MAP

Fr. Rifat Bader  all'inaugurazione della chiesa in Giordania dove Gesù è stato battezzato Fr. Rifat Bader all'inaugurazione della chiesa in Giordania dove Gesù è stato battezzato 

ಧರ್ಮಗುರು ರಿಫತ್ ಬದರ್: ಪವಿತ್ರ ನಾಡಿನ ಭರವಸೆಯನ್ನು ಜೋರ್ಡಾನ್‌ನಲ್ಲಿ ಕಾಣಬಹುದು

ವ್ಯಾಟಿಕನ್‌ನಲ್ಲಿ 'ಜೋರ್ಡಾನ್: ಕ್ರೈಸ್ತ ಧರ್ಮದ ಉದಯ' ಪ್ರದರ್ಶನಕ್ಕೆ ಮುಂಚಿತವಾಗಿ, ಜೆರುಸಲೇಮ್‌ನ ಲತೀನ್ ಪಿತೃಪ್ರಧಾನರಾದ ಜೋರ್ಡಾನ್ನಿನ ಯಾಜಕ, ಧರ್ಮಗುರು ರಿಫತ್ ಬದರ್, ರಾಷ್ಟ್ರವು ನಿರಾಶ್ರಿತರಿಗೆ ಹೇಗೆ ಭರವಸೆ ನೀಡುತ್ತದೆ ಎಂಬುದನ್ನು ವಿವರಿಸುತ್ತಾರೆ ಮತ್ತು ಜೋರ್ಡಾನ್ನಿನಲ್ಲಿ ಕ್ರೈಸ್ತ ಧರ್ಮದ ಮೂಲವನ್ನು ಮರುಶೋಧಿಸಲು, ವಿಶೇಷವಾಗಿ ರಾಷ್ಟ್ರದ 2030ರ ಜ್ಯೂಬಿಲಿಗೆ ಮುಂಚಿತವಾಗಿ ಯಾತ್ರಿಕರನ್ನು ಆಹ್ವಾನಿಸುತ್ತಾರೆ.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

2030ರಲ್ಲಿ ಪ್ರಭುಯೇಸುವಿನ ದೀಕ್ಷಾಸ್ನಾನ, ನಂತರ 2000 ವರ್ಷಗಳ ಜ್ಯೂಬಿಲಿಯ ಸಿದ್ಧತೆ ನಡೆಯುತ್ತಿರುವಾಗ, ಬೈಬಲ್‌ನಿಂದ ಸಮೃದ್ಧವಾಗಿರುವ ಪವಿತ್ರ ನಾಡಿನ ರಾಷ್ಟ್ರವಾದ ಜೋರ್ಡಾನ್, ಯಾತ್ರಿಕರು ಮತ್ತು ದುರ್ಬಲರಿಗೆ, ಭರವಸೆ ಮತ್ತು ವಿಶ್ವಾಸವನ್ನು ನೀಡುತ್ತಿದೆ.

ಲತೀನ್ ಪಿತೃಪ್ರಧಾನ ಕಚೇರಿಯೊಂದಿಗೆ ಸಂಯೋಜಿತವಾಗಿರುವ ಜೋರ್ಡಾನ್‌ನಲ್ಲಿರುವ ಕಥೋಲಿಕ ಅಧ್ಯಯನಗಳ ಮತ್ತು ಮಾಧ್ಯಮಗಳ ಕೇಂದ್ರವನ್ನು (ಕ್ಯಾಥೋಲಿಕ್ ಸೆಂಟರ್ ಫಾರ್ ಸ್ಟಡೀಸ್ ಅಂಡ್ ಮೀಡಿಯಾ) ನಿರ್ದೇಶಿಸುವ ಜೆರುಸಲೇಮ್‌ನ ಲತೀನ್ ಪಿತೃಪ್ರಧಾನ ಕಚೇರಿಯ ರೋಮನ್ ಕಥೋಲಿಕ ಯಾಜಕ, ಜೋರ್ಡಾನ್ನಿನ ಧರ್ಮಗುರು ರಿಫತ್ ಬದರ್, ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಧರ್ಮಗುರು ರಿಫತ್ ರವರು abouna.org ಜಾಲತಾಣದ ಮುಖ್ಯಸ್ಥರಾಗಿದ್ದು, ಇದು ಅರಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಪವಿತ್ರ ನಾಡಿನ ಜೋರ್ಡಾನ್ ಮತ್ತು ಮಧ್ಯಪ್ರಾಚ್ಯದ ಸುದ್ದಿಗಳು, ಹೇಳಿಕೆ ಅಥವಾ ಟೀಕೆಗಳನ್ನು (ಕಾಮೆಂಟ್‌ಗಳು) ಹಾಗೂ ಲೇಖನಗಳನ್ನು ಒಳಗೊಂಡಿದೆ.

ಸಂದರ್ಶನದಲ್ಲಿ, ಧರ್ಮಗುರು ರಿಫತ್ ರವರು ಸಂವಹನಗಳ ಜ್ಯೂಬಿಲಿಗಾಗಿ ಮತ್ತು ರೋಮ್‌ನಲ್ಲಿ ಪವಿತ್ರ ತಂದೆ ವಿಶ್ವಗುರುಗಳೊಂದಿಗೆ ತಾವು ಕಳೆದ ಸಮಯವನ್ನು, ಈ ವಾರ ವ್ಯಾಟಿಕನ್‌ನ ಪಲಾಝೊ ಡೆಲ್ಲಾ ಕ್ಯಾನ್ಸೆಲೆರಿಯಾದಲ್ಲಿ ಪ್ರಾರಂಭವಾಗಲಿರುವ 'ಜೋರ್ಡಾನ್: ಕ್ರೈಸ್ತ ಧರ್ಮದ ಉದಯ' ಪ್ರದರ್ಶನ ಮತ್ತು ಜೋರ್ಡಾನ್ ಹಾಗೂ ಪವಿತ್ರ ನಾಡಿನ ಉಳಿದ ಭಾಗಗಳಲ್ಲಿ ಕ್ರೈಸ್ತ ಧರ್ಮದ ಮೂಲಗಳತ್ತ ಸಾಗುವ ಧಾರ್ಮಿಕ ತೀರ್ಥಯಾತ್ರೆಯನ್ನು ನೆನಪಿಸಿಕೊಳ್ಳುತ್ತಾರೆ.

ಪ್ರಶ್ನೆ: ಧರ್ಮಗುರು ರಿಫತ್ ರವರೇ, ನೀವು ಈ ವಾರ ರೋಮ್‌ನಲ್ಲಿ ಏಕೆ ಇದ್ದೀರಿ ಎಂದು ನಮಗೆ ಹೇಳಬಲ್ಲಿರಾ?
ಕಥೋಲಿಕ ಅಧ್ಯಯನಗಳ ಮತ್ತು ಮಾಧ್ಯಮಗಳ ಕೇಂದ್ರದ (ಕ್ಯಾಥೋಲಿಕ್ ಸೆಂಟರ್ ಫಾರ್ ಸ್ಟಡೀಸ್ ಅಂಡ್ ಮೀಡಿಯಾದ) ನಿರ್ದೇಶಕರಾಗಿ ಮತ್ತು ಜೋರ್ಡಾನ್‌ನಲ್ಲಿರುವ ಜೆರುಸಲೇಮ್‌ನ ಲತೀನ್ ಪಿತೃಪ್ರಧಾನ ಕಚೇರಿಯ ರೋಮನ್ ಕಥೋಲಿಕ ಕಚೇರಿಯನ್ನು ಪ್ರತಿನಿಧಿಸುವ ಮೂಲಕ, ಕಥೋಲಿಕ ಧರ್ಮಸಭೆಯ ವರ್ಗಗಳಿಗೆ ಮೊದಲ ಜ್ಯೂಬಿಲಿ ಆಚರಣೆಯಾದ ಸಂವಹನಗಳ ಜ್ಯೂಬಿಲಿಯಲ್ಲಿ ಭಾಗವಹಿಸಲು ಆಹ್ವಾನಿಸಲ್ಪಟ್ಟ ನಂತರ ನಾನು ರೋಮ್‌ನಲ್ಲಿರುವುದು ನನಗೆ ಸೌಭಾಗ್ಯವಾಗಿದೆ. ಜ್ಯೂಬಿಲಿಯಲ್ಲಿ ಭಾಗವಹಿಸುತ್ತಿರುವ 138 ದೇಶಗಳ ಎಲ್ಲಾ ಸಹೋದ್ಯೋಗಿಗಳೊಂದಿಗೆ ಮಾಧ್ಯಮದ ನಾಯಕನಾಗಿ ಭಾಗವಹಿಸಲು ನನಗೆ ಸಂತೋಷವಾಗಿದೆ.

ದೈವವಾಕ್ಯದ ಭಾನುವಾರದಂದು ಪರಮಪೂಜ್ಯರೊಂದಿಗೆ ದಿವ್ಯಬಲಿಪೂಜೆಯನ್ನು ಆಚರಿಸುವ ಸೌಭಾಗ್ಯ ನಮಗಿತ್ತು ಮತ್ತು ಶನಿವಾರದ ಸಂವಹನಕಾರರ ಪ್ರೇಕ್ಷಕರ ಸಭೆಯಲ್ಲಿಯೂ ನಾವು ಹಾಜರಿದ್ದೆವು.

ನಿನ್ನೆ, ನಾವು ಸಂವಹನ ನಿರ್ದೇಶಕರಾಗಿ ಖಾಸಗಿ ಪ್ರೇಕ್ಷಕರನ್ನು ಹೊಂದಿದ್ದೆವು ಮತ್ತು ಪವಿತ್ರ ತಂದೆಯು ಧರ್ಮಸಭೆಯ ಸೇವೆಯಲ್ಲಿ ನಮ್ಮ ಕಾಲದ ಸಂವಹನಗಳು ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ಕುರಿತು ಮಾತನಾಡುವುದನ್ನು ನಾವು ಕೇಳಿದೆವು. ವಿಶ್ವದಾದ್ಯಂತದ ಎಲ್ಲಾ ಕಥೋಲಿಕ ಮಾಧ್ಯಮ ಕಚೇರಿಗಳೊಂದಿಗೆ ಒಗ್ಗಟ್ಟಾಗಿ ಇಲ್ಲಿರುವುದು ಒಳ್ಳೆಯದೆನಿಸಿತು.

ಪ್ರಶ್ನೆ: ಸೋಮವಾರ ಬೆಳಿಗ್ಗೆ ಸಭೆಯಲ್ಲಿ ನೀವು ಪವಿತ್ರ ತಂದೆಯವರೊಂದಿಗೆ ಇದ್ದ ಫೋಟೋವನ್ನು ನಾನು ನೋಡಿದ್ದೆ. ಆ ವಿನಿಮಯದ ಬಗ್ಗೆ ನೀವು ನಮಗೆ ಹೇಳಬಲ್ಲಿರಾ?
ಜೋರ್ಡಾನ್‌ನಲ್ಲಿ ವಿಶ್ವಗುರು ಫ್ರಾನ್ಸಿಸ್ ರವರೊಂದಿಗಿನ ಖಾಸಗಿ ಪ್ರೇಕ್ಷಕರ ಬಗ್ಗೆ ನಾನು ಕೇಳಿದಾಗ, ದೀಕ್ಷಾಸ್ನಾನ ಸ್ಥಳದಲ್ಲಿ, ಧರ್ಮಸಭೆಯ ಪವಿತ್ರ ತಂದೆಗಾಗಿ ನಾನು ವಿಶೇಷ ಚಿತ್ರವನ್ನು ಮಾಡಿದ್ದೇನೆ, ಅದನ್ನು ಜನವರಿ ಆರಂಭದಲ್ಲಿ ಕಾರ್ಡಿನಲ್ ಪರೋಲಿನ್ ರವರು, ಪರಮಪೂಜ್ಯ ವಿಶ್ವಗುರು ಫ್ರಾನ್ಸಿಸ್ ರವರ ವಿಶೇಷ ರಾಯಭಾರಿಯಾಗಿ ಉದ್ಘಾಟಿಸಿದರು.

ಅದರ ಮೇಲೆ, ಕಳೆದ ಅಕ್ಟೋಬರ್‌ನಲ್ಲಿ [ಮಧ್ಯ] ಪೂರ್ವದ ಕ್ರೈಸ್ತರಿಗೆ ಪವಿತ್ರ ತಂದೆ ಬರೆದ ಪತ್ರದಿಂದ ನಾನು ಒಂದು ಉಲ್ಲೇಖವನ್ನು ಬರೆದಿದ್ದೆ, ಅವರು ಮಧ್ಯಪ್ರಾಚ್ಯದ ಕ್ರೈಸ್ತರೊಂದಿಗೆ ಮಾತನಾಡುತ್ತಾ, ಅವರ ಪವಿತ್ರ ನಾಡಿನಲ್ಲಿ ಅಲ್ಲಿನ ಕ್ರೈಸ್ತರು "ಭರವಸೆಯ ಚಿಗುರುಗಳು" ಆಗಿರಬೇಕು ಎಂದು ಹೇಳಿದರು.

ಆ ಚಿತ್ರದ ಮೇಲೆ, ಭರವಸೆಯ ಜ್ಯೂಬಿಲಿ ವರ್ಷದಲ್ಲಿ ಭರವಸೆಯ ಚಿಗುರುಗಳು, ಹೂವುಗಳೂ ಸಹ ಇವೆ. ಹೀಗಾಗಿ, ನಾನು ಅದನ್ನು ಪವಿತ್ರ ತಂದೆಗೆ ತೋರಿಸಿ, "ಇದು ದೀಕ್ಷಾಸ್ನಾನ ಸ್ಥಳದ ನೂತನ ದೇವಾಲಯ" ಮತ್ತು "ಪೂರ್ವದಲ್ಲಿರುವ ಕ್ರೈಸ್ತರಿಗೆ ನೀವು ನುಡಿದ ಮಾತುಗಳಾಗಿವೆ" ಎಂದು ಹೇಳಿದೆ.

ಪ್ರಶ್ನೆ: ಕಳೆದ ತಿಂಗಳು ಜೋರ್ಡಾನ್ ನದಿಯಲ್ಲಿ ಪ್ರಭುಯೇಸುವಿನ ದೀಕ್ಷಾಸ್ನಾನ ಸ್ಥಳದಲ್ಲಿನ ನೂತನ ದೇವಾಲಯದ ಉದ್ಘಾಟನೆಯಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ. ಯಾತ್ರಿಕರಿಗೆ ಆ ಸ್ಥಳದ ಪ್ರಾಮುಖ್ಯತೆ ಮತ್ತು ಧಾರ್ಮಿಕ ಪ್ರವಾಸೋದ್ಯಮ ಮತ್ತು ಪವಿತ್ರ ನಾಡಿಗೆ, ವಿಶೇಷವಾಗಿ ಜೋರ್ಡಾನ್‌ಗೆ ಧಾರ್ಮಿಕ ತೀರ್ಥಯಾತ್ರೆಯನ್ನು ಕೈಗೊಳ್ಳುವ ಮಹತ್ವವನ್ನು ನೀವು ವಿವರಿಸಬಹುದೇ?
ವ್ಯಾಟಿಕನ್ ಸುದ್ಧಿಯ ಉಪಸ್ಥಿತಿಯೊಂದಿಗೆ, ಜೋರ್ಡಾನ್ ನದಿಯ ಪೂರ್ವ ಭಾಗದಲ್ಲಿರುವ ದೀಕ್ಷಾಸ್ನಾನ ಸ್ಥಳದಲ್ಲಿ ನಾವು ಒಂದು ಐತಿಹಾಸಿಕ ಕ್ಷಣವನ್ನು ಆನಂದಿಸಿದೆವು. ಪ್ರಭುಯೇಸು ದೀಕ್ಷಾಸ್ನಾನ ಪಡೆದಾಗ, ಕ್ರೈಸ್ತ ಧರ್ಮ ಹುಟ್ಟಿಕೊಂಡಿತು, ಏಕೆಂದರೆ ಅವರು ದೀಕ್ಷಾಸ್ನಾನ ಸ್ವೀಕರಿಸದ ನಂತರ ಅತಿ ಶೀಘ್ರವಾಗಿ ಶುಭಸಂದೇಶ ಮತ್ತು ದೇವರ ಸಾಮ್ರಾಜ್ಯದ ಸಾಮೀಪ್ಯವನ್ನು ಸಾರಲು ಪ್ರಾರಂಭಿಸಿದರು.

15 ವರ್ಷಗಳ ಕಾಯುವಿಕೆಯ ನಂತರ ನಾವು ಈ ದರ್ಮಸಭೆಯನ್ನು ನಿರ್ಮಿಸಿದ್ದೇವೆ. ಅಡಿಪಾಯದ ಮೊದಲ ಕಲ್ಲನ್ನು ವಿಶ್ವಗುರು ಹದಿನಾರನೇ ಬೆನೆಡಿಕ್ಟ್, ರಾಜ ಅಬ್ದುಲ್ಲಾ ಮತ್ತು ರಾಣಿ ರಾನಿಯಾರವರ ಉಪಸ್ಥಿತಿಯಿಂದ ಆಶೀರ್ವದಿಸಿದರು. ಈ ವರ್ಷ ಆ ಕ್ಷಣ ಬಂದದ್ದಾಕ್ಕಾಗಿ ಪ್ರಭುಯೇಸುವಿನ ದೀಕ್ಷಾಸ್ನಾನದ ನೂತನ ದೇವಾಲಯದ ಉದ್ಘಾಟನೆಗಾಗಿ ಕಾಯುವುದು ಬಹಳ ದೂರವಿತ್ತು ಮತ್ತು ಜೋರ್ಡಾನ್‌ನ ಮಹಾ ಮಹೋತ್ಸವಕ್ಕಾಗಿ ಐದು ವರ್ಷಗಳ ಸಿದ್ಧತೆಗಳನ್ನೂ ಸಹ ನಾವು ಪ್ರಾರಂಭಿಸಿದ್ದೇವೆ.

೨೦೩೦ರಲ್ಲಿ, ನಾವು ಪ್ರಭುಯೇಸುವಿನ ದೀಕ್ಷಾಸ್ನಾನದ ನಂತರ ೨೦೦೦ ವರ್ಷಗಳನ್ನು ಆಚರಿಸುತ್ತೇವೆ. ವ್ಯಾಟಿಕನ್ ಪ್ರದೇಶವಾದ ಪಲಾಝೊ ಡೆಲ್ಲಾ ಕ್ಯಾನ್ಸಲೇರಿಯಾದಲ್ಲಿ 'ಜೋರ್ಡಾನ್: ಕ್ರೈಸ್ತ ಧರ್ಮದ ಉದಯ'ದ ಪ್ರದರ್ಶನವನ್ನು ತೆರೆಯಲು ನಾವು ಈ ದಿನಗಳಲ್ಲಿ ರೋಮ್‌ನಲ್ಲಿ ಕಾಯುತ್ತಿದ್ದೇವೆ. ಪ್ರಭುಯೇಸುವಿನ ದೀಕ್ಷಾಸ್ನಾನದ ನೂತನ ದೇವಾಲಯವನ್ನು ಉದ್ಘಾಟಿಸಲು ಮತ್ತು ೨೦೦೦ ವರ್ಷಗಳ ನಮ್ಮ ಮಹಾ ಮಹೋತ್ಸವಕ್ಕಾಗಿ ಐದು ವರ್ಷಗಳ ಸಿದ್ಧತೆಗಳನ್ನು ಉದ್ಘಾಟಿಸಲು ನಾವು ಸಂತೋಷಪಡುತ್ತೇವೆ.

ಪ್ರಶ್ನೆ: ಪವಿತ್ರ ತಂದೆಯು ಸಂವಹನಕಾರರಿಗೆ ಭರವಸೆಯ ಕಥೆಗಳನ್ನು ನೀಡಲು ಕರೆ ನೀಡಿದ್ದಾರೆ. ಪವಿತ್ರ ತಂದೆಯಿಂದ ಬಂದ ಈ ಕರೆಯನ್ನು ನೀವು ಹೇಗೆ ಸ್ವೀಕರಿಸುತ್ತೀರಿ? ಜೋರ್ಡಾನ್‌ನಲ್ಲಿ ನೀವು ಹಂಚಿಕೊಳ್ಳಲು ಬಯಸುವ ಭರವಸೆಯ ಕಥೆ ಇದೆಯೇ?
ಜೋರ್ಡಾನ್‌ನಲ್ಲಿ ವಾಸಿಸುತ್ತಿರುವ ನಾನು, ಜೋರ್ಡಾನ್ ಯಾವಾಗಲೂ ಭರವಸೆಯ ನಾಡು ಎಂದು ದೃಢೀಕರಿಸಬಲ್ಲೆ, ವಿಶೇಷವಾಗಿ ನಿರಾಶ್ರಿತರಿಗೆ ಭರವಸೆಯ ನಾಡು ಎಂದು ದೃಢೀಕರಿಸಬಲ್ಲೆ. ಇದು ಸ್ವಾಗತಾರ್ಹ ದೇಶ, ಇರಾಕ್, ಸಿರಿಯಾ, ಪ್ಯಾಲೆಸ್ಟೈನ್ ಮತ್ತು ಗಾಜಾದಿಂದ ಬಂದ ಎಲ್ಲಾ ದುರ್ಬಲ ಮತ್ತು ಗಾಯಗೊಂಡ ಜನರನ್ನು ಸ್ವಾಗತಿಸಿದ ನಾಡಾಗಿದೆ. ಜೋರ್ಡಾನ್ನಿನವರಾಗಿ ಎಲ್ಲರಿಗೂ ನಾವು ಭರವಸೆಯನ್ನು ಸೃಷ್ಟಿಸುವ ಕಾರ್ಯವನ್ನು ಮುಂದುವರಿಸುತ್ತೇವೆ. ಭರವಸೆಯ ಕಥೆಯನ್ನು ಹೇಳುವುದು, ದುರ್ಬಲ ಜನರಿಗೆ-ಭರವಸೆ ನೀಡುವ ಜೋರ್ಡಾನ್ನಿನ ಕಥೆಯನ್ನು ಹೇಳುತ್ತೇವೆ. ಪವಿತ್ರ ಜೋರ್ಡಾನ್ ನಾಡಿನ ಧರ್ಮಸಭೆಗಳಾಗಿ, ನಾವು ನಮ್ಮ ಜನರಿಗೆ ಮತ್ತು ಶಾಲೆಗಳಲ್ಲಿನ ವಿದ್ಯಾರ್ಥಿಗಳಲ್ಲಿ ಭರವಸೆಯನ್ನು ಸೃಷ್ಟಿಸುತ್ತೇವೆ, ವಿಶೇಷವಾಗಿ ನಮ್ಮ ಶಾಲೆಗಳು ಎಲ್ಲರಿಗಾಗಿ ತೆರೆದಿರುವ ಪಾಲನಾ ಶಾಲೆಗಳಾಗಿರುವುದರಿಂದ, ವಿಶೇಷವಾಗಿ ಶ್ರೀಮಂತ ವಾಣಿಜ್ಯ ಶಾಲೆಗಳ ಶುಲ್ಕವನ್ನು ಭರಿಸಲಾಗದ ಬಡ ವಿದ್ಯಾರ್ಥಿಗಳಿಗೆ ನಮ್ಮ ಸೇವೆಯ ಮೂಲಕ ಭರವಸೆಯನ್ನು ನೀಡುತ್ತೇವೆ.

ನಾವು ಕಾರಿತಾಸ್ ಜೋರ್ಡಾನ್ ಮೂಲಕ, ನಾವು ನೀಡುವ ನೆರವಿನ ಮೂಲಕ ಮತ್ತು ಪ್ರತಿಯೊಂದು ದತ್ತಿ ಸಮಿತಿ, ಧರ್ಮಕೇಂದ್ರದಲ್ಲಿ ಮತ್ತು ದೇವಾಲಯಗಳಲ್ಲಿಯೂ ಭರವಸೆಯನ್ನು ನೀಡುತ್ತೇವೆ. ಈ ವರ್ಷ, ಭರವಸೆಯ ನಾಡಾಗಿರುವ ಜೋರ್ಡಾನ್‌ನಿಂದ ಬರುವ ಅನೇಕ ಭರವಸೆಯ ಕಥೆಗಳನ್ನು ನಾವು ನೋಡಲಿದ್ದೇವೆ.

ಪ್ರಶ್ನೆ: ನೀವು ಇನ್ನೇನಾದರೂ ಸೇರಿಸಲು ಬಯಸುತ್ತೀರಾ?
ಪವಿತ್ರ ತಂದೆಯು ಈಸ್ಟರ್‌ಗೆ ದಿನಾಂಕವನ್ನು ಆಯ್ಕೆ ಮಾಡುವ ಸಾಧ್ಯತೆಯ ಬಗ್ಗೆ ಮಾತನಾಡುವುದನ್ನು ನಾವು ಕೇಳಿದ್ದೇವೆ. ಇದು ನಮಗೆ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ವಾಸಿಸುವವರಿಗೆ ಬಹಳಷ್ಟು ಮಹತ್ವಪೂರ್ಣವಾದದ್ದು, ಏಕೆಂದರೆ ನಮ್ಮಲ್ಲಿ ಅನೇಕ ಪಂಗಡಗಳು, ಅನೇಕ ಧರ್ಮಸಭೆಗಳಿವೆ.

ಈ ಸಾಧ್ಯತೆಯ ಕುರಿತು ವಿಶ್ವಗುರುಗಳ ಹೇಳಿಕೆಗಳನ್ನು ಬಹಳ ಸಂತೋಷ ಮತ್ತು ಹೆಚ್ಚಿನ ಭರವಸೆಯೊಂದಿಗೆ ಸ್ವೀಕರಿಸಲಾಯಿತು. ಆದರೆ ಸಹೋದರಿ ಧರ್ಮಸಭೆಗಳಲ್ಲಿರುವ ನಮ್ಮ ಸಹೋದರರು ಈ ಆಹ್ವಾನವನ್ನು ಸ್ವೀಕರಿಸಿ, ಪಾಸ್ಖ ಹಬ್ಬವನ್ನು ಒಟ್ಟಿಗೆ ಆಚರಿಸುವುದರೊಂದಿಗೆ ಪ್ರಾರಂಭಿಸಿ ಪೂರ್ಣ ಏಕತೆಯ ಕಡೆಗೆ ಕೆಲಸ ಮಾಡಲು ನಾವು ಕಾಯುತ್ತಿದ್ದೇವೆ.
 

28 ಜನವರಿ 2025, 12:29