MAP

FILES-EUROPE-MIGRATION-FRONTEX FILES-EUROPE-MIGRATION-FRONTEX  (AFP or licensors)

ಮೆಡಿಟರೇನಿಯನ್ ನೌಕಾಘಾತದಲ್ಲಿ- ವಲಸಿಗರು ಕಾಣೆಯಾಗಿದ್ದಾರೆ

ಲ್ಯಾಂಪೆಡುಸಾ ಬಳಿ ದೋಣಿ ಮುಳುಗಿದ ನಂತರ 20 ಕ್ಕೂ ಹೆಚ್ಚು ವಲಸಿಗರು ಕಾಣೆಯಾಗಿದ್ದಾರೆ, ಇದು ಮೆಡಿಟರೇನಿಯನಲ್ಲಿ ನಡೆಯುತ್ತಿರುವ ವಲಸೆ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ.

ಫ್ರಾನ್ಸೆಸ್ಕಾ ಮೆರ್ಲೊ

ಮೆಡಿಟರೇನಿಯನ್ ನೀರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜೀವಗಳು ದುರಂತದಲ್ಲಿ ಬಲಿಯಾಗುತ್ತಿವೆ, ಅನೇಕ ಹಿಂದಿನಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರತಿಧ್ವನಿಸುತ್ತದೆ ಮತ್ತು ವಲಸಿಗರು ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟನ್ನು ನಮಗೆ ನೆನಪಿಸುತ್ತದೆ.

ಒಂದು ವರ್ಷದ ಮುಕ್ತಾಯವನ್ನು ಮತ್ತು ಹೊಸವರ್ಷದ ಹೊಸ ಪ್ರಾರಂಭವನ್ನು ಜಗತ್ತು ಆಚರಿಸುತ್ತಿರುವಾಗ, ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಚಿಕ್ಕ ದೋಣಿ ಲ್ಯಾಂಪೆಡುಸಾ ಕರಾವಳಿಯಲ್ಲಿ ಮುಳುಗಿತು.

ಸುಮಾರು 20 ಮಂದಿ ನಾಪತ್ತೆಯಾಗಿದ್ದಾರೆ. ದಡಕ್ಕೆ ಬರುತ್ತಿದ್ದಂತೆ ದೋಣಿ ಮಗುಚಿ ಬಿದ್ದಿದೆ ಎಂದು ವರದಿಗಳು ತಿಳಿಸಿವೆ.

ನೌಕಾಘಾತದಿಂದ ಏಳು ಜನರು ಬದುಕುಳಿದರು, ಇವರಲ್ಲಿ ಎಂಟು ವರ್ಷದ ಬಾಲಕ ತನ್ನ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದನು, ಕಾಣೆಯಾದವರಲ್ಲಿ ಇವನೂ ಸಹ ಇದ್ದನು.

ಸಿಸಿಲಿಯನ್ ದ್ವೀಪದ ಬಳಿ ಮತ್ತೊಂದು ಮಾರಣಾಂತಿಕ ಘಟನೆಯು ಸಂಭವಿಸಿ, ಒಂದು ವಾರಗಳ ನಂತರ ಈ ದುರಂತದ ವಿಷಯವು ಹೊರಬರುತ್ತಿದೆ. ಈ ದರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ 11 ವರ್ಷದ ಬಾಲಕಿ ಮಾತ್ರ.

2024: ಮೆಡಿಟರೇನಿಯನ್ ಸಮುದ್ರದಲ್ಲಿ ಒಂದು ಭಯಾನಕ ವರ್ಷ
2024 ಮೆಡಿಟರೇನಿಯನ್‌ನಲ್ಲಿ ಅಪಾರ ಜೀವಹಾನಿಯುಂಟು ಮಾಡಿದ ವರ್ಷವಾಗಿತ್ತು. ಉತ್ತರ ಆಫ್ರಿಕಾದಿಂದ ಯುರೋಪ್ ನ್ನು ತಲುಪುವ ಪ್ರಯತ್ನದಲ್ಲಿ 2,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎಂದು ಯುನಿಸೆಫ್ ವರದಿ ಮಾಡಿದೆ, ಮಧ್ಯ ಮೆಡಿಟರೇನಿಯನ್ ಮಾರ್ಗದಲ್ಲಿ ಮಾತ್ರ ಸುಮಾರು 1,700 ಸಾವುಗಳು ದಾಖಲಾಗಿವೆ.

ಈ ಅಪಾಯಕಾರಿ ಪ್ರಯಾಣವನ್ನು ಮಾಡುವ ಐದು ವಲಸಿಗರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದಾರೆ, ಅವರಲ್ಲಿ ಅನೇಕರು ತಮ್ಮ ತಾಯ್ನಾಡಿನಲ್ಲಿ ಹಿಂಸೆ, ಬಡತನ ಮತ್ತು ಅಸ್ಥಿರತೆಯಿಂದ ಪಲಾಯನ ಮಾಡಿದವರಾಗಿದ್ದಾರೆ.

ಈ ಸಂತ್ರಸ್ತರಲ್ಲಿ ನೂರಾರು ಮಕ್ಕಳು, ಸುರಕ್ಷತೆ ಮತ್ತು ಉತ್ತಮ ಭವಿಷ್ಯವನ್ನು ಹುಡುಕುತ್ತಿರುವಾಗ ಜೀವನದ ಅವಕಾಶವನ್ನು ಕಸಿದುಕೊಳ್ಳುತ್ತಿದ್ದಾರೆ. ಅಂತಹ ಅಪಾಯಕಾರಿ ಪ್ರಯಾಣಕ್ಕೆ ಒಳಗಾಗಲು ಪೋಷಕರು ಆಯ್ಕೆಮಾಡುವುದು ಅವರು ಪಲಾಯನ ಮಾಡುತ್ತಿರುವ ದೇಶಗಳಲ್ಲಿನ ಅವರ ಸನ್ನಿವೇಶಗಳ ಆಕರ್ಷಣೆಯನ್ನು ಎತ್ತಿ ತೋರಿಸುತ್ತದೆ.

2014ರಿಂದ ಇಲ್ಲಿಯವರೆಗೆ 28,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಥವಾ "ಕಾಣೆಯಾಗಿದ್ದಾರೆ" ಎಂದ ಅಂತರಾಷ್ಟ್ರೀಯ ವಲಸೆಗಾರರ ಸಂಸ್ಥೆ/ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ (IOM) ಮಾಹಿತಿಯೊಂದಿಗೆ ಮಧ್ಯ ಮೆಡಿಟರೇನಿಯನ್ ಪ್ರಪಂದಲ್ಲೇ ಅತ್ಯಂತ ಮಾರಣಾಂತಿಕ ವಲಸೆ ಮಾರ್ಗವಾಗಿ ಉಳಿದಿದೆ.

ವಿಶ್ವುಗುರು ಫ್ರಾನ್ಸಿಸ್ ರವರ ನಿರಂತರ ಮನವಿಗಳು
ವಿಶ್ವುಗುರು ಫ್ರಾನ್ಸಿಸ್ ರವರು ತಮ್ಮ ಪವಿತ್ರ ಪೀಠಾಧಿಕಾರದ ಪ್ರಾರಂಭದಿಂದಲೂ ವಲಸಿಗರು ಮತ್ತು ನಿರಾಶ್ರಿತರ ಹಕ್ಕುಗಳಿಗಾಗಿ ದ್ವನಿಯೆತ್ತುವುದರಲ್ಲಿ ದಣಿವರಿಯದ ವಕೀಲರಾಗಿದ್ದಾರೆ, ಏಕೆಂದರೆ ಅವರು ಸಮುದ್ರದಲ್ಲಿ ಕಳೆದುಹೋದವರ ಅವಸ್ಥೆಯ ಬಗ್ಗೆ ಆಗಾಗ್ಗೆ ಗಮನ ಹರಿಸಿದ್ದಾರೆ.

ಸೆಪ್ಟೆಂಬರ್ 2023 ರಲ್ಲಿ ವಲಸಿಗರು ಮತ್ತು ನಿರಾಶ್ರಿತರ ವಿಶ್ವ ದಿನದಂದು ತಮ್ಮ ತ್ರಿಕಾಲ ಪ್ರಾರ್ಥನೆಯ ಬೋಧನೆಯ ಭಾಷಣದಲ್ಲಿ, ವಿಶ್ವಗುರುಗಳು ವಲಸೆ ಮಾರ್ಗಗಳಲ್ಲಿ ಕಾಣೆಯಾದ ಅಸಂಖ್ಯಾತ ಜೀವಗಳ ಬಗ್ಗೆ ವಿಷಾದಿಸಿದರು ಮತ್ತು ಈ ಸಾವುಗಳನ್ನು ಎಂದಿಗೂ ಸಾಮಾನ್ಯಗೊಳಿಸಬಾರದು ಎಂದು ನಮಗೆ ನೆನಪಿಸಿದರು.

"ಅಗತ್ಯವಿರುವವರಿಗೆ ನಾವು ನಮ್ಮ ಹೃದಯವನ್ನು ಮುಚ್ಚಬಾರದು. ಸಮುದ್ರದಲ್ಲಿ ಕಳೆದುಹೋದ ಪ್ರತಿಯೊಬ್ಬ ವ್ಯಕ್ತಿಯು ಒಂದೆಲ್ಲ ಒಂದು ರೀತಿಯಲ್ಲಿ ಸಹೋದರ ಅಥವಾ ಸಹೋದರಿ, ತಾಯಿ ಅಥವಾ ತಂದೆ, ಮಗ ಅಥವಾ ಮಗಳು. ಅವು ಬರೀ ಸಂಖ್ಯೆಗಳಲ್ಲ; ಅವು ನಮ್ಮ ಸಹಾನುಭೂತಿ ಮತ್ತು ಕ್ರಿಯೆಗಾಗಿ ಅಳುವ ಜೀವಗಳಾಗಿವೆ,” ಎಂದು ಅವರು ಹೇಳಿದರು.

ಜೂನ್ 13, 2021 ರಂದು, ಸಂತ ಪೇತ್ರರ ಮಹಾದೇವಾಲಯದ ಸಭಾಂಗಣದಲ್ಲಿ ಭಾನುವಾರದ ತ್ರಿಕಾಲ ಪ್ರಾರ್ಥನೆಯ ಬೋಧನೆಯ ಭಾಷಣದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ಮೆಡಿಟರೇನಿಯನ್ ಸಮುದ್ರವನ್ನು "ಯುರೋಪಿನ ಅತಿದೊಡ್ಡ ಸ್ಮಶಾನ" ಎಂದು ಬಣ್ಣಿಸಿದರು.

ವಲಸೆಯ ಮೂಲ ಕಾರಣಗಳನ್ನು ಪರಿಹರಿಸಲು ಮತ್ತು ಕಷ್ಟದಿಂದ ಪಲಾಯನ ಮಾಡುವವರಿಗೆ ಸುರಕ್ಷಿತ, ಕಾನೂನು ಮಾರ್ಗಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವಂತೆ ಅವರು ನಿರಂತರವಾಗಿ ಒತ್ತಾಯಿಸಿದ್ದಾರೆ, ಆಶ್ರಯ ಪಡೆಯುವವರನ್ನು "ಘೋರ ಪಾಪ" ಎಂದು ಹಿಂದಕ್ಕೆ ತಳ್ಳುವ ಕ್ರಮಗಳನ್ನು ವಿವರಿಸಿದ್ದಾರೆ.

ಯುನಿಸೆಫ್ ನ ಕ್ರಮಕ್ಕೆ ಕರೆ
ಇತ್ತೀಚಿನ ದುರಂತದ ಬೆಳಕಿನಲ್ಲಿ, ವಲಸೆ ಮಕ್ಕಳ ಕಲ್ಯಾಣಕ್ಕೆ ಆದ್ಯತೆ ನೀಡಲು ಸರ್ಕಾರಗಳಿಗೆ ಯುನಿಸೆಫ್ ತನ್ನ ಕರೆಯನ್ನು ನವೀಕರಿಸಿದೆ.

ಡಿಸೆಂಬರ್ 31 ರಂದು ನೌಕಾಘಾತದ ನಂತರದ ಹೇಳಿಕೆಯಲ್ಲಿ, ಯುನಿಸೆಫ್ ಯುರೋಪ್ ಮತ್ತು ಮಧ್ಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ರೆಜಿನಾ ಡಿ ಡೊಮಿನಿಸಿಸ್ ರವರು ವಿಶ್ವಗುರು ಫ್ರಾನ್ಸಿಸ್ ರವರ ಮನವಿಯನ್ನು ಪ್ರತಿಧ್ವನಿಸುವ ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದರು.

"ಮಕ್ಕಳ ರಕ್ಷಣೆಯ ಮೇಲೆ ಕೇಂದ್ರೀಕರಿಸಿ ವಲಸೆ ಮತ್ತು ಆಶ್ರಯ ಒಪ್ಪಂದವನ್ನು ಜಾರಿಗೆ ತರಲು ನಾವು ಸರ್ಕಾರಗಳನ್ನು ಒತ್ತಾಯಿಸುತ್ತೇವೆ.

ಇದು ಸುರಕ್ಷಿತ ಮತ್ತು ಕಾನೂನು ಮಾರ್ಗಗಳು, ಹುಡುಕಾಟ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳು, ಸುರಕ್ಷಿತ ಇಳಿಯುವಿಕೆ ಮತ್ತು ಆಶ್ರಯ ಸೇವೆಗಳಿಗೆ ಪ್ರವೇಶವನ್ನು ಒಳಗೊಂಡಿರುತ್ತದೆ. ಸರ್ಕಾರಗಳು ವಲಸೆಯ ಮೂಲ ಕಾರಣಗಳನ್ನು ಪರಿಹರಿಸಬೇಕು ಮತ್ತು ಆತಿಥೇಯ ಸಮುದಾಯಗಳಲ್ಲಿ ಏಕೀಕರಣವನ್ನು ಬೆಂಬಲಿಸಬೇಕು,” ಎಂದು ಅವರು ಬರೆದಿದ್ದಾರೆ.

ಯುನಿಸೆಫ್ ವಲಸೆ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಅಗತ್ಯ ಸೇವೆಗಳಿಗೆ ಹೂಡಿಕೆಗೆ ಕರೆ ನೀಡುತ್ತದೆ, ವಿಶೇಷವಾಗಿ ಮಾನಸಿಕ ಬೆಂಬಲ, ಆರೋಗ್ಯ ರಕ್ಷಣೆ, ಕಾನೂನು ನೆರವು ಮತ್ತು ಶಿಕ್ಷಣದ ಕ್ಷೇತ್ರಗಳಲ್ಲಿ ಅಗತ್ಯ ಸೇವೆಗಳಿಗೆ ಹೂಡಿಕೆಗೆ ಕರೆ ನೀಡುತ್ತದೆ.

ದುರಂತದ ನಡುವೆ ಭರವಸೆ
ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಯುನಿಸೆಫ್, ಪ್ರಪಂದಾದ್ಯಂತದ ಇತರ ಮಾನವ ಹಕ್ಕುಗಳ ಸಂಘಟನೆಗಳೊಂದಿಗೆ, ಉದಾಸೀನತೆಯ ವಿರುದ್ಧ ಹೋರಾಡಲು ಮತ್ತು ಈ ದೀರ್ಘಕಾಲೀನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಕರೆಯನ್ನು ಪ್ರತಿಧ್ವನಿಸುತ್ತಿದ್ದಾರೆ, ಇದರಿಂದಾಗಿ ಎಲ್ಲಾ ಜನರು ಸಹಾನುಭೂತಿಯಿಂದ ಸುರಕ್ಷಿತವಾಗಿ ಬದುಕಬಹುದು.

02 ಜನವರಿ 2025, 10:54