ಅಮೆರಿಕದ ಭಯೋತ್ಪಾದಕ ಪಟ್ಟಿಯಿಂದ ಕ್ಯೂಬಾವನ್ನು ತೆಗೆದುಹಾಕಲು ನಿರ್ಧರಿಸಿದೆ
ಕ್ರಿಸ್ಟೋಫರ್ ವೆಲ್ಸ್
ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನ (ಯುಎಸ್‌ಸಿಸಿಬಿ) ಅಂತರರಾಷ್ಟ್ರೀಯ ನ್ಯಾಯ ಮತ್ತು ಶಾಂತಿ ಸಮಿತಿಯ ಅಧ್ಯಕ್ಷರಾದ ಧರ್ಮಾಧ್ಯಕ್ಷರಾದ ಎ. ಎಲಿಯಾಸ್ ಜೈದಾನ್ ರವರು, ಕ್ಯೂಬಾವನ್ನು ಭಯೋತ್ಪಾದನೆಯ ರಾಜ್ಯ ಪ್ರಾಯೋಜಕರ ಪಟ್ಟಿಯಿಂದ ತೆಗೆದುಹಾಕುವ ಬೈಡೆನ್ ರವರು ಆಡಳಿತದ ನಿರ್ಧಾರವನ್ನು ಶ್ಲಾಘಿಸಿದ್ದಾರೆ - ಈ ನಿರ್ಧಾರವನ್ನು ಜನವರಿ 14, ಮಂಗಳವಾರ ಶ್ವೇತಭವನವು ಕಾಂಗ್ರೆಸ್‌ಗೆ ಪ್ರಮಾಣೀಕರಿಸಿದೆ.
ಇದಕ್ಕೂ ಮೊದಲು, ಕಳೆದ ವರ್ಷದ ಜುಲೈನಲ್ಲಿ, ಧರ್ಮಾಧ್ಯಕ್ಷರಾದ ಜೈದಾನ್ ರವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ರವರಿಗೆ ಪತ್ರ ಬರೆದು "ಕ್ಯೂಬದ ಜನರ ಒಳಿತಿಗಾಗಿ ನಮ್ಮ ದೇಶದ ಪಾಲ್ಗೊಳ್ಳುವಿಕೆಯನ್ನು ಗರಿಷ್ಠಗೊಳಿಸಲು" ಒತ್ತಾಯಿಸಿದರು.
ಮಂಗಳವಾರದ ನಿರ್ಧಾರದ ನಂತರದ ತಮ್ಮ ಹೇಳಿಕೆಯಲ್ಲಿ, ಧರ್ಮಾಧ್ಯಕ್ಷರಾದ ಜೈದಾನ್ ರವರು, "ದಶಕಗಳಿಂದ, ಪವಿತ್ರ ಪೀಠ ಅಧಿಕಾರವು, ಕ್ಯೂಬದ ಧರ್ಮಾಧ್ಯಕ್ಷರುಗಳು ಮತ್ತು ಬಹುಪಾಲು ಅಂತರರಾಷ್ಟ್ರೀಯ ಸಮುದಾಯದ ಜೊತೆಗೂಡಿ, ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನ (ಯುಎಸ್‌ಸಿಸಿಬಿ) ಮತ್ತು ಕ್ಯೂಬಾ ನಡುವೆ ಸಹಯೋಗ ಮತ್ತು ಪರಸ್ಪರ ಪ್ರಯೋಜನಕಾರಿ ಸಂಬಂಧಗಳನ್ನು ಹಾಗೂ ದ್ವೀಪ ರಾಷ್ಟ್ರದ ವಿರುದ್ಧದ ಆರ್ಥಿಕ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಒತ್ತಾಯಿಸಿದೆ" ಎಂದು ಗಮನಿಸಿದರು.
"ಈ ನೀತಿ ಬದಲಾವಣೆಯು ಕ್ಯೂಬಾದೊಂದಿಗಿನ ನಮ್ಮ ದೇಶದ ದ್ವಿಪಕ್ಷೀಯ ನಿಶ್ಚಿಯತೆಯನ್ನು ನವೀಕರಿಸುತ್ತದೆ ಮತ್ತು ಇದು ಅಮೇರಿಕ ಮತ್ತು ಕ್ಯೂಬಾ ಎರಡನ್ನೂ ದ್ವಿಪಕ್ಷೀಯ ವ್ಯಾಪಾರ ಮತ್ತು ನಮ್ಮ ರಾಷ್ಟ್ರಗಳ ನಡುವೆ ಪ್ರಯಾಣಕ್ಕೆ ಹೆಚ್ಚಿನ ಲಭ್ಯತೆಯ ಅವಕಾಶವನ್ನು ಒಳಗೊಂಡಂತೆ ಹೆಚ್ಚಿನ ಮಟ್ಟದ ಸಹಯೋಗವನ್ನು ಅನ್ವೇಷಿಸಲು ಪ್ರೇರೇಪಿಸುತ್ತದೆ" ಎಂದು ಧರ್ಮಾಧ್ಯಕ್ಷರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೇ "ದ್ವಿಪಕ್ಷೀಯ ಸಹಯೋಗ ಮತ್ತು ಸಹಕಾರಕ್ಕೆ ಹೆಚ್ಚಿನ ಬದ್ಧತೆಯ ಮೂಲಕ ಕ್ಯೂಬಾದ ಜನರಿಗೆ ಸಾಂಸ್ಕೃತಿಕ ವಿನಿಮಯ ಮತ್ತು ಬಲವಾದ ಆರ್ಥಿಕತೆ ಸೇರಿದಂತೆ ಸಕಾರಾತ್ಮಕ ಬದಲಾವಣೆ ತರುತ್ತದೆ" ಎಂದು ಹೇಳಿದರು.
ಕ್ಯೂಬಾ ಕೈದಿಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ
ಈ ವಾರದ ಆರಂಭದಲ್ಲಿ, ಮತ್ತು ಅಧ್ಯಕ್ಷ ಬೈಡೆನ್ ರವರು ಕ್ಯೂಬಾವನ್ನು ಭಯೋತ್ಪಾದನೆಯ ರಾಜ್ಯ ಪ್ರಾಯೋಜಕರ ಪಟ್ಟಿಯಿಂದ ತೆಗೆದುಹಾಕುವ ನಿರ್ಧಾರವನ್ನು ಘೋಷಿಸಿದ ನಂತರ, ಕ್ಯೂಬದ ಸರ್ಕಾರವು "ವಿಶ್ವಗುರು ಫ್ರಾನ್ಸಿಸ್ ರವರು ಘೋಷಿಸಿದ 2025ರ ಸಾಮಾನ್ಯ ಜೂಬಿಲಿ ಉತ್ಸಾಹದಲ್ಲಿ" ವಿವಿಧ ಅಪರಾಧಗಳಿಗೆ, ಶಿಕ್ಷೆಗೊಳಗಾದ 553 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.
ಕ್ಯೂಬಾದ ವಿದೇಶಾಂಗ ಸಚಿವಾಲಯದ ಹೇಳಿಕೆಯು, ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಕ್ಯೂಬಾದ ಅಧ್ಯಕ್ಷ ಡಿಯಾಜ್-ಕ್ಯಾನೆಲ್ ರವರು ಆಗಸ್ಟ್ 2022ರಲ್ಲಿ ಕೈದಿಗಳ ದುಃಸ್ಥಿತಿ ಮತ್ತು ಕ್ಯೂಬಾದ ಕಡೆಗೆ ಅಮೆರಿಕದ ನೀತಿಯ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಗಮನಿಸಿದೆ.
ಕ್ಯೂಬಾದ ಸುದ್ದಿಯು, ವ್ಯಾಟಿಕನ್ ಸುದ್ದಿಯೊಂದಿಗೆ ನೀಡಿದ ಹೇಳಿಕೆಗಳಲ್ಲಿ, ಪವಿತ್ರ ಪೀಠ ಅಧಿಕಾರವು ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರ, "ಹವಾನಾ ಅಧಿಕಾರಿಗಳು ಈ ನಿರ್ಧಾರವನ್ನು ವಿಶ್ವಗುರು ಫ್ರಾನ್ಸಿಸ್ ರವರ ಮನವಿಗೆ ನೇರವಾಗಿ ಲಿಂಕ್ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ, ಅವರು ಜೂಬಿಲಿಯ ವಿಶ್ವಗುರುಗಳ ಆಜ್ಞಾಪತ್ರದಲ್ಲಿ (ಜೂಬಿಲಿಯ ಬುಲ್ ಆಫ್ ಇಂಡಿಕ್ಷನ್) ಮತ್ತು ನಂತರ ಹಲವಾರು ಇತರ ಸಂದರ್ಭಗಳಲ್ಲಿ, ಈ ಪವಿತ್ರ ವರ್ಷದಲ್ಲಿ ಆಗಾಗ್ಗೆ, ಈ ರೀತಿಯ ಪ್ರಕ್ರಿಯೆಗಳು ಸಂಭವಿಸಿದಂತೆ ಕ್ಷಮಾದಾನದ ಕಾರ್ಯಗಳಿಗೆ ಕರೆ ನೀಡಿದರು."
ಕ್ಯೂಬಾ ಈಗಾಗಲೇ ಡಜನ್‌ಗಟ್ಟಲೆ ಕೈದಿಗಳನ್ನು ಬಿಡುಗಡೆ ಮಾಡಿದೆ, ಅವರಲ್ಲಿ ಸರ್ಕಾರದ ವಿರುದ್ಧ ಹೋರಾಡಿದ ಪ್ರಮುಖ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾದ ಜೋಸ್ ಡೇನಿಯಲ್ ಫೆರರ್ ಗಾರ್ಸಿಯಾರವರು ಕೂಡ ಒಬ್ಬರು. ಮುಂಬರುವ ದಿನಗಳು ಮತ್ತು ವಾರಗಳಲ್ಲಿ ಹೆಚ್ಚಿನ ಕೈದಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.