MAP

 Mostra di Ivan Marchuk a Roma  Mostra di Ivan Marchuk a Roma   (Yurko Hanchuk)

ಐವಾನ್ ಮಾರ್ಚುಕ್: ಕರುಣೆಯ ಕರೆಯಾಗಿ ಕಲೆ

"ಎಪಿಕ್ ರಿಯಾಲಿಟಿ" ಎಂಬುದು ಪ್ರಸಿದ್ಧ ಉಕ್ರೇನಿನ ಕಲಾವಿದ ಐವಾನ್ ಮಾರ್ಚುಕ್ ರವರ ಪ್ರದರ್ಶನದ ಶೀರ್ಷಿಕೆಯಾಗಿದೆ. ಇದು ಫೆಬ್ರವರಿ 24 ರವರೆಗೆ ರೋಮ್‌ನಲ್ಲಿ ಪ್ರದರ್ಶನಗೊಳ್ಳಲಿದೆ, ಇದು 2022ರಲ್ಲಿ ಉಕ್ರೇನಿನ ಮೇಲೆ ರಷ್ಯಾದ ಆಕ್ರಮಣವನ್ನು ಗುರುತಿಸುವ ದಿನಾಂಕವಾಗಿದೆ.

ಸ್ವಿಟ್ಲಾನಾ ಡುಖೋವಿಚ್

"ನನ್ನ ಇಡೀ ಕಲಾ ವೃತ್ತಿಜೀವನದ ಧ್ಯೇಯವಾಕ್ಯವೆಂದರೆ: 'ಒಳ್ಳೆಯದನ್ನು ಮಾಡುವಂತಿದ್ದರೆ ತ್ವರೆಯಾಗಿ ಮಾಡಿ!' ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಒಳ್ಳೆಯದನ್ನು ಮಾಡುತ್ತಾರೆ. ನನ್ನ ಇಡೀ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದೇನೆ" ಎಂದು ವಿಶ್ವವಿಖ್ಯಾತ 88 ವರ್ಷದ ಉಕ್ರೇನಿನ ಕಲಾವಿದ ಐವಾನ್ ಮಾರ್ಚುಕ್ ರವರು ಹೇಳುತ್ತಾರೆ. ಅವರಿಗೆ ವಯಸ್ಸಾದರೂ, ಮಾರ್ಚ್ಯುಕ್ ರವರು ಫೆಬ್ರವರಿ 10 ರಂದು ಪಲಾಝೊ ಡೆಲ್ಲಾ ಕ್ಯಾನ್ಸೆಲೆರಿಯಾದಲ್ಲಿ ಉಕ್ರೇನಿನ ಪವಿತ್ರ ಅಧಿಕಾರ ಪೀಠದ, ರಾಯಭಾರ ಕಚೇರಿಯ ಬೆಂಬಲದೊಂದಿಗೆ ಆಯೋಜಿಸಲಾದ ತನ್ನ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ರೋಮ್‌ಗೆ ಪ್ರಯಾಣ ಬೆಳೆಸಿದರು. ಸುಮಾರು ಅರವತ್ತು ಕೃತಿಗಳನ್ನು ಒಳಗೊಂಡ ಈ ಪ್ರದರ್ಶನವು ಫೆಬ್ರವರಿ 24 ರವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ.

ಚಿತ್ರಕಲೆಯ ಬಗ್ಗೆ ಉತ್ಸಾಹ
ಐವಾನ್ ಮಾರ್ಚುಕ್ ರವರು 1936 ರಲ್ಲಿ ಉಕ್ರೇನಿನ ಪಶ್ಚಿಮ ಟೆರ್ನೋಪಿಲ್ ಪ್ರದೇಶದ ಮೊಸ್ಕಲಿವ್ಕಾ ಗ್ರಾಮದಲ್ಲಿ ಜನಿಸಿದರು. ಕಲೆಯ ಮೇಲಿನ ಪ್ರೀತಿ ಚಿಕ್ಕ ವಯಸ್ಸಿನಲ್ಲಿಯೇ ಹೊರಹೊಮ್ಮಿತು. ಪೆನ್ಸಿಲ್ ಅಥವಾ ಜಲವರ್ಣಗಳಂತಹ ಮೂಲಭೂತ ಚಿತ್ರ ಬಿಡಿಸುವ ಸಾಧನಗಳ ಸೌಲಭ್ಯವಿಲ್ಲದಂತಹ ಬಡ ಕುಟುಂಬದಲ್ಲಿ ಬೆಳೆದಿದ್ದರೂ, ಬಾಲ್ಯದಲ್ಲಿ ಚಿತ್ರ ಬಿಡಿಸಲು ಪ್ರಾರಂಭಿಸಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಸಾಧನಗಳ ಬದಲಿಗೆ, ಅವರು ತಮ್ಮ ಚಿತ್ರಗಳನ್ನು ರಚಿಸಲು ಹೂವುಗಳ ರಸವನ್ನು ಬಳಸಿದರು. ಆತನು ಹದಿಹರೆಯದವನಾಗಿದ್ದಾಗ, ಕಲಾವಿದನಾಗಬೇಕೆಂಬ ತನ್ನ ಗುರಿಯಲ್ಲಿ ಅವನಿಗೆ ಖಚಿತವಿತ್ತು. ಐವಾನ್ ರವರು ಟ್ರಷ್ ಸ್ಕೂಲ್ ಆಫ್ ಡೆಕೋರೇಟಿವ್ ಅಂಡ್ ಅಪ್ಲೈಡ್ ಆರ್ಟ್ಸ್ ಮತ್ತು ಎಲ್ವಿವ್ ಅಕಾಡೆಮಿ ಆಫ್ ಆರ್ಟ್ಸ್‌ನಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು 1960ರ ದಶಕದ ಕೊನೆಯಲ್ಲಿ ಕೈವ್‌ಗೆ ತೆರಳಿದರು. ಅಲ್ಲಿ, ಅವರು ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸೂಪರ್‌ಹಾರ್ಡ್ ಮೆಟೀರಿಯಲ್ಸ್ ಸಂಸ್ಥೆಯಲ್ಲಿ ಮತ್ತು ನಂತರ ಸೋವಿಯತ್ ಕಲಾತ್ಮಕ ಏಕರೂಪತೆಯು ಚಾಲ್ತಿಯಲ್ಲಿರುವ ಸಿದ್ಧಾಂತವಾಗಿದ್ದ ಸ್ಮಾರಕ ಮತ್ತು ಅಲಂಕಾರಿಕ ಕಲಾ ಸಂಕೀರ್ಣದಲ್ಲಿ ಕಲಾವಿದರಾಗಿ ಕೆಲಸ ಮಾಡಿದರು. "ನನಗೆ ನಿಯೋಜಿಸಲಾದ ಕೆಲಸಗಳನ್ನು ನಾನು ಬೇಗನೆ ಪೂರ್ಣಗೊಳಿಸುತ್ತಿದ್ದರಿಂದ, ಸಾಕಷ್ಟು ಉಚಿತ ಸಮಯವನ್ನು ಹೊಂದಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ನಾನು ಪೆನ್ನು ಮತ್ತು ಶಾಯಿಯಿಂದ ಸಣ್ಣ ಹಾಳೆಗಳ ಮೇಲೆ ಚಿತ್ರಿಸಲು ಪ್ರಾರಂಭಿಸಿದೆ ಮತ್ತು ನಾನು ಹೊಸದನ್ನು ರಚಿಸುತ್ತಿರುವುದರಿಂದ ನನಗೆ ತುಂಬಾ ಸಂತೋಷವಾಗುತ್ತಿತು. ಅದು ಏನೋ ಸರಿಯಾಗಿ ಗೊತ್ತಿಲ್ಲ, ಮನಸ್ಸಿಗೆ ತುಂಬಾ ಸಂತೋಷವಾಗುತ್ತಿತ್ತು, ಬಹುಶಃ ಅದು ಸುಂದರವಾದದ್ದಕ್ಕೆ ಕಾರಣವಾಗುತ್ತದೆ ಎಂದು ನಾನು ಭಾವಿಸಿದೆ.

ಕಣ್ಗಾವಲಿನಲ್ಲಿ ಕಲೆ
ಮಾರ್ಚುಕ್ ರವರ ಕಲಾತ್ಮಕ ಶೈಲಿಯು ಯಾವುದೇ ಸಮಾಜವಾದಿ ವಾಸ್ತವಿಕತೆಯ ಮಾನದಂಡಗಳಿಗೆ ಅನುಗುಣವಾಗಿರಲಿಲ್ಲ. ಯಾವುದೇ ಸಾಂಕೇತಿಕವಲ್ಲದ ಅಥವಾ ಅಮೂರ್ತ ರೂಪವನ್ನು ಸೋವಿಯತ್ ಆಡಳಿತವು ಸೈದ್ಧಾಂತಿಕವಾಗಿ ಅಪಾಯಕಾರಿ ಎಂದು ಪರಿಗಣಿಸಿತು. ನನ್ನ ಕೃತಿಗಳನ್ನು ಪ್ರದರ್ಶನಗಳಿಗೆ ಸ್ವೀಕರಿಸಲಾಗಲಿಲ್ಲ; ಅವುಗಳನ್ನು ನಿಷೇಧಿಸಲಾಯಿತು ಎಂದು ಅವರು ವಿವರಿಸುತ್ತಾರೆ. ಆದರೆ ನಾನು ಕೆಲಸ ಮಾಡಲೇಬೇಕಾಗಿತ್ತು. ಅಧಿಕೃತ ಪ್ರದರ್ಶನ ಸ್ಥಳಗಳು ನನಗೆ ಮುಚ್ಚಲ್ಪಟ್ಟಿದ್ದವು. ಅಂದರೆ ನನ್ನ ಕಲೆಯ ಪ್ರದರ್ಶನಕ್ಕೆ ಅವಕಾಶ ದೊರಕದ ಕಾರಣ, ನಿಧಾನವಾಗಿ, ನನ್ನ ವರ್ಣಚಿತ್ರಗಳನ್ನು ವಿವಿಧ ಅನೌಪಚಾರಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಮಾರ್ಗಗಳನ್ನು ಕಂಡುಕೊಂಡೆ, ಬರಹಗಾರರ ಒಕ್ಕೂಟ, ಸಂಯೋಜಕರ ಒಕ್ಕೂಟ, ಅಮೋಸೊವ್ ಕ್ಲಿನಿಕ್ ಮತ್ತು ವೈದ್ಯಕೀಯ ಗ್ರಂಥಾಲಯ. ನನ್ನ ಕೆಲಸವನ್ನು ಹವ್ಯಾಸಿ ಕಲೆ ಎಂದು ಲೇಬಲ್ ಮಾಡಲಾಗಿತ್ತು, ಆದರೂ ಅದು ನಿರಂತರ ಪರಿಶೀಲನೆಗೆ ಒಳಪಟ್ಟಿತ್ತು.

ಪ್ಲಿಯೊಂಟನಿಸಂನ ಜನನ
ಐವಾನ್ ಮಾರ್ಚುಕ್ ರವರ ಕಲಾತ್ಮಕ ಪ್ರಯಾಣವು ಹೊಸ ಶೈಲಿಗಳು ಮತ್ತು ತಂತ್ರಗಳ ನಿರಂತರ ಅನ್ವೇಷಣೆಯಲ್ಲಿ ಒಂದಾಗಿದ್ದು, "ಪ್ಲಿಯೊಂಟನಿಸಂ" ("ನೇಯ್ಗೆ" ಎಂಬ ಅರ್ಥವಿರುವ ಉಕ್ರೇನಿನ ಪದ) ಎಂಬ ಅವರ ವಿಶಿಷ್ಟ ವಿಧಾನದಲ್ಲಿ ಪರಾಕಾಷ್ಠೆಯಾಗಿದೆ. 1972ರಲ್ಲಿ, ನಾನು ಚೆರ್ನಿಹಿವ್ ಪ್ರದೇಶದ ಸೆಡ್ನಿವ್ ಗ್ರಾಮದಲ್ಲಿದ್ದೆ. ಅದು ನವೆಂಬರ್ ತೋಗಳಾಗಿತ್ತು ಮತ್ತು ನಾನು ಅಲ್ಲಿ ಬರಿ ಕಾಡಿನ ಮರಗಳನ್ನು ನೋಡಿದೆ. ನಾನು ಯೋಚಿಸಿದೆ: 'ಎಂತಹ ಚಿತ್ರ, ಎಂತಹ ಅದ್ಭುತ!' ಮತ್ತು ನಾನು ನನಗೆ ನಾನೇ ಹೇಳಿಕೊಂಡೆ, 'ನಾನು ಹೀಗೆ ಮತ್ತು ಇನ್ನೂ ಉತ್ತಮವಾಗಿ ಚಿತ್ರಿಸುತ್ತೇನೆ.' ಆ ದಿನವೇ, ಅದನ್ನು ಹೇಗೆ ಮಾಡಬೇಕೆಂದು ನನಗೆ ಅರ್ಥವಾಯಿತು ಮತ್ತು ಹೀಗಾಗಿ, ಪ್ಲಿಯೊಂಟನಿಸ್ಟ್ ಚಿತ್ರಕಲೆ ತಂತ್ರವು ಹುಟ್ಟಿಕೊಂಡಿತು. ಇದು ಇಪ್ಪತ್ತನೇ ಶತಮಾನದಲ್ಲಿ ಒಂದು ಹೊಸ ಕಲಾತ್ಮಕ ವಿಧಾನವಾಗಿತ್ತು.

ಯುದ್ಧದ ಬಗ್ಗೆ ಇನ್ನು ಯಾವುದೇ ವರ್ಣಚಿತ್ರಗಳಿಲ್ಲ
ಮಾರ್ಚುಕ್ 2011 ರಲ್ಲಿ ಉಕ್ರೇನ್‌ಗೆ ಮರಳಿದರು, ಆದರೆ 2022 ರ ಆರಂಭದಲ್ಲಿ ಭುಗಿಲೆದ್ದ ಪೂರ್ಣ ಪ್ರಮಾಣದ ಯುದ್ಧವು ಅವರನ್ನು ಮತ್ತೊಮ್ಮೆ ಹೊರಹೋಗುವಂತೆ ಮಾಡಿತು. ಅವರ ವಯಸ್ಸು ಮತ್ತು ತಾಯ್ನಾಡಿನ ಬಗ್ಗೆ ದುಃಖದ ಹೊರತಾಗಿಯೂ, ಅವರು ಕೆಲಸ ಮುಂದುವರೆಸಿದರು. "ಚೆರ್ನೋಬಿಲ್ ದುರಂತದಿಂದ ಪ್ರೇರಿತವಾದ "ಆಂಡ್ ಐ ಸಾ ದಿ ಅರ್ಥ್ ಕವರ್ಡ್ ಇನ್ ಫಿಶ್" ಎಂಬ ಶೀರ್ಷಿಕೆಯ ಚಿತ್ರಕಲೆ ನನ್ನಲ್ಲಿತ್ತು - ಅದು ಇನ್ನೂ ಇದೆ. ನಂತರ ಈ ಯುದ್ಧ ಬಂದಿತು, ಅದನ್ನು ನಾನು ನೇರವಾಗಿ ಅನುಭವಿಸಿದೆ, ಮತ್ತು ನಾನು "ಆಂಡ್ ಐ ಸಾ ದಿ ಅರ್ಥ್ ಕವರ್ಡ್ ಇನ್ ಬಾಡೀಸ್" ಎಂಬ ಸಣ್ಣ ತುಣುಕನ್ನು ಚಿತ್ರಿಸಿದೆ. ಅದರಲ್ಲಿ ಇಡೀ ಭೂಮಿಯ ನೆಲದ ಮೇಲೆ ಮಲಗಿರುವ ಜನರಿಂದ ಆವೃತವಾಗಿದೆ... ಅದು ವಾಸ್ತವ. ನಂತರ ನನ್ನ ಯುದ್ಧ ಸಂಬಂಧಿತ ಕೆಲಸದ ಬಗ್ಗೆ ಕೇಳಲಾಯಿತು. ಜನರು ಯುದ್ಧದ ಅನುಭವಗಳಿಂದ ತಮ್ಮ ಜೀವವನ್ನು ಕಳೆದುಕೊಂಡಾತ್ತಾಗುತ್ತದೆ, ಇನ್ನೂ ಯುದ್ಧದ ಚಿತ್ರಗಳನ್ನು ಚಿತ್ರಿಸಿ, ಜನರನ್ನು ಆ ಅನುಭವವನ್ನು ಮರಳಿ ಅನುಭವಿಸುವಂತೆ ನಾನು ಬಯಸುವುದಿಲ್ಲ. ಆದ್ದರಿಂದ ನಾನು ಹೇಳಿದೆ: ಇನ್ನು ಮುಂದೆ ಇಲ್ಲ. ಯುದ್ಧದ ಬಗ್ಗೆ ಇನ್ನು ಮುಂದೆ ವರ್ಣಚಿತ್ರಗಳಿಲ್ಲ. ಇದನ್ನು ನಾನು ಹೇಗೆ ಚಿತ್ರಿಸಿ ಮತ್ತೆ ಅವರಿಗೆ ತೋರಿಸಲಿ? ಅವರು ಅದನ್ನು ತಮ್ಮ ಕಣ್ಣುಗಳಿಂದಲೇ ನೋಡುತ್ತಾರೆ. ಅವರು ತಮ್ಮ ದೀರ್ಘ ಕಲಾತ್ಮಕ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ ಮುಕ್ತಾಯಗೊಳಿಸುತ್ತಾರೆ: "ನಾನು ತ್ಯಾಗದ ಜೀವನವನ್ನು ನಡೆಸಿದ್ದೇನೆ. ಆದರೆ ಅವರು ಹೇಳಿದಂತೆ ನಾನು ಮಾಡಿರುವುದು ಎಲ್ಲಾ ತ್ಯಾಗಗಳನ್ನು ಸಮರ್ಥಿಸುತ್ತದೆ. ನಾನು ಸಾಧಿಸಿದ್ದರಲ್ಲಿ ನಾನು ನಿಜವಾಗಿಯೂ ತೃಪ್ತನಾಗಿದ್ದೇನೆ."

15 ಫೆಬ್ರವರಿ 2025, 14:15