MAP

Kiswah esposta alla Biennale di Jeddah Kiswah esposta alla Biennale di Jeddah 

ಸೌದಿ ಅರೇಬಿಯಾ: ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು – ಕಲೆಯ ಪ್ರದರ್ಶನ

"ಸೌದಿ ವಿಷನ್ 2030" ಕಾರ್ಯಕ್ರಮದ ಭಾಗವಾಗಿ, ಸೌದಿ ಅರೇಬಿಯಾ ಸಾಮ್ರಾಜ್ಯವು ಇಸ್ಲಾಂ ಧರ್ಮದ ಕಲೆಯ ಪ್ರದರ್ಶನದ (ಇಸ್ಲಾಮಿಕ್ ಆರ್ಟ್ಸ್ ಬಿಯೆನ್ನೆಲ್‌ನ) ಎರಡನೇ ಆವೃತ್ತಿಯನ್ನು ಪ್ರಾರಂಭಿಸುತ್ತದೆ, ಈ ವರ್ಷ ವ್ಯಾಟಿಕನ್ ಪ್ರೇಷಿತ ಗ್ರಂಥಾಲಯದ ಭಾಗವಹಿಸುವಿಕೆಯನ್ನು ಇದು ನೋಡುತ್ತದೆ. ಈ ಕಾರ್ಯಕ್ರಮವು ಇಸ್ಲಾಂ ಧರ್ಮ ರಾಷ್ಟ್ರದ ರೂಪಾಂತರಗಳನ್ನು ಪ್ರದರ್ಶಿಸುವ ಹೊಸ ಸೌದಿ ಕಲಾವಿದರ ಬಗ್ಗೆ ಒತ್ತಿ ಹೇಳುತ್ತದೆ.

ಫ್ಯಾಬಿಯೊ ಕೊಲಾಗ್ರಾಂಡೆ, ಜೆದ್ದಾ

"ಇಸ್ಲಾಮಿಕ್ ಆರ್ಟ್ಸ್ ಬಿಯೆನ್ನೆಲ್" ನ (ಇಸ್ಲಾಂ ಧರ್ಮದ ಕಲೆಯ ಪ್ರದರ್ಶನದ) ಎರಡನೇ ಆವೃತ್ತಿಯು 2025 ರ ಜನವರಿ 25 ರಿಂದ ಮೇ 25 ರವರೆಗೆ, ರಾಜಧಾನಿ ರಿಯಾದ್ ನಂತರ ಸೌದಿ ಸಾಮ್ರಾಜ್ಯದ ಎರಡನೇ ಅತಿದೊಡ್ಡ ನಗರವಾದ ಕೆಂಪು ಸಮುದ್ರದ ಬಂದರು ನಗರವಾದ ಜೆದ್ದಾದಲ್ಲಿ ನಡೆಯಲಿದೆ.

ಈ ಉಪಕ್ರಮದ ಉದ್ದೇಶವು ಇಸ್ಲಾಂ ಧರ್ಮದ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ವೈವಿಧ್ಯತೆಗೆ ಧ್ವನಿ ನೀಡುವುದಾಗಿದೆ, ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಸೌದಿ ಅರೇಬಿಯಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಯ ಈ ಐತಿಹಾಸಿಕ ಕ್ಷಣದಲ್ಲಿ ಅದರ ಚೈತನ್ಯವನ್ನು ಪ್ರದರ್ಶಿಸುವುದಾಗಿದೆ.

ಅಭೂತಪೂರ್ವ ಸಾಂಸ್ಕೃತಿಕ ಸಂಭ್ರಮ
2015 ರಿಂದ ಈ ಇಸ್ಲಾಂ ಧರ್ಮದ ಸಂಪೂರ್ಣ ರಾಜಪ್ರಭುತ್ವವನ್ನು ಆಳುತ್ತಿರುವ ರಾಜ ಸಲ್ಮಾನ್ ರವರ ರಾಜ್ಯವನ್ನು ಇಂದು ಭೇಟಿ ಮಾಡುವುದರಿಂದ, ದೇಶವು ಅಭೂತಪೂರ್ವ ಕಲಾತ್ಮಕ ಮತ್ತು ಸಾಂಸ್ಕೃತಿಕ ಸಂಭ್ರಮವನ್ನು ಅನುಭವಿಸುತ್ತಿದೆ ಎಂದು ಬಹಿರಂಗಪಡಿಸುತ್ತದೆ. ಕಲೆಗೆ ಮಾತ್ರ ಮೀಸಲಾಗಿರುವ ಇಪ್ಪತ್ತೇಳು ವಸ್ತುಸಂಗ್ರಹಾಲಯಗಳು ಉದ್ಘಾಟನೆಗೆ ಸಿದ್ಧವಾಗಿವೆ ಮತ್ತು ಕೌಂಟಿ ಏಳು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಒಳಗೊಂಡಿದೆ.

ಇವುಗಳಲ್ಲಿ ಅಲ್-ಬಲಾದ್ (ದಿ ಟೌನ್) ಕೂಡ ಒಂದು. ಇದು ಜೆದ್ದಾದ ಐತಿಹಾಸಿಕ ಕೇಂದ್ರವಾಗಿದ್ದು, ಅದರ ಸಾಂಪ್ರದಾಯಿಕ ಹವಳದ ಕಲ್ಲಿನ ಕಟ್ಟಡಗಳು ಮತ್ತು ಮರದ "ರೋಶನ್" ಬಾಲ್ಕನಿಗಳನ್ನು ಹೊಂದಿದೆ. ಇದು ಪ್ರಸ್ತುತ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ರವರು ನಿಯೋಜಿಸಿದ $13 ಮಿಲಿಯನ್ ಯೋಜನೆಯಡಿಯಲ್ಲಿ ಪುನಃಸ್ಥಾಪನೆಗೆ ಒಳಗಾಗುತ್ತಿದೆ.

ತೈಲ ಅವಲಂಬಿತ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು 2016 ರಲ್ಲಿ ಪ್ರಾರಂಭಿಸಲಾದ "ಸೌದಿ ವಿಷನ್ 2030" ರ ಚೌಕಟ್ಟಿನೊಳಗೆ ಈ "ಪ್ರಾಚೀನ ಪಟ್ಟಣ"ವನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಪರಿವರ್ತಿಸುವುದು ಸೌದಿ ಸರ್ಕಾರದ ಅನೇಕ ಬದ್ಧತೆಗಳಲ್ಲಿ ಒಂದಾಗಿದೆ. ಕ್ರೀಡೆಗಳ ಜೊತೆಗೆ ವಸ್ತು ಸಂಗ್ರಹಾಲಯಗಳ ಕೇಂದ್ರಗಳ ರಚನೆ ಮತ್ತು ಅಂತರರಾಷ್ಟ್ರೀಯ ಕಲಾ ಮಾರುಕಟ್ಟೆಯ ಅಭಿವೃದ್ಧಿ ಸೇರಿದಂತೆ ಸಾಂಸ್ಕೃತಿಕ ಬೆಳವಣಿಗೆ ಈ ಕಾರ್ಯತಂತ್ರದ ಮೂಲಾಧಾರಗಳಲ್ಲಿ ಒಂದಾಗಿದೆ.

ಭೂತ ಮತ್ತು ವರ್ತಮಾನ
ಕಾಕತಾಳೀಯವಲ್ಲ, ಜೆಡ್ಡಾ ಬಿಯೆನ್ನಲ್(ಪ್ರದರ್ಶನ)ನ್ನು ಸ್ಥಾಪಿಸಿದ ಮತ್ತು ನಿರ್ವಹಿಸುವ ಸೌದಿ ಘಟಕವಾದ ದಿರಿಯಾ ಬಿಯೆನ್ನಲ್ ಫೌಂಡೇಶನ್, ಇಸ್ಲಾಮಿಕ್ ಆರ್ಟ್ಸ್ ಬಿಯೆನ್ನಲ್‌ಗೆ(ಇಸ್ಲಾಂ ಧರ್ಮದ ಕಲೆಯ ಪ್ರದರ್ಶನದ) ಪರ್ಯಾಯ ವರ್ಷಗಳಲ್ಲಿ ರಿಯಾದ್‌ನಲ್ಲಿ ನಡೆಯುವ ಅದೇ ಹೆಸರಿನ ಸಮಕಾಲೀನ ಕಲಾ ಬಿಯೆನ್ನಲ್ ಅನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.

ಐತಿಹಾಸಿಕ ಕಲಾಕೃತಿಗಳು ಮತ್ತು ಸಮಕಾಲೀನ ಕೃತಿಗಳ ಹೆಣೆದುಕೊಂಡಿರುವಿಕೆ ಇಸ್ಲಾಮಿಕ್ ಆರ್ಟ್ಸ್ ಬಿಯೆನ್ನೆಲ್ ಅನ್ನು ವ್ಯಾಖ್ಯಾನಿಸುತ್ತದೆ. ಐನೂರು ವಸ್ತುಗಳನ್ನು ಪ್ರದರ್ಶಿಸಲು, ಇಟಾಲಿಯನ್ ಆರ್ಕಾಂಗೆಲೊ ಸಸ್ಸೊಲಿನೊ ಸೇರಿದಂತೆ ಇಸ್ಲಾಂ ಧರ್ಮದ ಪ್ರಪಂ ಮತ್ತು ಅದರಾಚೆಗಿನ ಇಪ್ಪತ್ತು ಕಲಾವಿದರು ಮತ್ತು ಇಪ್ಪತ್ತಕ್ಕೂ ಹೆಚ್ಚು ದೇಶಗಳಿಂದ ಮೂವತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಿವೆ.

ಇವುಗಳಲ್ಲಿ ವ್ಯಾಟಿಕನ್ ಪ್ರೇಷಿತ ಗ್ರಂಥಾಲಯ ಮತ್ತು ಜಿನೋವಾದಲ್ಲಿರುವ ಇಸ್ಲಾಂ ಧರ್ಮ ಮತ್ತು ಏಷ್ಯನ್ ಕಲೆಗಾಗಿ ಬ್ರುಸ್ಚೆಟ್ಟಿನಿ ಫೌಂಡೇಶನ್‌ನ ಕೊಡುಗೆಗಳು ಸೇರಿವೆ.

ಸಮಕಾಲೀನ ಕಲಾವಿದರು
ಸೌದಿ ಅರೇಬಿಯಾ ಮತ್ತು ಅದರಾಚೆಗಿನ ಇಸ್ಲಾಂ ಧರ್ಮದ ಕಲೆಯ ಚೈತನ್ಯವು, ಈ ವರ್ಷ ಮತ್ತೊಮ್ಮೆ ಜೆದ್ದಾದ ಕಿಂಗ್ ಅಬ್ದುಲಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಶ್ಚಿಮ ಹಜ್ ಟರ್ಮಿನಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಲವಾರು ಕಲಾವಿದರ ಪ್ರಚಾರಗಳು ಸ್ಪಷ್ಟವಾಗಿ ಕಂಡುಬರುತ್ತದೆ, ಇದು ಹತ್ತಿರದ ಮೆಕ್ಕಾಗೆ ಪ್ರಯಾಣಿಸುವ ಲಕ್ಷಾಂತರ ಯಾತ್ರಿಕರಿಗೆ ದ್ವಾರವಾಗಿದೆ.

ಜೆಡ್ಡಾದ ಮೂಲದ ಸಾರಾ ಮೋಹನ ಅಲ್ ಅಬ್ದಾಲಿರವರು, ಅವರು ನಗರದ ಐತಿಹಾಸಿಕ ಪ್ರದೇಶದಲ್ಲಿ ಸ್ಪ್ರೇ-ಪೇಂಟಿಂಗ್ ಗೀಚುಬರಹವನ್ನು ಪ್ರಾರಂಭಿಸಿದರು, ಇದು ಪವಿತ್ರ ನಗರದ ಅತಿಯಾದ ಅಭಿವೃದ್ಧಿಯ ಬಗ್ಗೆ ಇತರ ವಿಷಯಗಳ ಬಗ್ಗೆ ಟೀಕೆ ಮಾಡಿತು.

ನಂತರ 16 ನೇ ಶತಮಾನದ ಮೊಘಲ್ ಚಿಕಣಿ ಕಲೆಯ ಸಂಪ್ರದಾಯಕ್ಕೆ ಸಂಬಂಧಿಸಿದ ಸಮಕಾಲೀನ ಅಭ್ಯಾಸವನ್ನು ಅಭಿವೃದ್ಧಿಪಡಿಸಿದ ಪಾಕಿಸ್ತಾನಿ ಕಲಾವಿದ ಇಮ್ರಾನ್ ಖುರೇಷಿರವರು ಇದ್ದಾರೆ. ಅವರು ಆಕಾಶ ಲೋಕ ಮತ್ತು ಮಾನವ ದೇಹದ ದುರ್ಬಲತೆಯ ನಡುವಿನ ವ್ಯತ್ಯಾಸವನ್ನು ಚಿತ್ರಿಸಲು ಚಿನ್ನದ ಎಲೆ ಮತ್ತು ಕೆಂಪು ಅಕ್ರಿಲಿಕ್ ಬಣ್ಣವನ್ನು ಜೋಡಿಸುತ್ತಾರೆ.

ರಿಯಾದ್‌ನಲ್ಲಿ ನೆಲೆಸಿರುವ ಸೌದಿ ಕಲಾವಿದ ಅಹ್ಮದ್ ಮೇಟರ್ ರವರು, ಅವರು ಇಂದು ತಮ್ಮ ದೇಶದ ಎಲ್ಲರ ಗಮನ ಸೆಳೆಯುವ, ಅತ್ಯಂತ ಮಹತ್ವದ ಸಾಂಸ್ಕೃತಿಕ ಧ್ವನಿಗಳಲ್ಲಿ ಒಬ್ಬರು. ತಮ್ಮ ಕೃತಿಗಳೊಂದಿಗೆ ಜೆಡ್ಡಾದಲ್ಲಿ ಇಲ್ಲದಿದ್ದರೂ, ಸೌದಿ ಸಮಕಾಲೀನ ಕಲಾವಿದರ ಸೃಜನಶೀಲ ಚೈತನ್ಯವನ್ನು ಮತ್ತೊಬ್ಬ ಮಹಿಳೆ ಮತ್ತಷ್ಟು ದೃಢಪಡಿಸಿದ್ದಾರೆ: 2024 ರ ವೆನಿಸ್ ಬಿಯೆನ್ನೆಲ್‌ನಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸಿದ ಮನಲ್ ಅಲ್ ಡೊವಾಯನ್ ರವರು. ಅವರ ಕೆಲಸವು ಛಾಯಾಗ್ರಹಣ, ಧ್ವನಿ ಮತ್ತು ಶಿಲ್ಪಕಲೆ, ಸಂಪ್ರದಾಯಗಳು, ಸಾಮೂಹಿಕ ನೆನಪುಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರ ಪ್ರಾತಿನಿಧ್ಯವನ್ನು ವ್ಯಾಪಿಸಿದೆ.

ಇಸ್ಲಾಮಿಕ್ ಆರ್ಟ್ಸ್ ಬಿಯೆನ್ನೆಲ್ ತಮ್ಮ ಕೃತಿಗಳನ್ನು ಪ್ರದರ್ಶಿಸುವ ಮೂಲಕ ಸೌದಿ ರಾಜ್ಯದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಪರಿವರ್ತನೆಯನ್ನು ವೀಕ್ಷಿಸಲು ಜಾಗತಿಕ ಪ್ರೇಕ್ಷಕರನ್ನು ಆಹ್ವಾನಿಸುತ್ತದೆ, ಇದು ಭೂತಕಾಲವನ್ನು ಗೌರವಿಸುವುದರ ಜೊತೆಗೆ ಭವಿಷ್ಯವನ್ನು ಕಲ್ಪಿಸಿಕೊಳ್ಳುವುದನ್ನೂ ಒಳಗೊಂಡಿದೆ.

24 ಜನವರಿ 2025, 16:27