್ವಾಗತಿಸಿದ ಬೆಳವಣಿಗೆಗಳನ್ನು ಜನಾಂಗೀಯ ಉದ್ವಿಗ್ನತೆಗಳು ಮರೆಮಾಡಿವೆ.

09 ಫೆಬ್ರವರಿ 2025, 15:22