MAP

US-WEATHER-FIRE US-WEATHER-FIRE  (AFP or licensors)

ಎಲ್. ಎ' ನ ಬೆಂಕಿಯ ಕಾಡ್ಗಿಚ್ಚಿನ ತೀವ್ರತೆಯ ಮೇಲೆ ಭೂ ಬಳಕೆಯ ಪರಿಣಾಮ

ಆಹಾರ ಮತ್ತು ಕೃಷಿ ಸಂಸ್ಥೆಯ ಆಮಿ ಡ್ಯೂಚೆಲ್ ರವರು, ಹವಾಮಾನ ಬದಲಾವಣೆಯು ಕಾಡ್ಗಿಚ್ಚುಗಳ ಹೆಚ್ಚಳದಲ್ಲಿ ಮುಖ್ಯ ಪಾತ್ರವಹಿಸುತ್ತದೆ, ಆದರೆ ಅದು ಒಂದೇ ಅಂಶವಲ್ಲ ಎಂದು ಒತ್ತಿ ಹೇಳುತ್ತಾರೆ.

ಕೀಲ್ಸ್ ಗುಸ್ಸಿ

ಲಾಸ್ ಏಂಜಲೀಸ್ ಕೌಂಟಿಯ ಪ್ರದೇಶಗಳನ್ನು ಆವರಿಸಿರುವ ಪಾಲಿಸೇಡ್ಸ್, ಈಟನ್, ಆಟೋ, ಹರ್ಸ್ಟ್ - ನಾಲ್ಕು ಬೆಂಕಿಯಲ್ಲಿ 10,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ. 25 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ, ಒಂದು ಡಜನ್‌ಗಿಂತಲೂ ಹೆಚ್ಚು ಜನರು ಪತ್ತೆಯಾಗಿಲ್ಲ ಮತ್ತು ಹತ್ತಾರು ಸಾವಿರ ಜನರನ್ನು ಸ್ಥಳಾಂತರಿಸಬೇಕಾಯಿತು.

ಅತ್ಯಂತ ಮಾರಕ ಮತ್ತು ಅತ್ಯಂತ ವಿನಾಶಕಾರಿ ಕಾಡ್ಗಿಚ್ಚುಗಳು
ಕ್ಯಾಲಿಫೋರ್ನಿಯಾದ ಅರಣ್ಯ ಮತ್ತು ಅಗ್ನಿಶಾಮಕ ರಕ್ಷಣಾ ಇಲಾಖೆ (ಕ್ಯಾಲ್ ಫೈರ್) ಈಟನ್ ಕಾಡ್ಗಿಚ್ಚನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಅತ್ಯಂತ ಮಾರಕ ಮತ್ತು ಅತ್ಯಂತ ವಿನಾಶಕಾರಿ ಎಂದು ಘೋಷಿಸಿದೆ. ಪಾಲಿಸೇಡ್ಸ್ ಕಾಡ್ಗಿಚ್ಚು ಎರಡನೇ ಸ್ಥಾನದಲ್ಲಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಹಿರಿಯ ಅರಣ್ಯ ಅಧಿಕಾರಿ, ಅರಣ್ಯ ಮತ್ತು ಹವಾಮಾನ ತಂಡದ ನಾಯಕಿ ಆಮಿ ಡುಚೆಲ್ ರವರು, ವ್ಯಾಟಿಕನ್ ಸುದ್ಧಿಗೆ "ಸಾಂಟಾ ಅನಾ ವಿಂಡ್ಸ್ ಎಂದು ಕರೆಯಲ್ಪಡುವ ಬಲವಾದ ಗಾಳಿಯು ಬೆಂಕಿಯ ಹವಾಮಾನದ ಪ್ರಮುಖ ಪ್ರಭಾವವಾಗಿತ್ತು" ಎಂದು ಹೇಳಿದರು, ಇದು "ಅಗ್ನಿಶಾಮಕ ಸಾಮರ್ಥ್ಯದ ಮಿತಿಗಳನ್ನು ಮೀರಿದ ಬೆಂಕಿಗೆ" ಕಾರಣವಾಯಿತು.

ದಿನ 10: ಬೆಂಕಿಯನ್ನು ನಿಯಂತ್ರಿಸುವುದು
ಹೊಸ ವರ್ಷದ ದಿನದಂದು ಬೆಂಕಿ ಕಾಣಿಸಿಕೊಂಡಾಗಿನಿಂದ, ಅಗ್ನಿಶಾಮಕ ದಳದವರು, ಎಲ್ಲಾ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಎರಡು ದೊಡ್ಡ ಬೆಂಕಿಗಳಾದ - ಪಾಲಿಸೇಡ್ ಮತ್ತು ಈಟನ್ - ಕ್ರಮವಾಗಿ 21% ಮತ್ತು 45% ರಷ್ಟು ನಿಯಂತ್ರಿಸಲ್ಪಟ್ಟಿವೆ. ಮದ್ಯ, ತಂಬಾಕು, ಬಂದೂಕುಗಳು ಮತ್ತು ಸ್ಫೋಟಕಗಳ ಬ್ಯೂರೋದ ತನಿಖಾಧಿಕಾರಿಗಳು ಪಾಲಿಸೇಡ್ಸ್ ಬೆಂಕಿಯ ಮೂಲವನ್ನು ಕಂಡುಹಿಡಿಯಲು ಕಳೆದ ಮೂರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ.

ಬೆಂಕಿ: ಹೆಚ್ಚು ತೀವ್ರವಾದ ಮತ್ತು ಆಗಾಗ್ಗೆ ಸಂಭವಿಸುವ, ಆದರೆ ಹೊಸದಲ್ಲ
“ಭೂದೃಶ್ಯದ ಬೆಂಕಿಗಳು ತೀವ್ರತೆ, ಪ್ರಮಾಣ ಮತ್ತು ಅವಧಿಯಲ್ಲಿ ನಿಜವಾಗಿಯೂ ವೇಗವಾಗಿ ಬೆಳೆದಿವೆ, ಮತ್ತು ಇದು ಹೆಚ್ಚಾಗಿ ಹವಾಮಾನ ಬದಲಾವಣೆ ಮತ್ತು ಭೂ ಬಳಕೆಯ ಬದಲಾವಣೆಗಳಿಂದಾಗಿ” ಎಂದು ಡ್ಯೂಚೆಲ್ ರವರು ವಾದಿಸಿದರು. ಹವಾಮಾನದಲ್ಲಿನ ಬದಲಾವಣೆಗಳೊಂದಿಗೆ ಆಗಾಗ್ಗೆ ಹೆಚ್ಚು ಶಾಖದ ಅಲೆಗಳು ಮತ್ತು ಬರಗಾಲಗಳು ಬರುತ್ತವೆ, ಇದು ಒಣ ಭೂಮಿ ಮತ್ತು ಅರಣ್ಯೀಕರಣಕ್ಕೆ ಕಾರಣವಾಗುತ್ತದೆ.

ಆದರೆ ಹವಾಮಾನ ಬದಲಾವಣೆಯು ಕಾಡ್ಗಿಚ್ಚಿನ ಆವರ್ತನ ಮತ್ತು ತೀವ್ರತೆಯನ್ನು ಹೆಚ್ಚಿಸಿದ್ದರೂ, ಅವು ನೈಸರ್ಗಿಕ ಮತ್ತು "ಸಾಂಪ್ರದಾಯಿಕ ನಿರ್ವಹಣಾ ಸಾಧನ ಮತ್ತು ಅನೇಕ ಪರಿಸರ ವ್ಯವಸ್ಥೆಗಳ ಭಾಗವಾಗಿದೆ" ಎಂದು ಡ್ಯೂಚೆಲ್ ರವರು ಒತ್ತಿ ಹೇಳಿದರು.

ಹವಾಮಾನ ಬದಲಾವಣೆಯು ಕಾಡ್ಗಿಚ್ಚಿಗೆ ಏಕೈಕ ಅಂಶವಲ್ಲ. ಭೂಮಿಯನ್ನು ಬಳಸುವ ಮತ್ತು ನಿರ್ವಹಿಸುವ ವಿಧಾನವೂ ಮುಖ್ಯವಾಗಿದೆ. ಉದಾಹರಣೆಗೆ, ನಗರದ ಮೂಲಸೌಕರ್ಯಗಳು ಪ್ರಕೃತಿ ಮತ್ತು ವಿವಿಧ ಪರಿಸರ ವ್ಯವಸ್ಥೆಗಳಲ್ಲಿ ಹೆಚ್ಚು ಹೆಚ್ಚು ಅಂಚಿನಲ್ಲಿವೆ.

ಚೇತರಿಕೆ ಮತ್ತು ಭವಿಷ್ಯ
ವಿಶ್ವದಾದ್ಯಂತದ ಜನರು ಸಂತ್ರಸ್ತರು, ಪ್ರಥಮ ಪ್ರತಿಕ್ರಿಯೆ ನೀಡುವವರು ಮತ್ತು ತಮ್ಮ ಮನೆಗಳಿಂದ ಸ್ಥಳಾಂತರಗೊಂಡವರಿಗೆ ಸಹಾಯ ಮಾಡಲು ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಜಪಾನ್, ದಕ್ಷಿಣ ಕ್ಯಾಲಿಫೋರ್ನಿಯಾಗೆ ಚೇತರಿಕೆ ಪ್ರಯತ್ನಗಳಿಗೆ ಸಹಾಯ ಮಾಡಲು $2 ಮಿಲಿಯನ್ ದೇಣಿಗೆ ನೀಡಿದೆ. ಅಮೆರಿಕದ ಟೆನಿಸ್ ಆಟಗಾರ ಟೇಲರ್ ಫ್ರಿಟ್ಜ್ ರವರು, ಆಸ್ಟ್ರೇಲಿಯದ ಓಪನ್‌ಸ್ಪರ್ಧೆಯಲ್ಲಿ, ತನ್ನ ಮೊದಲ ಸುತ್ತಿನ ಗೆಲುವಿನಿಂದ ಗಳಿಸಿದ ಹಣವನ್ನು ಲಾಸ್ ಏಂಜಲೀಸ್ ಕಾಡ್ಗಿಚ್ಚುಗೆ ಪರಿಹಾರ ನಿಧಿಗೆ ದಾನ ಮಾಡುವುದಾಗಿ ಘೋಷಿಸಿದರು.

ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ವಿನಾಶಕಾರಿ ಪರಿಸ್ಥಿತಿಯಿಂದ ಕಲಿತ ಒಂದು ಪ್ರಮುಖ ಪಾಠವೆಂದರೆ, "ಬೆಂಕಿಗಳು ನಿಯಂತ್ರಣ ತಪ್ಪಿದಾಗ, ಅವುಗಳನ್ನು ನಿಗ್ರಹಿಸಲು ಮಿತಿಗಳಿವೆ" ಎಂದು ಡ್ಯೂಚೆಲ್ ರವರು ಹೇಳಿದರು. "ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅಪಾಯವನ್ನು ಕಡಿಮೆ ಮಾಡಲು ಮತ್ತು ಈ ಕಾಡ್ಗಿಚ್ಚುಗಳು ಉರಿಯಲು ಪ್ರಾರಂಭಿಸುವ ಮೊದಲೇ ಅವುಗಳನ್ನು ನಿಭಾಯಿಸಲು ಹೆಚ್ಚು ಸಿದ್ಧರಾಗಲು ನಮಗೆ ಸಹಾಯ ಮಾಡುವ ತಡೆಗಟ್ಟುವ ಕ್ರಮಗಳ"ತ್ತ ಕಾರ್ಯನಿರ್ವಹಣೆಯು ಬದಲಾಗಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.

16 ಜನವರಿ 2025, 11:28