ಗಾಜಾದಲ್ಲಿ ಕದನ ವಿರಾಮದ ಘೋಷಣೆ
ವ್ಯಾಟಿಕನ್ ಸುದ್ಧಿ
ಗಾಜಾ ಕದನ ವಿರಾಮದ ಮೊದಲ ಹಂತದಲ್ಲಿ 33 ಇಸ್ರಯೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದನ್ನು ಕತಾರ್ ಪ್ರಧಾನಿ ಮೊಹಮ್ಮದ್ ಅಲ್ ಥಾನಿರವರು ದೃಢಪಡಿಸಿದರು. ಅಕ್ಟೋಬರ್ 7 ರಂದು ಅಪಹರಿಸಲ್ಪಟ್ಟರವರನ್ನು ಬಿಡುಗಡೆ ಮಾಡುವುದರ ಮೂಲಕ, ಈಗ ಅವರ ಕುಟುಂಬಗಳೊಂದಿಗೆ ಮತ್ತೆ ಸೇರುವಂತಹ ಅವಕಾಶವನ್ನು ಕಲ್ಪಿಸಲಾಗಿದೆ. ಅಕ್ಟೋಬರ್ 7, 2023 ರಂದು ಹಮಾಸ್ ಉಗ್ರಗಾಮಿಗಳು ದಕ್ಷಿಣ ಇಸ್ರಯೇಲ್‌ನಲ್ಲಿ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದು, ಸುಮಾರು 250 ಜನರನ್ನು ಅಪಹರಿಸಿದಾಗ ಸಂಘರ್ಷ ಪ್ರಾರಂಭವಾಯಿತು.
ಈ ಒಪ್ಪಂದವು ಶಾಶ್ವತ ಸ್ಥಿರತೆಯತ್ತ ಸಾಗುವ ಒಂದು ಹೆಜ್ಜೆಯಾಗಿದೆ
ಇತರ ಹೇಳಿಕೆಗಳಿಗೆ ಮುಂಚಿತವಾಗಿ ಟ್ರಂಪ್ ರವರ ಒಪ್ಪಂದದ ಘೋಷಣೆಯು ಇದನ್ನು "ಮಹಾಕಾವ್ಯ ಒಪ್ಪಂದ" ಎಂದು ಬಣ್ಣಿಸಿತು. "ಗಾಜಾದಲ್ಲಿ ಇನ್ನು ಭಯೋತ್ಪಾದಕರು ಇಲ್ಲ" ಎಂದು ಅವರು ಘೋಷಿಸಿದರು ಮತ್ತು ಅಬ್ರಹಾಂ ಒಪ್ಪಂದಗಳನ್ನು ವಿಸ್ತರಿಸುವುದಾಗಿ ಪ್ರತಿಜ್ಞೆ ಮಾಡಿದರು. ಬೈಡೆನ್ ರವರ ಆಡಳಿತವು ಒಪ್ಪಂದವನ್ನು ದೃಢಪಡಿಸಿತು, ಆದರೆ ಗಾಜಾದಾದ್ಯಂತ ಸಂಭ್ರಮಾಚರಣೆಗಳು ಭುಗಿಲೆದ್ದವು.
ಯುರೋಪಿನ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ರವರು, ಮಾನವೀಯ ನೆರವು ಈಗ ಗಾಜಾದ ನಾಗರಿಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಗಮನಿಸಿ. ಶಾಶ್ವತ ಸ್ಥಿರತೆ ಮತ್ತು ಸಂಘರ್ಷದ ರಾಜತಾಂತ್ರಿಕ ಪರಿಹಾರದತ್ತ ಒಂದು ಮೆಟ್ಟಿಲು ಕಲ್ಲಿನ ರೀತಿ ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಅವರು ಎರಡೂ ಪಕ್ಷಗಳನ್ನು ಒತ್ತಾಯಿಸಿದರು.
ಗಾಜಾದಲ್ಲಿ ಆಚರಣೆಗಳು
ಬಹಳ ದಿನಗಳಿಂದ ಕಾಯುತ್ತಿದ್ದ ಕದನ ವಿರಾಮದ ಘೋಷಣೆಯನ್ನು ಆಚರಿಸಲು ಪ್ಯಾಲೆಸ್ತೀನಿಯದವರು ತಮ್ಮ ಕೊಂಬುಗಳನ್ನು ಮೊಳಗಿಸಿ ಪ್ಯಾಲೆಸ್ತೀನಿಯದ ಧ್ವಜಗಳನ್ನು ಬೀಸಿದರು. ಕುಟುಂಬಗಳು ಹಸಿವು, ಬಾಂಬ್ ದಾಳಿಗಳು, ಸಾವು, ವಿನಾಶ, ಭಯ ಮತ್ತು ಪುನರಾವರ್ತಿತ ವಿಫಲ ಮಾತುಕತೆಗಳ ಬಗ್ಗೆ ಮಾತನಾಡಿದರು. ಈಗ, ಸಂತ್ರಸ್ತರ ಬಗ್ಗೆ ಪ್ರತಿದಿನ ಮಾತನಾಡುವುದನ್ನು ನಿಲ್ಲಿಸಿ ಸುರಕ್ಷಿತವಾಗಿರುವುದು ಅವರ ದೊಡ್ಡ ಆಶಯವಾಗಿದೆ.
ಗಾಜಾದ ಆರೋಗ್ಯ ಚಿಕಿತ್ಸಾಲಯದ ಪ್ರಕಾರ, ಅಕ್ಟೋಬರ್ 7, 2023 ರಿಂದ ಇಸ್ರಯೇಲ್‌ನ ನೆಲ ಮತ್ತು ವಾಯು ಕಾರ್ಯಾಚರಣೆಯಲ್ಲಿ 46,600 ಜನರು ಸಾವನ್ನಪ್ಪಿದ್ದಾರೆ, ಗುರುತಿಸಲಾದ ಸಂತ್ರಸ್ತರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು, ಮಕ್ಕಳು ಅಥವಾ ವೃದ್ಧರಾಗಿದ್ದಾರೆ.