ಗಾಜಾ ಹಿಂಸಾಚಾರಕ್ಕೆ ಅವಕಾಶವಿಲ್ಲ
ನಾಥನ್ ಮೊರ್ಲೆ
ಅಲ್ ಜಜೀರಾ ಪ್ರಕಾರ ಗಾಜಾ ಗಡಿಯ ಉತ್ತರದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತೀನಿಯದ ಆಸ್ಪತ್ರೆ ಮೂಲಗಳು ಹೇಳಿವೆ. ದಕ್ಷಿಣ ಗಾಜಾ ಗಡಿಯಲ್ಲಿರುವ ಖಾನ್ ಯೂನಿಸ್‌ನಲ್ಲಿ ಕಾರಿನ ಮೇಲೆ ನಡೆದ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪ್ಯಾಲೇಸ್ತೀನಿಯದ ಆರೋಗ್ಯ ಅಧಿಕಾರಿಗಳ ಪ್ರಕಾರ, ಅಕ್ಟೋಬರ್ 7, 2023 ರಿಂದ ಗಾಜಾ ಗಡಿಯ ಮೇಲಿನ ಇಸ್ರಯೇಲ್ ದಾಳಿಯಲ್ಲಿ ಕನಿಷ್ಠ 45,658 ಜನರು ಸಾವನ್ನಪ್ಪಿದ್ದಾರೆ ಮತ್ತು 108,583 ಜನರು ಗಾಯಗೊಂಡಿದ್ದಾರೆ.
ಇದು ಯುದ್ಧ ಪ್ರಾರಂಭವಾದಾಗಿನಿಂದ ಪ್ರತಿದಿನ ಸರಾಸರಿ 100 ಮಂದಿ ಸಾವನ್ನಪ್ಪುತ್ತಿದ್ದಾರೆ ಮತ್ತು 238 ಮಂದಿ ಗಾಯಗೊಂಡಿದ್ದಾರೆ ಮತ್ತು ಆರೋಗ್ಯ ಅಧಿಕಾರಿಗಳ ಪ್ರಕಾರ, ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರಾಗಿದ್ದಾರೆ.
ವಾರಾಂತ್ಯದಲ್ಲಿ, ವಿಶ್ವಸಂಸ್ಥೆಯ ಮಾನವತಾವಾದಿಗಳು ಇಸ್ರಯೇಲ್ಗೆ ರಾಕೆಟ್ ದಾಳಿಗಳಿಗೆ ಪ್ರತೀಕಾರವಾಗಿ ಮುಂಬರುವ ದಾಳಿಗಳ ಕಾರಣ, ಇಸ್ರಯೇಲ್ ಉತ್ತರ ಗಾಜಾದಲ್ಲಿ ಹೆಚ್ಚಿನ ನಾಗರಿಕರನ್ನು ಸ್ಥಳಾಂತರಿಸಲು ಆದೇಶಿಸಿದರು.
ಮಾತುಕತೆ ಪುನರಾರಂಭ
ಉಳಿದಂತೆ, ಗಾಜಾ ಗಡಿಯಲ್ಲಿ ಸಂಪೂರ್ಣ ಕದನ ವಿರಾಮವನ್ನು ಸಾಧಿಸುವ ಗುರಿಯೊಂದಿಗೆ ಕತಾರ್‌ನಲ್ಲಿ ಇಸ್ರಯೇಲ್‌ನೊಂದಿಗೆ ಪರೋಕ್ಷ ಮಾತುಕತೆಗಳನ್ನು ಪುನರಾರಂಭಿಸಲಾಗಿದೆ ಎಂದು ಹಮಾಸ್ ದೃಢಪಡಿಸಿದೆ.
ಇತರ ಪ್ರಾದೇಶಿಕ ಬೆಳವಣಿಗೆಗಳಲ್ಲಿ, ಸಿರಿಯಾದ ರಾಜಧಾನಿ ದಮಾಸ್ಕಸ್‌ನಲ್ಲಿರುವ ವಿಮಾನ ನಿಲ್ದಾಣವು ಮಂಗಳವಾರ ಅಂತರರಾಷ್ಟ್ರೀಯ ವಿಮಾನಗಳಿಗೆ ಮತ್ತೆ ತೆರೆಯುತ್ತದೆ.
ಡಿಸೆಂಬರ್‌ನಲ್ಲಿ ಬಶರ್ ಅಲ್-ಅಸ್ಸಾದ್ ರವರ ಆಡಳಿತವನ್ನು ಉರುಳಿಸಿದಾಗ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳನ್ನು ಮುಚ್ಚಲಾಯಿತು ಅಥವಾ ಅದರ ವಾಣಿಜ್ಯ ವ್ಯವಹಾರಿಕ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಯಿತು.