MAP

Felix Rosado CMN restorative justice prison Felix Rosado CMN restorative justice prison 

ಜೂಬಿಲಿ: ಜೈಲಿನಿಂದ ಶಾಂತಿ ಪ್ರವರ್ತಕನವರೆಗೆ - ಪುನಶ್ಚೈತನ್ಯಕಾರಿ ನ್ಯಾಯದಿಂದ ರೂಪಾಂತರಗೊಂಡ ಜೀವನ

ಅಮೇರಿಕದ ಪ್ರಮುಖ ಕಥೋಲಿಕ ಮರಣದಂಡನೆ ವಿರೋಧಿ ವಕಾಲತ್ತು ಸಂಘಟನೆಯಾದ, ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್, ಪುನಶ್ಚೈತನ್ಯಕಾರಿ ನ್ಯಾಯದಿಂದ ರೂಪಾಂತರಗೊಂಡ ಜೀವನವಾದ ಫೆಲಿಕ್ಸ್ ರೊಸಾಡೊರವರ ಕಥೆಯನ್ನು ಹಂಚಿಕೊಳ್ಳುತ್ತದೆ.

ಕ್ರಿಸಾನ್ನೆ ವೈಲನ್‌ಕೋರ್ಟ್ ಮರ್ಫಿ, ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್*

ಫೆಲಿಕ್ಸ್ ರೊಸಾಡೊರವರು ತನ್ನ "ಜಾಗೃತಿಯ" ಕ್ಷಣವನ್ನು ನಿಖರವಾಗಿ ಹೇಳಬಲ್ಲರು: ಗರಿಷ್ಠ ಭದ್ರತಾ ಜೈಲಿನ ನಿರ್ಬಂಧಿತ ವಸತಿ ಘಟಕದಲ್ಲಿ ಒಂದು ಚಿಕ್ಕ ಹಾಸಿಗೆಯಲ್ಲಿ ಮಲಗಿದ್ದಾಗ, ಅವನು ತನ್ನನ್ನು ತಾನೇ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿಕೊಳ್ಳಲು ಪ್ರಾರಂಭಿಸಿದನು. ನಾನು ಇಲ್ಲಿಗೆ ಹೇಗೆ ಬಂದೆ? ಅವರ ಪ್ರಶ್ನೆಗೆ, ಅವರೇ ಆಶ್ಚರ್ಯಪಟ್ಟರು.

ಫೆಲಿಕ್ಸ್ ರವರ ಜೀವನವು ಆತನು ಯೋಜಿಸಿದಂತೆ ನಡೆಯಲಿಲ್ಲ. ಬಾಲ್ಯದಲ್ಲಿ, ಆತನು ತನ್ನ ತಾಯಿಯೊಂದಿಗೆ ದೈವಾರಾಧನಾ ವಿಧಿಗೆ ಹಾಜರಾಗಿದ್ದರು. ಆತನು ಅತ್ಯುತ್ತಮ ವಿದ್ಯಾರ್ಥಿಯಾಗಿದ್ದನು, "ಪ್ರತಿಭಾನ್ವಿತ" ಕಾರ್ಯಕ್ರಮಗಳಿಗೆ ಆಯ್ಕೆಯಾಗಿತ್ತಿದ್ದನು. ಆದರೆ ಕೇವಲ 18ನೇ ವಯಸ್ಸಿನಲ್ಲಿಯೇ, ಕೊಲೆ ಆರೋಪ ಹೊರಿಸಿ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆ ವಿಧಿಸಿ ಜೈಲಿಗೆ ಹಾಕಲಾಯಿತು.

ಇಲ್ಲಿ ಏನಾಗಿರಬಹುದು? ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್‌ನ “ಎನ್‌ಕೌಂಟರ್ಸ್ ವಿತ್ ಡಿಗ್ನಿಟಿ” ಪಾಡ್‌ಕ್ಯಾಸ್ಟ್‌ನಲ್ಲಿ (ನೀವು ಇಲ್ಲಿ ಅವರ ಪೂರ್ಣ ಸಂಚಿಕೆಯನ್ನು ಕೇಳಬಹುದು ಅಥವಾ ಅವರ ಕಥೆಯ ಈ ಪುಟ್ಟ-ಸಾಕ್ಷ್ಯಚಿತ್ರವನ್ನು ಇಲ್ಲಿ ವೀಕ್ಷಿಸಬಹುದು), ಫೆಲಿಕ್ಸ್ ರವರು ಒಂದು ನಿರ್ದಿಷ್ಟ ಕ್ಷಣವನ್ನು ಪ್ರಮುಖ ತಿರುವು ಎಂದು ಗುರುತಿಸಿದರು: ಅವರು ಮತ್ತು ಅವರ ಇತರ ಯುವ-ಸ್ನೇಹಿತರು ಒಟ್ಟಿಗೆ ಗಾಂಜಾ ಸೇದಲು ನಿರ್ಧರಿಸಿ ಅವರ ಮಿತಿಯ ಹಂತವನ್ನು ಮೀರಿದರು.

ಫೆಲಿಕ್ಸ್ರವರು ಹ್ತಿರದಲ್ಲಿದ್ದ, ಮೂಲೆಯ ಅಂಗಡಿಯಿಂದ ಕಳ್ಳತನ ಮತ್ತು ಅಂಗಡಿಗಳಿಂದ ಕಳ್ಳತನ ಮಾಡಲು ಪ್ರಾರಂಭಿಸಿದ್ದ. ಅವನು ಕಾರುಗಳಿಂದ ವಸ್ತುಗಳನ್ನು ಕದಿಯಲು ಪ್ರಾರಂಬಿಸಿದನು, ನಂತರ ಆತನು ಕಾರುಗಳನ್ನೇ ಕದಿಯುವ ಹಂತದವರೆಗೆ ಬೆಳೆದನು. ಅತಿ-ಶೀಘ್ರದಲ್ಲೇ ಅವನು ಕೊಕೇನ್ ನಿಂದ ಹೆರಾಯಿನ್ ವರೆಗೆ ಮಾದಕ ದ್ರವ್ಯಗಳನ್ನು ವ್ಯಾಪಾರ ಮಾಡಲು ಪ್ರಾರಂಭಿಸಿದನು. ಈ ಅಪಾಯಕಾರಿ ವ್ಯಾಪಾರದಲ್ಲಿ ಸಿಲುಕಿಕೊಂಡ, ಆತನು ಬಂದೂಕುಗಳನ್ನು ಸಾಗಿಸಲು ಮತ್ತು ಬಳಸಲು ಪ್ರಾರಂಭಿಸಿದನು. ಈ ಅಪಾಯಕಾರಿ ಮಾರ್ಗವು, ಅಂತಿಮವಾಗಿ ಆತನ ಅಪರಾಧ ಸಾಬೀತಾಗಿ ಮರಣದಂಡನೆಗೆ ಕಾರಣವಾಯಿತು ಮತ್ತು ಜೈಲು ಶಿಕ್ಷೆಯ ಮೂಲಕ ಮರಣದಂಡನೆಗೆ ಕಾರಣವಾಯಿತು.

ವಿಮೋಚನೆಯ ಹಾದಿ ತಕ್ಷಣವೇ ಉಂಟಾಗಲಿಲ್ಲ. ಅವನ ಅಪರಾಧ ಸಾಬೀತಾದ ತಕ್ಷಣ, ಅವನು ಹೊಣೆಗಾರಿಕೆ ಮತ್ತು ವಾಸ್ತವ ಎರಡರಿಂದಲೂ ಪಲಾಯನ ಮಾಡಿದನು. ಫೆಲಿಕ್ಸ್ ದೇವರಲ್ಲಿ ನಂಬಿಕೆ ಇಡುವುದನ್ನು ನಿಲ್ಲಿಸಿದ್ದ. ಅವನು ಅಪರಾಧ ಮಾಡಿಲ್ಲ ಎಂದು ಹೇಳಿಕೊಂಡನು, ಸುಳ್ಳು ಹೇಳಲು ಪ್ರಾರಂಭಿಸಿದನು. ಕಾಲ ಕ್ರಮೇಣ ತನ್ನ ಕಥೆಯನ್ನು ಪದೇ ಪದೇ ಬದಲಾಯಿಸಿಕೊಂಡು ಹೋದನು. ತಾನು ಮಾಡಿದ ಅಪರಾಧವನ್ನು ಒಪ್ಪಿಕೊಳ್ಳಲು ನಿರಾಕರಿಸಿದನು.

ಹಿಂತಿರುಗಿ ನೋಡಿದಾಗ, ಅವರು "ಜೈಲು ಹೊಣೆಗಾರಿಕೆಗೆ ವಿರುದ್ಧವಾಗಿದೆ" ಎಂದು ವಿವರಿಸುತ್ತಾರೆ. ಇದು ಶಿಕ್ಷೆಯನ್ನು ನೀಡುತ್ತದೆ ಮತ್ತು ದುಃಖವನ್ನು ಉಂಟುಮಾಡುತ್ತದೆ. ಆದರೆ, ಅತನು ಉಂಟುಮಾಡಿದ ಹಾನಿಯನ್ನು ಒಬ್ಬರು ಎದುರಿಸಬೇಕಾಗಿಲ್ಲ ಎಂದು ಅವರು ಗಮನಿಸುತ್ತಾರೆ. ಅನೇಕ ವರ್ಷಗಳ ಕಾಲ, ಅವರ ಜೀವನದ ಅನುಭವಗಳನ್ನು ತಾಳೆ ಹಾಕಲು ಪ್ರಾರಂಭಿಸಿದನು.

ಫೆಲಿಕ್ಸ್ ಮಾದಕ ದ್ರವ್ಯಗಳಿಂದ ಹೊರಬಂದು ಕಥೋಲಿಕ ವೀಶ್ವಾಸಕ್ಕೆ ಮರಳಲು ಪ್ರಾರಂಬಿಸಿದನು, ಅಂತಿಮವಾಗಿ ಹೊಸ ಹಾದಿಯನ್ನು ಸೃಷ್ಟಿಸಿತು. ಒಂದು ದಶಕಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದ ನಂತರ, ಅವರು ಒಬ್ಬ ಯಾಜಕನನ್ನು ಭೇಟಿಯಾಗಿ ಅವರಲ್ಲಿ ಪಾಪನಿವೇದನೆ ಮಾಡಿ ದೈವಾರಾದನೆ ವಿಧಿ ಹೋಗಿ ಬಾಲ್ಯ ಜೀವನದ ನಂತರ ಮೊದಲ ಬಾರಿಗೆ ಪರಮಪ್ರಸಾದವನ್ನು ಸ್ವೀಕರಿಸಿದರು.

ಕಾಲಾನಂತರದಲ್ಲಿ, ಅವರು ಧರ್ಮಸಭೆಯ ಸಮುದಾಯದಲ್ಲಿ ತಮ್ಮನ್ನು ಹೆಚ್ಚು ಹೆಚ್ಚು ತೊಡಗಿಸಿಕೊಂಡರು. ಸರಿಯಾದ ಹಾದಿಯಲ್ಲಿ ಸಾಗಲು ಕೆಲಸ ಮಾಡುತ್ತಿದ್ದಾಗ, ಅವರು ವಿಲ್ಲನೋವಾ ವಿಶ್ವವಿದ್ಯಾಲಯದ ಮೂಲಕ ಸ್ನಾತಕೋತ್ತರ ಪದವಿ ಕಾರ್ಯಕ್ರಮಕ್ಕೆ ಸೇರಿಕೊಂಡರು.

ಅವರ ಜೀವನದ ಈ ಸಮಯದಲ್ಲಿ, ಫೆಲಿಕ್ಸ್ ರವರು ಮತ್ತೊಂದು ಪ್ರಮುಖ ತಿರುವು ಪಡೆದರು. ಹೊವಾರ್ಡ್ ಜೆಹರ್ ಅವರ "ಟ್ರಾನ್ಸ್‌ಸೆಂಡಿಂಗ್" ಪುಸ್ತಕವನ್ನು ಓದುವಾಗ ಅವರು ಪುನಃಸ್ಥಾಪಕ ನ್ಯಾಯದ ಪರಿಕಲ್ಪನೆಯ ಬಗ್ಗೆ ಕಲಿತರು. ಈ ಪುಸ್ತಕವು ತಮ್ಮ ಪ್ರೀತಿಪಾತ್ರರ ಹತ್ಯೆ ಸೇರಿದಂತೆ ಅಪರಾಧದಿಂದ ತಮ್ಮ ಜೀವನವನ್ನು ತಲೆಕೆಳಗಾಗಿಸಿಕೊಂಡಿರುವ ಜನರ ಚಿತ್ರಗಳನ್ನು ಒಳಗೊಂಡಿರುವುದನ್ನು ಕಂಡರು. ಅವರು ಮುಖಾಮುಖಿಯಾಗಿ ನೋಡುವುದನ್ನು ಮತ್ತು ಅವರ ಹೃದಯವಿದ್ರಾವಕ ಕಥೆಗಳ ಬಗ್ಗೆ ಓದುವುದನ್ನು ವಿವರಿಸುತ್ತಾರೆ.

ಈ ಮುಖಗಳಲ್ಲಿ ಫೆಲಿಕ್ಸ್ ಮೊದಲ ಬಾರಿಗೆ ಕಂಡದ್ದು, ಅವನು ಇನ್ನೊಂದು ಕುಟುಂಬಕ್ಕೆ ಉಂಟುಮಾಡಿದ ನೋವನ್ನು. ಆತನು ಏನು ಮಾಡಿದನು ಮತ್ತು ಅವರು ಉಂಟುಮಾಡಿದ ಹಾನಿಯ ಸಂಪೂರ್ಣ ವಾಸ್ತವಕ್ಕೆ ಇದ್ದಕ್ಕಿದ್ದಂತೆ ಎಚ್ಚರಗೊಂಡನು. ಮಾನವ ಪ್ರಭಾವವನ್ನು ಇನ್ನು ಮುಂದೆ ನಿರ್ಲಕ್ಷಿಸಲಾಗುವುದಿಲ್ಲ ಅಥವಾ ನಿರಾಕರಿಸಲಾಗುವುದಿಲ್ಲ. ಆದರೆ ಅದು ಕಥೆಯ ಅಂತ್ಯವಲ್ಲ.

ಪುನಶ್ಚೈತನ್ಯಕಾರಿ ನ್ಯಾಯದೊಂದಿಗೆ, ಪ್ರತೀಕಾರ ಅಥವಾ ಪ್ರತೀಕಾರಕ್ಕಿಂತ ಗುಣಪಡಿಸುವಿಕೆಗೆ ಆದ್ಯತೆ ನೀಡಲಾಗುತ್ತದೆ. ಪಶ್ಚಾತ್ತಾಪದ ಪ್ರತಿಫಲವಾಗಿ, ಭರವಸೆ ಮತ್ತು ಕ್ಷಮೆಯ ಸಾಧ್ಯತೆ ಇದೆ.

14 ಫೆಬ್ರವರಿ 2025, 12:44