ಹೈಟಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸಾವು ತೀವ್ರ ಏರಿಕೆಯಲ್ಲಿದೆ
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ವಿಶ್ವಸಂಸ್ಥೆಯ ಮಕ್ಕಳ ನಿಧಿ, ಯುನಿಸೆಫ್ ಮತ್ತು ಅಂತರರಾಷ್ಟ್ರೀಯ ದತ್ತಿ ಸಂಸ್ಥೆ ʻಸೇವ್ ದಿ ಚಿಲ್ಡ್ರನ್ʼ ಇತ್ತೀಚಿನ ಹೇಳಿಕೆಗಳ ಪ್ರಕಾರ, ಹೈಟಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸಾವು ಮತ್ತು ಗಾಯಗಳಲ್ಲಿ ನಾಟಕೀಯ ಏರಿಕೆ ಕಂಡುಬಂದಿದೆ.
ಕಳೆದ ವಾರ, ವಿಶ್ವಸಂಸ್ಥೆಯ ಮಕ್ಕಳ ನಿಧಿಯು ಹೈಟಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ, 10 ಪಟ್ಟು ಹೆಚ್ಚಳವನ್ನು ಖಂಡಿಸಿತು, ಇದು 2023 ರಿಂದ ಕಳೆದ ವರ್ಷದವರೆಗೆ, "ಸಶಸ್ತ್ರ ಗುಂಪುಗಳು ಮಕ್ಕಳ ಮೇಲೆ ಊಹಿಸಲಾಗದ ಭಯಾನಕತೆಯನ್ನು ಉಂಟುಮಾಡುತ್ತಿವೆ" ಎಂಬುದು ದಾಖಲಾಗಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಶೇ. 1,000 ರಷ್ಟು ಹೆಚ್ಚಳ
ಯುನಿಸೆಫ್ ಜಾಗತಿಕ ವಕ್ತಾರ ಜೇಮ್ಸ್ ಎಲ್ಡರ್ ರವರು, "ಹೈಟಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಶೇ. 1,000 ರಷ್ಟು ಏರಿಕೆಯಾಗಿದ್ದು, ಅವರ ದೇಹಗಳನ್ನು ಯುದ್ಧಭೂಮಿಯನ್ನಾಗಿ ಪರಿವರ್ತಿಸಿದೆ" ಎಂದು ಖಂಡಿಸಿದ್ದಾರೆ.
ಎಲ್ಡರ್ ರವರು ರಾಷ್ಟ್ರದ ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ಗೆ ಭೇಟಿ ನೀಡಿದ್ದರು, ಅಲ್ಲಿ ಸಶಸ್ತ್ರ ಹಿಂಸಾಚಾರವು ಸಮುದಾಯಗಳನ್ನು ಆವರಿಸುತ್ತಿದೆ, ವಿಶೇಷವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
ಪೋರ್ಟ್-ಔ-ಪ್ರಿನ್ಸ್‌ನ ಶೇಕಡ 85 ರಷ್ಟು ಭಾಗವನ್ನು ಸಶಸ್ತ್ರ ಗುಂಪುಗಳು ಈಗ ನಿಯಂತ್ರಿಸುತ್ತಿವೆ ಮತ್ತು ಇದು "ರಾಜಧಾನಿಯಲ್ಲಿ ಅಭದ್ರತೆಯ ಬೆರಗುಗೊಳಿಸುವ ಪ್ರಕರಣವನ್ನು" ಸೃಷ್ಟಿಸುತ್ತಿದೆ ಎಂದು ಯುನಿಸೆಫ್ ವಕ್ತಾರರು ಒತ್ತಿ ಹೇಳಿದರು.
ಅಗತ್ಯ ಸೇವೆಗಳ ಕುಸಿತ
ಕಳೆದ ವರ್ಷವಷ್ಟೇ, ಸಶಸ್ತ್ರ ಗುಂಪುಗಳಿಗೆ ಮಕ್ಕಳ ನೇಮಕಾತಿ ಶೇಕಡಾ 70 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು, "ಇದೀಗ, ಎಲ್ಲಾ ಸಶಸ್ತ್ರ ಗುಂಪುಗಳ ಸದಸ್ಯರಲ್ಲಿ ಅರ್ಧದಷ್ಟು ಜನರು ಮಕ್ಕಳಾಗಿದ್ದಾರೆ - ಕೆಲವರು ಎಂಟು ವರ್ಷ ವಯಸ್ಸಿನವರು" ಎಂದು ಹೇಳಿದರು.
"ಹಲವರನ್ನು ಬಲವಂತವಾಗಿ ಕರೆದೊಯ್ಯಲಾಗುತ್ತದೆ. ಇನ್ನು ಕೆಲವರನ್ನು ಅವರ ತೀವ್ರ ಬಡತನವು ಇಂತಹ ಕೆಟ್ಟ ಕೆಲಸಗಳಿಗೆ ಭಾಗಿಯಾಗುವಂತೆ ಮಾಡುತ್ತಿದೆ. ಇದು ಮಾರಕ ಚಕ್ರ: ಮಕ್ಕಳನ್ನು ತಮ್ಮದೇ ಆದ ದುಃಖಕ್ಕೆ ಕಾರಣವಾಗುವ ಗುಂಪುಗಳಿಗೆ ಸೇರಿಸಿಕೊಳ್ಳಲಾಗುತ್ತದೆ." ಎಂದು ಅವರು ವಿವರಿಸಿದರು.
ಇದಲ್ಲದೆ, 1.2 ಮಿಲಿಯನ್ ಮಕ್ಕಳು ನಿರಂತರವಾಗಿ ಸಶಸ್ತ್ರ ಹಿಂಸಾಚಾರದ ಬೆದರಿಕೆಯಲ್ಲಿ ಬದುಕುತ್ತಿದ್ದಾರೆ ಎಂದು ಯುನಿಸೆಫ್ ಪ್ರತಿನಿಧಿಯು ಗಮನಿಸಿದ್ದಾರೆ.
"ಅಗತ್ಯ ಸೇವೆಗಳು ಕುಸಿದಿವೆ," ಎಂದು ಎಲ್ಡರ್ ರವರು ಗಮನಿಸಿದರು. ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಹೈಟಿಯ ಅರ್ಧಕ್ಕಿಂತ ಹೆಚ್ಚು ಆರೋಗ್ಯ ಸೌಲಭ್ಯಗಳು ತುರ್ತು ಸಂದರ್ಭಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲು ಉಪಕರಣಗಳು ಮತ್ತು ಔಷಧಿಗಳ ಕೊರತೆಯನ್ನು ಹೊಂದಿವೆ.
ಮಕ್ಕಳ ಸಾವು ಮತ್ತು ಗಾಯಗಳಲ್ಲಿ ಹೆಚ್ಚಳ
ಸೋಮವಾರ, ಸೇವ್ ದಿ ಚಿಲ್ಡ್ರನ್ ಕೂಡ 2024 ರಲ್ಲಿ ಮಕ್ಕಳ ಸಾವು ಮತ್ತು ಗಾಯಗಳಲ್ಲಿ ಸಂಪೂರ್ಣ ಹೆಚ್ಚಳದ ಬಗ್ಗೆ ಮಾತನಾಡಿದೆ.
ಕಳೆದ ವರ್ಷದಲ್ಲಿ, ಪ್ರತಿ ತಿಂಗಳು ಸರಾಸರಿ 24 ಮಕ್ಕಳು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಸಂಸ್ಥೆ ಹೇಳಿದೆ, ಇದು 2024ನ್ನು ಮೂರು ವರ್ಷಗಳ ಹಿಂದೆ ಹಿಂಸಾಚಾರ ಉಲ್ಬಣಗೊಂಡ ನಂತರ ದೇಶದಲ್ಲಿ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಅತ್ಯಂತ “ಮಾರಕ ವರ್ಷ"ವಾಗಿ ಮಾಡಿದೆ.
ವಿಶ್ವಸಂಸ್ಥೆಯ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ಕಳೆದ ವರ್ಷ ಹೈಟಿಯಲ್ಲಿ ಸಶಸ್ತ್ರ ಗುಂಪುಗಳು 289 ಮಕ್ಕಳನ್ನು ಕೊಂದವು ಅಥವಾ ಗಾಯಗೊಳಿಸಿದವು, ಇದು 2023ರಲ್ಲಿ 172ಕ್ಕೆ ಹೋಲಿಸಿದರೆ 68% ರಷ್ಟು ಹೆಚ್ಚಾಗಿದೆ ಎಂದು ಅದು ಗಮನಿಸಿದೆ. ಆದಾಗ್ಯೂ, ಸಂತ್ರಸ್ತರಾದ ಮಕ್ಕಳ ನಿಜವಾದ ಸಂಖ್ಯೆ ಬಹುಶಃ ಹೆಚ್ಚು ಎಂದು ಅವರು ಗಮನಸೆಳೆದಿದ್ದಾರೆ.
2024 ರ ಕೊನೆಯ ಮೂರು ತಿಂಗಳಲ್ಲಿ ಕೊಲ್ಲಲ್ಪಟ್ಟ ಮೂರು ಮಕ್ಕಳಲ್ಲಿ ಒಬ್ಬನನ್ನು ಹೊರತುಪಡಿಸಿ, ಇನ್ನೂ ಮಿಕ್ಕ ಮಕ್ಕಳು ಸಶಸ್ತ್ರ ಗುಂಪುಗಳಿಗೆ ಸೇರಿದ ಸದಸ್ಯರಾಗಿದ್ದಾರೆ ಎಂದು ಸೇವ್ ದಿ ಚಿಲ್ಡ್ರನ್ ಎತ್ತಿ ತೋರಿಸಿದೆ.