ಮೂವರು ಇಸ್ರಯೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ನಾಥನ್ ಮಾರ್ಲಿ
ಗಾಜಾದಲ್ಲಿ, ಹಮಾಸ್ ಮೂವರು ಇಸ್ರಯೇಲ್ ಒತ್ತೆಯಾಳುಗಳನ್ನು ರೆಡ್ ಕ್ರಾಸ್‌ಗೆ ಹಸ್ತಾಂತರಿಸಿತು. ಆ ಮೂವರು ವ್ಯಕ್ತಿಗಳು ಯಾರೆಂದೆರೆ, ಅಲೆಕ್ಸಾಂಡರ್ ಟ್ರೌಫನೋವ್, ಯೈರ್ ಹಾರ್ನ್ ಮತ್ತು ಸಗುಯಿ ಡೆಕೆಲ್-ಚೆನ್ ಎಂದು ಗುರುತಿಸಲಾಗಿದೆ, ಅವರನ್ನು ಅಕ್ಟೋಬರ್ 2023ರಲ್ಲಿ ಇಸ್ರಯೇಲ್ ಮೇಲಿನ ದಾಳಿಯ ಸಮಯದಲ್ಲಿ ಹಮಾಸ್ ಅಪಹರಿಸಿತ್ತು.
36 ವರ್ಷದ ಡೆಕೆಲ್-ಚೆನ್ ಮೂಲತಃ ಅಮೇರಿಕದ ಪ್ರಜೆ, 29 ವರ್ಷದ ಟ್ರೌಫನೋವ್ ಇಸ್ರಯೇಲ್ ಮತ್ತು ರಷ್ಯಾದ ಪ್ರಜೆ, ಮತ್ತು 46 ವರ್ಷದ ಹಾರ್ನ್ ಇಸ್ರಯೇಲ್ ಮತ್ತು ಅರ್ಜೆಂಟೀನಾದ ಪ್ರಜೆ. ಕದನ ವಿರಾಮ ಒಪ್ಪಂದದ ಭಾಗವಾಗಿ ಬಿಡುಗಡೆ ಮಾಡಲಾಯಿತು.
ಇದಕ್ಕೆ ಪ್ರತಿಯಾಗಿ, ಇಸ್ರಯೇಲ್ 369 ಪ್ಯಾಲೆಸ್ತೀನಿಯದ ಕೈದಿಗಳನ್ನು ಬಿಡುಗಡೆ ಮಾಡುತ್ತಿದೆ - ಕೆಲವರು ಪಶ್ಚಿಮ ದಂಡೆಗೆ ಬಂದಿದ್ದಾರೆ ಮತ್ತು ಇನ್ನಿತರರು, ಕೆಲವು ದಿನಗಳ ನಂತರ ಗಾಜಾದಲ್ಲಿ ಹೆಚ್ಚಿನವರು ಬಿಡುಗಡೆಯಾಗುವ ನಿರೀಕ್ಷೆಯಿದೆ.
ಕದನ ವಿರಾಮ ಒಪ್ಪಂದ ಮುಂದುವರೆದಿದೆ
ಜನವರಿ 19 ರಂದು ಉಭಯ ಪಕ್ಷಗಳ ನಡುವಿನ ಕದನ ವಿರಾಮ ಜಾರಿಗೆ ಬಂದ ನಂತರ, ಇದು ಆರನೇ ಸುತ್ತಿನ ಕೈದಿಗಳ ವಿನಿಮಯವಾಗಿದೆ. ಇಸ್ರಯೇಲ್, ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ, ಒತ್ತೆಯಾಳುಗಳ ಬಿಡುಗಡೆಯನ್ನು ಸ್ಥಗಿತಗೊಳಿಸುವುದಾಗಿ ಹಮಾಸ್ ಬೆದರಿಕೆ ಹಾಕಿದಾಗ, ಸುಮಾರು ನಾಲ್ಕು ವಾರಗಳ ಕಾಲ ನಡೆದಿರುವ ಕದನ ವಿರಾಮದ ಮುಂದುವರಿಕೆ ಅಪಾಯದಲ್ಲಿತ್ತು.
ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಇಸ್ರಯೇಲ್ ಮತ್ತೆ ಹೋರಾಟ ಆರಂಭಿಸುವುದಾಗಿ ಹೇಳಿತು
ಎರಡನೇ ಹಂತದ ಕದನ ವಿರಾಮವನ್ನು ಜಾರಿಗೆ ತರಲು ಪ್ರಸ್ತುತ ಮಾತುಕತೆಗಳು ನಡೆಯುತ್ತಿವೆ. ಈ ಹಿಂದೆ, ಹಮಾಸ್ 21 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಮತ್ತು ಇಸ್ರಯೇಲ್ 730ಕ್ಕೂ ಹೆಚ್ಚು ಪ್ಯಾಲೆಸ್ತೀನಿಯದ ಕೈದಿಗಳನ್ನು ಬಿಡುಗಡೆ ಮಾಡಿದೆ.
ಇಸ್ರಯೇಲ್ ಸೇನೆಯು ಆಕ್ರಮಿತ ಪಶ್ಚಿಮ ದಂಡೆಯ ಉತ್ತರ ಭಾಗದಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಿದೆ.