MAP

Displaced Congolese people prepare to leave camp as M23 rebels order evacuations near Goma Displaced Congolese people prepare to leave camp as M23 rebels order evacuations near Goma 

ಡಿಆರ್‌ಸಿಯಲ್ಲಿನ ಹೋರಾಟವು 350,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುತ್ತಿರುವುದರಿಂದ ಮಕ್ಕಳು ಅತ್ಯಾಚಾರಕ್ಕೆ ಒಳಗಾಗಿದ್ದಾರೆ

ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ 350,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಯುಎನ್‌ಹೆಚ್‌ಸಿಆರ್ ಎಚ್ಚರಿಸಿದೆ. ಇದರ ನಡುವೆ 12 ವರ್ಷ ವಯಸ್ಸಿನ ಮಕ್ಕಳನ್ನು ಅತ್ಯಾಚಾರ ಮಾಡಿ ಹೋರಾಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಯುನಿಸೆಫ್ ಹೇಳಿದೆ.

ಲಿಂಡಾ ಬೋರ್ಡೋನಿ

ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ "ವೇಗವಾಗಿ ಹದಗೆಡುತ್ತಿರುವ" ಪರಿಸ್ಥಿತಿಯು ತೀವ್ರವಾದ ಮಾನವೀಯ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ವರದಿಯಾಗಿದೆ, ಸುಮಾರು 350,000 ಜನರು ಹಿಂಸಾಚಾರದಿಂದ ಪಲಾಯನ ಮಾಡುತ್ತಿದ್ದಾರೆ.

ಕಳೆದ ತಿಂಗಳು ಪೂರ್ವ ಕಾಂಗೋದ ಅತಿದೊಡ್ಡ ನಗರವಾದ ಗೋಮಾವನ್ನು ವಶಪಡಿಸಿಕೊಂಡ ರುವಾಂಡಾ ಬೆಂಬಲಿತ M23 ಬಂಡುಕೋರರು ದಕ್ಷಿಣಕ್ಕೆ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ ಮತ್ತು ಶುಕ್ರವಾರ, ಪ್ರದೇಶದ ಎರಡನೇ ಅತಿದೊಡ್ಡ ನಗರವಾದ ಬುಕಾವುಗೆ ಸೇವೆ ಸಲ್ಲಿಸುವ ಕಾರ್ಯತಂತ್ರದ ಕವುಮು ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (UNHCR) ಎಚ್ಚರಿಕೆ ನೀಡಿದೆ. ಈ ಇತ್ತೀಚಿನ ಬಂಡಾಯ ದಾಳಿಗೂ ಮುಂಚೆಯೇ, ಉತ್ತರ ಮತ್ತು ದಕ್ಷಿಣ ಕಿವು ಪ್ರಾಂತ್ಯಗಳು, ಈಗಾಗಲೇ ಹತ್ತಾರು ಸಾವಿರ ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿದ್ದವು.

UNHCR ಪ್ರಕಾರ, ಗೋಮಾದ ಸುಮಾರು 70% ಶಿಬಿರಗಳು ನಾಶವಾಗಿವೆ ಮತ್ತು ಇತರವು ಹಾನಿಗೊಳಗಾಗಿವೆ, ಆದರೆ ಸ್ಫೋಟಗೊಳ್ಳದ ಯುದ್ಧಸಾಮಗ್ರಿಗಳು ಅವರು ಮನೆಗೆ ಹೋಗುವುದು ಅಸುರಕ್ಷಿತವಾಗಿದೆ.

"ಲಕ್ಷಾಂತರ ಜನರು, ಈಗ ದೇವಾಲಯಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ತಾತ್ಕಾಲಿಕ ವಸತಿಗಳಲ್ಲಿ ವಾಸಿಸುತ್ತಿದ್ದಾರೆ" ಮತ್ತು ಹೋರಾಟದ ನಡುವೆ ನೆರವು ನೀಡಲು ಈ ಸಂಸ್ಥೆ ಮತ್ತು ಇತರ ಸಂಸ್ಥೆಗಳು ಹೆಣಗಾಡುತ್ತಿರುವಾಗ, ಅಪರಾಧಗಳ ಹೆಚ್ಚಳ ಮತ್ತು ರೋಗದ ಅಪಾಯ ಹೆಚ್ಚುತ್ತಿದೆ ಎಂದು ವರದಿ ಮಾಡಿದ್ದಾರೆ.

ಮಕ್ಕಳ ಮೇಲೆ ಅತ್ಯಾಚಾರ ಮತ್ತು ನೇಮಕಾತಿ
ಗುರುವಾರ ವಿಶ್ವಸಂಸ್ಥೆಯ ಮಕ್ಕಳ ನಿಧಿ - ಯುನಿಸೆಫ್ - ಸಂಘರ್ಷದ ಎರಡೂ ಬದಿಗಳಲ್ಲಿರುವ ಶಸ್ತ್ರಸಜ್ಜಿತ ಪುರುಷರು ಕಳೆದ ವಾರಗಳಲ್ಲಿ ಡಜನ್ಗಟ್ಟಲೆ ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದೆ.

"ಉತ್ತರ ಮತ್ತು ದಕ್ಷಿಣ ಕಿವು ಪ್ರಾಂತ್ಯಗಳಲ್ಲಿ, ಸಂಘರ್ಷದ ಪಕ್ಷಗಳಿಂದ ಮಕ್ಕಳ ವಿರುದ್ಧದ ಗಂಭೀರ ಉಲ್ಲಂಘನೆಗಳ ಭಯಾನಕ ವರದಿಗಳನ್ನು ನಾವು ಸ್ವೀಕರಿಸುತ್ತಿದ್ದೇವೆ, ಇದರಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾವು ನೋಡಿದಲ್ಲದ, ಅಂದರೆ ಎಲ್ಲಾ ಮಿತಿಯ ಮಟ್ಟವನ್ನು, ಮೀರಿದ ಮಟ್ಟದಲ್ಲಿ ಅತ್ಯಾಚಾರ ಮತ್ತು ಇತರ ರೀತಿಯ ಲೈಂಗಿಕ ಹಿಂಸೆಗಳು ಸೇರಿವೆ" ಎಂದು ಏಜೆನ್ಸಿಯ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸೆಲ್ ರವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಒಬ್ಬ ತಾಯಿ ನಮ್ಮ ಸಿಬ್ಬಂದಿಗೆ ತನ್ನ ಆರು ಹೆಣ್ಣುಮಕ್ಕಳು, ಕೇವಲ 12 ವರ್ಷ ವಯಸ್ಸಿನವರು, ಆಹಾರಕ್ಕಾಗಿ ಹುಡುಕಿ ಹೊರಡುತ್ತಿದ್ದಾಗ ಶಸ್ತ್ರಸಜ್ಜಿತ ಪುರುಷರು ಹೇಗೆ ವ್ಯವಸ್ಥಿತವಾಗಿ ಅತ್ಯಾಚಾರ ಮಾಡಿದರು ಎಂಬುದನ್ನು ವಿವರಿಸಿದರು." ಎಂದು ರಸೆಲ್ ರವರು ಹೇಳಿದರು.

ಹೋರಾಟ ತೀವ್ರಗೊಳ್ಳುತ್ತಿದ್ದಂತೆ, ನೂರಾರು ಮಕ್ಕಳನ್ನು ತಮ್ಮ ಪಲಾಯನ ಮಾಡುವ ಕುಟುಂಬಗಳಿಂದ ಬೇರ್ಪಡಿಸಲಾಗಿದೆ ಎಂದು ವರದಿಯಾಗಿದೆ, ಇದರಿಂದಾಗಿ ಅವರು ಹಿಂಸಾಚಾರದ ಅಪಾಯಗಳಿಗೆ ಗುರಿಯಾಗುತ್ತಿದ್ದಾರೆ ಮತ್ತು 12 ವರ್ಷ ವಯಸ್ಸಿನ ಮಕ್ಕಳನ್ನು ಹೋರಾಟಕ್ಕೆ ಬಲವಂತದಿಂದ ಸೇರಿಸಿಕೊಳ್ಳಲಾಗುತ್ತಿದೆ.

ರುವಾಂಡಾದ ಬೆಂಬಲದೊಂದಿಗೆ M23 ಬಂಡುಕೋರರು ಇತ್ತೀಚಿನ ತಿಂಗಳುಗಳಲ್ಲಿ ಪೂರ್ವ DRC ಯಲ್ಲಿನ ಭೂಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆ, ಇದು ದಶಕಗಳಿಂದ ಹಲವಾರು ಸಂಘರ್ಷಗಳಿಂದ ಬಳಲುತ್ತಿರುವ ದೇಶವಾಗಿದೆ.

M23 ಜನಾಂಗೀಯ ಟುಟ್ಸಿಗಳ ಹಿತಾಸಕ್ತಿಗಳಿಗಾಗಿ ಹೋರಾಡುವುದಾಗಿ ಹೇಳಿಕೊಳ್ಳುತ್ತದೆ ಮತ್ತು ಪ್ರಾದೇಶಿಕ ನಾಯಕರು ಹೋರಾಟವನ್ನು ಕೊನೆಗೊಳಿಸಲು ಕರೆ ನೀಡಿದರೂ DRC ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸಿದೆ.

14 ಫೆಬ್ರವರಿ 2025, 12:40