ಮ್ಯಾನ್ಮಾರ್‌ನಲ್ಲಿ ಶಾಂತಿಗಾಗಿ 24 ಗಂಟೆಗಳ ಜಾಗತಿಕ ಪ್ರಾರ್ಥನಾ ದಿನ
ಕೀಲ್ಸ್ ಗುಸ್ಸಿ
ಫೆಬ್ರವರಿ 1 ರಂದು ಮ್ಯಾನ್ಮಾರ್‌ನಲ್ಲಿ ನಡೆದ ದಂಗೆಯ ನಾಲ್ಕು ವರ್ಷಗಳ ನಂತರ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದಿಂದ, ಮಿಲಿಟರಿಗೆ ಅಧಿಕಾರವನ್ನು ವರ್ಗಾಯಿಸಿದ ನಂತರ, ದೇಶವು ಇನ್ನೂ ಸಂಘರ್ಷದಲ್ಲಿ ಸಿಲುಕಿಕೊಂಡಿದೆ.
ಈ ದುರಂತದ ವಾರ್ಷಿಕೋತ್ಸವವನ್ನು ಗುರುತಿಸಲು, ಪೋಂಟಿಫಿಕಲ್ ಫೌಂಡೇಶನ್ ಏಯ್ಡ್ ಟು ದಿ ಚರ್ಚ್ ಇನ್ ನೀಡ್ (ACN) ಮ್ಯಾನ್ಮಾರ್‌ನಲ್ಲಿ ಶಾಂತಿಗಾಗಿ 24 ಗಂಟೆಗಳ ಜಾಗತಿಕ ಪ್ರಾರ್ಥನಾ ದಿನವನ್ನು ಆಚರಿಸಲು ಕರೆ ನೀಡುತ್ತಿದೆ.
24 ಗಂಟೆಗಳ ಪ್ರಾರ್ಥನೆ
ಫೆಬ್ರವರಿ 1, ಶನಿವಾರ, ಏಯ್ಡ್ ಟು ದಿ ಚರ್ಚ್ ಇನ್ ನೀಡ್ ನ ಪ್ರಧಾನ ಕಚೇರಿ ಮತ್ತು 23 ರಾಷ್ಟ್ರೀಯ ಕಚೇರಿಗಳು, ವಿಶ್ವದಾದ್ಯಂತದ ಜನರೊಂದಿಗೆ, "ಒಗ್ಗಟ್ಟಿನ ಮತ್ತು ಭರವಸೆಯ ಮನೋಭಾವ" ದೊಂದಿಗೆ ಪ್ರಾರ್ಥನೆಯಲ್ಲಿ ಒಟ್ಟುಗೂಡುತ್ತವೆ.
ಆಸ್ಟ್ರೇಲಿಯಾ, ಕ್ಯಾಮರೂನ್, ಸ್ಕಾಟ್ಲೆಂಡ್ ಅಥವಾ ಗುವಾಮ್‌ನಿಂದ, ಎಲ್ಲರೂ ಭಾಗವಹಿಸಲು ಸಾಧ್ಯವಾಗುತ್ತದೆ ಏಕೆಂದರೆ ದಿನವನ್ನು ವಿವಿಧ ಏಯ್ಡ್ ಟು ದಿ ಚರ್ಚ್ ಇನ್ ನೀಡ್ ನ (ACN) ರಾಷ್ಟ್ರೀಯ ಕಚೇರಿಗಳ ನೇತೃತ್ವದಲ್ಲಿ ಪ್ರಾರ್ಥನಾ ಪಾಳಿಗಳಾಗಿ ವಿಂಗಡಿಸಲಾಗಿದೆ.
ಎಸಿಎನ್ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕಿ ಅಧ್ಯಕ್ಷೆ ರೆಜಿನಾ ಲಿಂಚ್ ರವರು, ಈ ಉಪಕ್ರಮದ ಮಹತ್ವವನ್ನು ವಿವರಿಸುತ್ತಾ, ಈ ದಿನವು "ಪ್ರತಿಯೊಬ್ಬರಿಗೂ, ತಮ್ಮ ತಮ್ಮ ಮೂಲ ಸ್ಥಳವನ್ನು ಲೆಕ್ಕಿಸದೆ, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಸಾಮೂಹಿಕ ಮನವಿಯಲ್ಲಿ ಒಂದಾಗಲು ಒಂದು ಅವಕಾಶ" ಎಂದು ಹೇಳುತ್ತಾರೆ.
ಈ ಜಾಗತಿಕ ದಿನವನ್ನು ಸಂತ್ರಸ್ಥರಿಗೆ ಹಾಗೂ "ಬಾಂಬ್ ದಾಳಿಗಳು, ಹಸಿವು, ವಿದ್ಯುತ್ ಮತ್ತು ಸಾಧನಗಳ ಕೊರತೆಯನ್ನು ಅನುಭವಿಸುತ್ತಿರುವ ನಮ್ಮ ಸಹೋದರ ಸಹೋದರಿಯರಿಗೆ" ಸಮರ್ಪಿಸಲಾಗಿದೆ ಎಂದು ಲಿಂಚ್ ರವರು ಗಮನಸೆಳೆದಿದ್ದಾರೆ. ಆಪತ್ತು ಮತ್ತು ಅಪಾಯವು ದೇಶದ ಯಾಜಕರನ್ನು ಮತ್ತು ಧಾರ್ಮಿಕರನ್ನು ತಮ್ಮ ಕಾಯಕದ ಧ್ಯೇಯದ ಕಾರ್ಯನಿರ್ವಹಣೆಯಿಂದ ನಿಲ್ಲಿಸಿಲ್ಲ: ಅವರು ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಲು ದೂರದ ಧರ್ಮಕೇಂದ್ರಗಳನ್ನು ತಲುಪಲು ದಿನಗಟ್ಟಲೆ ಪ್ರಯಾಣಿಸುತ್ತಾರೆ.
ನಿರಂತರ ಸವಾಲುಗಳು
ವರ್ಷಗಳು ಕಳೆದಂತೆ ಕಡಿಮೆಯಾಗುವ ಬದಲು, ಸಂಘರ್ಷವು ಇನ್ನೂ ಹೆಚ್ಚು ಉಲ್ಬಣಗೊಂಡಿದೆ. ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ (ಅಮೇರಿಕದ ಶಾಂತಿಯ ಸಂಸ್ಥೆ) 2024, "ಮ್ಯಾನ್ಮಾರ್ ಮಿಲಿಟರಿಗೆ ವಿಶೇಷವಾಗಿ ವಿನಾಶಕಾರಿಯಾಗಿದೆ. ಹಿಂಸಾಚಾರದ ಪರಿಣಾಮವಾಗಿ, 3.3 ಮಿಲಿಯನ್‌ಗಿಂತಲೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಮತ್ತು ಕನಿಷ್ಠ 5,300 ನಾಗರಿಕರು ಸಾವನ್ನಪ್ಪಿದ್ದಾರೆ.
ಮ್ಯಾನ್ಮಾರ್ ಗಡಿಯ ಹಿಂದಿನ "ನೊ ಮ್ಯಾನ್ಸ್ ಲ್ಯಾಂಡ್"ನಲ್ಲಿ ರೋಹಿಂಗ್ಯಾ ನಿರಾಶ್ರಿತರು ಒಟ್ಟುಗೂಡುತ್ತಾರೆ
ಫೆಬ್ರವರಿ 1 ಹಿಂಸಾಚಾರದ ಪರಿಣಾಮಗಳೊಂದಿಗೆ ಇನ್ನೂ ಜೀವಿಸುತ್ತಿರುವ, ತಮ್ಮ ಮನೆಗಳಿಂದ ಸ್ಥಳಾಂತರಗೊಂಡವರು, ಕಠಿಣ ಭವಿಷ್ಯವನ್ನು ಎದುರಿಸುತ್ತಿರುವ ಯುವಜನತೆಯು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಧಾರ್ಮಿಕರು, ಇಂತಹ ಲಕ್ಷಾಂತರ ಜನರನ್ನು ನೆನಪಿಸುತ್ತದೆ.