MAP

Aftermath of a Russian missile strike in Komyshuvakha Aftermath of a Russian missile strike in Komyshuvakha 

ಬರಹದ ಭರವಸೆ: ಫಿಲ್ ಕ್ಲೇರವರೊಂದಿಗೆ ಸಂಭಾಷಣೆ

ವ್ಯಾಟಿಕನ್ ಸುದ್ಧಿಯು 2025ರ ಜ್ಯೂಬಿಲಿ ವರ್ಷ, ಆಧುನಿಕ ಯುದ್ಧ, ಅಮಾನವೀಯತೆ, ವಿಶ್ವಾಸ ಮತ್ತು ಯುದ್ಧದ ಸಂದರ್ಭದಲ್ಲಿ ಭರವಸೆಯನ್ನು ತಿಳಿಸುವುದರ ಅರ್ಥದ ಬಗ್ಗೆ ಅಮೇರಿಕದ ಬರಹಗಾರ ಫಿಲ್ ಕ್ಲೇರವರೊಂದಿಗೆ ಮಾತನಾಡುತ್ತದೆ.

ಜೋಸೆಫ್ ಟುಲ್ಲೊಚ್

ಈ ವಾರಾಂತ್ಯದಲ್ಲಿ, ಅದರ 2025ರ ಜ್ಯೂಬಿಲಿ ವರ್ಷದ ಭಾಗವಾಗಿ, ಕಥೋಲಿಕ ಧರ್ಮಸಭೆಯ 'ವಿಶ್ವದ ಸಂವಹನಕಾರರ ಜ್ಯೂಬಿಲಿ' ವಾರ್ಷಿಕೋತ್ಸವನ್ನು ಆಚರಿಸುತ್ತಿದೆ.

ಜ್ಯೂಬಿಲಿ ವರ್ಷದ ಮುಖ್ಯ ವಿಷಯವಾದ 'ಭರವಸೆಯಲ್ಲಿರುವ ಯಾತ್ರಿಕರು', ಮತ್ತು ಈ ವಾರಾಂತ್ಯದ ಸಂವಹನದ ಮಹೋತ್ಸವದ ಕಾರ್ಯಸೂಚಿಯಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ ಹಿಂಸಾತ್ಮಕ ಸಂಘರ್ಷವು ಹೆಚ್ಚುತ್ತಿರುವ ಜಾಗತಿಕ ಸಂದರ್ಭದಲ್ಲಿ, ಭರವಸೆಯನ್ನು ಸಂವಹನ ತಿಳಿಸುವುದರ ಅರ್ಥವೇನು?

ಈ ವಿಷಯವನ್ನು ಅನ್ವೇಷಿಸಲು, ವ್ಯಾಟಿಕನ್ ಸುದ್ಧಿಯು ಅಮೇರಿಕದ ನೌಕಾಪಡೆಯ ಅನುಭವಿ ಮತ್ತು ಕಾದಂಬರಿಕಾರರಾದ ಫಿಲ್ ಕ್ಲೇರವರೊಂದಿಗೆ ಮಾತನಾಡಿದೆ.
ಶೈಲಿ ಮತ್ತು ಸಂಕ್ಷಿಪ್ತತೆಯ ಕಾರಣಗಳಿಗಾಗಿ ಈ ಕೆಳಗಿನ ಪ್ರತಿಲೇಖನವನ್ನು ಲಘುವಾಗಿ ಸಂಪಾದಿಸಲಾಗಿದೆ.

ವ್ಯಾಟಿಕನ್ ಸುದ್ದಿ: ನೀವು ಬರೆಯುವ ವಿಷಯಗಳ ಬಗ್ಗೆ ಹಾಗೂ ನಿಮ್ಮನ್ನು ಪರಿಚಯಿಸುವ ಮೂಲಕ ನಮ್ಮ ಸಂದರ್ಶನವನ್ನು ಪ್ರಾರಂಭಿಸಬಹುದೇ?
ಫಿಲ್ ಕ್ಲೇ: ಖಂಡಿತ. ನಾನು ಫಿಲ್ ಕ್ಲೇ ಮತ್ತು ನಾನು ಹೆಚ್ಚಾಗಿ ಅಮೇರಿಕದ ಮಿಲಿಟರಿಯ ಬಗ್ಗೆ ಬರೆಯುತ್ತೇನೆ. ನನ್ನ ಪ್ರಪ್ರಥಮ ಪುಸ್ತಕ ಇರಾಕ್ ಯುದ್ಧದ ಬಗ್ಗೆ ಮತ್ತು ಇರಾಕ್ ಯುದ್ಧಕ್ಕೆ ಸಂಬಂಧಿಸಿದಂತೆ ಕಾದಂಬರಿ ಮತ್ತು ಕಾಲ್ಪನಿಕವಲ್ಲದ ಎರಡನ್ನೂ ಬರೆದಿದ್ದೇನೆ.

ಅಂದಿನಿಂದ, ನಾನು ಅಮೇರಿಕದ ಮಿಲಿಟರಿ ನೀತಿಯ ಇತರ ಅಂಶಗಳು ಮತ್ತು ವಿಶ್ವದಾದ್ಯಂತ ಅಮೇರಿಕದ ಉಪಸ್ಥಿತಿಯ ಬಗ್ಗೆ ಬರೆಯುತ್ತಲೇ ಇದ್ದೇನೆ. ಅದೇ ಸಮಯದಲ್ಲಿ, ನಾನು ಒಬ್ಬ ಕಥೋಲಿಕನು ಮತ್ತು ನನ್ನ ಧರ್ಮ ನನಗೆ ಮುಖ್ಯವಾಗಿದೆ. ಭೌಗೋಳಿಕ ರಾಜಕೀಯದ ಮಟ್ಟದಲ್ಲಿ ಮಿಲಿಟರಿ ನೀತಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ನನಗೆ ಆಸಕ್ತಿ ಇಲ್ಲ, ಆದರೆ ಯುದ್ಧವು ಅತ್ಯಂತ ತುರ್ತು ಸ್ಥಳವಾಗಿದೆ ಎಂದು ನಾನು ಭಾವಿಸುತ್ತೇನೆ - ನೈತಿಕ ತುರ್ತು ಮಾತ್ರವಲ್ಲ, ಆಧ್ಯಾತ್ಮಿಕ ತುರ್ತು ಕೂಡ. ಜನರು ಹಿಂಸೆಯನ್ನು ಎದುರಿಸುವಾಗ ಅವರ ಬಂದೊದುಗುವ ಆಧ್ಯಾತ್ಮಿಕ ಬಿಕ್ಕಟ್ಟುಗಳು ಮತ್ತು ಾ ಸಮಯದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳನ್ನು ನೋಡುವುದರಲ್ಲಿ, ನಾನು ಯಾವಾಗಲೂ ಆಸಕ್ತಿ ಹೊಂದಿದ್ದೇನೆ.

ಸಂವಹನಕಾರರ ಜಯಂತಿಯಲ್ಲಿ, ನಾವು ಕೇಳುತ್ತಿರುವ ಒಂದು ನಿರ್ದಿಷ್ಟ ತುರ್ತು ಪ್ರಶ್ನೆಯೆಂದರೆ: ನಿಜವಾಗಿಯೂ ತುಂಬಾ ಮಂಕಾದ ಜಾಗತಿಕ ಸನ್ನಿವೇಶದಲ್ಲಿ - ಯುದ್ಧದ ಸನ್ನಿವೇಶದಲ್ಲಿ - ಭರವಸೆಯನ್ನು ಸಂವಹನ ಮಾಡಲು ಪ್ರಯತ್ನಿಸುವುದರ ಅರ್ಥವೇನು?
ಭರವಸೆಗೆ ಕಾರಣಗಳಿರುತ್ತವೆ ಮತ್ತು ಹತಾಶೆಗೆ ಕಾರಣಗಳಿರುತ್ತವೆ. ಇತಿಹಾಸದಲ್ಲಿ ನಿಜವಾಗಿಯೂ ಸಾಮೂಹಿಕ ದೌರ್ಜನ್ಯ ಮತ್ತು ಭಯಾನಕತೆಯನ್ನು ತೋರಿಸಲು ಸಾಧ್ಯವಾಗದ ಸಮಯವಿಲ್ಲ, ಮತ್ತು ಅನೇಕ ವಿಧಗಳಲ್ಲಿ ನಾವು ಹಿಂದಿನ ಶತಮಾನಗಳ ದೌರ್ಜನ್ಯ ಮತ್ತು ಭಯಾನಕತೆಗೆ ಹೋಲಿಸಿದರೆ ನಾವು ಎಷ್ಟೋ ಉತ್ತಮ ಸ್ಥಾನ ಮತ್ತು ಯುಗದಲ್ಲಿದ್ದೇವೆ.

ಆದರೆ, ಅದೇನೇ ಇದ್ದರೂ, ಯಾವಾಗಲೂ ಜನರು ದುಃಖ ಮತ್ತು ದುಷ್ಟತನದ ತೀವ್ರತೆಯನ್ನು ಎದುರಿಸುತ್ತಿರುತ್ತಾರೆ. ನನ್ನನ್ನು ಕಾಡುವ ಒಂದು ಪ್ರಶ್ನೆಯೆಂದರೆ: ಆ ವಿಪರೀತ ಸಂದಿಗ್ಧ ಸಮಯದಲ್ಲಿ ಜನರಿಗೆ ಏನು ಬೇಕು? ವಿಯೆಟ್ನಾಂನ ಅನುಭವಿ, ಮಾಜಿ ಸೈನಿಕರಾದ ಕೀತ್ ನೈಟಿಂಗೇಲ್, "ನರಿಗುಂಡಿಗಳಲ್ಲಿ ನಾಸ್ತಿಕರು ಇಲ್ಲ" ಎಂಬುದು ನಿಜವಲ್ಲ, ಬದಲಿಗೆ: ಯುದ್ಧದ ಅನುಭವವು ಜನರಿಗೆ ಆಯ್ಕೆ ಮಾಡುವ ಕ್ಷಣವನ್ನು ಒತ್ತಾಯಿಸುತ್ತದೆ ಎಂದು ವಾದಿಸಿದರು. ಜನರು ಅಂತಹ ಭಯಾನಕ ವಿಷಯಗಳಲ್ಲಿ ತಮ್ಮನ್ನು ಕರೆದೊಯ್ದ ದೇವರನ್ನು ವಿಶ್ವಾಸಿಸಬೇಕೆಂದು ನಿರ್ಧರಿಸಬೇಕು, ಅಥವಾ ಅಂತಹ ಭಯಾನಕ ವಿಷಯಗಳನ್ನು ಸಂಭವಿಸಲು ಅನುಮತಿಸುವ ದೇವರನ್ನು ವಿಶ್ವಾಸಿಸಲು ಸಾಧ್ಯವಿಲ್ಲ.

ಕಥೋಲಿಕ ಧರ್ಮದೊಳಗೆ ಅದಕ್ಕೆ ಹೊಂದಿಕೊಂಡ ಒಂದು ಪ್ರವಾಹವಿದೆ ಎಂದು ನಾನು ಯಾವಾಗಲೂ ಕಂಡುಕೊಂಡಿದ್ದೇನೆ -ಅದೇನೆಂದರೆ ತೀವ್ರವಾದ ನೋವು, ತೀವ್ರ ಭಯಾನಕತೆ, ನಿಮ್ಮ ಪ್ರಾರ್ಥನೆಗಳಿಗೆ ಯಾವಾಗಲೂ ಬಾಗದ ಬ್ರಹ್ಮಾಂಡದೊಂದಿಗಿನ ಮುಖಾಮುಖಿ ಸನ್ನಿವೇಶಗಳು. ಅದರ ಬಗ್ಗೆ ನನಗೆ ತುಂಬಾ ಸುಂದರವಾದ ಮತ್ತು ಶಕ್ತಿಯುತವಾದ ವಿಷಯಗಳಿವೆ. ಆ ನಿಟ್ಟಿನಲ್ಲಿ ʼನಮೋ ರಾಣಿಯ ಪ್ರಾರ್ಥನೆʼ ಒಂದು ಅದ್ಭುತ ಪ್ರಾರ್ಥನೆಯಾಗಿದೆ: “ಏವೆಯ ಬಹಿಷ್ಕೃತ ಮಕ್ಕಳಾದ, ನಾವು ನಿಮಗೆ ಮೊರೆಯಿಡುತ್ತೇವೆ, ಈ ಕಣ್ಣೀರಿನ ಕಣಿವೆಯಲ್ಲಿ ಬಹಳ ಸಂಕಟದಿಂದ ಅತ್ತು ಪ್ರಲಾಪಿಸುತ್ತೇವೆ.” ಇದು ವಿನಾಶಕಾರಿಯಾಗಿ ಒಂದು ಮಂಕಾದ ಪ್ರಾರ್ಥನೆ ಮತ್ತು ಅದೇ ಸಮಯದಲ್ಲಿ, ಇದು ಒಂದು ಪ್ರಾರ್ಥನೆಯಾಗಿದೆ. ಇದು ಹತಾಶೆಯ ಕ್ರಿಯೆಯಲ್ಲ. ಸುಳ್ಳು ಸಾಂತ್ವನ ಅಥವಾ ಸುಳ್ಳು ಭರವಸೆಯನ್ನು ನೀಡುವ ಪ್ರಾರ್ಥನೆಗಳನ್ನು ಮಾಡಲು ನೀವು ಅಸಮರ್ಥರಾಗಿರುವಾಗ, ಅದು ದೈವಿಕತೆಯನ್ನು ತಲುಪುವುದು.

ವಿಶ್ವಗುರು ಫ್ರಾನ್ಸಿಸ್ ರವರು ಈ ಜ್ಯೂಬಿಲಿ ವರ್ಷವನ್ನು ಭರವಸೆಯ ವಿಷಯಕ್ಕೆ ಮೀಸಲಿಡಲು ಆಯ್ಕೆ ಮಾಡಿಕೊಂಡಿರುವುದಕ್ಕೆ ಒಂದು ಕಾರಣವೆಂದರೆ, ವಿಶ್ವಾದ್ಯಂತ ಘರ್ಷಣೆಗಳು ಹೆಚ್ಚಾಗುತ್ತಿರುವ ಬಗ್ಗೆ ಅವರ ಕಾಳಜಿ ಮತ್ತು ಪರ್ಯಾಯವನ್ನು ಒದಗಿಸುವ ಅವರ ಬಯಕೆ. ಈ ವಿಷಯದಲ್ಲಿ ಅವರು ಹೆಚ್ಚಾಗಿ ಉಲ್ಲೇಖಿಸುವ ವಿಷಯವೆಂದರೆ 'ಮೂರನೇ ಮಹಾಯುದ್ಧವು ಭಾಗಶ: ನಡೆಯಿತು' ಎಂಬ ಅವರ ಕಲ್ಪನೆ. ನೀವು ಆಧುನಿಕ ಯುದ್ಧದ ಬಗ್ಗೆ ಬರೆಯುವಾಗ ನೀವು ಏನು ಮಾತನಾಡುತ್ತಿದ್ದೀರಿ ಎಂಬುದಕ್ಕೆ ಇದು ನಿಜವಾಗಿಯೂ ಹೋಲುತ್ತದೆ ಎಂದು ನನಗೆ ತೋರುತ್ತದೆ.

ನೀವು ಅದನ್ನು ಉಲ್ಲೇಖಿಸುವುದು ತಮಾಷೆಯಾಗಿದೆ. ರೋಮ್‌ನಲ್ಲಿ ನಡೆದ ಕಥೋಲಿಕ ಕಲ್ಪನೆಗೆ ಕುರಿತಾದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಅದೃಷ್ಟ ನನಗಿತ್ತು ಮತ್ತು ನಾವು ವಿಶ್ವಗುರುಗಳೊಂದಿಗೆ ಸಂಕ್ಷಿಪ್ತವಾಗಿ ಮಾತನಾಡಲು ಅವಕಾಶ ಪಡೆದೆವು. ಆ ವಿಶ್ವಪರಿಪತ್ರ ಮತ್ತು ಹೊಸ ಮಹಾಯುದ್ಧದ ಅಭಿಪ್ರಾಯಗಳ ಕುರಿತು ಬರೆದಿದ್ದಕ್ಕಾಗಿ ನಾನು ಅವರಿಗೆ ನಿರ್ದಿಷ್ಟವಾಗಿ ಧನ್ಯವಾದ ಹೇಳಿದೆ, ಏಕೆಂದರೆ ವಿಶ್ವದಾದ್ಯಂತ ನಾನು ಏನು ನಡೆಯುತ್ತಿದೆ ಎಂಬುದನ್ನು ವಿವರಿಸಲು ಅದು ತುಂಬಾ ಸೂಕ್ತವಾದ ಮಾರ್ಗವಾಗಿದೆ ಎಂದು ನಾನು ಭಾವಿಸುತ್ತೇನೆ.

ನೀವು ಇನ್ನೇನಾದರೂ ಸೇರಿಸಲು ಬಯಸುತ್ತೀರಾ?
ಕೆಲವೊಮ್ಮೆ ಜನರು ಕೇಳುತ್ತಾರೆ: ಒಬ್ಬ ವ್ಯಕ್ತಿಯನ್ನು ಕಥೋಲಿಕ ಬರಹಗಾರನನ್ನಾಗಿ ಮಾಡುವುದು ಯಾವುದು? ಈ ಪ್ರಶ್ನೆಗೆ ನಿಖರವಾಗಿ ಹೇಗೆ ಉತ್ತರಿಸಬೇಕೆಂದು ನನಗೆ ಎಂದಿಗೂ ತಿಳಿದಿಲ್ಲ, ಆದರೆ ನಾನು ಮುಖ್ಯವೆಂದು ಭಾವಿಸುವ ಒಂದು ವಿಷಯವೆಂದರೆ, ನಾನು ಕಥೋಲಿಕ ಕಾದಂಬರಿಕಾರನಾಗಿ ಬರೆಯುತ್ತಿದ್ದರೆ, ಹತಾಶೆಯ ಸುಳ್ಳು ಸೌಕರ್ಯದಲ್ಲಿ ನಾನು ಆನಂದಿಸಲು ಸಾಧ್ಯವಿಲ್ಲ. ನಮಗೆ ಹಾಗೆ ಮಾಡಲು ಅವಕಾಶವಿದೆ ಎಂದು ನಾನು ಭಾವಿಸುವುದಿಲ್ಲ. ನೀವು ಭರವಸೆಯ ಭಾವನೆಯಿಂದ ಬರೆಯಬೇಕು ಎಂದು ನಾನು ಭಾವಿಸುತ್ತೇನೆ. ತುಂಬಾ ಕಷ್ಟಕರವಾದ ಪ್ರಪಂದ ಮುಂದೆ ಅದು ಉಕ್ಕಿನಂತಹ ಭರವಸೆಯಾಗಿರಬಹುದು, ಆದರೆ ನೀವು ಭರವಸೆಯ ಭಾವನೆಯಿಂದ ಬರೆಯಬೇಕು.

24 ಜನವರಿ 2025, 16:22