ಇಂಡೋನೇಷ್ಯಾದ ವಿದ್ವಾಂಸರು ಮತ್ತು ಧಾರ್ಮಿಕ ಮುಖಂಡರು
ರೋಯಾನಿ - ಇಂಡೋನೇಷ್ಯಾ, ಲಿಕಾಸ್ ಸುದ್ಧಿ
ಜಕಾರ್ತಾದ ಆತ್ಮ ಜಯ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ಫ್ರಾನ್ಸ್ ಸೆಡಾ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮವು ಸೆಪ್ಟೆಂಬರ್ 3-6, 2024 ರಂದು ವಿಶ್ವಗುರು ಫ್ರಾನ್ಸಿಸ್ ರವರು ಇಂಡೋನೇಷ್ಯಾಕ್ಕೆ ನೀಡಿದ ಪ್ರೇಷಿತ ಭೇಟಿಯನ್ನು ಪ್ರತಿಬಿಂಬಿಸುತ್ತದೆ.
ಫೆಬ್ರವರಿ 25 ರಂದು ನಡೆದ ಸಾಲ್ವೆ ಪೆರೆಗ್ರಿನನ್ಸ್ ಸ್ಪೀ! ಎಂಬ ಶೀರ್ಷಿಕೆಯ ಚರ್ಚೆಯು ವಿಶ್ವಗುರುಗಳ ಭೇಟಿಗೆ ಸಂಬಂಧಿಸಿದಂತೆ 33 ಪ್ರಮುಖ ಇಂಡೋನೇಷ್ಯಾದ ಮುಸ್ಲಿಂ ವ್ಯಕ್ತಿಗಳ ದೃಷ್ಟಿಕೋನಗಳ ಮೇಲೆ ಕೇಂದ್ರೀಕರಿಸಿದೆ.
ಇದು ಆತ್ಮ ಜಯ ರವರ XIII ಲುಸ್ಟ್ರಮ್ ಆಚರಣೆಯ ಭಾಗವಾಗಿದ್ದು, ವಿಶ್ವಾಸ, ಸಹೋದರತ್ವ ಮತ್ತು ಸಹಾನುಭೂತಿಯ ವಿಷಯಗಳನ್ನು ಎತ್ತಿ ತೋರಿಸಿತು.
ಅಂತರಧರ್ಮೀಯ ಸಂಬಂಧಗಳನ್ನು ಬಲಪಡಿಸಲು ಕರೆ
ತಮ್ಮ ಭಾಷಣದ ಮುಖ್ಯ ವಿಷಯ, ಇಂಡೋನೇಷ್ಯಾದ ಧಾರ್ಮಿಕ ವ್ಯವಹಾರಗಳ ಸಚಿವ ಪ್ರೊ. ನಸರುದ್ದೀನ್ ರವರು, ಹೆಚ್ಚು ಸಂಕೀರ್ಣವಾಗುತ್ತಿರುವ ಜಾಗತಿಕ ಪರಿಸರದಲ್ಲಿ ಅಂತರಧರ್ಮೀಯ ಸಾಮರಸ್ಯವನ್ನು ಬೆಳೆಸುವ ತುರ್ತುಸ್ಥಿತಿಯನ್ನು ಒತ್ತಿ ಹೇಳಿದರು.
ಇಂದಿನ ನಮ್ಮ ಸವಾಲು ಅಂತರವನ್ನು ಹೆಚ್ಚಿಸುವ ಬದಲು ಅಂತರಧರ್ಮೀಯ ಸಂಬಂಧಗಳನ್ನು ಬಲಪಡಿಸುವ ಸ್ಥಳಗಳನ್ನು ಸೃಷ್ಟಿಸುವುದು. ನಾವು ವಿನ್ಯಾಸಗೊಳಿಸಿದ ಶಿಕ್ಷಣದ ಪಠ್ಯಕ್ರಮವು ಭವಿಷ್ಯದ ಪೀಳಿಗೆಯನ್ನು ಬಲವಾದ ಧಾರ್ಮಿಕ ತಿಳುವಳಿಕೆಯೊಂದಿಗೆ, ದ್ವೇಷದ ಬೋಧನೆಗಳಿಂದ ಮುಕ್ತವಾಗಿ ರೂಪಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ಅಂತರಧರ್ಮೀಯ ಸಂವಾದ ಉಪಕ್ರಮಗಳಿಗೆ ಪ್ರಶಂಸೆ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಣ ಸಚಿವಾಲಯದ ಪ್ರೊ. ಬಿಯಾಂಟೊರವರು, ಅಂತರಧರ್ಮೀಯ ಸಂವಾದವನ್ನು ಬೆಳೆಸುವಲ್ಲಿ ಸಂಘಟಕರ ಪ್ರಯತ್ನಗಳನ್ನು ಶ್ಲಾಘಿಸಿದರು.
"ಈ ಅಸಾಧಾರಣ ಕೃತಿಯನ್ನು ರಚಿಸಿದ್ದಕ್ಕಾಗಿ ಲೇಖಕರಿಗೆ ಅಭಿನಂದನೆಗಳು. ಈ ಪುಸ್ತಕದಲ್ಲಿನ ವಿಚಾರಗಳು ಅನೇಕರಿಗೆ ಸ್ಫೂರ್ತಿ ನೀಡಲಿ ಮತ್ತು ನಮ್ಮ ಸಹೋದರತ್ವದ ಭಾವನೆಯನ್ನು ಮತ್ತಷ್ಟು ಬಲಪಡಿಸಲಿ. ಈ ಸಂವಾದದ ಮೂಲಕ ಸ್ಥಾಪಿಸಲಾದ ಸಂಪರ್ಕಗಳು ಮುಂದುವರಿದು, ವೈವಿಧ್ಯತೆಯಲ್ಲಿ ಏಕತೆಯನ್ನು ಬಲಪಡಿಸುತ್ತವೆ ಎಂದು ನಾನು ಭಾವಿಸುತ್ತೇನೆ.
ಸಹೋದರತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧತೆ
ಇಂಡೋನೇಷಿಯದ ಧರ್ಮಾಧ್ಯಕ್ಷರುಗಳ ಸಮ್ಮೇಳನದ (KWI) ಅಧ್ಯಕ್ಷರಾದ ಧರ್ಮಾಧ್ಯಕ್ಷರಾದ ಆಂಟೋನಿಯಸ್ ಸುಬಿಯಾಂಟೊ ಬುಂಜಮಿನ್ ರವರು, OSC, ಈ ಕಾರ್ಯಕ್ರಮವನ್ನು ಸಹೋದರತ್ವವನ್ನು ಬಲಪಡಿಸಲು ಮತ್ತು ವಿಶ್ವಗುರುಗಳ ಸಹಾನುಭೂತಿ ಹಾಗೂ ಒಗ್ಗಟ್ಟಿನ ಸಂದೇಶವನ್ನು ಮುಂದುವರಿಸಲು ಒಂದು ನಿರ್ಣಾಯಕ ಕ್ಷಣ ಎಂದು ಬಣ್ಣಿಸಿದರು.
ಈ ಮನೋಭಾವವು ನಿರಂತರವಾಗಿ ಅಭಿವೃದ್ಧಿ ಹೊಂದುವುದನ್ನು ಮತ್ತು ಇಂಡೋನೇಷ್ಯಾದಲ್ಲಿ ಏಕತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸ್ಪಷ್ಟ ಪ್ರಯೋಜನಗಳನ್ನು ನೀಡುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.
ಫ್ರಾನ್ಸ್ ಸೆಡಾ ಫೌಂಡೇಶನ್‌ನ ವ್ಯವಸ್ಥಾಪಕ, ನಿರ್ದೇಶಕ ಸ್ಟೀಫನಸ್ ಗಿಂಟಿಂಗ್ ರವರು, ಪುಸ್ತಕದ ಚರ್ಚೆಯು ವಿಶ್ವಗುರುಗಳ ಭೇಟಿ ಮತ್ತು ಇಂಡೋನೇಷ್ಯಾದ ಸಮಾಜಕ್ಕೆ ಅದರ ವಿಶಾಲ ಪರಿಣಾಮಗಳ ಬಗ್ಗೆ ಸಾರ್ವಜನಿಕ ತಿಳುವಳಿಕೆಯನ್ನು ಆಳಗೊಳಿಸುತ್ತದೆ ಎಂದು ಆಶಿಸಿದರು.
ಈ ಕ್ಷಣವನ್ನು ಅನುಗ್ರಹದ ಸಮಯವೆಂದು ಸ್ವೀಕರಿಸಬೇಕು, ನಿಜವಾದ ಸಹೋದರತ್ವ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯವನ್ನು ಬೆಳೆಸಬೇಕು ಹಾಗೂ ಶಾಂತಿಯುತ ಇಂಡೋನೇಷ್ಯಾದ ದಾರ್ಶನಿಕತೆಯನ್ನು ಎತ್ತಿಹಿಡಿಯಬೇಕು ಎಂದು ಅವರು ಹೇಳಿದರು.