ಗಾಜಾ: ಭಾನುವಾರದಿಂದ ಕದನ ವಿರಾಮ ಒಪ್ಪಂದ ಆರಂಭ
ನಾಥನ್ ಮಾರ್ಲಿ
ಗಾಜಾ ಗಡಿಯಲ್ಲಿ ಸಂಭಾವ್ಯ ಕದನ ವಿರಾಮದ ಸುದ್ದಿ ಕೇಳಿ ಇಸ್ರಯೇಲ್ ಮತ್ತು ಗಾಜಾ ಎರಡರಲ್ಲೂ ಸಂಭ್ರಮಾಚರಣೆ ನಡೆಯಿತು. ದೋಹಾದಲ್ಲಿ ನಡೆದ ತೀವ್ರ ಮಾತುಕತೆಗಳ ನಂತರ ಈ ಒಪ್ಪಂದಕ್ಕೆ ಬರಲಾಯಿತು.
ಕತಾರ್, ಈಜಿಪ್ಟ್ ಮತ್ತು ಅಮೇರಿಕದ ತೀವ್ರ ಮಧ್ಯಸ್ಥಿಕೆ ಪ್ರಯತ್ನಗಳ ನಂತರ ಇಸ್ರಯೇಲ್ ಮತ್ತು ಹಮಾಸ್ ಗಾಜಾ ಒತ್ತೆಯಾಳುಗಳಿಗಾಗಿ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡವು.
ಒಪ್ಪಂದದ ಅನುಷ್ಠಾನವು ಜನವರಿ 19ರ ಭಾನುವಾರದಂದು ಪ್ರಾರಂಭವಾಗಲಿದೆ.
ಒಪ್ಪಂದದ ಪ್ರಕಾರ, ಪ್ಯಾಲೆಸ್ತೀನಿಯದ ಕೈದಿಗಳ ಬಿಡುಗಡೆಗೆ ಪ್ರತಿಯಾಗಿ, ಹಮಾಸ್ ಆರು ವಾರಗಳವರೆಗೆ ಮೊದಲ ಹಂತದಲ್ಲಿ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ.
ಆದಾಗ್ಯೂ, ಗುರುವಾರ, ಒಪ್ಪಂದದ ಕುರಿತು ಯೋಜಿತ ಕ್ಯಾಬಿನೆಟ್ ಮತದಾನ ವಿಳಂಬವಾಗಿ, ಹಮಾಸ್ ಒಪ್ಪಂದದಿಂದ ಹಿಂದೆ ಸರಿದಿದೆ ಎಂದು ಇಸ್ರಯೇಲ್ ಆರೋಪಿಸಿತು.
ನಡೆಯುತ್ತಿರುವ ಮಾನವೀಯ ಬಿಕ್ಕಟ್ಟು
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ರವರು ಈ ಒಪ್ಪಂದವನ್ನು ಸ್ವಾಗತಿಸಿದರು, ಆದರೆ ಗಾಜಾದಲ್ಲಿ ತುರ್ತು ಸಹಾಯಕ್ಕೆ ಅಡೆತಡೆಯಿಲ್ಲದ ಪ್ರವೇಶವನ್ನು ಇದು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು.
ಯುನಿಸೆಫ್ ಈ ಒಪ್ಪಂದವನ್ನು ಸಕಾಲಿಕ ಎಂದು ಕರೆದಿದೆ ಮತ್ತು ಗಾಜಾದಲ್ಲಿನ ಮಕ್ಕಳಲ್ಲಿರುವ ಅಗಾಧವಾದ ಮಾನವೀಯ ಬಿಕ್ಕಟ್ಟನ್ನು ಎತ್ತಿ ತೋರಿಸಿದೆ.
ಅದೇ ಸಮಯದಲ್ಲಿ, ವಿಶ್ವಸಂಸ್ಥೆಯ UNRWA ದ ಮುಖ್ಯಸ್ಥ ಫಿಲಿಪ್ ಲಝರಿನಿರವರು, ಗಾಜಾದಲ್ಲಿ ತುರ್ತು ಸಹಾಯವನ್ನು "ತ್ವರಿತ ಮತ್ತು ಅಡೆತಡೆಯಿಲ್ಲದ" ಪ್ರವೇಶಕ್ಕಾಗಿ ಕರೆ ನೀಡಿದರು.
ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯು (ICRC) ಕೊಡುಗೆ ನೀಡುವ ಇಚ್ಛೆಯನ್ನು ಒತ್ತಿಹೇಳಿತು.
ಕದನ ವಿರಾಮ ಘೋಷಿಸಿದಾಗಿನಿಂದ ಗಾಜಾದಲ್ಲಿ ಕನಿಷ್ಠ 32 ಪ್ಯಾಲೆಸ್ತೀನಿಯದವರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.
ಹಲವಾರು ಮನೆಗಳನ್ನು ಹೊಂದಿರುವ ಅಪಾರ್ಟ್ಮೆಂಟ್ ಕಟ್ಟಡದ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ ಎಂದು ಗಾಜಾ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.