ಗಾಜಾ: ನಿರಾಶ್ರಿತರಿಗೆ ಆಶ್ರಯ ನೀಡಿದ್ದ ಶಾಲೆಯ ಮೇಲೆ ಇಸ್ರಯೇಲ್ ಬಾಂಬ್ ದಾಳಿ
ನಾಥನ್ ಮಾರ್ಲಿ
ಗಾಜಾ ಗಡಿಯಾದ್ಯಂತ ಇಸ್ರಯೇಲ್ ನಡೆಸಿದ ದಾಳಿಯಲ್ಲಿ ಶನಿವಾರ ಕನಿಷ್ಠ 20 ಪ್ಯಾಲೆಸ್ತೀನಿಯದವರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡರು.
ಪ್ಯಾಲೆಸ್ತೀನಿಯದ ನಾಗರಿಕ ರಕ್ಷಣಾ ಇಲಾಖೆಯ ಪ್ರಕಾರ, ಜಬಾಲಿಯಾದಲ್ಲಿ ನಿರಾಶ್ರಿತ ಜನರು ವಾಸಿಸುತ್ತಿದ್ದ ಶಾಲೆಯ ಮೇಲೆ ಇಸ್ರಯೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಪ್ಯಾಲೆಸ್ತೀನಿಯದವರು ಪ್ರಾಣ ಕಳೆದುಕೊಂಡರು ಮತ್ತು 19 ಮಕ್ಕಳು ಸೇರಿದಂತೆ 30 ಜನರು ಗಾಯಗೊಂಡರು.
ಇದೆಲ್ಲದರ ನಡುವೆ, ಗಾಜಾದಲ್ಲಿ ಬಂಧಿಸಲ್ಪಟ್ಟಿರುವ ಇಸ್ರಯೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಜೊತೆ ಒಪ್ಪಂದವನ್ನು ಮುಂದುವರಿಸಲು ದೋಹಾಗೆ ನಿಯೋಗವೊಂದು ತೆರಳಲು ಇಸ್ರಯೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಸಿರು ನಿಶಾನೆ ತೋರಿಸಿದ್ದಾರೆ.
ಗಾಜಾದಲ್ಲಿ ಸ್ಥಳಾಂತರಗೊಂಡ ಕುಟುಂಬಗಳು ಪ್ರಕೃತಿ ವಿಕೋಪದಿಂದ ಆಶ್ರಯ ಪಡೆಯಲು ಹೆಣಗಾಡುತ್ತಿವೆ.
ಜೋರಾಗಿ ಮಳೆ, ಭೀಕರ ಗಾಳಿ ಮತ್ತು ಕುಸಿಯುತ್ತಿರುವ ತಾಪಮಾನವು, ಚಳಿಗಾಲವು ಹಾಗೂ ಇಸ್ರಯೇಲ್‌ನ ಗಾಜಾದ ಮೇಲಿನ ಮಿಲಿಟರಿ ದಾಳಿಯ ಪರಿಣಾಮದೊಂದಿಗೆ, ಅನೇಕರಿಗೆ ಬದುಕುಳಿಯುವುದು ಒಂದು ಹೋರಾಟವಾಗಿದೆ.
ಚಳಿಗಾಲ ಆರಂಭವಾಗುತ್ತಿದ್ದಂತೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಈಗ ಡೇರೆಗಳು ಅಥವಾ ಇತರ ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸುತ್ತಿದ್ದಾರೆ.
ಲೆಬನಾನ್ ಮನವಿ
ಲೆಬನಾನ್‌ಗೆ ಹಣವನ್ನು ಸಂಗ್ರಹಿಸಲು ಮನವಿ - ಆರೋಗ್ಯ ರಕ್ಷಣೆ, ನೀರು ಮತ್ತು ಶಿಕ್ಷಣದಲ್ಲಿನ ತೀವ್ರ ಅಂತರವನ್ನು ಪರಿಹರಿಸುವಾಗ ಆಹಾರ, ಚಳಿಗಾಲದ ನೆರವು, ತುರ್ತು ದುರಸ್ತಿ ಮತ್ತು ರಕ್ಷಣೆಯನ್ನು ಪೂರೈಸಲು ಆದ್ಯತೆ ನೀಡುವುದು.
ಇತ್ತೀಚಿನ ಯುದ್ಧ ಮತ್ತು ನಡೆಯುತ್ತಿರುವ ಮಾನವೀಯ ತುರ್ತು ಪರಿಸ್ಥಿತಿಯಿಂದ ಪ್ರಭಾವಿತರಾದ ನಾಗರಿಕರಿಗೆ ಸಹಾಯ ಮಾಡಲು 371 ಮಿಲಿಯನ್ ಅಮೇರಿಕ ಹಣವನ್ನು ಕೋರಿ ವಿಶ್ವಸಂಸ್ಥೆ ಮತ್ತು ಲೆಬನಾನ್ ಕಳೆದ ವಾರ ಲೆಬನಾನ್ ಫ್ಲ್ಯಾಶ್ ಮನವಿಯನ್ನು ವಿಸ್ತರಿಸಿವೆ.
ದೇಶದಲ್ಲಿ ಇನ್ನೂ 125,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಸಿರಿಯಾದ ಮಾನವೀಯ ತುರ್ತು ಪರಿಸ್ಥಿತಿ
ಬೇರೆಡೆ, ವಿಶ್ವಸಂಸ್ಥೆಯ ಮಾನವೀಯ ಕಾರ್ಯಕರ್ತರು ಸಿರಿಯಾದ ಜನರಿಗೆ ಹೆಚ್ಚು ಅಗತ್ಯವಿರುವ ಆಹಾರ ಸಹಾಯವನ್ನು ವಿತರಿಸುವುದನ್ನು ಮುಂದುವರೆಸಿದ್ದಾರೆ.
ಇತ್ತೀಚಿನ ಅಂಕಿಅಂಶಗಳು ದೇಶಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಜನರು, ಶಿಬಿರಗಳು, ಸಾಮೂಹಿಕ ಕೇಂದ್ರಗಳು ಮತ್ತು ಆತಿಥೇಯ ಸಮುದಾಯಗಳಲ್ಲಿರುವ ಜನರು ಸೇರಿದಂತೆ, ನವೆಂಬರ್ ಅಂತ್ಯ ಮತ್ತು ಜನವರಿ ಆರಂಭದ ನಡುವೆ ರೊಟ್ಟಿ ಪಡೆದರು ಎಂದು ಬಹಿರಂಗಪಡಿಸುತ್ತವೆ.
ಕಳೆದ ವಾರ, ಸಿರಿಯಾದವರನ್ನು ಬೆಂಬಲಿಸಲು ಕತಾರ್‌ನ ವಾಯು ಸೇತುವೆಯ ಭಾಗವಾಗಿ 23 ಟನ್‌ಗಳಷ್ಟು ಮಾನವೀಯ ನೆರವನ್ನು ಸಾಗಿಸುವ ಕತಾರಿ ವಾಯುಪಡೆಯ ವಿಮಾನವು ದಮಾಸ್ಕಸ್‌ನಲ್ಲಿ ಇಳಿಯಿತು.