ಮಾತೆ ಮೇರಿಯ ಬಿಸಿಯೂಟಕ್ಕೆ ಬೆಂಬಲಿಸುವುದು ಜನರ ಸಹಜ ಒಳ್ಳೆಯತನ.
ಫ್ರಾನ್ಸೆಸ್ಕಾ ಮೆರ್ಲೊ
"ಇಂದು ಬೆಳಿಗ್ಗೆ ನಾವು ಭೇಟಿಯಾದ ಮಕ್ಕಳು ಹಸಿವಿನಿಂದ ಮತ್ತು ಊಟಕ್ಕಾಗಿ ಕಾಯುತ್ತಾ ಲಂಡನ್ ಅಥವಾ ನ್ಯೂಯಾರ್ಕ್‌ನಲ್ಲಿರುವ ಜನರಂತೆಯೇ ಒಂದೇ ಕೋಣೆಯಲ್ಲಿದ್ದರೆ, ಅವರಿಗೆ ತಕ್ಷಣವೇ ಆಹಾರವನ್ನು ನೀಡಲಾಗುತ್ತಿತ್ತು."
ಹಸಿವಿನಿಂದ ನಡುಗುವುದು ಹೇಗೆಂದು ವ್ಯಕ್ತಪಡಿಸಿದ, ಒಬ್ಬ ಚಿಕ್ಕ ಹುಡುಗನನ್ನು ಭೇಟಿಯಾದ ನಂತರ, ಮೇರಿಸ್ ಮೀಲ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಮ್ಯಾಗ್ನಸ್ ಮ್ಯಾಕ್‌ಫಾರ್ಲೇನ್-ಬ್ಯಾರೋರವರು, ಮಾನವೀಯತೆಗೆ ತಮ್ಮ ಸರಳ ಮನವಿಯನ್ನು ಹಂಚಿಕೊಳ್ಳುತ್ತಾರೆ. ಮಲಾವಿಯ ಲಿಲಾಂಗ್ವೆಯಲ್ಲಿರುವ ಮೇರಿ ಮೀಲ್ಸ್ ಗೋದಾಮಿನಲ್ಲಿ ಕುಳಿತು, ಸೋಯಾ ಧಾನ್ಯಗಳ ಮಿಶ್ರಣದ ಚೀಲಗಳಿಂದ ಸುತ್ತುವರೆದಿರುವ ಮ್ಯಾಕ್‌ಫಾರ್ಲೇನ್-ಬ್ಯಾರೋರವರು, ಮಾತೆ ಮೇರಿಯ ಬಿಸಿಯೂಟದ ತುರ್ತು ಮತ್ತು ಸರಳ ಧ್ಯೇಯವನ್ನು ಹಂಚಿಕೊಳ್ಳುತ್ತಾರೆ: ಇಲ್ಲಿ ಯಾವುದೇ ಮಗು ಹಸಿವಿನಿಂದ ಇರಬಾರದು ಮತ್ತು ಶಿಕ್ಷಣದ ಸ್ಥಳಗಳಲ್ಲಿ ಮಕ್ಕಳಿಗೆ ದಿನಕ್ಕೆ ಒಂದು ಊಟವನ್ನು ಒದಗಿಸುವ ಮೂಲಕ ಇದನ್ನು ಪೂರೈಸಲು ದತ್ತಿ ಸಂಸ್ಥೆ ಶ್ರಮಿಸುತ್ತಿದೆ.
ಬೋಸ್ನಿಯನ್ ಯುದ್ಧದ ಸಮಯದಲ್ಲಿ ಸ್ಕಾಟ್ಲೆಂಡ್‌ನ ಮ್ಯಾಕ್‌ಫಾರ್ಲೇನ್-ಬ್ಯಾರೋರವರ ಕುಟುಂಬದ ಮನೆಯ ಉದ್ಯಾನದ ಶೆಡ್‌ನಲ್ಲಿ ಪ್ರಾರಂಭವಾದ ಒಂದು ಸಣ್ಣ ಉಪಕ್ರಮವು ಈಗ ವಿಶ್ವದ 16 ಬಡ ರಾಷ್ಟ್ರಗಳಲ್ಲಿ ಪ್ರತಿದಿನ ಸುಮಾರು 2.5 ಮಿಲಿಯನ್ ಮಕ್ಕಳಿಗೆ ಆಹಾರವನ್ನು ನೀಡುವ ಜಾಗತಿಕ ಚಳುವಳಿಯಾಗಿದೆ.
ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವುದು
ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಮ್ಯಾಕ್‌ಫಾರ್ಲೇನ್-ಬ್ಯಾರೋರವರು ವಿಶ್ವದಾದ್ಯಂತ ಹರಡಿರುವ, ಮಾತೆ ಮೇರಿಯ ಬಿಸಿಯೂಟವನ್ನು ಬೆಂಬಲಿಸುವ ಮತ್ತು ಕೆಲವು ರೀತಿಯಲ್ಲಿ ಕೊಡುಗೆ ನೀಡುವವರ ಔದಾರ್ಯವನ್ನು ವಿವರಿಸುತ್ತಾರೆ. ಪ್ರಪಂದಾದ್ಯಂತ ಶಾಲೆಗಳಲ್ಲಿ ತೊಡಗಿಸಿಕೊಂಡಿರುವ ಯುವಜನರ ಸಂಖ್ಯೆ ಹೆಚ್ಚುತ್ತಿರುವುದು ಒಂದು ದೊಡ್ಡ ವಿಷಯ ಎಂದು ಅವರು ಹೇಳುತ್ತಾರೆ. ಆದಾಗ್ಯೂ, "ಈ ಕೆಲಸದ ಮುಖ್ಯಭಾಗಗಳಲ್ಲಿ ಸ್ವಯಂಸೇವಕರು ಇದ್ದಾರೆ, ವಿಶೇಷವಾಗಿ ಮಲಾವಿಯಂತಹ ದೇಶಗಳಲ್ಲಿ, ಅವರು ಪ್ರತಿದಿನ ಬೆಳಿಗ್ಗೆ ಎದ್ದು ತಮ್ಮದೇ ಸಮುದಾಯಗಳ ಮಕ್ಕಳಿಗೆ ಈ ಊಟಗಳನ್ನು ಬೇಯಿಸಿ ಬಡಿಸುತ್ತಾರೆ" ಎಂದು ಅವರು ಹೇಳುತ್ತಾರೆ.
ಸಮುದಾಯದ ಸದಸ್ಯರು ಮತ್ತು ಕೆಲವೊಮ್ಮೆ ಶಾಲೆಯಲ್ಲಿರುವ ಮಕ್ಕಳ ಪೋಷಕರು ಸೇರಿದಂತೆ ಸ್ವಯಂಸೇವಕರಿಲ್ಲದೆ ದತ್ತಿ ಸಂಸ್ಥೆ ನಡೆಯಲು ಸಾಧ್ಯವಿಲ್ಲ. ಮಾತೆ ಮೇರಿಯ ಬಿಸಿಯೂಟದ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಿದ ನಂತರ, ಸ್ವಯಂಸೇವಕರು ಕಾರ್ಯಕ್ರಮವನ್ನು ವಹಿಸಿಕೊಳ್ಳುತ್ತಾರೆ. ಮಲಾವಿ ಮತ್ತು ದಕ್ಷಿಣ ಆಫ್ರಿಕಾದ ಇತರ ದೇಶಗಳಲ್ಲಿ, ಈ ಊಟವು ಸೋಯಾ ಧಾನ್ಯಗಳ ಮಿಶ್ರಣ (CBS) - ಅಥವಾ ಗಂಜಿ - ಆಗಿದ್ದು, ಮಾತೆ ಮೇರಿಯ ಬಿಸಿಯೂಟವು ಸಾಧ್ಯವಾದಾಗಲೆಲ್ಲಾ ಪದಾರ್ಥಗಳನ್ನು ಸ್ಥಳೀಯವಾಗಿ ಪಡೆಯುವುದನ್ನು ಖಚಿತಪಡಿಸುತ್ತದೆ, ಇದರಿಂದಾಗಿ ಸ್ಥಳೀಯ ರೈತರು ಮತ್ತು ಅವರ ಆರ್ಥಿಕತೆಯನ್ನು ಬೆಂಬಲಿಸುತ್ತದೆ.
ವಿಶ್ವಗುರು ಫ್ರಾನ್ಸಿಸ್ ರವರ ಬೋಧನೆಗೆ ಹೊಂದಿಕೆಯಾಗುವ ಧ್ಯೇಯ
ಮಾತೆ ಮೇರಿಯ ಬಿಸಿಯೂಟದ ಯೋಜನೆ, ಕಥೋಲಿಕ ಸಂಸ್ಥೆಯಲ್ಲದಿದ್ದರೂ, ಅದರ ಕೆಲಸವು ಕಥೋಲಿಕ ಸಾಮಾಜಿಕ ಬೋಧನೆಯಿಂದ ಆಳವಾಗಿ ರೂಪುಗೊಂಡಿದೆ. ಮಾನವ ಘನತೆಗೆ ಆಳವಾದ ಗೌರವ ಮತ್ತು ಸಾಮಾನ್ಯ ಒಳಿತಿಗಾಗಿ ಬದ್ಧತೆಯನ್ನು ಮ್ಯಾಕ್‌ಫರ್ಲೇನ್-ಬ್ಯಾರೋರವರು ಒತ್ತಿಹೇಳುತ್ತಾರೆ. "ಮೇರಿಸ್ ಮೀಲ್ಸ್‌ಊಟವು ಯೇಸುವಿನ ತಾಯಿಯ ಹೆಸರಿನಲ್ಲಿ ಮಾಡಲಾದ ಕೆಲಸ" ಎಂದು ಮ್ಯಾಕ್‌ಫಾರ್ಲೇನ್-ಬ್ಯಾರೋರವರು ಪ್ರತಿಬಿಂಬಿಸುತ್ತಾರೆ. "ಅದೇ ಸಮಯದಲ್ಲಿ, ಇದು ಸಾರ್ವತ್ರಿಕವಾಗಿದೆ - ಸದ್ಭಾವನೆಯ ಪ್ರತಿಯೊಬ್ಬರನ್ನು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ".
ಹಂಚಿಕೊಂಡ ಮಾನವೀಯತೆಯ ಬಗ್ಗೆ
ನಾವೆಲ್ಲರೂ ನಮ್ಮದೇ ಆದ ಸಮಸ್ಯೆಗಳಲ್ಲಿ ಮುಳುಗಿರುವ ಮತ್ತು ಶ್ರೀಮಂತ ರಾಷ್ಟ್ರಗಳು ಬಿಕ್ಕಟ್ಟುಗಳಿಂದ ಮುಳುಗಿರುವ ಸಮಯದಲ್ಲಿ, ಚಿಕ್ಕ ಕಾರ್ಯಗಳು ಸಹ ಅಗಾಧ ವ್ಯತ್ಯಾಸವನ್ನುಂಟುಮಾಡಬಹುದು ಎಂದು ಮ್ಯಾಕ್‌ಫಾರ್ಲೇನ್-ಬ್ಯಾರೋರವರು ನಮಗೆ ನೆನಪಿಸುತ್ತಾರೆ. "ಒಂದು ಮಗುವಿಗೆ ಒಂದು ಶಾಲಾ ವರ್ಷ ಪೂರ್ತಿ ಆಹಾರ ನೀಡಲು ಕೇವಲ £19.15 (22€) ವೆಚ್ಚವಾಗುತ್ತದೆ" ಎಂದು ಅವರು ಹೇಳುತ್ತಾರೆ. "ಅದು ಪ್ರತಿ ಊಟಕ್ಕೆ ಸುಮಾರು 10 ಪೆನ್ಸ್ ಆಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಏನನ್ನಾದರೂ ನೀಡಬಹುದು." ಇದು ನಂಬಲು ಕಷ್ಟವೆನಿಸುವಷ್ಟು ಚಿಕ್ಕ ಬೆಲೆಯಾಗಿದೆ, ಆದರೆ ಇದು ಮಾತ್ರ ನಿಜ: ನಮ್ಮಲ್ಲಿ ಅನೇಕರಿಗೆ ಒಂದು ಊಟದ ಬೆಲೆಯು, ವಿಶ್ವದ ಇತರ ಭಾಗದಲ್ಲಿ, ಒಂದು ಮಗುವಿಗೆ ಇಡೀ ವರ್ಷ ಆಹಾರವನ್ನು ನೀಡಬಹುದು.
ಆದಾಗ್ಯೂ, ಮ್ಯಾಗ್ನಸ್ ಮ್ಯಾಕ್‌ಫರ್ಲೇನ್-ಬ್ಯಾರೋರವರು ಕೂಡ ತಮ್ಮ ಬೆಂಬಲಿಗರಲ್ಲಿ ತಮ್ಮನ್ನು ತಾವು, ಯಾರೂ ಮಾನವ ಎಟಿಎಂಗಳಂತೆ ಭಾವಿಸದಿರುವುದು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತಾರೆ. ಇದು ಹಂಚಿಕೆಯ ಮಾನವೀಯತೆಯ ವಿಷಯ ಮತ್ತು "ಈ ಕೆಲಸವನ್ನು ಅದು ಇರಬೇಕಾದ ರೀತಿಯಲ್ಲಿ ಮಾಡಿದರೆ, ಅದು ಎಲ್ಲರ ಜೀವನವನ್ನು ಉತ್ತಮಗೊಳಿಸುತ್ತದೆ - ನೀಡುವವರು ಸೇರಿದಂತೆ" ಎಂದು ಅವರು ಒತ್ತಾಯಿಸುತ್ತಾರೆ. "ಜನರು ನಮಗೆ ಧನ್ಯವಾದ ಸಲ್ಲಿಸುತ್ತಾರೆ, ಏಕೆಂದರೆ ಅವರು ಹಂಚಿಕೊಳ್ಳಲು ಪ್ರಾರಂಭಿಸಿದಾಗಿನಿಂದ ಅವರ ಜೀವನ ಬದಲಾಗಿದೆ ಎಂದು ಹೇಳುತ್ತಾರೆ" ಎಂದು ಅವರು ಹೇಳುತ್ತಾರೆ.
ಫೆಬ್ರವರಿ 3 ರಂದು ವ್ಯಾಟಿಕನ್ ಮಕ್ಕಳ ಹಕ್ಕುಗಳ ಕುರಿತಾದ ವಿಶ್ವ ಸಭೆಯನ್ನು ಆಯೋಜಿಸಲಿರುವಾಗ, ಮ್ಯಾಗ್ನಸ್ ಮ್ಯಾಕ್‌ಫರ್ಲೇನ್-ಬ್ಯಾರೋರವರು ಮೇರಿಯ ಮೀಲ್ಸ್ ನ್ನು ಪ್ರತಿನಿಧಿಸಲಿದ್ದಾರೆ. ಆ ಸಂದರ್ಭದಲ್ಲಿ, ಪ್ರತಿದಿನ ಲಕ್ಷಾಂತರ ಮಕ್ಕಳು ಎದುರಿಸುತ್ತಿರುವ ಜಾಗತಿಕ ಸವಾಲುಗಳಿಗೆ ಪ್ರತಿಕ್ರಿಯಿಸುತ್ತಾ, ವಿಶ್ವದಾದ್ಯಂತದ ವಕೀಲರು ಅನ್ಯಾಯ ಮತ್ತು ಸಂಘರ್ಷದಿಂದ ಧ್ವಂಸಗೊಂಡ ಜಗತ್ತಿನಲ್ಲಿ ಮಕ್ಕಳ ಹಕ್ಕುಗಳ ತುರ್ತು ವಿಷಯದ ಕುರಿತು ಮಾತನಾಡುತ್ತಾರೆ.
ಜನರ ಸಹಜ ಒಳ್ಳೆಯತನದಲ್ಲಿ ಅಪರಿಮಿತ ವಿಶ್ವಾಸ
ಲಕ್ಷಾಂತರ ಮಕ್ಕಳು ಇನ್ನೂ ಹಸಿವಿನಿಂದ ಬಳಲುತ್ತಿರುವುದರಿಂದ, ಮಾತೆ ಮೇರಿಯ ಬಿಸಿಯೂಟದ ಕೆಲಸ ಇನ್ನೂ ಮುಗಿದಿಲ್ಲ. ಆದರೆ ಮ್ಯಾಕ್‌ಫಾರ್ಲೇನ್-ಬ್ಯಾರೋರವರು ಜನರ ಸಹಜ ಒಳ್ಳೆಯತನದ ಮೇಲಿನ ತನ್ನ ವಿಶ್ವಾಸದಲ್ಲಿ ದೃಢವಾಗಿದ್ದಾರೆ, ಈ ಕಾಯಕವೆಲ್ಲವೂ ಹಲವು ವರ್ಷಗಳ ಹಿಂದೆ ಬೋಸ್ನಿಯಾಗೆ ದೇಣಿಗೆಗಳ ಲಾರಿಯನ್ನು ತೆಗೆದುಕೊಂಡು ಹೋದಾಗ ಪ್ರಾರಂಭವಾಯಿತು ಎಂದು ಅವರಿಗೆ ತಿಳಿದಿದೆ. "ಬೋಸ್ನಿಯದ ಯುದ್ಧದ ಸಮಯದಲ್ಲಿ ನಾನು ಒಂದು ಸಣ್ಣ ಮನವಿಯನ್ನು ಮಾಡಿದೆ, ಮತ್ತು ಜನರ ದಯೆಯಿಂದ ಮತ್ತು ಕೊಡುಗೆಗೆ, ನಾನು ತುಂಬಿಹೋದೆ. ಜನರ ಆ ದಯೆಯೆ ಇಂದಿಗೂ ಈ ಕಾರ್ಯವನ್ನು ಇನ್ನೂ ಮುನ್ನಡೆಸುತ್ತಿದೆ."
ಆ ಕ್ಷಣದಿಂದ 2002ರಲ್ಲಿ ಮಲಾವಿಯ ಮೊದಲ 200 ಮಕ್ಕಳಿಗೆ ಆಹಾರ ನೀಡುವವರೆಗೆ, ಮ್ಯಾಕ್‌ಫಾರ್ಲೇನ್-ಬ್ಯಾರೋರವರು, ಇಂದು ಅವರು ತಮ್ಮ ಯೋಜನೆಯ ಮೂಲಕ ವಿಶ್ವದಾದ್ಯಂತ ಇರುತ್ತಾರೆ, ನಿರಂತರವಾಗಿ ಅಭಿವೃದ್ಧಿ ಕಾಣುತ್ತಾರೆ ಮತ್ತು ಹೆಚ್ಚು ಹೆಚ್ಚು ಮಕ್ಕಳಿಗೆ ಆಹಾರವನ್ನು ನೀಡುತ್ತಾರೆ ಎಂದು ಎಂದಿಗೂ ಊಹಿಸಿರಲಿಲ್ಲವೇನೋ.
ವಿಶ್ವಗುರು ಫ್ರಾನ್ಸಿಸ್ ರವರು ಆಗಾಗ್ಗೆ ಕರೆ ನೀಡುವ ಪ್ರೀತಿಯ ಸಂಸ್ಕೃತಿಯ ಮೂಲಕ, ವಿಶ್ವಾಸದ ಮೂಲಕ ಮತ್ತು "ಪ್ರಾರ್ಥನೆಯ ಮೂಲಕ", ಮಾತೆ ಮೇರಿಯ ಬಿಸಿಯೂಟದ, ತನ್ನ ಧ್ಯೇಯವನ್ನು ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಮುಂದುವರಿಸುತ್ತದೆ ಏಕೆಂದರೆ ಉಣಿಸುವ ಪ್ರತಿ ಮಗುವಿಗೆ, ಯಾವಾಗಲೂ ಇನ್ನೊಂದು ಮಗುವು ಹಸಿವಿನಿಂದ ಉಣಲು ಕಾಯುತ್ತಾ ಇರುತ್ತದೆ.