MAP

Attack by armed gangs leaves at least three dead in Haiti Attack by armed gangs leaves at least three dead in Haiti  (ANSA)

ಹೈಟಿಯಲ್ಲಿ ಮಕ್ಕಳು ಬಳಲುತ್ತಲೇ ಇದ್ದಾರೆ: 'ಜಗತ್ತು ಮೌನವಾಗಿರಲು ಸಾಧ್ಯವಿಲ್ಲ'

ಹೈಟಿಯಲ್ಲಿರುವ ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಪ್ರತಿನಿಧಿಯು, ಅಂತರರಾಷ್ಟ್ರೀಯ ಸಮುದಾಯವು ಮಕ್ಕಳ ಮೇಲೆ ಹೆಚ್ಚುತ್ತಿರುವ ದಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರೆ ನೀಡುತ್ತಾ, ಅವುಗಳನ್ನು "ಮಾನವೀಯತೆಯ ಮೇಲಿನ ದಾಳಿ" ಎಂದು ಕರೆದಿದ್ದಾರೆ.

ಕೀಲ್ಸ್ ಗುಸ್ಸಿ

ಹೈಟಿಯ ಜನರನ್ನು ಹಿಂಸಾಚಾರ ಮತ್ತು ದೌರ್ಜನ್ಯಗಳು ಕಾಡುತ್ತಿವೆ, ಏಕೆಂದರೆ ಸಶಸ್ತ್ರ ಗ್ಯಾಂಗ್‌ಗಳು ಪ್ರಭಾವ ಹೆಚ್ಚುತ್ತಲೇ ಇದೆ. ಹೈಟಿಯಲ್ಲಿನ ಯುನಿಸೆಫ್ ಪ್ರತಿನಿಧಿ ಗೀತಾ ನಾರಾಯಣ್, 'ಎಕ್ಸ್' ಕುರಿತು ಹೇಳಿಕೆ ಬಿಡುಗಡೆ ಮಾಡಿ, ದೇಶದಲ್ಲಿ ಮಕ್ಕಳ ಪ್ರಸ್ತುತ ಪರಿಸ್ಥಿತಿಯನ್ನು ಮುನ್ನೆಲೆಗೆ ತಂದರು.

ಮಾನವೀಯತೆಯ ಮೇಲೆಯೇ ದಾಳಿ
ಕಳೆದ ಹಲವಾರು ವರ್ಷಗಳಿಂದ ಹೆಚ್ಚುತ್ತಿರುವ ಗ್ಯಾಂಗ್ ಹಿಂಸಾಚಾರವು ಪುಟ್ಟ ಕೆರಿಬಿಯದ ರಾಷ್ಟ್ರವನ್ನು ಗುರುತಿಸಿದೆ. ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿ, ಒಂದು ಮಿಲಿಯನ್‌ಗಿಂತಲೂ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆ ತಿಳಿಸಿದೆ. ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ಮೇಲೆ ಗ್ಯಾಂಗ್‌ಗಳು ಹಿಡಿತ ಸಾಧಿಸಿದ್ದು, ಇದು ಆರೋಗ್ಯ ಸೇವೆಗಳ ಕುಸಿತ ಮತ್ತು ಆಹಾರ ಅಭದ್ರತೆಯ ಬಿಕ್ಕಟ್ಟಿಗೆ ಕಾರಣವಾಗಿದೆ.

ಅದಕ್ಕೂ ಮೀರಿ, ಗ್ಯಾಂಗ್‌ಗಳ ಗುರಿ ಈಗ ಮಕ್ಕಳಾಗಿರುವುದರಿಂದ, ಮಕ್ಕಳು ಊಹಿಸಲಾಗದ ಭಯಾನಕತೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಸಶಸ್ತ್ರ ಗುಂಪುಗಳಿಂದ ದಾಳಿಗಳನ್ನು ಎದುರಿಸುತ್ತಿದ್ದಾರೆ ಎಂದು ಗೀತಾ ನಾರಾಯಣ್ ರವರು ವರದಿ ಮಾಡಿದ್ದಾರೆ.

ಫೆಬ್ರವರಿ 11 ರಂದು, ಗುರಿ ತಪ್ಪಿದ ಗುಂಡುಗಳು ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಬ್ಬನನ್ನು ಕೊಂದವು. ಎರಡು ತಿಂಗಳ ಮಗುವನ್ನು ತಾಯಿಯ ಮುಂದೆಯೇ ಜೀವಂತವಾಗಿ ಸುಟ್ಟುಹಾಕಲಾಗಿದೆ ಎಂಬ ವರದಿಗಳನ್ನು ಯುನಿಸೆಫ್ ಪ್ರತಿನಿಧಿ ವಿವರಿಸಿದ್ದಾರೆ - ಇದು "ಜಗತ್ತನ್ನು ಆಳವಾಗಿ ಅಲುಗಾಡಿಸುವ ಭಯಾನಕ ದೌರ್ಜನ್ಯದ" ದೃಶ್ಯವಾಗಿದೆ.

ಈ ಕ್ರಮಗಳು ಹಿಂಸಾಚಾರಕ್ಕಿಂತ ಮಿತಿಮೀರಿದ್ದಾಗಿದೆ, ಇದು "ಮಾನವೀಯತೆಯ ಮೇಲಿನ ದಾಳಿ" ಎಂದು ನಾರಾಯಣ್ ರವರು ಒತ್ತಿ ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಯುನಿಸೆಫ್ ರಾಷ್ಟ್ರೀಯ ಅಧಿಕಾರಿಗಳು ಮತ್ತು ಅಂತರರಾಷ್ಟ್ರೀಯ ಸಮುದಾಯವು "ಹೈಟಿಯ ಮಕ್ಕಳನ್ನು ರಕ್ಷಿಸಲು, ಅವರ ಹಕ್ಕುಗಳನ್ನು ರಕ್ಷಿಸಲು, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು" ಕಾರ್ಯನಿರ್ವಹಿಸುವಂತೆ ಕರೆ ನೀಡಿದೆ. ಏಕೆಂದರೆ, "ಪ್ರತಿಯೊಂದು ಮಗುವೂ ಭಯವಿಲ್ಲದೆ ಬದುಕಲು ಅರ್ಹವಾಗಿದೆ" ಎಂದು ಅವರು ಒತ್ತಾಯಿಸಿದರು.

ಮಕ್ಕಳ ನೇಮಕಾತಿ
ಸುಮಾರು 1.2 ಮಿಲಿಯನ್ ಮಕ್ಕಳು ನಿರಂತರ ಸಶಸ್ತ್ರ ಹಿಂಸಾಚಾರದ ಬೆದರಿಕೆಯಲ್ಲಿ ಬದುಕುತ್ತಿದ್ದಾರೆಂದು ವರದಿಯಾಗಿದೆ ಮತ್ತು ಸಶಸ್ತ್ರ ಗ್ಯಾಂಗ್‌ಗಳಿಗೆ ನೇಮಕಗೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಕಳೆದ ನವೆಂಬರ್‌ನಲ್ಲಿ, ಯುನಿಸೆಫ್ ಬಿಡುಗಡೆ ಮಾಡಿದ ವರದಿಯು ದೇಶದಲ್ಲಿ ಮಕ್ಕಳ ನೇಮಕಾತಿ 70% ರಷ್ಟು ಹೆಚ್ಚಾಗಿದೆ ಎಂದು ತೋರಿಸಿದೆ. ಗ್ಯಾಂಗ್ ಸದಸ್ಯರಲ್ಲಿ 30% ರಿಂದ 50% ರಷ್ಟು ಮಕ್ಕಳೇ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ಮಾಡಿದೆ.

ಹೀಗೆ ಬಂಧನಕ್ಕೊಳಗಾದ ಮಕ್ಕಳಲ್ಲಿ, ಅನೇಕರು ಮಾಹಿತಿದಾರರು, ಸೈನಿಕರು, ಅಡುಗೆಯವರಾಗಲು ಒತ್ತಾಯಿಸಲ್ಪಡುತ್ತಾರೆ ಮತ್ತು ಗ್ಯಾಂಗ್ ಸದಸ್ಯರಿಗೆ "ಹೆಂಡತಿಯರು" ಆಗಿಯೂ ಬಳಸಲ್ಪಡುತ್ತಾರೆ. ಆಗೊಮ್ಮೆ ಮಕ್ಕಳು, ಗ್ಯಾಂಗ್‌ಗಳ ಷರತ್ತುಗಳನ್ನು ನಿರಾಕರಿಸಿದರೆ, ಅವರ ಜೀವ ಮತ್ತು ಅವರ ಕುಟುಂಬಗಳ ಜೀವಕ್ಕೆ ಅಪಾಯ ಎದುರಾಗುತ್ತದೆ. ಹೈಟಿಯಲ್ಲಿ ಲಕ್ಷಾಂತರ ಮುಗ್ಧ ಮಕ್ಕಳು ಈ ಹಿಂಸೆ ಮತ್ತು ಅಮಾನವೀಯ ವರ್ತನೆಯನ್ನು ಅನುಭವಿಸುತ್ತಿರುವಾಗ "ಜಗತ್ತು ಮೌನವಾಗಿರಲು ಸಾಧ್ಯವಿಲ್ಲ" ಎಂದು ನಾರಾಯಣ್ ರವರು ಎಚ್ಚರಿಸಿದರು.

19 ಫೆಬ್ರವರಿ 2025, 16:23