ಇಸ್ರಯೇಲ್-ಹಮಾಸ್ ಕದನ ವಿರಾಮ ಬಿಕ್ಕಟ್ಟು ಪರಿಹಾರ
ಕೀಲ್ಸ್ ಗುಸ್ಸಿ
ಇಸ್ರಯೇಲ್ ಮತ್ತು ಹಮಾಸ್ ನಡುವಿನ ದುರ್ಬಲವಾದ ಕದನ ವಿರಾಮ ಮತ್ತೊಮ್ಮೆ ಬಿಕ್ಕಟ್ಟಿನಲ್ಲಿತ್ತು. ಹಮಾಸ್ ಹಿಂದಿರುಗಿಸಿದ ಇಸ್ರಯೇಲ್ ಒತ್ತೆಯಾಳುಗಳ ಮೇಲೆ ನಡೆಸಿದ ಕ್ರೂರ ನಡವಳಿಕೆ ಎಂದು ವಿವರಿಸಿದ್ದನ್ನು, ಪ್ರತಿಭಟಿಸಲು ಇಸ್ರಯೇಲ್ ಶನಿವಾರ 600 ಪ್ಯಾಲಸ್ತೀನಿಯದ ಕೈದಿಗಳ ಬಿಡುಗಡೆಯನ್ನು ವಿಳಂಬಗೊಳಿಸಿತ್ತು.
ಪರಿಣಾಮವಾಗಿ, ಹಮಾಸ್ ಈ ವಿಳಂಬವನ್ನು ಒಪ್ಪಂದದ ಗಂಭೀರ ಉಲ್ಲಂಘನೆ ಎಂದು ಕರೆದಿದೆ.
ಮಂಗಳವಾರ ರಾತ್ರಿ ಹೇಳಿಕೆಯೊಂದರಲ್ಲಿ, ಹಮಾಸ್ ಗುಂಪಿನ ಗಾಜಾ ನಾಯಕ ಖಲೀಲ್ ಅಲ್-ಹಯ್ಯರವರ ನೇತೃತ್ವದ ನಿಯೋಗವು ಪ್ಯಾಲಸ್ತೀನಿಯದ ಕೈದಿಗಳ ವಿಳಂಬಿತ ಬಿಡುಗಡೆಯನ್ನು ಪರಿಹರಿಸುವ ಒಪ್ಪಂದಕ್ಕೆ ಬಂದ ನಂತರ, ಕೈರೋಗೆ ಪ್ರವಾಸವನ್ನು ಮುಗಿಸಿದೆ ಎಂದು ತಿಳಿಸಿದೆ.
ನಾಲ್ವರು ಇಸ್ರಯೇಲ್ ಒತ್ತೆಯಾಳುಗಳ ಶವಗಳಿಗೆ ಬದಲಾಗಿ ಬುಧವಾರ ಅಥವಾ ಗುರುವಾರ ತಡರಾತ್ರಿ "ಪ್ಯಾಲಸ್ತೀನಿಯದ ಮಹಿಳೆಯರು ಮತ್ತು ಮಕ್ಕಳಿಗೆ ಅನುಗುಣವಾದ" ವರನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅದರ ಎಲ್ಲಾ ಹಂತಗಳು ಮತ್ತು ಷರತ್ತುಗಳೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಹಮಾಸ್‌ನ ಬದ್ಧತೆಯನ್ನು ಹಯ್ಯಾರವರು ಒತ್ತಿ ಹೇಳಿದರು. ಅವರ ಈ ಹೇಳಿಕೆಗೆ ಪ್ರತಿಯಾಗಿ, ಇಸ್ರಯೇಲ್ ಸರ್ಕಾರವು ತಕ್ಷಣದ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಯುದ್ಧದ ಸಮಯದಲ್ಲಿ ಇಸ್ರಯೇಲ್ ಪಡೆಗಳಿಂದ ಬಂಧಿಸಲ್ಪಟ್ಟ 400ಕ್ಕೂ ಹೆಚ್ಚು ಗಾಜಾ ನಿವಾಸಿಗಳು ಮತ್ತು ಇಸ್ರಯೇಲ್ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 50 ಕೈದಿಗಳು ಸೇರಿದಂತೆ 620 ಪ್ಯಾಲಸ್ತೀನಿನ ಕೈದಿಗಳನ್ನು ಮೂಲತಃ ಕಳೆದ ವಾರ ಆರು ಜೀವಂತ ಮತ್ತು ನಾಲ್ವರು ಸತ್ತ ಇಸ್ರಯೇಲ್ ಒತ್ತೆಯಾಳುಗಳ ಮರಳುವಿಕೆಗಾಗಿ ವಿನಿಮಯ ಮಾಡಿಕೊಳ್ಳಲು ಉದ್ದೇಶಿಸಲಾಗಿತ್ತು.
ಕದನ ವಿರಾಮ ಒಪ್ಪಂದದ ಸ್ಥಿತಿ
ಕದನ ವಿರಾಮ ಒಪ್ಪಂದದ ಮೊದಲ ಹಂತವು ಶನಿವಾರ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮೊದಲು, 33 ಇಸ್ರಯೇಲ್ ಒತ್ತೆಯಾಳುಗಳನ್ನು ಗಾಜಾದ ಸುಮಾರು 1,900 ಪ್ಯಾಲಸ್ತೀನಿಯದ ಕೈದಿಗಳು ಮತ್ತು ಬಂಧಿತರಿಗೆ ವಿನಿಮಯ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಇಲ್ಲಿಯವರೆಗೆ, 25 ಜೀವಂತ ಮತ್ತು ನಾಲ್ವರು ಸತ್ತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ.
ಕದನ ವಿರಾಮ ಒಪ್ಪಂದದ ಭಾಗವಾಗಿ, ಇಸ್ರಯೇಲ್ ಪಡೆಗಳು ಗಾಜಾದ ಜನನಿಬಿಡ ಪ್ರದೇಶಗಳಿಂದ ಹಿಂದೆ ಸರಿದಿವೆ, ಸ್ಥಳಾಂತರಗೊಂಡ ಲಕ್ಷಾಂತರ ಪ್ಯಾಲಸ್ತೀನಿಯದವರು ಉತ್ತರದಲ್ಲಿ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗಿದೆ ಮತ್ತು ಪ್ರತಿದಿನ ನೂರಾರು ನೆರವು ಟ್ರಕ್‌ಗಳು ಗಾಜಾ ಗಡಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ.