MAP

PALESTINIAN-ISRAEL-CONFLICT PALESTINIAN-ISRAEL-CONFLICT  (AFP or licensors)

ಇಸ್ರಯೇಲ್‌ ನ ರಕ್ಷಣಾ ಸಚಿವರು ಪಶ್ಚಿಮ ದಂಡೆಯಲ್ಲಿ ದಾಳಿಗಳನ್ನು ಇನ್ನೂ ಹೆಚ್ಚಿಸಲು ಆದೇಶಿಸಿದ್ದಾರೆ

ಇಸ್ರಯೇಲ್ ರಕ್ಷಣಾ ಸಚಿವ, ಇಸ್ರಯೇಲ್ ಕಾಟ್ಜ್ ರವರು ಆಕ್ರಮಿತ ಪಶ್ಚಿಮ ದಂಡೆಯಾದ್ಯಂತ ನಿರಾಶ್ರಿತರ ಶಿಬಿರಗಳ ಮೇಲೆ ಮಿಲಿಟರಿ ದಾಳಿಗಳನ್ನು ಹೆಚ್ಚಿಸಲು ಆದೇಶಿಸಿದ್ದಾರೆ.

ನಾಥನ್ ಮಾರ್ಲಿ

ಇಸ್ರಯೇಲ್ ರಕ್ಷಣಾ ಸಚಿವ, ಇಸ್ರಯೇಲ್ ಕಾಟ್ಜ್ ರವರು ಆಕ್ರಮಿತ ಪಶ್ಚಿಮ ದಂಡೆಯಾದ್ಯಂತ ನಿರಾಶ್ರಿತರ ಶಿಬಿರಗಳ ಮೇಲೆ ಮಿಲಿಟರಿ ದಾಳಿಗಳನ್ನು ಹೆಚ್ಚಿಸಲು ಆದೇಶಿಸಿದ್ದಾರೆ.

ಟೆಲ್ ಅವೀವ್‌ನಲ್ಲಿ ನಡೆದ ಬಸ್ ಸ್ಫೋಟಗಳ ಸರಣಿಯ ನಂತರ, ಇದು ಸಂಭವಿಸಿದೆ, ಇದರಿಂದ ಯಾವುದೇ ಗಾಯಗಳಾಗಿಲ್ಲ, ಯಾವುದೇ ಗುಂಪು ಸ್ಫೋಟಗಳ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ.

ತೀವ್ರಗೊಂಡ ದಾಳಿಗಳು ತುಲ್ಕಾರ್ಮ್ ನಿರಾಶ್ರಿತರ ಶಿಬಿರ ಮತ್ತು ಪಶ್ಚಿಮ ದಂಡೆಯಲ್ಲಿರುವ ಇತರರ ಮೇಲೆ ಕೇಂದ್ರೀಕರಿಸುತ್ತವೆ ಎಂದು ಕಾಟ್ಜ್ ರವರು ಹೇಳಿದ್ದಾರೆ.

ದುಷ್ಕರ್ಮಿಗಳು ತುಲ್ಕರ್ಮ್‌ನಿಂದ ಬಂದವರೇ ಎಂಬುದನ್ನು ಶಿನ್ ಬೆಟ್ ದೇಶೀಯ ಭದ್ರತಾ ಸಂಸ್ಥೆ ತನಿಖೆ ನಡೆಸುತ್ತಿದೆ ಎಂದು ಇಸ್ರಯೇಲ್‌ನ ಕಾನ್ ದೂರದರ್ಶನ ವರದಿ ಮಾಡಿದೆ.

ಸ್ಫೋಟಕ ಸಾಧನಗಳಲ್ಲಿ, ಒಂದರಲ್ಲಿ ಕಂಡುಬಂದ ಸ್ಟಿಕ್ಕರ್, ಈ ದಾಳಿಯು ವ್ಯಾಪಕ ವಿನಾಶಕ್ಕೆ ಕಾರಣವಾದ ಇತ್ತೀಚಿನ ಇಸ್ರಯೇಲ್ ದಾಳಿಗಳಿಗೆ "ಸೇಡು" ಎಂದು ಸೂಚಿಸುತ್ತದೆ.

ದಾಳಿಯಲ್ಲಿ, ಮೂರು ಖಾಲಿ ಬಸ್‌ಗಳು ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡವು ಮತ್ತು ಇತರ ಎರಡು ಬಸ್‌ಗಳಲ್ಲಿ ಸ್ಫೋಟಕ ಸಾಧನಗಳು ಕಂಡುಬಂದವು, ಭದ್ರತಾ ಪರಿಶೀಲನೆಗಾಗಿ ದೇಶಾದ್ಯಂತ ಸಾರ್ವಜನಿಕ ಸಾರಿಗೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ղ್ತೆಯಾಳುಗಳು
ಇದಕ್ಕೆ ಸಂಬಂಧಿಸಿದ ಬೆಳವಣಿಗೆಯೊಂದರಲ್ಲಿ, ಹಮಾಸ್‌ನಿಂದ ಪಡೆದ ದೇಹವು, ಒತ್ತೆಯಾಳು ಶಿರಿ ಬಿಬಾಸ್ ರವರದ್ದಲ್ಲ ಎಂದು ವಿಧಿವಿಜ್ಞಾನ ವಿಶ್ಲೇಷಣೆ ದೃಢಪಡಿಸಿದೆ ಎಂದು ಇಸ್ರಯೇಲ್ ಘೋಷಿಸಿತು.

ಬಿಬಾಸ್ ರವರ ಅವಶೇಷಗಳನ್ನು ಅವರ ಇಬ್ಬರು ಮಕ್ಕಳೊಂದಿಗೆ ಈ ವಾರದ ಆರಂಭದಲ್ಲಿ ಹಸ್ತಾಂತರಿಸಲಾಗಿದೆ ಎಂದು ಹೇಳಲಾಗಿದೆ.

ಗುರುತಿನ ಪ್ರಕ್ರಿಯೆಯಲ್ಲಿ, ಮೃತದೇಹ ಯಾವುದೇ ಪರಿಚಿತ ಒತ್ತೆಯಾಳುಗಳದ್ದಲ್ಲ ಎಂದು ಇಸ್ರಯೇಲ್ ಸೇನೆ ತಿಳಿಸಿದೆ, ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ಬಿಬಾಸ್ ರವರ ಪುತ್ರರಾದ ನಾಲ್ಕು ವರ್ಷದ ಏರಿಯಲ್ ಮತ್ತು ಹತ್ತು ತಿಂಗಳ ಕಿಫಿರ್ ಅವರ ಅವಶೇಷಗಳನ್ನು ಗುರುತಿಸಲಾಗಿದೆ. ಅವರನ್ನು ಕಿಬ್ಬುಟ್ಜ್ ನಿರ್ ಓಜ್‌ನಲ್ಲಿರುವ ಅವರ ಮನೆಯಿಂದ ಅಪಹರಿಸಲಾಗಿತ್ತು.

ಹೆಚ್ಚುವರಿಯಾಗಿ, ನಿವೃತ್ತ ಪತ್ರಕರ್ತ ಮತ್ತು ಶಾಂತಿ ಕಾರ್ಯಕರ್ತ ಓಡೆಡ್ ಲಿಫ್ಶಿಟ್ಜ್ ಎಂಬ ಮತ್ತೊಬ್ಬ ಒತ್ತೆಯಾಳು, ಅವರ ಶವವನ್ನು ಇಂದು ಮುಂಜಾನೆ ಗುರುತಿಸಲಾಯಿತು.
 

21 ಫೆಬ್ರವರಿ 2025, 12:15