ಗಾಜಾದಲ್ಲಿ ಭಾನುವಾರದಿಂದ ಕದನ ವಿರಾಮ ಆರಂಭ
ನಾಥನ್ ಮಾರ್ಲಿ
ಹಮಾಸ್ ಜೊತೆಗಿನ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಇಸ್ರಯೇಲ್ ಸಚಿವ ಸಂಪುಟ ಅಂತಿಮ ಅನುಮೋದನೆ ನೀಡಿದೆ.
ಜೆರುಸಲೇಮ್‌ನಲ್ಲಿ ಏಳು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗ ಅನುಮೋದನೆ ಪಡೆದಿರುವ ಗಾಜಾ ಒಪ್ಪಂದವು ಭಾನುವಾರ ಅಲ್ಲಿನ ಸ್ಥಳೀಯ ಸಮಯ 12.15ಕ್ಕೆ ಜಾರಿಗೆ ಬರುವ ನಿರೀಕ್ಷೆಯಿದೆ.
ಮಾಧ್ಯಮ ವರದಿಗಳ ಪ್ರಕಾರ, ಒಟ್ಟು 24 ಸಚಿವರು ಒಪ್ಪಂದದ ಪರವಾಗಿ ಮತ್ತು ಎಂಟು ಮಂದಿ ಒಪ್ಪಂದದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.
ಇಸ್ರಯೇಲ್ ಸೈನ್ಯವು ಹಂತ ಹಂತವಾಗಿ ಈ ಪ್ರದೇಶದಿಂದ ಹಿಂದೆ ಸರಿದಿದ್ದಾರೆ, ಆದರೆ ಇಸ್ರಯೇಲ್ ಮತ್ತು ಗಾಜಾ ನಡುವೆ ಭದ್ರತಾ ವಲಯದಲ್ಲೇ ಉಳಿದುಕೊಂಡಿದೆ.
ಗಾಜಾದಲ್ಲಿ ಬಂಧಿಸಲ್ಪಟ್ಟಿರುವ ಮೂವರು ಇಸ್ರಯೇಲ್ ಒತ್ತೆಯಾಳುಗಳು ಮತ್ತು ಎಲ್ಲಾ ಮಹಿಳೆಯರನ್ನು - ಭಾನುವಾರದಂದು ಮೊದಲ ಹಂತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಒಪ್ಪಂದದ ಮೊದಲ ಹಂತವು 42 ದಿನಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ, 33 ಇಸ್ರಯೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಆದಾಗ್ಯೂ, ಒಪ್ಪಂದವು ಗಾಜಾದಲ್ಲಿ ಬೃಹತ್ ಪರಿಹಾರ ಮತ್ತು ಪುನರ್ನಿರ್ಮಾಣ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ. ಇಸ್ರಯೇಲ್ ದಿನಕ್ಕೆ 600 ಟ್ರಕ್‌ಲೋಡ್‌ಗಳ ಸಹಾಯವನ್ನು ಗಾಜಾಕ್ಕೆ ಅನುಮತಿಸುತ್ತದೆ.
ಈಜಿಪ್ಟ್ ಅಧಿಕಾರಿಗಳು ಗಾಜಾ ಗಡಿಯನ್ನು ಈಜಿಪ್ಟ್‌ನೊಂದಿಗೆ ಸಂಪರ್ಕಿಸುವ ಏಕೈಕ ಅಪಧಮನಿಯಾದ ರಫಾವನ್ನು ದಾಟುವ ಮಾರ್ಗವನ್ನು ಮತ್ತೆ ತೆರೆಯುವ ತಯಾರಿಯಲ್ಲಿ ಸಹಾಯ ವಿತರಣಾ ಪ್ರಯತ್ನಗಳನ್ನು ಹೆಚ್ಚಿಸುತ್ತಿದ್ದಾರೆ.
ನೂರಾರು ಟ್ರಕ್ ಚಾಲಕರು ತೀರಾ ಅಗತ್ಯವಿರುವ ಸಹಾಯವನ್ನು ತಲುಪಿಸಲು ಸೂಚನೆಗಾಗಿ ಕಾಯುತ್ತಿದ್ದಾರೆ. ಯುರೋಪಿನ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ರವರು, ಗಾಜಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿ ದಾಟುವಿಕೆಯನ್ನು ಮೇಲ್ವಿಚಾರಣೆ ಮಾಡಲು ಒಂದು ಕಾರ್ಯಾಚರಣೆಯನ್ನು ಮರು ನಿಯೋಜಿಸುವ ಬಗ್ಗೆ ಯುರೋಪಿಯನ ಒಕ್ಕೂಟವು ಪ್ರಸ್ತುತ ಚರ್ಚೆಯಲ್ಲಿದೆ ಎಂದು ಹೇಳಿದರು. ಮಾನವೀಯ ನೆರವು, ಪುನರ್ನಿರ್ಮಾಣ ಮತ್ತು ಚೇತರಿಕೆ ಪ್ರಯತ್ನಗಳ ಮೂಲಕ ಯುರೋಪ್ ಗಾಜಾವನ್ನು ಬೆಂಬಲಿಸುತ್ತದೆ ಎಂದು ಅವರು ದೃಢಪಡಿಸಿದರು.
ಇದೆಲ್ಲದರ ನಡುವೆ, ಹೆಚ್ಚಿನ ದೇಶಗಳು ವಿಶೇಷ ಚಿಕಿತ್ಸೆಗಾಗಿ ಹೆಚ್ಚುವರಿ ಗಾಯಗೊಂಡ ಪ್ಯಾಲೆಸ್ಟೀನಿಯದವರನ್ನು ಸ್ವೀಕರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 11,000ಕ್ಕೂ ಹೆಚ್ಚು ಜನರು ವಿದೇಶಗಳಲ್ಲಿ ವೈದ್ಯಕೀಯ ಸ್ಥಳಾಂತರಕ್ಕಾಗಿ ಕಾಯುತ್ತಿದ್ದಾರೆ.