UNRWAನ್ನು ನಿಷೇಧಿಸುವ ಇಸ್ರಯೇಲ್ ನ ಕಾನೂನು ಜಾರಿಗೆ ಬಂದಿದೆ.
ಕೀಲ್ಸ್ ಗುಸ್ಸಿ
ಅಕ್ಟೋಬರ್ 2024ರಲ್ಲಿ, ಹಮಾಸ್ ಮತ್ತು ಇಸ್ರಯೇಲ್ ನಡುವಿನ ಸಂಘರ್ಷ ಪ್ರಾರಂಭವಾದ ಒಂದು ವರ್ಷದ ನಂತರ, ಇಸ್ರಯೇಲ್ ಸಂಸತ್ತು - ನೆಸ್ಸೆಟ್ – ಪ್ಯಾಲೆಸ್ತೀನಿಯದ ನಿರಾಶ್ರಿತರಿಗೆ ಮಾನವೀಯ ನೆರವಿನ ಸೌಲಭ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ಎರಡು ಮಸೂದೆಗಳನ್ನು ಅಂಗೀಕರಿಸಿತು.
ಮೊದಲನೆಯದು ಪ್ಯಾಲೆಸ್ತೀನಿಯದ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ನೆರವು ಸಂಸ್ಥೆ ಅಥವಾ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯನ್ನು ಇಸ್ರಯೇಲ್‌ನ ಗಡಿಯೊಳಗೆ ಮಾನವೀಯ ನೆರವು ನೀಡುವುದನ್ನು ನಿಷೇಧಿಸಿತು, ಆದರೆ ಎರಡನೆಯದು ಇಸ್ರಯೇಲ್ ಅಧಿಕಾರಿಗಳು ಮತ್ತು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯ ನಡುವಿನ ಯಾವುದೇ ಸಂಪರ್ಕವನ್ನು ಕಾನೂನುಬಾಹಿರಗೊಳಿಸುತ್ತದೆ.
ಪ್ಯಾಲೆಸ್ತೀನಿಯದ ನಿರಾಶ್ರಿತರು ಆಹಾರವನ್ನು ಸ್ವೀಕರಿಸಲು ಲೋಹದ ಪಾತ್ರೆಗಳು ಮತ್ತು ಹರಿವಾಣಗಳನ್ನು ಹಿಡಿದಿದ್ದಾರೆ
ಜನವರಿ 30, 2025ರಿಂದ ಜಾರಿಗೆ ಬರುವಂತೆ, ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯ ವಕ್ತಾರರಾದ ಜೊನಾಥನ್ ಫೌಲರ್ ರವರು, ವ್ಯಾಟಿಕನ್ ಸುದ್ಧಿಯ ಮೇರಿ ಡುಹಾಮೆಲ್‌ರವರಿಗೆ ಈ ಹೊಸ ಕಾನೂನು ಏಜೆನ್ಸಿ ಉದ್ಯೋಗಿಗಳನ್ನು " ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೇಮ್‌ನಲ್ಲಿರುವ ಕಚೇರಿಗಳಿಂದ" ಹೊರಹೋಗುವಂತೆ ಒತ್ತಾಯಿಸಿತು, ಏಕೆಂದರೆ ಅವರ ವೀಸಾಗಳು "ಮೊಟಕುಗೊಂಡವು". ಅವರು ಮತ್ತು ಅವರ ಸಹೋದ್ಯೋಗಿಗಳು ಜೋರ್ಡಾನ್‌ಗೆ ಹೇಗೆ ಮರುನಿಯೋಜನೆಗೊಳ್ಳಬೇಕಾಯಿತು ಎಂಬುದನ್ನು ಅವರು ವಿವರಿಸುತ್ತಾರೆ.
ಸ್ಪಷ್ಟ ನಿರ್ದೇಶನವಿಲ್ಲ
ಹೊಸ ಕಾನೂನಿನ ಅರ್ಥ ಮತ್ತು ಅದರ ಅನುಷ್ಠಾನವು ಸ್ಪಷ್ಟವಾಗಿಲ್ಲ ಎಂದು ಫೌಲರ್ ರವರು ವಾದಿಸುತ್ತಾರೆ. “ಸಂಪರ್ಕವಿಲ್ಲ” ಎಂಬುದರ ನಿಖರವಾದ ಅರ್ಥವನ್ನು ವ್ಯಾಖ್ಯಾನಿಸಲಾಗಿಲ್ಲ. ಅದರ ಅರ್ಥ "ಚೆಕ್‌ಪಾಯಿಂಟ್ ದಾಟುವುದು," ಅಂತನಾ? ಸಂಪರ್ಕವು ಚೆಕ್‌ಪಾಯಿಂಟ್ ಮೂಲಕ ನಿಮ್ಮ ಕೆಲಸದ ಸ್ಥಳಕ್ಕೆ ಹೋಗುತ್ತಿದೆಯೇ? ಸಂಪರ್ಕವು ಔಷಧವನ್ನು ಆಮದು ಮಾಡಿಕೊಳ್ಳುತ್ತಿದೆಯೇ? ಇಸ್ರಯೇಲ್ ಅಧಿಕಾರಿಗಳ ನಿಯಂತ್ರಣದಲ್ಲಿ ಉಳಿದಿರುವ ಈ ಎಲ್ಲಾ ವಿಷಯಗಳು. ನಾವು ಇದನ್ನು ಮಾಡಬಹುದೇ?”
ಆದರೂ, ಈ ಅನಿಶ್ಚಿತತೆಯು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಗೆ (UNRWA) ಖಂಡಿತವಾಗಿಯೂ ಹೊಸದಲ್ಲ. ಅಕ್ಟೋಬರ್ 7, 2023ರಿಂದ, ಇಸ್ರಯೇಲ್ ಅಧಿಕಾರಿಗಳು ಮಾಡಿದ ಕಾನೂನುಗಳು ಅವರ ಕಾರ್ಯವನ್ನು "ಹೆಚ್ಚು ಜಟಿಲಗೊಳಿಸಿರುವುದರಿಂದ" ಫೌಲರ್ ರವರು "ಅಗಾಧ ಅನಿಶ್ಚಿತತೆಯ ಪರಿಸ್ಥಿತಿಯಲ್ಲಿದ್ದಾರೆ" ಎಂದು ವಿವರಿಸುತ್ತಾರೆ.
ಸದ್ಯಕ್ಕೆ, ಪೂರ್ವ ಜೆರುಸಲೇಮ್‌ನಲ್ಲಿ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯ ಚಿಕಿತ್ಸಾಲಯಗಳು ಮತ್ತು ಶಾಲೆಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ. ಅನಿಶ್ಚಿತತೆ ಮತ್ತು ಸವಾಲುಗಳ ಹೊರತಾಗಿಯೂ, ಫೌಲರ್ ರವರು ನಮ್ಮ ಕಾರ್ಯಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. “ಅದು ಏನೇ ಇರಲಿ, ನಾವು ಇಲ್ಲೇ ಉಳಿಯಲು ಬದ್ಧರಾಗಿದ್ದೇವೆ. ನಾವು ಅದನ್ನು ಹೇಗೆ ಬೇಕಾದರೂ ಮಾಡಬಹುದು” ಎಂದು ಅವರು ಹೇಳುತ್ತಾರೆ.
ಹೊಸ ಅಸ್ತಿತ್ವ
1949 ರಲ್ಲಿ, ಇಸ್ರಯೇಲ್ ರಾಷ್ಟ್ರ ರಚನೆಯಾದ ಒಂದು ವರ್ಷದ ನಂತರ, ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯನ್ನು ಸ್ಥಾಪಿಸಲಾಯಿತು, ಅವರು ಬೇರುಸಹಿತ ನಿರ್ನಾಮವಾದ 750,000 ಪ್ಯಾಲೆಸ್ತೀನಿಯದ ನಿರಾಶ್ರಿತರನ್ನು ನೋಡಿಕೊಳ್ಳಲು. 76 ವರ್ಷಗಳ ನಂತರ, ಮಧ್ಯಪ್ರಾಚ್ಯದಲ್ಲಿ ಅವರ ಉಪಸ್ಥಿತಿಯು ಈಗ ತೀವ್ರವಾಗಿ ಬದಲಾಗಿದೆ.
ಹೆಚ್ಚು ಪರಿಣಾಮ ಬೀರುವ ಪ್ರದೇಶವೆಂದರೆ ಗಾಜಾ ಎಂದು ಫೌಲರ್ ರವರು ಗಮನಸೆಳೆದಿದ್ದಾರೆ. ಯುದ್ಧದ ಮೊದಲು, ಗಾಜಾದಲ್ಲಿ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯ ಜೊತೆ 13,000 ಜನರು ಕೆಲಸ ಮಾಡುತ್ತಿದ್ದರು, ಮತ್ತು ಈಗ, ಹೆಚ್ಚಿನ ಸಿಬ್ಬಂದಿ ಸ್ಥಳಾಂತರಗೊಂಡಿರುವುದರಿಂದ, ಕೇವಲ 5,000 ಜನರು ಮಾತ್ರ ಉಳಿದಿದ್ದಾರೆ. ಏಜೆನ್ಸಿಯು ನೆರವು ನೀಡುವುದನ್ನು ನಿರ್ಬಂಧಿಸಿದರೆ, "ನಮ್ಮ ಕಾರ್ಯಾಚರಣೆಯು ತ್ವರಿತವಾಗಿ ಕುಸಿತವನ್ನು ಕಾಣುತ್ತದೆ ಅಥವಾ ನಿಧಾನವಾಗಿ ಕುಸಿತದ ಅಪಾಯವನ್ನು ಎದುರಿಸುತ್ತೇವೆ" ಎಂದು ಫೌಲರ್ ರವರು ಹೇಳುತ್ತಾರೆ.
ಗಾಜಾಕ್ಕೆ ಸಿಗುವ ಒಳಗಿನ ಮತ್ತು ಹೊರಗಿನ ನೆರವಿನ 60% ಗೆ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯು ಕಾರಣವಾಗಿದೆ. ಕದನ ವಿರಾಮ ಒಪ್ಪಂದದ ಮೊದಲ ಮೂರು ದಿನಗಳಲ್ಲಿ, ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯು ತನ್ನ ಸಹಾಯವನ್ನು ಹೆಚ್ಚಿಸಲು ಮತ್ತು ಒಂದು ಮಿಲಿಯನ್ ಜನರಿಗೆ ಆಹಾರವನ್ನು ಒದಗಿಸಲು ಸಾಧ್ಯವಾಯಿತು ಎಂದು ಫೌಲರ್ ರವರು ಹೇಳುತ್ತಾರೆ. ಈ ಹೊಸ ಕಾನೂನನ್ನು ಸಂಪೂರ್ಣವಾಗಿ ಜಾರಿಗೆ ತಂದರೆ ಮತ್ತು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ, "ಮಾನವೀಯ ಕಾರ್ಯಾಚರಣೆಯ ಬೆನ್ನೆಲುಬು" ತೆಗೆದುಹಾಕಲ್ಪಡುತ್ತದೆ ಮತ್ತು "ವಿಶ್ವಸಂಸ್ಥೆಯ ಇತರ ಭಾಗಗಳು, NGO (ಸರ್ಕಾರೇತರ ಸಂಸ್ಥೆ)ಗಳು... ಕಾರ್ಯನಿರ್ವಹಿಸುವುದಿಲ್ಲ."