ಪೋಲೆಂಡ್: ಲುಬ್ಲಿನಿನ ಕಥೋಲಿಕ ವಿಶ್ವವಿದ್ಯಾನಿಲಯದಲ್ಲಿ ಉರಿಯುವ ಎರಡು ದೀಪಗಳ ಭರವಸೆ
ವ್ಯಾಟಿಕನ್ ಸುದ್ಧಿ
ಪೋಲೆಂಡ್ ಲುಬ್ಲಿನಿನ ಜಾನ್ ಪಾಲ್ II ಕಥೋಲಿಕ ವಿಶ್ವವಿದ್ಯಾನಿಲಯದಲ್ಲಿ "ಇನ್ ದಿ ಗ್ಲೋ ಆಫ್ ದಿ ಬೆತ್ಲೆಹೇಮ್ ಲೈಟ್ ಆಫ್ ಪೀಸ್ ಮತ್ತು ಆಫ್ ದಿ ಲೈಟ್ಸ್ ಆಫ್ ಹನುಕ್ಕಾ" ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಧರ್ಮಾಧ್ಯಕ್ಷರಾದ ಮಿಕಿಸ್ಲಾವ್ ಸಿಸ್ಲೊರವರು ಮತ್ತು ಯೆಹೂದ್ಯ ಸಮುದಾಯದ ಪ್ರತಿನಿಧಿ ಕ್ಯಾಂಟರ್ ಸಿಮ್ಚಾ ಕೆಲ್ಲರ್ ರವರು ಮತ್ತು ಲುಬ್ಲಿನಿನ ಅನೇಕ ನಿವಾಸಿಗಳು ಭಾಗವಹಿಸಿದ್ದರು.
ಪಾಲ್ಗೊಂಡ ಎಲ್ಲರೂ ವಿಶ್ವಗುರು ಫ್ರಾನ್ಸಿಸ್ ರವರ ಮಾತುಗಳನ್ನು ನೆನಪಿಸಿಕೊಂಡರು, ಅಂತೆಯೇ ಅವರ ದೀಪಗಳ ಹಬ್ಬವಾದ ಹನುಕ್ಕಾ ಸಂದರ್ಭದಲ್ಲಿ ವಿಶ್ವಗುರುಗಳ ಹೃತ್ಪೂರ್ವಕ "ಶಾಂತಿ ಮತ್ತು ಭ್ರಾತೃತ್ವದ ಶುಭಾಶಯಗಳನ್ನು" ತಿಳಿಸಿದರು.
"ಲಬ್ಲಿನಿನ ಕಥೋಲಿಕ ವಿಶ್ವವಿದ್ಯಾನಿಲಯದಲ್ಲಿ ಮೂರನೇ ಬಾರಿಗೆ ಒಟ್ಟಿಗೆ ಆಯೋಜಿಸಲಾದ ಬೆತ್ಲೆಹೇಮ್ ಬೆಳಕು ಮತ್ತು ಹನುಕ್ಕಾದ ಬೆಳಕು ಕಥೋಲಿಕ-ಯೆಹೂದ್ಯರ ಸಂಭಾಷಣೆಯ ನಿರರ್ಗಳ ಸಂಕೇತವಾಗಿರಲಿ ಎಂದು, ನಮ್ಮ ಪಾಲಕ ಮತ್ತು ಪ್ರಾಧ್ಯಾಪಕರಾದ ಸಂತ ಜಾನ್ ಪಾಲ್ II ರವರು ಸಾರಾಂಶೀಕರಿಸಿದ್ದಾರೆ" ಲುಬ್ಲಿನಿನ ಕಥೋಲಿಕ ವಿಶ್ವವಿದ್ಯಾಲಯದ ಮೆಲ್ವಿಚಾರಕರಾದ, ಧರ್ಮಗುರು. ಮಿರೋಸ್ಲಾವ್ ಕಲಿನೋವ್ಸ್ಕಿರವರು, ಇದರ ಪ್ರಾಮುಖ್ಯತೆಯನ್ನು ಅವರ ಪತ್ರದಲ್ಲಿ ಬರೆದಿದ್ದಾರೆ.
ಕೆಲವು ದಿನಗಳ ಹಿಂದೆ, ಡಿಸೆಂಬರ್ 26 ರಂದು, ತಮ್ಮ ತ್ರಿಕಾಲ ಪ್ರಾರ್ಥನೆಯ ನಂತರ," ವಿಶ್ವಧ್ಯಾದಂತ ನಮ್ಮ ಯೆಹೂದ್ಯ ಸಹೋದರರು ಮತ್ತು ಸಹೋದರಿಯರು ಎಂಟು ದಿನಗಳ ಕಾಲ ಆಚರಿಸುವ ಬೆಳಕಿನ ಹಬ್ಬ, ಹನುಕ್ಕಾಗೆ ಶುಭಾಶಯಗಳನ್ನು ಸಲ್ಲಿಸಿದ ವಿಶ್ವಗುರು ಫ್ರಾನ್ಸಿಸ್ ರವರ ನುಡಿಗಳನ್ನು ಅವರು ಸ್ಮರಿಸಿದರು."
ಈ ಸಂದರ್ಭದಲ್ಲಿ, ವಿಶ್ವಗುರುಗಳು ತಮ್ಮ ಹೃತ್ಪೂರ್ವಕ "ಶಾಂತಿ ಮತ್ತು ಭ್ರಾತೃತ್ವದ ಶುಭಾಶಯಗಳನ್ನು" ಕಳುಹಿಸಿದರು.
ನಂತರ ಪತ್ರದಲ್ಲಿ ಧರ್ಮಗುರು. ಕಲಿನೋವ್ಸ್ಕಿ ಗಮನಿಸಿದರು: "ಬೆತ್ಲೆಹೇಮ್ ಬೆಳಕು ಮತ್ತು ಹನುಕ್ಕಾದ ಬೆಳಕು 2025ರಲ್ಲಿ ಭರವಸೆಯನ್ನು ತರಲಿ" ಎಂದು ಬರೆಯಲಾಗಿದೆ.
ಭರವಸೆ ಮತ್ತು ಸಂಭಾಷಣೆ
ಈ ಕಾರ್ಯಕ್ರಮದಲ್ಲಿ ಕಥೋಲಿಕ ಧರ್ಮಸಭೆಯ ಪ್ರತಿನಿಧಿಗಳು, ಯೆಹೂದ್ಯರ ಸಮುದಾಯ, ಲುಬ್ಲಿನಿನ ಕಥೋಲಿಕ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಸ್ಥಳೀಯ ನಿವಾಸಿಗಳು ಲುಬ್ಲಿನಿನ ಕಥೋಲಿಕ ವಿಶ್ವವಿದ್ಯಾನಿಲಯದ ಜಾನ್ ಪಾಲ್ II ರ ಮುಖ್ಯ ಕಟ್ಟಡದ ಮುಂದೆ ಜಮಾಯಿಸಿದರು.
ಲುಬ್ಲಿನಿನ ಕಥೋಲಿಕ ವಿಶ್ವವಿದ್ಯಾನಿಲಯದಲ್ಲಿ ಕಥೋಲಿಕ-ಯೆಹೂದ್ಯರ ಸಂಬಂಧಗಳಿಗಾಗಿ ಅಬ್ರಹಾಂ ಜೆ ಹೆಸ್ಚೆಲ್ ಸೆಂಟರ್ ಈ ಕಾರ್ಯಕ್ರಮವನ್ನು ನಡೆಸಿತು.
ಯೆಹೂದ್ಯ ಧರ್ಮದವರೊಂದಿಗೆ ಸಂವಾದಕ್ಕಾಗಿ ಪೋಲಿಷ್ ಧರ್ಮಾಧ್ಯಕ್ಷರುಗಳ ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿ 2006 ರಿಂದ 2016 ರವರೆಗೆ ಸೇವೆ ಸಲ್ಲಿಸಿದ ಧರ್ಮಾಧ್ಯಕ್ಷ ಸಿಸ್ಲೊರವರು, ಕಥೋಲಿಕ ಧರ್ಮಸಭೆಯಲ್ಲಿ ಈಗಷ್ಟೇ ಪ್ರಾರಂಭವಾದ ಜೂಬಿಲಿ ವರ್ಷದ ಧ್ಯೇಯವಾಕ್ಯದ ಸಮಾರಂಭವನ್ನು ಆರಂಭಿಸುವ ಪ್ರಾರ್ಥನೆಯಲ್ಲಿ ಉಲ್ಲೇಖಿಸಿದ್ದಾರೆ: “ಭರವಸೆಯು ನಿರಾಸೆಗೊಳಿಸುವುದಿಲ್ಲ.”
ಸಮಾರಂಭದಲ್ಲಿ ಹೊಸ ಧಾರ್ಮಿಕ ಶಿಕ್ಷಣ ಪಂಗಡದವರು ಮತ್ತು ಯೆಹೂದ್ಯ ಗುರುಗಳು ಸ್ತುತಿಗೀತೆಗಳನ್ನು ಹಾಡಿದರು. ಲುಬ್ಲಿನಿನಲ್ಲಿ ಎರಡು ಧರ್ಮಗಳು ಮತ್ತು ಎರಡು ಸಂಸ್ಕೃತಿಗಳನ್ನು ಒಂದುಗೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಹೊಸ ಧಾರ್ಮಿಕ ಶಿಕ್ಷಣ ಪಂಗಡದ ಪ್ರತಿನಿಧಿಗಳಿಗೆ ಸಂಘಟಕರು ತಮ್ಮ ಪ್ರಾಮಾಣಿಕ ಧನ್ಯವಾದಗಳನ್ನು ವ್ಯಕ್ತಪಡಿಸಿದರು.
ಮೌಲ್ಯಗಳನ್ನು ಹಂಚಿಕೊಂಡರು
ಸಂಘಟಕರ ಪರವಾಗಿ ಲುಬ್ಲಿನಿನ ಕಥೋಲಿಕ ವಿಶ್ವವಿದ್ಯಾನಿಲಯದ ಹೆಸ್ಚೆಲ್ ಸೆಂಟರ್‌ನ ನಿರ್ದೇಶಕ ಮತ್ತು ವ್ಯಾಟಿಕನ್ ಸುದ್ಧಿಯ ಪೋಲಿಷ್ ವಿಭಾಗದ ಮುಖ್ಯಸ್ಥ ಧರ್ಮಗುರು. ಪಾವೆಲ್ ರೈಟಲ್- ಆಡ್ರೈನಿಕ್ ರವರು, ಹನುಕ್ಕಾದ ಬೆಳಕಿನೊಂದಿಗೆ, ಬೆತ್ಲೆಹೇಮ್ ನ ಶಾಂತಿಯ ಬೆಳಕನ್ನು ಸಂಯೋಜಿಸುವುದು ಸಾಂಕೇತಿಕ ಚಟುವಟಿಕೆಯನ್ನು ಹೊಂದಿದೆ, ಯೆಹೂದ್ಯರು ಮತ್ತು ಕ್ರೈಸ್ತರ ನಡುವಿನ ಶಾಂತಿ, ಭರವಸೆ ಮತ್ತು ಸಹಯೋಗದ ಹಂಚಿಕೆಯ ಮೌಲ್ಯಗಳತ್ತ ಗಮನವನ್ನು ಸೆಳೆಯುತ್ತದೆ ಎಂದು ಒತ್ತಿ ಹೇಳಿದರು.
ಅಂತರರಾಷ್ಟ್ರೀಯ ಅಂಶ
ಕ್ರೈಸ್ತರ ಐಕ್ಯತೆಯನ್ನು ಉತ್ತೇಜಿಸುವ ಡಿಕ್ಯಾಸ್ಟರಿಯ ಮುಖಂಡರು ಮತ್ತು ಲುಬ್ಲಿನಿನ ಕಥೋಲಿಕ ವಿಶ್ವವಿದ್ಯಾನಿಲಯದಲ್ಲಿ ಅಬ್ರಹಾಂ ಜೆ ಹೆಸ್ಚೆಲ್ ಸೆಂಟರ್ ಫಾರ್ ಕ್ಯಾಥೋಲಿಕ್- ಯೆಹೂದ್ಯರ ಸಂಬಂಧಗಳ ಗೌರವ ಸಮಿತಿಯ ಸದಸ್ಯ ಕಾರ್ಡಿನಲ್ ಕರ್ಟ್ ಕೋಚ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ.
ರಬ್ಬಿ ಅಬ್ರಹಾಂ ಜೋಶುವಾ ಹೆಸ್ಚೆಲ್ ರವರ ಪುತ್ರಿ ಪ್ರೊ.ಸುಸನ್ನಾ ಹೆಸ್ಚೆಲ್ ರವರು ಭಾಗವಹಿಸುವವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಕೀರ್ತನೆ 119 ರ ಮಾತುಗಳನ್ನು ಉಲ್ಲೇಖಿಸುತ್ತಾ, "ನಿನ್ನ ವಾಕ್ಯ ನನಗೆ ದಾರಿದೀಪ, ನನ್ನ ಕಾಲಿನ ನಡೆಗೆ ಕೈದೀಪ," "ನಮ್ಮ ನಂಬಿಕೆಯು ಆಳವಾಗುತ್ತಿದ್ದಂತೆ, ದೇವರ ವಾಕ್ಯವು ನಮ್ಮ ದೀಪವಾಗುತ್ತದೆ" ಎಂದು ಒತ್ತಿ ಹೇಳಿದರು.
"ಹನುಕ್ಕಾ ಎಂದರೆ ಸಮರ್ಪಣೆ, ಧಾರ್ಮಿಕ ನವೀಕರಣದ ವಾರ, ನಮ್ಮ ವಿಶ್ವಾಸಕ್ಕೆ ನಮ್ಮನ್ನು ಮರು ಸಮರ್ಪಿಸಿಕೊಳ್ಳಲು" ಎಂದು ಅವರು ಗಮನಿಸಿದರು.
ಪ್ರೊಫೆಸರ್.ಹೆಶೆಲ್ ರವರು ತನ್ನ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. "ನನ್ನ ತಂದೆ ಅಸ್ತಮಿಸುವ ಸೂರ್ಯನನ್ನು ತೋರಿಸಿ ಈ ಮಹಾನ್ ಪವಾಡವನ್ನು ನೋಡಿ, ಹನುಕ್ಕಾ ದೇವರ ಸೃಷ್ಟಿಯ ಗುಪ್ತ ಮತ್ತು ಗೋಚರಿಸುವ ಅದ್ಭುತಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಬೆಳೆಸುವ ಒಂದು ಜ್ಞಾಪಕಾರ್ಥವಾಗಿದೆ ಎಂದು ಹೇಳುತ್ತಿದ್ದರು, ಜೀವನದ ಪವಾಡ, ದೇವರ ಉಪಸ್ಥಿತಿಯೊಂದು ಪವಿತ್ರತೆಯಾಗಿದೆ."
ಹನುಕ್ಕಾ ಹಬ್ಬ
"ಹನುಕ್ಕಾ" ಎಂಬ ಪದವು ಅಕ್ಷರಶಃ "ಸಮರ್ಪಣೆ ಅಥವಾ ಪವಿತ್ರೀಕರಣ" ಎಂದರ್ಥ, ಮತ್ತು ಇಸ್ರಯೇಲ್ ನ ಇತಿಹಾಸದಲ್ಲಿ ಮಹಾನ್ ಪವಾಡಗಳಲ್ಲಿ ಒಂದನ್ನು ಸ್ಮರಿಸುತ್ತದೆ.
ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿ ಯೆಹೂದ್ಯರು ಗ್ರೀಕರ ಮೇಲೆ ವಿಜಯವನ್ನು ಸಾಧಿಸಿದಾಗ, ಅವರು ಇಸ್ರಯೇಲ್ ದೇವರಿಗೆ ಪುನಃ ಸಮರ್ಪಿಸಲು ಅನ್ಯಧರ್ಮೀಯರ ವಿಗ್ರಹಗಳಿಂದ ಜೆರುಸಲೇಮ್ ದೇವಾಲಯವನ್ನು ಸ್ವಚ್ಛಗೊಳಿಸಬೇಕಾಗಿತ್ತು. ಆದಾಗ್ಯೂ, ಅವರು ತಮ್ಮ ವಿಲೇವಾರಿಯಲ್ಲಿ ಕೇವಲ ಒಂದು ಸಣ್ಣ ಪ್ರಮಾಣದ ತೈಲವನ್ನು ಹೊಂದಿದ್ದರು, ಇದು ಮುಖ್ಯ ದೀಪ ಅಥವಾ ಮೆನೋರಾವನ್ನು ಕೇವಲ ಒಂದು ದಿನ ಮಾತ್ರ ಉರಿಯಲು ಅನುವು ಮಾಡಿಕೊಡುತ್ತದೆ.
ಆದರೂ, ಒಂದು ಪವಾಡ ಸಂಭವಿಸಿತು, ಮತ್ತು ದೀಪವು ಎಂಟು ದಿನಗಳವರೆಗೆ ಉರಿಯಿತು. ಆ ಸಮಯದಲ್ಲಿ ಶಾಸ್ತ್ರೋಕ್ತವಾಗಿ ಶುದ್ಧವಾದ ಎಣ್ಣೆಯನ್ನು ತಯಾರಿಸಲು ನಿಖರವಾಗಿ ಎಂಟು ದಿನಗಳನ್ನು ತೆಗೆದುಕೊಂಡಿತು.
ಈ ಘಟನೆಯನ್ನು ದೀಪಗಳು, ಮೇಣದಬತ್ತಿಗಳು ಅಥವಾ ಎಣ್ಣೆ ದೀಪಗಳನ್ನು ಬೆಳಗಿಸುವ ಆಚರಣೆಯಲ್ಲಿ ಸ್ಮರಿಸಲಾಗುತ್ತದೆ, ಇದನ್ನು ವಿಶೇಷ ಹನುಕ್ಕಾ ಮೇಣದ ಬತ್ತಿಯನ್ನು ಹಿಡಿದಿಡುವ ವಸ್ತುವಿನ ಮೇಲೆ ಇರಿಸಲಾಗುತ್ತದೆ, ಇದನ್ನು ಹನುಕ್ಕಿಯಾ ಎಂದು ಕರೆಯಲಾಗುತ್ತದೆ.
ಲುಬ್ಲಿನ್‌ನಲ್ಲಿರುವ ಕಥೋಲಿಕ ವಿಶ್ವವಿದ್ಯಾನಿಲಯವಾದ ಅಬ್ರಹಾಂ ಜೆ. ಹೆಸ್ಚೆಲ್ ಸೆಂಟರ್ ಫಾರ್ ಕ್ಯಾಥೋಲಿಕ್-ಯೆಹೂದ್ಯರ ಸಂಬಂಧಗಳು ಒಂದು ಸಂಶೋಧನೆ ಮತ್ತು ಶಿಕ್ಷಣ ಘಟಕವಾಗಿದೆ.
ಕೇಂದ್ರದ ಧ್ಯೇಯವು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಥೋಲಿಕ-ಯೆಹೂದ್ಯರ ಸಂಭಾಷಣೆಯ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ. ಇದರ ಪಾಲಕ ಅಬ್ರಹಾಂ ಜೆ. ಹೆಸ್ಚೆಲ್ ರವರು, ಒಬ್ಬ ಯೆಹೂದ್ಯ ದೈವಶಾಸ್ತ್ರಜ್ಞ, ತತ್ವಜ್ಞಾನಿ ಮತ್ತು ಕ್ರೈಸ್ತ-ಯೆಹೂದ್ಯರ ಸಂಭಾಷಣೆಗೆ ಬದ್ಧವಾಗಿರುವ ಕವಿಯಾಗಿದ್ದರೆ.