MAP

ECUADOR-ELECTION-VOTE ECUADOR-ELECTION-VOTE  (AFP or licensors)

ಈಕ್ವೆಡಾರ್‌ನಲ್ಲಿ ಭಾನುವಾರ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ

ಈಕ್ವೆಡಾರ್ ಜನರು, ಭಾನುವಾರ ಅಧ್ಯಕ್ಷರು ಮತ್ತು ರಾಷ್ಟ್ರೀಯ ಸಂಸತ್ತನ್ನು ಆಯ್ಕೆ ಮಾಡಲು ಮತದಾನಕ್ಕೆ ಹೋಗುತ್ತಾರೆ, ಮೊದಲ ಸುತ್ತಿನಲ್ಲಿ ಸಂಪೂರ್ಣ ವಿಜೇತರನ್ನು ಕಾಣಲು ಯಶಸ್ವಿಯಾಗದಿದ್ದಲ್ಲಿ ಏಪ್ರಿಲ್ 20 ರಂದು ಎರಡನೇ ಚುನಾವಣೆ ನಡೆಯಲಿದೆ.

ಜೇಮ್ಸ್ ಬ್ಲಿಯರ್ಸ್

ಮೂವತ್ತೈದನೇ ವಯಸ್ಸಿನಲ್ಲಿ, ಡೇನಿಯಲ್ ನೊಬೊವಾರವರು ಈಕ್ವೆಡಾರ್‌ನಲ್ಲಿ ಆಯ್ಕೆಯಾದ ಅತ್ಯಂತ ಕಿರಿಯ ಅಧ್ಯಕ್ಷರಾದರು, ಅವರ ಪೂರ್ವಾಧಿಕಾರಿ ಗಿಲ್ಲೆರ್ಮೊ ಲಾಸ್ಸೊರವರು ರಾಷ್ಟ್ರೀಯ ಸಂಸತ್ತನ್ನು ವಿಸರ್ಜಿಸಿ ಸ್ನ್ಯಾಪ್ ಚುನಾವಣೆಯನ್ನು ಕರೆದ ನಂತರ, ನೊಬೊವಾದ ನ್ಯಾಷನಲ್ ಡೆಮಾಕ್ರಟಿಕ್ ಆಕ್ಷನ್ ಪಾರ್ಟಿಯ ನೊಬೊವಾ, ಸಿಟಿಜನ್ ರೆವಲ್ಯೂಷನ್ ಮೂವ್‌ಮೆಂಟ್‌ನ ಲೂಯಿಸಾ ಗೊನ್ಜಾಲೆಜ್ ರವರ ವಿರುದ್ಧ ಎರಡನೇ ಸುತ್ತಿನ ರನ್ಆಫ್ ನ್ನು ಗೆದ್ದರು. ಅವರು ಮಾಜಿ ಅಧ್ಯಕ್ಷರಾದ ರಾಫೆಲ್ ಕೊರಿಯಾರವರ ಆಶ್ರಯದಾತರು.

ಅವರ ಉತ್ತರಾಧಿಕಾರಿಯಾಗಿರುವ ನೊಬೊವಾ ಹದಿನೆಂಟು ತಿಂಗಳು ಆಳ್ವಿಕೆ ನಡೆಸಿದ್ದಾರೆ. ಈ ಬಾರಿ ಯಾರು ಗೆದ್ದರೂ ಅವರಿಗೆ ದೇಶವನ್ನು ಆಳಲು ನಾಲ್ಕು ವರ್ಷಗಳ ಅವಧಿ ಇರುತ್ತದೆ.

ಮತದಾರರು, ಹೆಚ್ಚುತ್ತಿರುವ ಹಣದುಬ್ಬರ, ವಿದ್ಯುತ್ ಕಡಿತದಿಂದ ಅತೃಪ್ತರಾಗಿದ್ದಾರೆ; ಅವರು ಉತ್ತಮ ಉದ್ಯೋಗಾವಕಾಶಗಳನ್ನು ಹುಡುಕುತ್ತಿದ್ದಾರೆ ಮತ್ತು ಹೆಚ್ಚುತ್ತಿರುವ ಮಾದಕವಸ್ತು ಸಂಬಂಧಿತ ಅಪರಾಧಗಳಿಂದ ಆತಂಕಗೊಂಡಿದ್ದಾರೆ.

ಜನವರಿ 2024 ರಲ್ಲಿ ನೊಬೊವಾ ತುರ್ತು ಪರಿಸ್ಥಿತಿ ಘೋಷಿಸಿದರು. ಮೂರು ತಿಂಗಳ ನಂತರ, ಈಕ್ವೆಡಾರ್ ಪಡೆಗಳು ಮತ್ತು ಪೊಲೀಸರು ವಿಯೆನ್ನಾ ಸಮಾವೇಶವನ್ನು ಉಲ್ಲಂಘಿಸಿ ಮಾಜಿ ಉಪಾಧ್ಯಕ್ಷ ಜಾರ್ಜ್ ಗ್ಲಾಸ್ ರವರನ್ನು ಬಂಧಿಸಲು ಮೆಕ್ಸಿಕನ್ ರಾಯಭಾರ ಕಚೇರಿಗೆ ನುಗ್ಗಿದರು. ಮೆಕ್ಸಿಕೋ ತಕ್ಷಣವೇ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು.

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಪೂರ್ಣ ವಿಜೇತರು ಶೇಕಡಾ ಐವತ್ತು ಮತಗಳನ್ನು ಅಥವಾ ಕನಿಷ್ಠ ಶೇಕಡಾ ನಲವತ್ತು ಮತಗಳನ್ನು ಗಳಿಸಬೇಕಾಗುತ್ತದೆ, ಅಂದರೆ ಹತ್ತು ಪ್ರತಿಶತ ಮುನ್ನಡೆ ಸಾಧಿಸಬೇಕಾಗುತ್ತದೆ. ಕಳೆದ ಬಾರಿಯಂತೆ ಎರಡನೇ ಸುತ್ತಿನ ಮರು ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚು ಇದೆ.

2023ರ ಹಿಂದಿನ ಅಧ್ಯಕ್ಷೀಯ ಚುನಾವಣೆಗೆ ಮುನ್ನ, ಭ್ರಷ್ಟಾಚಾರ ವಿರೋಧಿ ಅಭ್ಯರ್ಥಿ ಫರ್ನಾಂಡೊ ವಿಲ್ಲಾವಿಸೆನ್ಸಿಯೊರವರನ್ನು ಹತ್ಯೆ ಮಾಡಲಾಯಿತು. ಈ ಚುನಾವಣೆ ಶಾಂತಿಯುತ ಮತ್ತು ಸುವ್ಯವಸ್ಥಿತವಾಗಿರುತ್ತದೆ ಎಂದು ಆಶಿಸಲಾಗಿದೆ.

08 ಫೆಬ್ರವರಿ 2025, 14:57