ನಾನು ಮಾರಾಟಕ್ಕಿಲ್ಲ - ಮಾನವ ಕಳ್ಳಸಾಗಣೆ
ಕೀಲ್ಸ್ ಗುಸ್ಸಿ
ಒಬ್ಬ ಮಹಿಳೆಯು ತನ್ನ ನೋವು ಮತ್ತು ಸಂಕಟದ ಕಥೆಯನ್ನು ಸಬಲೀಕರಣ ಮತ್ತು ಸಂಭಾಷಣೆಯ ಕಥೆಯಾಗಿ ಪರಿವರ್ತಿಸಿದ್ದಾರೆ. ಬಾಲ್ಯದಲ್ಲಿ ಲೈಂಗಿಕ ಮತ್ತು ದೇಶೀಯ ಹಿಂಸಾಚಾರದಿಂದ ಬದುಕುಳಿದ ನಂತರ, ಪೌಲಿನ್ ಅಕಿನಿ ಜುಮಾರವರು, ʻಪುನರ್ಜನ್ಮದ ರಾಣಿʼ ಎಂಬ ಒಂದು ಸಂಸ್ಥೆಯನ್ನು ಸ್ಥಾಪಿಸಿದರು, ಇದು ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸೆ ಮತ್ತು ಮಾನವ ಕಳ್ಳಸಾಗಣೆಯ ಬದುಕುಳಿದವರನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಧೈರ್ಯ ತುಂಬಲು, ವಿನ್ಯಾಸಗೊಳಿಸಲಾದ ಸಂಸ್ಥೆಯನ್ನಾಗಿ ಸೇರಿಸಲಾಗಿದೆ.
ಈ ಸಂಸ್ಥೆಯು ರಕ್ಷಣೆಯ ನಿವಾಸ, ಅನ್ಯಾಯದ ವಿರುದ್ಧ ಧ್ವನಿಯೆತ್ತುವುದು, ಎಲಿಮಿಶಾ ಯೋಜನೆ (ಸೇಫ್ ಹೌಸ್, ರೈಸಿಂಗ್ ಅಥೆಂಟಿಕ್ ವಾಯ್ಸಸ್ ಮತ್ತು ಎಲಿಮಿಶಾ ಪ್ರಾಜೆಕ್ಟ್) ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹೊಂದಿದೆ. ಸೇಫ್ ಹೌಸ್- (ರಕ್ಷಣೆಯ ನಿವಾಸ) ಒಂದು ಆಶ್ರಯ ತಾಣವಾಗಿದ್ದು, ಅಲ್ಲಿ ಬದುಕುಳಿದವರು ಮತ್ತು ಕಳ್ಳಸಾಗಣೆಗೊಳಗಾದ ಅಥವಾ ಹಿಂಸಾಚಾರವನ್ನು ಎದುರಿಸಿದ ನಿರಾಶ್ರಿತರು, ಅಲ್ಪಾವಧಿ ಮತ್ತು ದೀರ್ಘಾವಧಿಯವರೆಗೆ ವಾಸಿಸಬಹುದು. ʻರೈಸಿಂಗ್ ಅಥೆಂಟಿಕ್ ವಾಯ್ಸಸ್ʼ (ಅನ್ಯಾಯದ ವಿರುದ್ಧ ಧ್ವನಿಯೆತ್ತುವುದು) ಹದಿಹರೆಯದವರು ಮತ್ತು ಯುವಜನರಿಗೆ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮಾರ್ಗದರ್ಶನ ನೀಡುತ್ತದೆ. ರೀಬರ್ತ್ ಆಫ್ ಎ ಕ್ವೀನ್ (ʻಪುನರ್ಜನ್ಮದ ರಾಣಿʼ) ತಮ್ಮ ಎಲಿಮಿಶಾ ಯೋಜನೆಯ ಮೂಲಕ ದುರ್ಬಲ ಗುಂಪುಗಳಿಗೆ ಔಪಚಾರಿಕ ಮತ್ತು ಅನೌಪಚಾರಿಕ ಸಮಗ್ರ ಶಿಕ್ಷಣವನ್ನು ಸಹ ಒದಗಿಸುತ್ತದೆ.
ಬದುಕುಳಿದವರಿಗೆ ಬೆಂಬಲ ವ್ಯವಸ್ಥೆ
2020 ರಲ್ಲಿ ರಚಿಸಲಾದ ರೀಬರ್ತ್ ಆಫ್ ಎ ಕ್ವೀನ್ ನನ್ನು "ಬದುಕುಳಿದವರಿಗೆ ಬೆಂಬಲ ವ್ಯವಸ್ಥೆ" ಯಾಗಿ ಸ್ಥಾಪಿಸಲಾಯಿತು. ವ್ಯಾಟಿಕನ್ ಸುದ್ಧಿಯ ಸ್ಟೆಫಾನೊ ಲೆಸ್ಜ್‌ಸಿನ್ಸ್ಕಿರವರೊಂದಿಗಿನ ಸಂದರ್ಶನದಲ್ಲಿ, ಪೌಲಿನ್ ಅಕಿನಿ ಜುಮಾರವರು "ದುಷ್ಕರ್ಮಿಗಳ ಮೇಲೆ" ಎಷ್ಟು ಬಾರಿ ಗಮನ ಹರಿಸಲಾಗುತ್ತದೆ ಎಂಬುದನ್ನು ವಿವರಿಸುತ್ತಾರೆ. ಹೀಗಾಗಿ, ಸಂಸ್ಥೆಯು ನಿರೂಪಣೆಯನ್ನು ಬದಲಾಯಿಸುವ, ಬದುಕುಳಿದವರು, ಸಂತ್ರಸ್ತರ ಮೇಲೆ ಮತ್ತು ತಡೆಗಟ್ಟುವಿಕೆಯ ಮೇಲೆ ಗಮನ ಹರಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಈ ಜಾಗೃತಿ ಕಾರ್ಯವು ಅತಿಮುಖ್ಯವಾದುದು ಏಕೆಂದರೆ, ಜುಮಾರವರು ಈ ವಿಷಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ತೋರಿಸಿದಂತೆ, ವಿಶ್ವದಾದ್ಯಂತ ಕೆಲವು ಸ್ಥಳಗಳಲ್ಲಿ, ಮಾನವ ಕಳ್ಳಸಾಗಣೆ ಸಂಪೂರ್ಣವಾಗಿ ಏನೆಂದು ಅರ್ಥವಾಗಿರುವುದಿಲ್ಲ. ಇದರ ಪರಿಣಾಮವಾಗಿ, "ಬದುಕುಳಿದವರಲ್ಲಿ ಹೆಚ್ಚಿನವರಿಗೆ ನ್ಯಾಯ ಸಿಕ್ಕಿರುವುದಿಲ್ಲ." ಜನರಿಗೆ ಅದು ಏನೆಂದು ತಿಳಿದಿಲ್ಲದಿದ್ದರೆ, ಪ್ರತಿಕ್ರಿಯೆ ಹೆಚ್ಚಾಗಿ ದಾಳಿಯ ರೂಪದಲ್ಲಿ ಬರುತ್ತದೆ. ಕಳೆದ ವರ್ಷ, 2024 ರಲ್ಲಿ, ನಮ್ಮ ಮೇಲೆ ಮೂರು ಬಾರಿ ದುಷ್ಕರ್ಮಿಗಳು ದಾಳಿ ನಡೆಸಿದರು, ಆಶ್ರಯದಲ್ಲಿದ್ದ ಹುಡುಗಿಯರು ಮತ್ತು ಯುವತಿಯರು ಅಪಾಯದಲ್ಲಿದ್ದರು ಮತ್ತು ಅವರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಬೇಕಾಯಿತು ಎಂದು ಜುಮಾರವರು ವಿವರಿಸುತ್ತಾರೆ.
ಸೀಮಿತ ಸ್ಥಳ ಆದರೆ ಬೆಂಬಲದಿಂದ ತುಂಬಿದೆ
2020ರಲ್ಲಿ, ಜುಮಾ ಮೂಲದ ಕೀನ್ಯಾದಲ್ಲಿ 35,000 ರಿಂದ 40,000ದಷ್ಟು ಲೈಂಗಿಕ ಕಳ್ಳಸಾಗಣೆಗೆ ಬಲಿಯಾದವರ ಬಗ್ಗೆ ಅಂತರರಾಷ್ಟ್ರೀಯ ಎನ್‌ಜಿಒ ವರದಿ ಮಾಡಿದೆ. ಬದುಕುಳಿದವರು ಮತ್ತು ಸಂತ್ರಸ್ತರಿಗಿರುವ ಏಕೈಕ ಆಶ್ರಯ ಖಾಸಗಿಯಾಗಿರುವುದರಿಂದ ದೇಶದಲ್ಲಿ ಕಳ್ಳಸಾಗಣೆ ಸಂದರ್ಭವನ್ನು ಸಂಕೀರ್ಣವಾಗಿದೆ ಎಂದು ಅವರು ವಿವರಿಸುತ್ತಾರೆ. ನಮ್ಮ ದೇಶದಲ್ಲಿ ಸರ್ಕಾರಿ ಅನುದಾನಿತ ಆಶ್ರಯವಿಲ್ಲ ಮತ್ತು ಕೆಲವೊಮ್ಮೆ ನಮ್ಮ ಸ್ಥಳಗಳು ತುಂಬಾ ಸೀಮಿತವಾಗಿರುತ್ತವೆ ಎಂದು ಜುಮಾರವರು ಹೇಳುತ್ತಾರೆ.
ಪ್ರಸ್ತುತ, 38 ಜನರನ್ನು ರೀಬರ್ತ್ ಆಫ್ ಎ ಕ್ವೀನ್ ಆಶ್ರಯದಲ್ಲಿ ಇರಿಸಲಾಗಿದೆ. ಅಂದರೆ ರೀಬರ್ತ್ ಆಫ್ ಎ ಕ್ವೀನ್ ಆಶ್ರಯವು ಸಂಪೂರ್ಣವಾಗಿ ತುಂಬಿದೆ. ಇದರ ಪರಿಣಾಮವಾಗಿ ಸೀಮಿತ ಸಂಪನ್ಮೂಲಗಳನ್ನು ಹೊಂದಿರುವುದರಿಂದ, ಸಂತ್ರಸ್ತರು ಅಥವಾ ಬದುಕುಳಿದವರು ಅವರು ಇರುವ ಸ್ಥಳದಲ್ಲಿಯೇ ಉಳಿದುಕೊಳ್ಳುತ್ತಾರೆ.
ಜುಮಾರವರು ತನ್ನ ಕೆಲಸದಲ್ಲಿ ಎದುರಿಸುತ್ತಿರುವ ಮತ್ತೊಂದು ಸವಾಲು ಎಂದರೆ ಮಾನವ ಕಳ್ಳಸಾಗಣೆಯ ಬಗ್ಗೆ ಜನರ ದೃಷ್ಟಿಕೋನವನ್ನು ಬದಲಾಯಿಸುವಲ್ಲಿನ ತೊಂದರೆ. ಜನರು ಹೇಳುವ ಪ್ರಕಾರ, ಈ ಯೋಜನೆಯು ಇನ್ನೂ ಆ ಬದಲಾವಣೆಯನ್ನು ಕಂಡಿಲ್ಲ ಎಂದು ನಂಬುತ್ತಾರೆ ಹಾಗೂ ಸವಾಲು ಏನೆಂದರೆ, ಜನರು ನಿಜವಾಗಿಯೂ ಸಂತ್ರಸ್ತರುಗಳ ನೋವಿನ ಧ್ವನಿಯನ್ನು ನಂಬುತ್ತಿಲ್ಲ ಎಂದು ಅವರು ವಿವರಿಸುತ್ತಾರೆ.
ಮಾನವ ಘನತೆಯನ್ನು ನೆನಪಿಟ್ಟುಕೊಳ್ಳುವುದು
ಕಳ್ಳಸಾಗಣೆಯ ಮೂಲ ಕಾರಣಗಳನ್ನು ಹುಡುಕುವಾಗ, ಕಾರಣಗಳು ದೇಶದಿಂದ ದೇಶಕ್ಕೆ ಬದಲಾಗಬಹುದು ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ಅಂಶಗಳಿಂದ ಪ್ರಭಾವಿತವಾಗಿರುತ್ತವೆ. ಹೆಚ್ಚಾಗಿ, ಬಡತನವನ್ನು ಮೂಲ ಸಮಸ್ಯೆ ಎಂದು ತೋರಿಸಲಾಗುತ್ತದೆ. ಆದರೂ, ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ಕಚೇರಿಯು ಮತ್ತೊಂದು ಅಂಶವನ್ನು ಸೂಚಿಸುತ್ತದೆ, ಅದೇನೆಂದರೆ "ಸಂಭಾವ್ಯ ಸಂತ್ರಸ್ತರ ವಲಸೆ ಹೋಗುವ ಬಯಕೆಯನ್ನು ಬಳಸಿಕೊಳ್ಳಲಾಗುತ್ತಿದೆ."
"ಬಡತನವು ನಮ್ಮನ್ನು ನಮ್ಮ ದೇಶಗಳಿಂದ ಅಥವಾ ತಾಯ್ನಾಡಿನಿಂದ ದೂರವಿಟ್ಟು ಕೆಲಸದ ಅವಕಾಶವನ್ನು ಹುಡುಕಿಕೊಂಡು ಇತರ ದೇಶಗಳಿಗೆ ಹೋಗಲು ಕರೆದೊಯ್ಯುತ್ತದೆ" ಎಂದು ಜುಮಾ ಗಮನಸೆಳೆದರು. ಜನರು ಎಲ್ಲಿಗೆ ಹೋಗಲಿ ಅಥವಾ ಯಾರು ಎಲ್ಲಿಗೆ ಹೋದರೂ, ಅಲ್ಲಿರುವುದು ಮನುಷ್ಯರು ಮತ್ತು ಮನುಷ್ಯರಾಗಿ ಅವರು ಘನತೆಗೆ ಅರ್ಹರು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹುಮುಖ್ಯ ಎಂದು ಅವರು ಒತ್ತಿ ಹೇಳುತ್ತಾರೆ.
ಉತ್ತಮ ಜಗತ್ತನ್ನು ಸೃಷ್ಟಿಸುವುದು
ಪ್ರತಿಯೊಬ್ಬರೂ ಮಾನವ ಘನತೆಯನ್ನು ಪ್ರಮುಖವಾಗಿರಿಸಿಕೊಂಡು, ಸಂತ್ರಸ್ತರು ಮತ್ತು ಬದುಕುಳಿದವರು ಹಾಗೂ ಅವರನ್ನು ಸುರಕ್ಷಿತವಾದ ಕಾರ್ಯಕ್ರಮಗಳನ್ನು ರಚಿಸುವಲ್ಲಿ ಸೇರಿಸಿಕೊಂಡರೆ, ನಾವು ನಮ್ಮೆಲ್ಲರಿಗೂ ಒಂದು ಉತ್ತಮ ಜಗತ್ತನ್ನು ಸೃಷ್ಟಿಸಬಹುದು" ಎಂದು ಜುಮಾವರು ನಂಬುತ್ತಾರೆ.
ಆದರೆ ಮಾನವ ಕಳ್ಳಸಾಗಣೆ ಕೊನೆಗೊಂಡು ಉತ್ತಮ ಪ್ರಪಂದ ಸೃಷ್ಟಿ ಸಾಧ್ಯ ಎಂದರೆ, ನಾವು ಪದಗಳನ್ನು ಮೀರಿ, ಅದಕ್ಕೆ ಸಂಬಂಧಪಟ್ಟ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿ, ಸಕ್ರಿಯವಾಗಿ ಈ ಕಾರ್ಯಗಳನ್ನು ನಿರ್ವಹಿಸಿದರೆ ಮಾತ್ರ ಇದೆಲ್ಲವೂ ಸಾಧ್ಯ ಎಂದು ಅವರು ಒತ್ತಿ ಹೇಳುತ್ತಾರೆ. ನಮಗೆ ಸಮಯವಿದೆ. ಈ ಕಾರ್ಯವನ್ನು ಮಾಡಲು ನಮಗೆ ಶಕ್ತಿ ಇದೆ. ಆ ಕ್ರಿಯೆ ಎಂದರೆ ಜಗತ್ತಿಗೆ ಶಕ್ತಿಯುತವಾದ ಸಂಪರ್ಕವನ್ನು ರಚಿಸುವುದು.