MAP

PALESTINIAN-ISRAEL-CONFLICT PALESTINIAN-ISRAEL-CONFLICT  (AFP or licensors)

ಕತಾರ್‌ನಲ್ಲಿ ಗಾಜಾ ಕುರಿತು ಮತ್ತಷ್ಟು ಮಾತುಕತೆಗಳು ನಡೆಯುತ್ತಿವೆ

ಮುಂದುವರೆಯುತ್ತಿರುವ ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರಯೇಲ್ ಪಡೆಗಳು ಗಾಜಾದ ಪ್ರಮುಖ ಹೆದ್ದಾರಿಯಾದ "ನೆಟ್ಜಾರಿಮ್ ಕಾರಿಡಾರ್" ನಿಂದ ಹಿಂದೆ ಸರಿದವು.

ನಾಥನ್ ಮಾರ್ಲಿ

ಇಸ್ರಯೇಲ್ ಪಡೆಗಳು ಗಾಜಾದ ನೆಟ್‌ಜಾರಿಮ್ ಕಾರಿಡಾರ್‌ನಿಂದ ತಮ್ಮ ವಾಪಸಾತಿಯನ್ನು ಪೂರ್ಣಗೊಳಿಸಿವೆ.

ಈ ಕ್ರಮವು - 'ಮೊದಲ ಹಂತದ' ಪ್ರಮುಖ ಷರತ್ತುಗಳಲ್ಲಿ ಒಂದಾಗಿದೆ, ಹಮಾಸ್‌ನೊಂದಿಗಿನ ಒತ್ತೆಯಾಳು ಮತ್ತು ಕದನ ವಿರಾಮ ಒಪ್ಪಂದದ ಮತ್ತೊಂದು ಷರತ್ತನ್ನು ಪೂರೈಸುತ್ತದೆ.

ಸಂಧಾನಕಾರರು ಹೆಚ್ಚಿನ ಚರ್ಚೆಗಾಗಿ ಕತಾರ್‌ಗೆ ತೆರಳುತ್ತಿದ್ದಾರೆ. ʻಎರಡನೇ ಹಂತ'ದ ಬಗ್ಗೆ ಚರ್ಚೆ ನಡೆಸುವ ಮೊದಲು ಒಪ್ಪಂದದ, ʻಮೊದಲ ಹಂತ'ದ ಬಗ್ಗೆ ಚರ್ಚಿಸಲು ಇನ್ನೂ ತಾಂತ್ರಿಕ ಸಮಸ್ಯೆಗಳಿವೆ ಎಂದು ಇಸ್ರಯೇಲ್ ಹೇಳುತ್ತದೆ.

ಹಮಾಸ್ ಬಿಡುಗಡೆ ಮಾಡಿದ ಒತ್ತೆಯಾಳುಗಳು ದೀರ್ಘಕಾಲ ಸೆರೆಯಲ್ಲಿದ್ದ ನಂತರ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಇಸ್ರಯೇಲ್ ಮಾಧ್ಯಮಗಳು ವರದಿ ಮಾಡುತ್ತಿವೆ.

491 ದಿನಗಳ ಸೆರೆವಾಸದಿಂದ ಹಮಾಸ್ ಶನಿವಾರ ಓಹದ್ ಬೆನ್ ಅಮೀನ್, ಎಲಿ ಶರಾಬ್ ಮತ್ತು ಓರ್ ಲೆವಿರವರನ್ನು ಬಿಡುಗಡೆ ಮಾಡಿತು.

ಆರೋಗ್ಯ ಅಧಿಕಾರಿಗಳ ಪ್ರಕಾರ, ಪುರುಷರು ಅಪೌಷ್ಟಿಕತೆ, ಸ್ನಾಯು ಕ್ಷೀಣತೆ, ಹೃದಯ ದೋಷಗಳು, ದೀರ್ಘಕಾಲದ ಉರಿಯೂತ ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಈಜಿಪ್ಟ್ ತುರ್ತು ಶೃಂಗಸಭೆಯನ್ನು ಆಯೋಜಿಸಲಿದೆ
ಇತರ ಬೆಳವಣಿಗೆಗಳಲ್ಲಿ, ಫೆಬ್ರವರಿಯ ಕೊನೆಯ ವಾರದಲ್ಲಿ ಈಜಿಪ್ಟ್ ಪ್ಯಾಲೆಸ್ತೀನಿಯದ ಪರಿಸ್ಥಿತಿಯ ಕುರಿತು ತುರ್ತು ಅರಬ್ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಈಜಿಪ್ಟ್ ವಿದೇಶಾಂಗ ಸಚಿವಾಲಯ ಭಾನುವಾರ ಪ್ರಕಟಿಸಿದೆ.

ಈಜಿಪ್ಟ್ ಹಲವಾರು ಅರಬ್ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿದ ನಂತರ ಶೃಂಗಸಭೆಗೆ ಒಪ್ಪಿಗೆ ನೀಡಲಾಗಿದೆ ಎಂದು ಈಜಿಪ್ಟ್ ಹೇಳಿದೆ.

"ಪ್ಯಾಲಸ್ತೀನಿಯದ ಸಮಸ್ಯೆಯ, ಇತ್ತೀಚಿನ ಗಂಭೀರ ಬೆಳವಣಿಗೆಗಳ" ಬಗ್ಗೆ ಈ ಸಭೆ ಚರ್ಚಿಸಲಿದೆ ಎಂದು ಈಜಿಪ್ಟ್ ಹೇಳಿದೆ.
 

09 ಫೆಬ್ರವರಿ 2025, 15:13