MAP

Displaced Congolese people prepare to leave camp as M23 rebels order evacuations near Goma Displaced Congolese people prepare to leave camp as M23 rebels order evacuations near Goma 

ಡಿಆರ್‌ಸಿನ ಹೋರಾಟವು ಕದನ ವಿರಾಮಕ್ಕೆ ಅಂತರರಾಷ್ಟ್ರೀಯ ಕರೆಗಳನ್ನು ಪ್ರೇರೇಪಿಸುತ್ತದೆ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಮಾರಕ ಹೋರಾಟದ ಮಧ್ಯೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿರುವುದಾಗಿ ಯುರೋಪಿನ ಒಕ್ಕೂಟ ಹೇಳಿದೆ. ಪೂರ್ವದಲ್ಲಿ ದೇಶದ ಎರಡನೇ ಅತಿದೊಡ್ಡ ನಗರವಾದ ಬುಕಾವು ನಿವಾಸಿಗಳು ಶನಿವಾರ ಸಾವಿರಾರು ಸಂಖ್ಯೆಯಲ್ಲಿ ರುವಾಂಡಾ ಬೆಂಬಲಿತ M23 ಬಂಡುಕೋರರ ಮುನ್ನಡೆಯಿಂದ ಅಥವಾ ಅವರ ಧಾಳಿಯಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.

ಲಿಂಡಾ ಬೋರ್ಡೋನಿ

ಶನಿವಾರ ಬುಕಾವುವಿನಾದ್ಯಂತ ಭೀತಿ ಆವರಿಸಿತು. ರುವಾಂಡಾ ಬೆಂಬಲಿತ ಬಂಡುಕೋರರ ಮುನ್ನಡೆಯಿಂದ ತಪ್ಪಿಸಿಕೊಳ್ಳಲು ನಿವಾಸಿಗಳು ಪರದಾಡಿದರು. ಜನವರಿ 26 ರಿಂದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಮಿಲಿಟಿಯಾ ನಡೆಸುತ್ತಿರುವ ಪ್ರಯತ್ನದ ಉದ್ದಕ್ಕೂ ಭುಗಿಲೆದ್ದಿರುವ ಅವ್ಯವಸ್ಥೆ ಮತ್ತು ಲೂಟಿಗೆ ಅವರು ಸಿದ್ಧರಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಬಂಡುಕೋರರು ಮತ್ತು ಡಿಆರ್‌ಸಿ ಸರ್ಕಾರಿ ಪಡೆಗಳ ನಡುವಿನ ಘರ್ಷಣೆಯಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 350,000 ಜನರು ಸ್ಥಳಾಂತರಗೊಂಡಿದ್ದಾರೆ.

ಬಂಡುಕೋರರ ಹಿಡಿತದಲ್ಲಿರುವ ಗೋಮಾದಿಂದ ಸುಮಾರು 100 ಕಿಲೋಮೀಟರ್ ದಕ್ಷಿಣದಲ್ಲಿರುವ ಸುಮಾರು 1.3 ಮಿಲಿಯನ್ ಜನರಿರುವ ಬುಕಾವು ನಗರದಲ್ಲಿ, ಪಲಾಯನ ಮಾಡಲು ಸಾಧ್ಯವಾಗದವರು ತಮ್ಮ ಮನೆಗಳಲ್ಲಿ ಕಾಯುತ್ತಿದ್ದಾರೆ, ಕಾಂಗೋಲೀಸ್ ಸೈನಿಕರು ತಮ್ಮ ಹುದ್ದೆಗಳನ್ನು ತ್ಯಜಿಸಿದ್ದರಿಂದ ಉಂಟಾದ ನಿರ್ವಾತದಿಂದ ಆಘಾತಕ್ಕೊಳಗಾಗಿದ್ದಾರೆ.

M23 ಬಂಡುಕೋರರಿಗೆ ನೆರೆಯ ರುವಾಂಡಾದ ಸುಮಾರು 4,000 ಸೈನಿಕರ ಬೆಂಬಲವಿದೆ. ಕಾಂಗೋದ ಖನಿಜ-ಸಮೃದ್ಧ ಪೂರ್ವದ ನಿಯಂತ್ರಣಕ್ಕಾಗಿ ಸ್ಪರ್ಧಿಸುತ್ತಿರುವ 100ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳಲ್ಲಿ ಅವರು ಅತ್ಯಂತ ಪ್ರಮುಖರು.

M23 ಪಡೆಗಳ ಈ ಇತ್ತೀಚಿನ ಆಕ್ರಮಣವು ಬಂಡುಕೋರರು ಹಿಂದೆ ವಶಪಡಿಸಿಕೊಂಡಿದ್ದಕ್ಕಿಂತ ಇನ್ನೂ ಹೆಚ್ಚಿನ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು ಇದು ಕಿನ್ಶಾಸಾದ ಕೇಂದ್ರ ಸರ್ಕಾರಕ್ಕೆ ಅಭೂತಪೂರ್ವ ಸವಾಲನ್ನು ಒಡ್ಡುತ್ತಿದೆ.

ಶುಕ್ರವಾರ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಡಿಆರ್ ಕಾಂಗೋ ಅಧ್ಯಕ್ಷರಾದ ಫೆಲಿಕ್ಸ್ ತ್ಶಿಸೆಕೆಡಿರವರು, ರುವಾಂಡಾವನ್ನು ನಿರ್ಬಂಧಕ್ಕೆ ಒಳಪಡಿಸಬೇಕೆಂದು ಕರೆ ನೀಡಿದರು, ಅದು "ವಿಸ್ತರಣಾವಾದಿ ಮಹತ್ವಾಕಾಂಕ್ಷೆಗಳನ್ನು" ಹೊಂದಿದೆ ಎಂದು ಆರೋಪಿಸಿದರು.

"ಅವ್ಯವಸ್ಥೆಯನ್ನು ಪೋಷಿಸುವವರ ಸಹಭಾಗಿತ್ವದ ನೋಟದ ಅಡಿಯಲ್ಲಿ ವಿದೇಶಿ ಹಿತಾಸಕ್ತಿಗಳ ಲಾಭಕ್ಕಾಗಿ ನಮ್ಮ ಕಾರ್ಯತಂತ್ರದ ಸಂಪನ್ಮೂಲಗಳನ್ನು ಲೂಟಿ ಮಾಡುವುದನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ" ಎಂದು ಅವರು ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.

ಅವರ ಕಡೆಯಿಂದ, M23 ಸೇರಿದಂತೆ ಗುಂಪುಗಳ ರಾಜಕೀಯ-ಮಿಲಿಟರಿ ಒಕ್ಕೂಟದ ನಾಯಕ ಕಾರ್ನಿಲ್ಲೆ ನಂಗಾರವರು DRC ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಕಾಂಗೋದ ರಾಜಧಾನಿಯನ್ನು ವಶಪಡಿಸಿಕೊಳ್ಳಲು ಪೂರ್ವ ಪ್ರದೇಶದಿಂದ ಸಾವಿರಾರು ಕಿಲೋಮೀಟರ್‌ಗಳಷ್ಟು ಮೆರವಣಿಗೆ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದರು.

ಆಫ್ರಿಕಾ ಒಕ್ಕೂಟದ ಶೃಂಗಸಭೆ
ಇಥಿಯೋಪಿಯಾದಲ್ಲಿ ನಡೆಯಲಿರುವ ಆಫ್ರಿಕಾ ಒಕ್ಕೂಟದ ಶೃಂಗಸಭೆಗಾಗಿ ಖಂಡದ ರಾಷ್ಟ್ರಗಳ ಮುಖ್ಯಸ್ಥರು ಸಭೆ ಸೇರುತ್ತಿದ್ದಾರೆ ಮತ್ತು ಯುರೋಪಿನ ಒಕ್ಕೂಟವು ಕೂಡ ಹೆಚ್ಚುತ್ತಿರುವ ಬಂಡಾಯಗಾರರ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಎಲ್ಲಾ ಆಯ್ಕೆಗಳನ್ನು "ತುರ್ತಾಗಿ" ಪರಿಗಣಿಸುತ್ತಿರುವುದಾಗಿ ಹೇಳಿದೆ.

ಯುರೋಪಿನ ಮನವಿ
ಈ ವಾರ ಯುರೋಪಿನ ಸಂಸತ್ತು ರುವಾಂಡಾ ಜೊತೆಗಿನ ಖನಿಜ ಒಪ್ಪಂದವನ್ನು ಸ್ಥಗಿತಗೊಳಿಸುವಂತೆ ಯುರೋಪ್‌ ಒತ್ತಾಯಿಸಿದ ಮನವಿಯನ್ನು ಅನುಸರಿಸುತ್ತದೆ.

ಗುರುವಾರ ಸ್ಟ್ರಾಸ್‌ಬರ್ಗ್‌ನ ಶಾಸಕರು ಅಗಾಧ ಬಹುಮತದಿಂದ ಬದ್ಧತೆಯಿಲ್ಲದ ನಿರ್ಣಯವನ್ನು ಅನುಮೋದಿಸಿದರು, ಅದು ಬಣದ 27 ಸದಸ್ಯ ರಾಷ್ಟ್ರಗಳು ರುವಾಂಡಾಗೆ ಎಲ್ಲಾ ನೇರ ಬಜೆಟ್ ಬೆಂಬಲ ಮತ್ತು ಮಿಲಿಟರಿ ಹಾಗೂ ಭದ್ರತಾ ಸಹಾಯವನ್ನು ಸ್ಥಗಿತಗೊಳಿಸುವಂತೆ ಕರೆ ನೀಡಿತು.

ಮಾನವ ಹಕ್ಕುಗಳ ಉಲ್ಲಂಘನೆ
ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿಯು ವ್ಯಾಪಕವಾದ ಮಾನವೀಯ ಕಾನೂನಿನ ಉಲ್ಲಂಘನೆ ಹಾಗೂ ಮಕ್ಕಳ ಮೇಲಿನ ಭಯಾನಕ ದೌರ್ಜನ್ಯವನ್ನು ಖಂಡಿಸಿವೆ, ಅವರು ಹೇಳುವ ಪ್ರಕಾರ, ಬಂಡಾಯ ಹೋರಾಟಗಾರರು ಮತ್ತು ಕಾಂಗೋಲೀಸ್ ಸೈನಿಕರಿಂದ ಮಕ್ಕಳ ಮೇಲೆ ಅತ್ಯಾಚಾರ ಮತ್ತು ಮಕ್ಕಳನ್ನು ಒತ್ತೆಯಾಳುಗಳ ಉದ್ದೇಶಕ್ಕಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

15 ಫೆಬ್ರವರಿ 2025, 13:49