ಗಾಜಾ ವಿನಿಮಯದಲ್ಲಿ ಒತ್ತೆಯಾಳುಗಳ ಬಿಡುಗಡೆ
ನಾಥನ್ ಮಾರ್ಲಿ
2023ರಲ್ಲಿ ಹಮಾಸ್ ನಿಂದ ಅಪಹರಿಸಲ್ಪಟ್ಟಿದ್ದ ಮೂವರು ಇಸ್ರಯೇಲ್ ಒತ್ತೆಯಾಳುಗಳನ್ನು ಗಾಜಾದಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಬಿಡುಗಡೆಯು ನಡೆಯುತ್ತಿರುವ ಕದನ ವಿರಾಮ ಒಪ್ಪಂದದ ಭಾಗವಾಗಿದೆ. ಈ ಮೂವರು ಪುರುಷರು ಇಸ್ರಯೇಲ್‌ನಲ್ಲಿರುವ ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗಿದ್ದಾರೆ.
ಅವರುಗಳೆಂದರೆ ಓಫರ್ ಕಾಲ್ಡೆರಾನ್, ಯಾರ್ಡನ್ ಬಿಬಾಸ್ ಮತ್ತು ಕೀತ್ ಸೀಗೆಲ್ ರವರು ಎಂದು ಹೆಸರಿಸಲಾಗಿದೆ.
ಈ ಕಾರ್ಯಕ್ಕೆ ಪ್ರತಿಯಾಗಿ 183 ಪ್ಯಾಲೆಸ್ತೀನಿಯರ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ, ಇದು ಆಕ್ರಮಿತ ಪಶ್ಚಿಮ ದಂಡೆ ಮತ್ತು ರಮಲ್ಹಾದಲ್ಲಿ ಸಂತೋಷದ ದೃಶ್ಯಗಳನ್ನು ಹುಟ್ಟುಹಾಕಿದೆ.
ವೈದ್ಯಕೀಯ ಸ್ಥಳಾಂತರಗಳು
ಈ ಪ್ರಕ್ರಿಯೆಯ ಭಾಗವಾಗಿ, ಗಾಜಾದ ರಫಾ ಗಡಿ ದಾಟುವಿಕೆಯನ್ನು ಮತ್ತೆ ತೆರೆಯಲಾಗಿದೆ, ಕಳೆದ ವರ್ಷದಿಂದ ಮೊದಲ ವೈದ್ಯಕೀಯ ಸ್ಥಳಾಂತರಕ್ಕೆ ಅವಕಾಶ ನೀಡಲಾಗಿದೆ.
56 ಗಾಯಗೊಂಡಮತ್ತು ಅನಾರೋಗ್ಯ ಪೀಡಿತ ಮಕ್ಕಳು ಈಜಿಪ್ಟ್‌ಗೆ ಮೊದಲು ಬಂದವರು ಎಂದು ವರದಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗಾಜಾದ ಹೊರಗೆ ಪ್ರಸ್ತುತವಾಗಿ ಸುಮಾರು 15,000 ಜನರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳುತ್ತದೆ.
ಈ ತಿಂಗಳ ಆರಂಭದಲ್ಲಿ ಜಾರಿಗೆ ಬಂದ ಕದನ ವಿರಾಮ ಒಪ್ಪಂದವು 13 ಇಸ್ರಯೇಲ್ ಒತ್ತೆಯಾಳುಗಳು, ಐದು ಥಾಯ್ಲ್ಯಾಂಡ್ ಕಾರ್ಮಿಕರನ್ನು ಮತ್ತು ನೂರಾರು ಪ್ಯಾಲೆಸ್ತೀನಿನ ಕೈದಿಗಳನ್ನು ಬಿಡುಗಡೆ ಮಾಡಿತು.
ಸಂಬಂಧಿತ ಬೆಳೆವಣಿಗೆಗಳಲ್ಲಿ, ಈಜಿಪ್ಟ್, ಜೋರ್ಡಾನ್, ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ತೀನಿನ ವಿದೇಶಾಂಗ ಮಂತ್ರಿಗಳು, ನಂತರ ಕೈರೋದಲ್ಲಿ ಸಭೆ ಸೇರಲಿದ್ದಾರೆ.
ಗಾಜಾ ಗಡಿಯಿಂದ ಈಜಿಪ್ಟ್ ಮತ್ತು ಜೋರ್ಡಾನ್‌ಗೆ ಪ್ಯಾಲೆಸ್ತೀನರ ಚಲನೆಗೆ ಸಂಬಂಧಿಸಿದಂತೆ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಸಲಹೆಗಳು ಸೇರಿದಂತೆ ಗಾಜಾಗೆ ಸಂಬಂಧಿಸಿದ ಹಲವು ವಿಷಯಗಳನ್ನು ಈ ಸಭೆಯು ಚರ್ಚಿಸಲಿದೆ.