ಗಾಜಾದಲ್ಲಿ ಕದನ ವಿರಾಮ ಈಗ ಜಾರಿಯಲ್ಲಿದೆ.
ನಾಥನ್ ಮಾರ್ಲಿ
ಗಾಜಾದಲ್ಲಿ ಬಟ್ಟೆ, ಡೇರೆಗಳು ಮತ್ತು ಇತರ ವಸ್ತುಗಳನ್ನು ಹಿಡಿದುಕೊಂಡು ಸ್ಥಳಾಂತರಗೊಂಡ ಸಾವಿರಾರು ಜನರು ತಮ್ಮ ಮನೆಗಳಿಗೆ ಹಿಂತಿರುಗಲು ಪ್ರಾರಂಭಿಸಿದ್ದಾರೆ. ಹಮಾಸ್ ಹೋರಾಟಗಾರರು ದಕ್ಷಿಣದ ಖಾನ್ ಯೂಯಿನ್ಸ್ ಪಟ್ಟಣದ ಮೂಲಕ ಓಡಿ ಹೋದರು ಹಾಗೂ ಜನಸಮೂಹವು ಘೋಷಣೆಗಳೊಂದಿಗೆ ಹರ್ಷೋದ್ಗಾರ ಮಾಡಿದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆ, ಬಹುನಿರೀಕ್ಷಿತ ಕದನ ವಿರಾಮ ವಿಳಂಬವಾಗಿತ್ತು. ಹಮಾಸ್ ಕದನ ವಿರಾಮದ ಬೇಡಿಕೆಗಳನ್ನು ಈಡೇರಿಸಿಲ್ಲ ಮತ್ತು ಗಾಜಾ ಮೇಲಿನ ದಾಳಿಗಳು ಮುಂದುವರಿಯುತ್ತವೆ ಎಂದು ಇಸ್ರಯೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗರಿರವರು ಹೇಳಿದ್ದಾರೆ.
ವಾಸ್ತವವಾಗಿ, ವಿಳಂಬಕ್ಕೂ ಮುನ್ನ, ಭಾನುವಾರ ಯೋಜನೆಯಂತೆ ಪ್ರಾರಂಭವಾಯಿತು – ಇಸ್ರಯೇಲ್ ಪಡೆಗಳು ಗಾಜಾ ಗಡಿಯ ರಫಾ ನಗರದಿಂದ ಹಿಂದೆ ಸರಿಯಲು ಪ್ರಾರಂಭಿಸಿದವು ಎಂದು ಹಮಾಸ್ ಪರ ಮಾಧ್ಯಮ ವರದಿ ಮಾಡಿದೆ.
ಈಜಿಪ್ಟ್‌ನ ಗಡಿಯುದ್ದಕ್ಕೂ ಫಿಲಡೆಲ್ಫಿಯಾ ಕಾರಿಡಾರ್ ಕಡೆಗೆ ಹಿಂತೆಗೆದುಕೊಳ್ಳುವಿಕೆಯಿತ್ತು ಎಂದು ವರದಿಯಾಗಿದೆ.
ಆದಾಗ್ಯೂ, ಸ್ವಲ್ಪ ಸಮಯದ ನಂತರ - ರಾತ್ರಿಯ ಸಮಯದಲ್ಲಿ - ಹಮಾಸ್‌ನಿಂದ ಬಿಡುಗಡೆ ಮಾಡಬೇಕಾದ ಒತ್ತೆಯಾಳುಗಳ ಪಟ್ಟಿಯನ್ನು ಇಸ್ರಯೇಲ್ ಸ್ವೀಕರಿಸುವವರೆಗೆ ಕದನ ವಿರಾಮವನ್ನು ಮುಂದೂಡಲಾಯಿತು.
ವಿದ್ಯುಜ್ಜನಿತ/ಎಲೆಕ್ಟ್ರಾನಿಕ್ ಸಂವಹನಗಳ ಕೊರತೆಯಿಂದಾಗಿ ಭೌತಿಕ ಸಂದೇಶವಾಹಕರ ಮೂಲಕ ಆಂತರಿಕ ಸಂವಹನ ನಡೆಯುವುದರಿಂದ ಸಂಬಂಧಿತ ಮಾಹಿತಿಯನ್ನು ಪಡೆಯಲು ಸಮಯ ಹಿಡಿಯಿತು ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ.
ನಂತರ ಭಾನುವಾರ ಬೆಳಿಗ್ಗೆ, ಗಾಜಾ ನಿವಾಸಿಗಳು ಗಾಜಾ ಗಡಿಯ ದಕ್ಷಿಣ ಮತ್ತು ಉತ್ತರ ಎರಡರಲ್ಲೂ ವೈಮಾನಿಕ ದಾಳಿಗಳ ಬಗ್ಗೆ ವರದಿ ಮಾಡಿದ್ದಾರೆ.
ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 25 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನಿಯದ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಹೇಳಿಕೆಯಲ್ಲಿ, ಐಡಿಎಫ್ ವಾಯುದಾಳಿಗಳನ್ನು ನಡೆಸುವುದನ್ನು ದೃಢಪಡಿಸಿದೆ, ದಾಳಿಗಳು ಹಮಾಸ್ ನ್ನು ಗುರಿಯಾಗಿರಿಸಿಕೊಂಡಿವೆ ಎಂದು ಹೇಳಿದೆ.
ಇಸ್ರಯೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರು ಶನಿವಾರ ರಾತ್ರಿ ಇಸ್ರಯೇಲ್ ದೂರದರ್ಶನದಲ್ಲಿ ಭಾಷಣ ಮಾಡಿದರು. ಅದರಲ್ಲಿ, ಹಮಾಸ್ ಎಲ್ಲಾ ಇಸ್ರಯೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಇಸ್ರಯೇಲ್ ದಾಳಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಅವರು ಹೇಳಿದರು. ಒಪ್ಪಂದದ ಮೊದಲ ಹಂತವು ತಾತ್ಕಾಲಿಕ ಕದನ ವಿರಾಮವಾಗಿದೆ ಎಂದು ನೆತನ್ಯಾಹುರವರು ದೃಢಪಡಿಸಿದರು, ಇದು ಫಲಿತಾಂಶಗಳನ್ನು ನೀಡದಿದ್ದರೆ ಹೋರಾಟವನ್ನು ಪುನರಾರಂಭಿಸುವ ಇಸ್ರಯೇಲ್‌ನ ಹಕ್ಕನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಹೇಳಿದರು.
ಆದಾಗ್ಯೂ, ಈಗಿರುವಂತೆ ಕದನ ವಿರಾಮ ಜಾರಿಯಲ್ಲಿದೆ.
ದೊಡ್ಡ ಪ್ರದೇಶವನ್ನು ನೋಡಿದರೆ, ಡಿಸೆಂಬರ್ ಆರಂಭದಲ್ಲಿ ಅಸ್ಸಾದ್ ರವರ ಆಡಳಿತವನ್ನು ಉರುಳಿಸಿದ ನಂತರ ಸುಮಾರು 200,000 ಸಿರಿಯದ ನಿರಾಶ್ರಿತರು ಮನೆಗೆ ಮರಳಿದ್ದಾರೆ ಎಂದು ವಿಶ್ವಸಂಸ್ಥೆಯು ನಿರಾಶ್ರಿತರ ಹೈಕಮಿಷನರ್ ಫಿಲಿಪ್ಪೊ ಗ್ರಾಂಡಿರವರು ಹೇಳುತ್ತಾರೆ.
ಇಸ್ರಯೇಲ್‌ನ ಹೆಜ್ಬೊಲ್ಲಾ ಮೇಲೆ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು, ಅವರಲ್ಲಿ ಅನೇಕರು ಆಡಳಿತ ಬದಲಾವಣೆಗೆ ಮುಂಚೆಯೇ ಲೆಬನಾನ್‌ನಿಂದ ಸಿರಿಯಾಕ್ಕೆ ಮರಳಿದರು.