MAP

Proceedings against Bolsonaro for coup d' Proceedings against Bolsonaro for coup d'  (ANSA)

ಬ್ರೆಜಿಲ್‌ನ ಮಾಜಿ ಅಧ್ಯಕ್ಷರ ವಿರುದ್ಧ ದಂಗೆಗೆ ಯತ್ನಿಸಿದ ಆರೋಪ

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊರವರ ವಿರುದ್ಧ 2022ರ ಮರುಚುನಾವಣೆಯ ಸೋಲನ್ನು ಬದಲಾಯಿಸಲು ಮತ್ತು ಪರಿವರ್ತಿಸಲು, ದಂಗೆಗೆ ಯತ್ನಿಸಿದ ಆರೋಪ ಹೊರಿಸಲಾಗಿದೆ.

ಜೇಮ್ಸ್ ಬ್ಲಿಯರ್ಸ್

272 ಪುಟಗಳ ವರದಿಯಲ್ಲಿ, ಬ್ರೆಜಿಲ್‌ನ ಪ್ರಧಾನ ಅಟಾರ್ನಿ ಪಾಲೊ ಗೊನೆಟ್ ರವರು, ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ಮಾಜಿ ಸರ್ಕಾರಿ ಮಂತ್ರಿಗಳು ಸೇರಿದಂತೆ ಇತರ ಮೂವತ್ಮೂರು ಜನರ ವಿರುದ್ಧ ದೇಶದ ಸುಪ್ರೀಂ ಕೋರ್ಟ್‌ನಲ್ಲಿ ಆರೋಪಗಳನ್ನು ದಾಖಲಿಸಿದ್ದಾರೆ ಎಂದು ದೃಢಪಡಿಸಿದ್ದಾರೆ.

ಅದು ಅವರನ್ನು ಮತ್ತು ಅವರ ಮೇಲೆ "ಪ್ರಜಾಪ್ರಭುತ್ವ ರಾಜ್ಯದ ಹಿಂಸಾತ್ಮಕ ಉರುಳಿಸುವಿಕೆಯನ್ನು" ಯೋಜಿಸುತ್ತಿದೆ ಎಂದು ಆರೋಪಿಸುತ್ತದೆ.

ಆರೋಪಿಗಳಾಗಿರುವ ಪ್ರಮುಖ ಅಧಿಕಾರಿಗಳೆಂದರೆ: ಮಾಜಿ ರಕ್ಷಣಾ ಸಚಿವ ವಾಲ್ಟರ್ ಬ್ರಾಗಾ ನೆಟ್ಟೊ; ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಗಸ್ಟೊ ಹೆಲಾನೊ; ಮತ್ತು ಮಾಜಿ ನ್ಯಾಯ ಸಚಿವ ಆಂಡರ್ಸನ್ ಟೊರೆಸ್.

ಬೋಲ್ಸನಾರೊರವರು 2019 ಮತ್ತು 2022ರ ನಡುವಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಈ ಇತ್ತೀಚಿನ ಬೆಳವಣಿಗೆಗಳು ಬ್ರೆಜಿಲ್‌ನ ಫೆಡರಲ್ ಪೊಲೀಸರ ಎರಡು ವರ್ಷಗಳ ಸಮಗ್ರ ತನಿಖೆಯ ಫಲಿತಾಂಶವಾಗಿದೆ. ಜನವರಿ 1, 2023 ರಂದು ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾರವರ ಅಧ್ಯಕ್ಷೀಯ ಅಧಿಕಾರ ಸ್ವೀಕಾರದ ನಂತರದ ವಾರದಲ್ಲಿ ರಾಜಧಾನಿ ಬ್ರೆಜಿಲ್‌ನಲ್ಲಿ ವ್ಯಾಪಕ ಗಲಭೆಯಿಂದ ಇದು ಉಂಟಾಗುತ್ತಿದೆ. ಗಲಭೆಕೋರರು ಅಧ್ಯಕ್ಷೀಯ ಅರಮನೆ, ಸಮ್ಮೇಳನಕ್ಕೆ ಮತ್ತು ಸುಪ್ರೀಂ ಕೋರ್ಟ್‌ಗೆ ನುಗ್ಗಿದರು.

ಬೋಲ್ಸನಾರೊರವರು ಮತ್ತು ಇತರ ಆರೋಪಿಗಳು ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ, ಬೋಲ್ಸನಾರೊರವರು ಇದನ್ನು ʻರಾಜಕೀಯ ಬೇಟೆʼ ಅಥವಾ ರಾಜಕಾರಣಿಗಳ ಕುತಂತ್ರ ಎಂದು ಹೇಳುತ್ತಾರೆ.

ಬ್ರೆಜಿಲ್‌ನ ಸುಪ್ರೀಂ ಕೋರ್ಟ್ ಈಗ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಪುರಾವೆಗಳು ಮತ್ತು ಸಮರ್ಥನೀಯ ಆಧಾರಗಳಿವೆಯೇ ಎಂದು ನಿರ್ಧರಿಸಬೇಕು.

20 ಫೆಬ್ರವರಿ 2025, 12:01