MAP

Syria's foreign minister recieves the UN High Commissioner for Refugees on Jan 25th Syria's foreign minister recieves the UN High Commissioner for Refugees on Jan 25th 

ಸಿರಿಯಾದ ನಿರಾಶ್ರಿತರು ತಮ್ಮ ತಾಯ್ನಾಡಿಗೆ ಮರಳಲು ಒತ್ತಡ

ಸ್ಥಳಾಂತರಗೊಂಡ ಸಿರಿಯಾದ ನಿರಾಶ್ರಿತರ ವಾಪಸಾತಿಯನ್ನು ಸಂಘಟಿಸಲು ಸಹಾಯ ಮಾಡುವಂತೆ ಲೆಬನಾನಿನ ಅಧ್ಯಕ್ಷ ಜೋಸೆಫ್ ಔನ್ ರವರು ವಿಶ್ವಸಂಸ್ಥೆಯ ನಿರಾಶ್ರಿತರ ಶ್ರೇಷ್ಠ ಆಯುಕ್ತ ಅಧಿಕಾರಿಯನ್ನು ಕೇಳಿದ್ದಾರೆ.

ನಾಥನ್ ಮಾರ್ಲಿ

ಸಿರಿಯಾದ ನಿರಾಶ್ರಿತರು ತಮ್ಮ ತಾಯ್ನಾಡಿಗೆ ಮರಳಲು ಸಹಾಯ ಮಾಡಲು ಅಂತರರಾಷ್ಟ್ರೀಯ ಸಮುದಾಯವು ಮಾನವೀಯ ಬೆಂಬಲವನ್ನು ನೀಡಬೇಕೆಂದು ಲೆಬನಾನಿನ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ಬಾಬ್ಡಾ ಅರಮನೆಯಲ್ಲಿ ನಡೆದ ಸಭೆಯಲ್ಲಿ, ಜೋಸೆಫ್ ಔನ್ ರವರು ವಿಶ್ವಸಂಸ್ಥೆಯ ನಿರಾಶ್ರಿತರ ಶ್ರೇಷ್ಠ ಆಯುಕ್ತ ಅಧಿಕಾರಿಯವರನ್ನು, ಸ್ಥಳಾಂತರಗೊಂಡ ಸಿರಿಯಾದ ವಾಪಸಾತಿಯನ್ನು ಸಂಘಟಿಸಲು ಸಹಾಯ ಮಾಡುವಂತೆ ಕೇಳಿಕೊಂಡರು.

ಸಿರಿಯಾದ ನಿರಾಶ್ರಿತರು ಸಾಧ್ಯವಾದಷ್ಟು ಬೇಗ ಮನೆಗೆ ಮರಳಬೇಕೆಂದು ಲೆಬನಾನ್ ಬಯಸುತ್ತದೆ, ವಿಶೇಷವಾಗಿ ಅವರ ಸ್ಥಳಾಂತರಕ್ಕೆ ಕಾರಣವಾಗುವ ಅಂಶಗಳನ್ನು ಈಗ ಪರಿಹರಿಸಲಾಗಿದೆ ಎಂದು ಅವರು ಹೇಳಿದರು.

ಹೆಚ್ಚಿನ ಸಂಖ್ಯೆಯ ನಿರಾಶ್ರಿತರಿಗೆ ಆಶ್ರಯ ನೀಡುವ ಹೊರೆಯನ್ನು ಲೆಬನಾನ್ ಇನ್ನು ಮುಂದೆ ಹೊರಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

ಅಧ್ಯಕ್ಷ ಅಸ್ಸಾದ್ ರವರು ಪದಚ್ಯುತಗೊಂಡ ನಂತರ, ಲೆಬನಾನ್ ಮತ್ತು ಜೋರ್ಡಾನ್‌ನಿಂದ 195,000ಕ್ಕೂ ಹೆಚ್ಚು ಸಿರಿಯಾದ ನಿರಾಶ್ರಿತರು ಹಿಂತಿರುಗಿದ್ದಾರೆಂದು ಅಂದಾಜಿಸಲಾಗಿದೆ.

UNHCR ಸಮೀಕ್ಷೆಯ ಪ್ರಕಾರ, ಮರಳಲು ಇಚ್ಛಿಸುವವರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಕೆಲವೇ ವಾರಗಳಲ್ಲಿ ಶೇ. 1 ರಿಂದ ಶೇ. 30ಕ್ಕೆ ಏರಿಕೆಯಾಗಿದೆ.

ಮತ್ತೊಂದು ಅಭಿವೃದ್ಧಿಯೆಂದರೆ, ಟರ್ಕಿಶ್ ಏರ್‌ಲೈನ್ಸ್ ಈ ವಾರ ದಮಾಸ್ಕಸ್‌ಗೆ ನೇರ ವಿಮಾನಯಾನಗಳನ್ನು ಪುನರಾರಂಭಿಸಿ, ಸುಮಾರು 13 ವರ್ಷಗಳ ವಿರಾಮವನ್ನು ಕೊನೆಗೊಳಿಸಿತು.

2011ರಲ್ಲಿ ಸಿರಿಯಾದ ಸಂಘರ್ಷ ಪ್ರಾರಂಭವಾದಾಗಿನಿಂದ ಪ್ರಪಂದಿಂದ ಸಂಪರ್ಕ ಕಡಿತಗೊಂಡಿರುವ ಸಿರಿಯಾದ ಸರ್ಕಾರದೊಂದಿಗಿನ ಸಂಬಂಧಗಳನ್ನು ಸಾಮಾನ್ಯಗೊಳಿಸಲು ವಿಶಾಲವಾದ ಪ್ರಾದೇಶಿಕ ಒತ್ತಡದ ಮಧ್ಯೆ ಈ ನವೀಕರಣತೆ ಬಂದಿದೆ.

ಅಲ್-ಅಸ್ಸಾದ್ ರವರನ್ನು ತೆಗೆದುಹಾಕಿದ ಕೆಲವೇ ದಿನಗಳ ನಂತರ ಟರ್ಕಿಯು ಕಳೆದ ತಿಂಗಳು ದಮಾಸ್ಕಸ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಿತು.

ಈ ವಾರದ ಆರಂಭದಲ್ಲಿ, ಸಿರಿಯಾದ ಮಧ್ಯಂತರ ವಿದೇಶಾಂಗ ಸಚಿವರು ವಿಶ್ವ ಆರ್ಥಿಕ ವೇದಿಕೆಗೆ ತಮ್ಮ ದೇಶವು ಒಂದು ದಶಕದ ಯುದ್ಧದ ವಿನಾಶದ ಹೊರತಾಗಿಯೂ ಅಪಾರ ಹೂಡಿಕೆ ಅವಕಾಶಗಳನ್ನು ನೀಡುತ್ತದೆ ಎಂದು ಹೇಳಿದರು.

ಸಿರಿಯಾದ ಆದ್ಯತೆಗಳಲ್ಲಿ ಸಂವಹನ, ರಸ್ತೆಗಳು, ಬಂದರುಗಳು, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಇಂಧನದಂತಹ ಮೂಲಸೌಕರ್ಯಗಳ ಪುನರ್ನಿರ್ಮಾಣ ಸೇರಿವೆ ಎಂದು ಅವರು ಹೇಳಿದರು.

25 ಜನವರಿ 2025, 14:40